AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಣಿವಿಲಾಸ ಆಸ್ಪತ್ರೆ ವೈದ್ಯರ ಎಡವಟ್ಟು: ಗರ್ಭಿಣಿ ಹೊಟ್ಟೆಯಲ್ಲಿದ್ದ 3 ಶಿಶುಗಳಲ್ಲಿ 2 ಸಾವು, ಮತ್ತೊಂದರ ಸ್ಥಿತಿ ಗಂಭೀರ

ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ ಒಂದಲ್ಲ ಒಂದು ವಿಚಾರಕ್ಕೆ ಸದ್ದಿಯಾಗುತ್ತಲೇ ಇದೆ. ಹಸುಗೂಸು ಕಳ್ಳತನ, ಬಾಣಂತಿ ವಂಚಿಸಿ ಮಾಂಗಲ್ಯ ಸರ ಅಪಹರಣದಂಥ ಗಂಭೀರ ಪ್ರಕರಣಗಳು ನಡೆದರೂ ಆಸ್ಪತ್ರೆಯಲ್ಲಿ ಭದ್ರತಾ ವ್ಯವಸ್ಥೆ ಬಿಗಿಯಾಗಿಲ್ಲ ಎನ್ನುವ ಆರೋಪಗಳು ಕೇಳಿಬಂದಿದ್ದವು. ಇದಾದ ಬಳಿಕ ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯದಿಂದ 57 ದಿನದ ಹೆಣ್ಣು ಮಗು ಕಾಲು ಹಾಗೂ ಬೆರಳುಗಳನ್ನು ಕಳೆದುಕೊಂಡಿರುವ ಆರೋಪ ಕೇಳಿಬಂದಿತ್ತು. ಇದೀಗ ಮಲಬದ್ಧತೆ ಎಂದು ಬಂದಿದ್ದ ಗರ್ಭಿಣಿ ಮಹಿಳೆ ಹೊಟ್ಟೆಯಲ್ಲಿ ಎರಡು ಮಗು ಸಾವನ್ನಪ್ಪಿವೆ.

ವಾಣಿವಿಲಾಸ ಆಸ್ಪತ್ರೆ ವೈದ್ಯರ ಎಡವಟ್ಟು: ಗರ್ಭಿಣಿ ಹೊಟ್ಟೆಯಲ್ಲಿದ್ದ 3 ಶಿಶುಗಳಲ್ಲಿ 2 ಸಾವು, ಮತ್ತೊಂದರ ಸ್ಥಿತಿ ಗಂಭೀರ
Vanivilas Hospital
ವಿನಯ್​ ಕಾಶಪ್ಪನವರ್​
| Edited By: |

Updated on: Nov 22, 2026 | 10:07 PM

Share

ಬೆಂಗಳೂರು, ನವೆಂಬರ್ 22: ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ದಾಖಲಾಗಿದ್ದ 8 ತಿಂಗಳ ಗರ್ಭಿಣಿ ಹೊಟ್ಟೆಯಲ್ಲಿದ್ದ ಮೂರು ಶಿಶುಗಳಲ್ಲಿ ಎರಡು ಸಾವನ್ನಪ್ಪಿದ್ದು, ಮತ್ತೊಂದು ಮಗು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಹೌದು…ಒಂದು ವಾರದ ಹಿಂದೆ ಮಲಬದ್ದತೆ ಕಾರಣದಿಂದ ಎಂಟು ತಿಂಗಳು ಗರ್ಭಿಣಿ ಐಶ್ವರ್ಯ, ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರ ಎಡವಟ್ಟಿನಿಂದ ಹೊಟ್ಟೆಯಲ್ಲಿ ಎರಡೂ ಮಗು ಸಾವನ್ನಪ್ಪಿದ್ದು, ಇನ್ನೊಂದು ಮಗುವಿನ ಸ್ಥಿತಿ ಗಂಭೀರವಾಗಿದೆ. ಸದ್ಯ  ಐಸಿಯುನಲ್ಲಿ ಮಗುವಿಗೆ ಚಿಕಿತ್ಸೆ ಮುಮದುವರೆದಿದೆ.

ಐಶ್ವರ್ಯ ಅವರು ಮಲಬದ್ದತೆ, ಹೊಟ್ಟೆ ನೋವು ಎಂದು ವಾರದ ಹಿಂದೆ ವಾಣಿವಿಲಾಸ ಆಸ್ಪತ್ರೆ ಬಂದಿದ್ದು, ಈ ವೇಳೆ  ವೈದ್ಯರು ಮಹಿಳೆಗೆ ಚಿಕಿತ್ಸೆ ನೀಡಿ ಕಳುಹಿಸಿದ್ದರು. ಆದರೆ ನೋವು ಕಡಿಮೆಯಾಗದೆ ಮತ್ತೆ ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದಳು. ಬಳಿಕ ಚಿಕಿತ್ಸೆ ನೀಡಿದಾಗ ನಿನ್ನೆ (ನ.21) ಬೆಳಗ್ಗೆ ಮೂರು ಮಕ್ಕಳಲ್ಲಿ ಒಂದು ಮಗು ಸಾವನ್ನಪ್ಪಿದ್ದರೆ, ಇಂದು (ನ.22) ಮತ್ತೊಂದು ಮಗು ಸಹ ಸಾವನ್ನಪ್ಪಿದ್ದು, ಇನ್ನೊಂದು ಮಗು ಕೂಡ ಸಾವು ಬದುಕಿನ ನಡುವೆ ಹೋರಾಡುತ್ತಿದೆ. ಹೀಗಾಗಿ ಒಂದು ಮಗು ಆದರೂ ಬದುಕುತ್ತಾ ಎನ್ನುವ ಆತಂಕದಲ್ಲಿ ಐಶ್ವರ್ಯಾ ಕುಟುಂಬ ಇದೆ.

ಇದನ್ನೂ ಓದಿ: ವೈದ್ಯರ ನಿರ್ಲಕ್ಷ್ಯಕ್ಕೆ ಬೆರಳುಗಳನ್ನು ಕಳೆದುಕೊಂಡ 57 ದಿನಗಳ ಕಂದಮ್ಮ?: ವಾಣಿ ವಿಲಾಸ ಆಸ್ಪತ್ರೆ ವಿರುದ್ಧ ಗಂಭೀರ ಆರೋಪ

ನಿನ್ನೆ (ನ.21) ಅಪರೇಷನ್ ಮಾಡೋದಾಗಿ ಹೇಳಿ ಮಹಿಳೆಯನ್ನು ಉಪವಾಸ ಇರಿಸಿದ್ದರು. ಆದ್ರೆ, ರಾತ್ರಿ ಅಪರೇಷನ್ ಆಗಲ್ಲ ಎಂದು ಮುಂದೂಡಿದ್ದು, ಕೊನೆಗೂ ಇಂದು (ನ.22) ಬೆಳಗ್ಗೆ ವೈದ್ಯರು, ಐಶ್ವರ್ಯಾಗೆ ಸರ್ಜರಿ ಮಾಡಿದ್ದಾರೆ. ಸದ್ಯ ಜೀವನ್ಮರಣದ ನಡುವೆ ಹೋರಾಟ ನಡೆಸಿರುವ ಒಂದು ಮಗುವಾದರೂ ಬದುಕಲಿ ಎಂದು ಕುಟುಂಬಸ್ಥರ ಪ್ರಾರ್ಥನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More