AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ರೀ ಬಸ್​​ ಗದ್ದಲದಿಂದ ಬೇಸತ್ತಿರುವ ಕೆಎಸ್​ಆರ್​ಟಿಸಿ ಪ್ರಯಾಣಿಕರಿಗೆ ಗುಡ್​​ನ್ಯೂಸ್

ಶಕ್ತಿ ಯೋಜನೆ ಬಂದಾಗಿನಿಂದ ಬಸ್​ಗಳೆಲ್ಲಾ ಫುಲ್ ಗದ್ದಲವೋ ಗದ್ದಲ. ಸೀಟ್ ಅಲ್ಲ ನಿಲ್ಲುವುದಕ್ಕೂ ಸ್ಥಳವಿಲ್ಲ. ಆ ರೀತಿ ಬಸ್​​​ಗಳು ತುಂಬಿ ತುಳುಕುತ್ತಿವೆ. ಇದರಿಂದ ಕೆಲ ಪ್ರಯಾಣಿಕರು ಹೈರಣಾಗುತ್ತಿದ್ದಾರೆ. ಇನ್ನೊಂದೆಡೆ ಶಕ್ತಿ ಯೋಜನೆ ಜಾರಿಗೆ ತಂದ ಬಳಿಕ ಬಸ್ ಓಡಾಟ ಕಡಿಮೆ ಮಾಡಲಾಗಿದೆ ಎನ್ನುವ ಆರೋಪಗಳು ಸಹ ಕೇಳಿಬಂದಿವೆ. ಹೀಗಾಗಿ ದಟ್ಟಣೆ ಕಡಿಮೆ ಮಾಡಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಪ್ರಯಾಣಿಕರಿಗೆ ಮತ್ತೊಂದು ಸಂತಸದ ಸುದ್ದಿ ನೀಡಿದೆ.

ಫ್ರೀ ಬಸ್​​ ಗದ್ದಲದಿಂದ ಬೇಸತ್ತಿರುವ ಕೆಎಸ್​ಆರ್​ಟಿಸಿ ಪ್ರಯಾಣಿಕರಿಗೆ ಗುಡ್​​ನ್ಯೂಸ್
KSRTC Bus
Kiran Surya
| Edited By: |

Updated on: Mar 13, 2026 | 9:36 PM

Share

ಬೆಂಗಳೂರು, (ಮಾರ್ಚ್ 13): ಮಹಿಳೆಯರಿಗೆ (Women)  ಉಚಿತ ಬಸ್ ಪ್ರಯಾಣ ಶಕ್ತಿ ಯೋಜನೆ  (shakthi yojana)ಜಾರಿ ಬಂದಾಗಿನಿಂದ ಬಸ್ (Bus)​ ಓಡಾಟ ಕಡಿಮೆಯಾಗಿದೆ ಎನ್ನುವ ಆರೋಪಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಹೊಸ ಬಸ್ಸುಗಳು ರಸ್ತೆಗಿಳಿದಿವೆ. ಹೌದು.. ಕೆಎಸ್‌ಆರ್‌ಟಿಸಿ 45 ಸಾಮಾನ್ಯ ಹಾಗೂ 70 ಪಲ್ಲಕ್ಕಿ ಸ್ಲೀಪರ್ ಬಸ್‌ಗಳು ಸೇರಿದಂತೆ ಒಟ್ಟು 115 ನೂತನ ಬಸ್‌ಗಳಿಗೆ ಇಂದು (ಮಾರ್ಚ್ 13) ಸಚಿವ ರಾಮಲಿಂಗರೆಡ್ಡಿ ಹಸಿರು ನಿಶಾನೆ ತೋರಿಸಿದ್ದು, ಈ ಹೊಸ ಬಸ್‌ಗಳು ಬೆಂಗಳೂರಿನಿಂದ ರಾಜ್ಯದ ಹಲವು ಪ್ರಮುಖ ಮಾರ್ಗಗಳಿಗೆ ಸಂಚಾರ ನಡೆಸಲಿವೆ.

ಒಟ್ಟು 115 ಬಸ್​ಗಳು ಪೈಕಿ 70 ಬಸ್​ಗಳು ಪ್ರೀಮಿಯಂ ಪಲ್ಲಕ್ಕಿ ಬಸ್​ಗಳು ಹಾಗೂ 45 ಬಸ್​ಗಳು ನಾರ್ಮಲ್​ ಬಸ್​ಗಳಾಗಿದ್ವು.ಈ ಪಲ್ಲಕ್ಕಿ ಬಸ್​ಗಳ ವಿಶೇಷತೆ ಏನಂದ್ರೆ, ಈ ಬಸ್​ಗಳಲ್ಲಿ ಹೈಟೆಕ್​ ಸೀಟಿನ ವ್ಯವಸ್ಥೆ ಸೇರಿದಂತೆ ಅನೇಕ ಅನುಕೂಲಗಳಿವೆ.  ಪಲ್ಲಕ್ಕಿ ಬಸ್​ಗಳಲ್ಲಿ ಹೆಣ್ಣು ಮಕ್ಕಳೂ ಸಹ ಹಣ ಕೊಟ್ಟು ಪ್ರಯಾಣ ಮಾಡಬೇಕು. ಇನ್ನು 45 ನಾರ್ಮಲ್​ ಬಸ್​ಗಳಲ್ಲಿ ಆಧಾರ್ ಕಾರ್ಡ್ ತೋರಿಸಿ ಉಚಿತವಾಗಿ ಸಂಚಾರ ಮಾಡಬಹುದು.

ಇದನ್ನೂ ಓದಿ: ಕೊಟ್ಟ ಭರವಸೆ ಈಡೇರಿಸಿದ ಡಿಕೆಶಿ: ರಾಮನಗರ ಜನರ ಬಹುದಿನಗಳ ಕನಸು ನನಸು

45 ಸಾಮಾನ್ಯ ಬಸ್‌ಗಳು, 70 ಪಲ್ಲಕ್ಕಿ ಬಸ್‌ಗಳು

ಈ ಹಂತದಲ್ಲಿ ಒಟ್ಟು 115 ಬಸ್‌ಗಳನ್ನು ಸೇವೆಗೆ ಸೇರಿಸಲಾಗಿದೆ, ಅದರಲ್ಲಿ 45 ಸಾಮಾನ್ಯ ಬಸ್‌ಗಳು ಮತ್ತು 70 ಪಲ್ಲಕ್ಕಿ (ಸ್ಲೀಪರ್) ಬಸ್‌ಗಳು ಸೇರಿವೆ. ವಿಶೇಷವಾಗಿ ದೀರ್ಘ ದೂರ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಆಧುನಿಕ ಸೌಲಭ್ಯಗಳೊಂದಿಗೆ ಈ ಪಲ್ಲಕ್ಕಿ ಬಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

ಈ ನೂತನ ಸ್ಲೀಪರ್ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ವಿನ್ಯಾಸ ಮಾಡಲಾಗಿದೆ. ಇವುಗಳಲ್ಲಿ ಒಟ್ಟು ಐದು ಬಾಗಿಲುಗಳನ್ನು (ಡೋರ್‌ಗಳು) ಅಳವಡಿಸಲಾಗಿದೆ. ಇದಕ್ಕೂ ಮೊದಲು ಸಾಮಾನ್ಯವಾಗಿ ಎರಡು ಬಾಗಿಲುಗಳು ಮತ್ತು ಒಂದು ಎಮರ್ಜೆನ್ಸಿ ಎಕ್ಸಿಟ್ ಬಾಗಿಲು ಮಾತ್ರ ಇದ್ದವು. ಆದರೆ ಹೊಸ ಮಾದರಿಯ ಸ್ಲೀಪರ್ ಬಸ್‌ಗಳಲ್ಲಿ ಬಸ್‌ನ ಮೇಲ್ಭಾಗದಲ್ಲಿಯೂ ಎರಡು ಹೆಚ್ಚುವರಿ ಬಾಗಿಲುಗಳನ್ನು ಅಳವಡಿಸಲಾಗಿದ್ದು, ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರು ಸುರಕ್ಷಿತವಾಗಿ ಹೊರಬರಲು ಈ ವ್ಯವಸ್ಥೆ ಸಹಾಯಕವಾಗಲಿದೆ.

ಹೊಸ ಬಸ್‌ಗಳು ಎಲ್ಲಿಂದ ಎಲ್ಲಿಗೆ ಸಂಚಾರ?

ಹೊಸ ಪಲ್ಲಕ್ಕಿ ಸ್ಲೀಪರ್ ಬಸ್‌ಗಳನ್ನು ರಾಜ್ಯದ ಹಾಗೂ ಹೊರರಾಜ್ಯಗಳ ಪ್ರಮುಖ ಧಾರ್ಮಿಕ ಮತ್ತು ವಾಣಿಜ್ಯ ಕೇಂದ್ರಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಸಂಚಾರಕ್ಕೆ ಬಿಡಲಾಗಿದೆ. ಪಲ್ಲಕ್ಕಿ ನಾನ್‌ ಎಸಿ ಬಸ್‌ಗಳು ಉಡುಪಿ, ಮಂಗಳೂರು, ಮೈಸೂರು, ಧರ್ಮಸ್ಥಳ, ಶೃಂಗೇರಿ, ಹೊರನಾಡು, ಆಗುಂಬೆ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ, ಹಂಪಿ, ರಾಯಚೂರು, ಜಮಖಂಡಿ, ಪುತ್ತೂರು, ಕಾಣಿಯೂರು, ಕುಕ್ಕೆ ಸುಬ್ರಹ್ಮಣ್ಯ, ಕಾಸರಗೋಡು, ಮಂತ್ರಾಲಯ, ತಿರುಚಿ, ಕೊಜಿಕ್ಕೋಡ್, ಮುನ್ನಾರ್, ಪಾಂಡಿಚೇರಿ, ತಂಜಾವೂರು, ಕೊಟ್ಟಾಯಂ, ಹೈದಾರಬಾದ್, ಚೆನ್ನೈ, ಪಣಜಿ, ಮಧುರೈ, ಕುಂಭಕೋಣಂ, ಎರ್ನಾಕುಲಂಗೆ ಸಂಚರಿಸುತ್ತವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಪುನೀತ್ ಇಲ್ಲದೇ ‘ಆಕಾಶ್’ ಸಿನಿಮಾ ನೋಡೋಕೆ ಕಷ್ಟ ಆಗುತ್ತದೆ: ರಾಘಣ್ಣ ಭಾವುಕ
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಬೌಲರ್​ಗೆ ಬಾಲ್ ನೀಡಿ ರನೌಟ್ ಆದ ಪಾಕ್ ಬ್ಯಾಟರ್
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುವಕ ಸ್ಟೇಜ್​​​​ ಮೇಲೇರಿ ಸಿದ್ದರಾಮಯ್ಯಗೆ ಹೇಳಿದ್ದೇನು ಗೊತ್ತಾ?
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಯುದ್ಧ ಕಾರ್ಮೊಡದ ನಡುವೆ ಯುಎಇಯಿಂದ ಡಾಂಬರು ಹೊತ್ತು ಕಾರವಾರಕ್ಕೆ ಬಂದ ಹಡಗು
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
ಪಾಕ್ ಕ್ರಿಕೆಟಿಗನ ಖರೀದಿ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯಿಸಿದ ಬಿಸಿಸಿಐ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
‘ಆಕಾಶ್’ ಸಿನಿಮಾ ಮರುಬಿಡುಗಡೆ: ಪುನೀತ್ ಕಟೌಟ್​ಗೆ ಹಾಲಿನ ಅಭಿಷೇಕ
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
ಬಜೆಟ್​​ ಕುರಿತ ಹೇಳಿಕೆಗೆ ಇಕ್ಬಾಲ್ ಸಮರ್ಥನೆ: ರಾಮನಗರ MLA ಹೇಳಿದ್ದಿಷ್ಟು
‘ಆಕಾಶ್’ ಸಿನಿಮಾ ಮರು ಬಿಡುಗಡೆ: ಹೀಗಿತ್ತು ನೋಡಿ ಅಭಿಮಾನಿಗಳ ಸಂಭ್ರಮ
‘ಆಕಾಶ್’ ಸಿನಿಮಾ ಮರು ಬಿಡುಗಡೆ: ಹೀಗಿತ್ತು ನೋಡಿ ಅಭಿಮಾನಿಗಳ ಸಂಭ್ರಮ
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರ ಪಟ್ಟು: ಹೈಕಮಾಂಡ್​​ ಭೇಟಿಗೆ ಸಿದ್ಧತೆ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ
‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ