AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅತಿಥಿಯಾಗಿ ಬಿಗ್​​ಬಾಸ್ ಮನೆಗೆ ಮರಳಿದ್ದ ಮಂಜ, ಮತ್ತೆ ಹೊರಕ್ಕೆ

ಮಾಡರ್ನ್ ಕವಿ ಮಂಜ, ಅಗ್ನಿಪರೀಕ್ಷೆ ಮೂಲಕ ಟಿಕೆಟ್ ಪಡೆದು ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಬಿಗ್​​ಬಾಸ್ ಮನೆಯಲ್ಲಿ ರೌಡಿ ವರ್ತನೆ, ಕೊಳಕುತನ ತೋರಿಸಿದ ಕಾರಣ ಆತನನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು. ಆದರೆ ಸುದೀಪ್ ಅವರು ಮಂಗನ ಮೇಲೆ ಕರುಣೆ ತೋರಿಸಿ ಮಂಜನ್ನು ಮತ್ತೆ ಬಿಗ್​​ಬಾಸ್ ಮನೆಗೆ ಕಳಿಸಿದ್ದರು. ಆದರೆ ಮನೆಗೆ ಹೋದ ಕೆಲವೇ ವಾರದಲ್ಲಿ ಮಂಜನನ್ನು ಮತ್ತೆ ಹೊರಗೆ ಕಳಿಸಲಾಗಿದೆ.

ಅತಿಥಿಯಾಗಿ ಬಿಗ್​​ಬಾಸ್ ಮನೆಗೆ ಮರಳಿದ್ದ ಮಂಜ, ಮತ್ತೆ ಹೊರಕ್ಕೆ
Modern Kavi Manja
ಮಂಜುನಾಥ ಸಿ.
|

Updated on:Nov 22, 2026 | 10:54 PM

Share

ಮಾಡರ್ನ್ ಕವಿ ಮಂಜ, ಅಗ್ನಿಪರೀಕ್ಷೆ ಮೂಲಕ ಟಿಕೆಟ್ ಪಡೆದು ಬಿಗ್​​ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ ಬಿಗ್​​ಬಾಸ್ ಮನೆಯಲ್ಲಿ ರೌಡಿ ವರ್ತನೆ, ಕೊಳಕುತನ ತೋರಿಸಿದ ಕಾರಣ ಆತನನ್ನು ಮನೆಯಿಂದ ಹೊರಗೆ ಹಾಕಲಾಗಿತ್ತು. ಆದರೆ ಸುದೀಪ್ ಅವರು ಮಂಗನ ಮೇಲೆ ಕರುಣೆ ತೋರಿಸಿ ಮಂಜನ್ನು ಮತ್ತೆ ಬಿಗ್​​ಬಾಸ್ ಮನೆಗೆ ಕಳಿಸಿದ್ದರು. ಆದರೆ ಮನೆಗೆ ಹೋದ ಕೆಲವೇ ವಾರದಲ್ಲಿ ಮಂಜನನ್ನು ಮತ್ತೆ ಹೊರಗೆ ಕಳಿಸಲಾಗಿದೆ.

ಮಂಜನನ್ನು ಮರಳಿ ಮನೆಗೆ ಕಳಿಸಬೇಕಾದರೆ ಮಂಜನನ್ನು ಅತಿಥಿಯಾಗಿ ಮಾತ್ರವೇ ಒಳಗೆ ಕಳಿಸುತ್ತಿರುವುದಾಗಿ ಪ್ರೇಕ್ಷಕರಿಗೆ ಹೇಳಲಾಗಿತ್ತು. ಮಂಜ ಇದ್ದ ಮೂರು ವಾರ, ಸ್ಪರ್ಧಿಯಾಗಿ ಅಲ್ಲ ಬದಲಿಗೆ ಅತಿಥಿ ಆಗಿ ಮಾತ್ರವೇ ಮನೆಯಲ್ಲಿದ್ದರು. ಈ ವಾರ ಯಾವುದೇ ಎಲಿಮಿನೇಷನ್ ಇರಲಿಲ್ಲ, ಬದಲಿಗೆ ಅತಿಥಿಯಾಗಿ ಮನೆಯ ಸತ್ಕಾರ ಸ್ವೀಕರಿಸಿದ ಮಂಜನನ್ನೇ ಸುದೀಪ್ ಅವರು ಹೊರಗೆ ಬರುವಂತೆ ಹೇಳಿದರು.

ಇದನ್ನೂ ಓದಿ:ಕಿರಣ್ ಶಾಸ್ತ್ರಿ ದಿಟ್ಟ ಆಟಕ್ಕೆ ಸುದೀಪ್ ಕಡೆಯಿಂದ ಸಿಕ್ತು ವಿಶೇಷ ಉಡುಗೊರೆ

ಆದರೆ ಮಂಜ, ಹೊರಗೆ ಬರುವ ಮುಂಚೆ ಸ್ಪರ್ಧಿಗಳೊಟ್ಟಿಗೆ ಮಾತನಾಡಿದ ಸುದೀಪ್, ‘ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ. ಮಂಜನೂ ಮಾಡಿದ್ದ. ಆದರೆ ಆತ ವೇದಿಕೆ ಮೇಲೆ ಬಂದಾಗ ಆತನ ಕಣ್ಣಲ್ಲಿ ನಿಜವಾದ ಪಶ್ಚಾತ್ತಾಪವನ್ನು ನಾನು ನೋಡಿದೆ, ಅವನಿಗೆ ಇನ್ನೊಂದು ಅವಕಾಶ ಕೊಡಬೇಕು ಅನಿಸಿತು. ಅಲ್ಲದೆ. ಬೇರೆ ಶೋಗಳಲ್ಲಿ ತಪ್ಪು ಮಾಡಿದ ಸ್ಪರ್ಧಿಗಳು ರೆಡ್ ಕಾರ್ಡ್ ತೋರಿಸಿಬಿಡುತ್ತಾರೆ. ಆದರೆ ಯಾವುದೇ ಸ್ಪರ್ಧಿಗೆ ರೆಡ್ ಕಾರ್ಡ್ ತೋರಿಸುವ ಇಚ್ಛೆ ನನಗೆ ಇಲ್ಲ. ಅದರಿಂದ ಸ್ಪರ್ಧಿಯ ಜೀವನವೇ ಹಾಳಾಗಿ ಹೋಗುತ್ತದೆ’ ಎಂದರು ಸುದೀಪ್.

ಮನೆಯಿಂದ ಹೊರಗೆ ಹೋಗುವ ಎಲ್ಲ ಸ್ಪರ್ಧಿಗಳದ್ದು ಒಂದು ಒಳ್ಳೆಯ ವಿಟಿ ಇರಬೇಕು ಎಂಬುದು ನನ್ನ ಆಸೆ, ಬಿಗ್​​ಬಾಸ ಒಂದು ಸುಂದರ ಪಯಣವಾಗಿ ಅವರಿಗೆ ಕಾಣಿಸಬೇಕು ಎಂಬುದೇ ನನ್ನ ಆಸೆ. ಹಾಗಾಗಿ ಮಂಜನಿಗೆ ಇನ್ನೊಂದು ಅವಕಾಶ ಕೊಟ್ಟೆ, ಅದು ನನ್ನ ವೈಯಕ್ತಿಕ ಆಯ್ಕೆ ಆಗಿತ್ತು. ಮಂಜ ತಪ್ಪು ಮಾಡಿ ಹೊರಗೆ ಹೋದ ಆದರೆ ಬದಲಾಗಿ ಹೊರಗೆ ಬರುತ್ತಿದ್ದಾನೆ’ ಎಂದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:50 pm, Sun, 22 November 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ತಾರಕ್ಕೇರಿದ ಮಾಜಿ ಸಿಎಂ ಜಗನ್-ಸಹೋದರಿ ನಡುವಿನ ಆಸ್ತಿ ವಿವಾದ
ತಾರಕ್ಕೇರಿದ ಮಾಜಿ ಸಿಎಂ ಜಗನ್-ಸಹೋದರಿ ನಡುವಿನ ಆಸ್ತಿ ವಿವಾದ
‘ಬಸವ ಮಂಟಪ’ವಿವಾದ: ಲೇಖಕ ರವಿ ಹಂಜ್​​ಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸ್ರು
‘ಬಸವ ಮಂಟಪ’ವಿವಾದ: ಲೇಖಕ ರವಿ ಹಂಜ್​​ಗೆ ಶಾಕ್ ಕೊಟ್ಟ ಬೆಳಗಾವಿ ಪೊಲೀಸ್ರು
ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್
ಸರ್ಕಾರಿ ಶಾಲೆಗೆ ಬಿಸಿಯೂಟ ಅಕ್ಕಿ ಪೂರೈಸದ ಪ್ರಕರಣದಲ್ಲಿ ಇಬ್ಬರು ಸಸ್ಪೆಂಡ್
ಮನವಿ ನೀಡಿದವರ ಬಳಿ ಸಚಿವ ಮಧು ಬಂಗಾರಪ್ಪ ದರ್ಪ: ವಿಡಿಯೋ ವೈರಲ್
ಮನವಿ ನೀಡಿದವರ ಬಳಿ ಸಚಿವ ಮಧು ಬಂಗಾರಪ್ಪ ದರ್ಪ: ವಿಡಿಯೋ ವೈರಲ್
ಬೆಂಗಳೂರು ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್
ಬೆಂಗಳೂರು ರೌಡಿ ಶೀಟರ್‌ಗಳಿಗೆ ಪೊಲೀಸ್ ಆಯುಕ್ತರ ಖಡಕ್ ವಾರ್ನಿಂಗ್
ಚಿನ್ನ ಖರೀದಿಸಬೇಡಿ ಎಂಬ ಕರೆಯನ್ನು ಪಾಲಿಸಿದ ಭಾರತೀಯರಿಗೆ ಮೋದಿ ಮೆಚ್ಚುಗೆ
ಚಿನ್ನ ಖರೀದಿಸಬೇಡಿ ಎಂಬ ಕರೆಯನ್ನು ಪಾಲಿಸಿದ ಭಾರತೀಯರಿಗೆ ಮೋದಿ ಮೆಚ್ಚುಗೆ
ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಿಚಾರಣೆ
ಕೊಚ್ಚಿನ್ ಏರ್​ಪೋರ್ಟ್​ನಲ್ಲಿ ಲೇಖಕ ರವಿ ಹಂಜ್ ವಿಚಾರಣೆ
ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಗದಗ ಡಿಸಿ ನಿವಾಸದಲ್ಲಿ ಮೋಜು-ಮಸ್ತಿ
ಬರದಿಂದ ರೈತರು ಸಂಕಷ್ಟದಲ್ಲಿರುವಾಗ ಗದಗ ಡಿಸಿ ನಿವಾಸದಲ್ಲಿ ಮೋಜು-ಮಸ್ತಿ
ನವೆಂಬರ್ 23ರಿಂದ 29ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ನವೆಂಬರ್ 23ರಿಂದ 29ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಬಿಗ್ ಬಾಸ್: ಸೂಪರ್ ಸಂಡೇ ಸಂಚಿಕೆಯಲ್ಲೂ ಮಂಜ, ಗಾನವಿ ಲವ್ ಸ್ಟೋರಿ ಚರ್ಚೆ
ಬಿಗ್ ಬಾಸ್: ಸೂಪರ್ ಸಂಡೇ ಸಂಚಿಕೆಯಲ್ಲೂ ಮಂಜ, ಗಾನವಿ ಲವ್ ಸ್ಟೋರಿ ಚರ್ಚೆ