AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಟಿಆರ್​​ನಲ್ಲಿ ದೋಸೆ, ಕಾಫಿ ಸವಿದ ನಟಿ ದೀಪಿಕಾ ಪಡುಕೋಣೆ

ಬಾಲಿವುಡ್​ ಅನ್ನು ಆಳುತ್ತಿರುವ ದೀಪಿಕಾ ಪಡುಕೋಣೆ ಅಪ್ಪಟ ಬೆಂಗಳೂರಿನ ಬಾಲೆ. ದೀಪಿಕಾ ಪಡುಕೋಣೆ ಹಲವು ವರ್ಷಗಳಿಂದ ಮುಂಬೈನಲ್ಲೇ ನೆಲೆಸಿದ್ದಾರಾದರೂ ಬೆಂಗಳೂರಿನ ಸೆಳೆತ ಅವರಿಗೆ ಕಡಿಮೆ ಆಗಿಲ್ಲ. ಬೆಂಗಳೂರಿಗೆ ಬಂದಿರುವ ನಟಿ ದೀಪಿಕಾ ಪಡುಕೋಣೆ, ಮಲ್ಲೇಶ್ವರಂನ ಸಿಟಿಆರ್ ಹೋಟೆಲೆಗೆ ಭೇಟಿ ನೀಡಿ ದೋಸೆ ಸವಿದಿದ್ದಾರೆ.

ಸಿಟಿಆರ್​​ನಲ್ಲಿ ದೋಸೆ, ಕಾಫಿ ಸವಿದ ನಟಿ ದೀಪಿಕಾ ಪಡುಕೋಣೆ
Deepika Padukone
ಮಂಜುನಾಥ ಸಿ.
|

Updated on:Nov 22, 2026 | 6:49 PM

Share

ದೀಪಿಕಾ ಪಡುಕೋಣೆ ಬಾಲಿವುಡ್​​ನ ಸ್ಟಾರ್ ನಟಿ. ಬಾಲಿವುಡ್ ಮಾತ್ರವಲ್ಲ ಹಾಲಿವುಡ್ ಸಿನಿಮಾನಲ್ಲಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬಾಲಿವುಡ್​ ಅನ್ನು ಆಳುತ್ತಿರುವ ದೀಪಿಕಾ ಪಡುಕೋಣೆ ಅಪ್ಪಟ ಬೆಂಗಳೂರಿನ ಬಾಲೆ. ದೀಪಿಕಾ ಪಡುಕೋಣೆ ಹಲವು ವರ್ಷಗಳಿಂದ ಮುಂಬೈನಲ್ಲೇ ನೆಲೆಸಿದ್ದಾರಾದರೂ ಬೆಂಗಳೂರಿನ ಸೆಳೆತ ಅವರಿಗೆ ಕಡಿಮೆ ಆಗಿಲ್ಲ. ಬೆಂಗಳೂರಿಗೆ ಬಂದಿರುವ ನಟಿ ದೀಪಿಕಾ ಪಡುಕೋಣೆ, ಮಲ್ಲೇಶ್ವರಂನ ಸಿಟಿಆರ್ ಹೋಟೆಲೆಗೆ ಭೇಟಿ ನೀಡಿ ದೋಸೆ ಸವಿದಿದ್ದಾರೆ.

ತನ್ನ ಅದ್ಭುತ ಬೆಣ್ಣೆ ಭರಿತ ಕ್ರಿಸ್ಪಿ ದೋಸೆ ಮತ್ತು ಫಿಲ್ಟರ್ ಕಾಫಿ ಹಾಗೂ ಇನ್ನಿತರೆ ತಿನಿಸುಗಳ ಕಾರಣಕ್ಕೆ ದೇಶದ ಹಲವೆಡೆಗಳಿಂದ ಗ್ರಾಹಕರನ್ನು ಸೆಳೆಯುತ್ತಿರುವ ಮಲ್ಲೇಶ್ವರದ ಸಿಟಿಆರ್ (ಸೆಂಟ್ರಲ್ ಟಿಫಿನ್ ರೂಂ)ಗೆ ಇಂದು (ನವೆಂಬರ್ 22) ದೀಪಿಕಾ ಪಡುಕೋಣೆ ಭೇಟಿ ನೀಡಿದ್ದರು. ದೀಪಿಕಾ ಪಡುಕೋಣೆಯ ಭೇಟಿಯ ಬಗ್ಗೆ ಸಿಟಿಆರ್​​ ತನ್ನ ಅಧಿಕೃತ ಇನ್​​ಸ್ಟಾಗ್ರಾಂ ಪೇಜಿನಲ್ಲಿ ಮಾಹಿತಿ ಹಂಚಿಕೊಂಡಿದೆ. ಜೊತೆಗೆ ಚಿತ್ರವನ್ನೂ ಸಹ ಹಂಚಿಕೊಂಡಿದೆ.

ಬೆಂಗಳೂರಿನವರೇ ಆದ ದೀಪಿಕಾ ಪಡುಕೋಣೆ ಅವರಿಗೆ ಸಹಜವಾಗಿಯೇ ಸಿಟಿಆರ್ ದೋಸೆ ಅಚ್ಚುಮೆಚ್ಚು. ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಟಿ ದೀಪಿಕಾ ಪಡುಕೋಣೆ, ತಮಗೆ ಸಿಟಿಆರ್ ದೋಸೆ, ವೀಣಾ ಸ್ಟೋರ್ ಇಡ್ಲಿ, ಇಂದಿರಾನಗರದ ಕಾರ್ನರ್ ಹೌಸ್ ನ ಐಸ್​​ಕ್ರೀಮ್ ಮತ್ತು ಇನ್ನಿತರೆಗಳು ಇಷ್ಟವೆಂದು ಹೇಳಿದ್ದರು. ಅದರಂತೆ ಇದೀಗ ಸಿಟಿಆರ್​​ಗೆ ಭೇಟಿ ನೀಡಿದ್ದರು ನಟಿ ದೀಪಿಕಾ ಪಡುಕೋಣೆ.

ಇದನ್ನೂ ಓದಿ:ಎರಡನೇ ಬಾರಿ ತಾಯಿಯಾದ ನಟಿ ದೀಪಿಕಾ ಪಡುಕೋಣೆ

ಸಿಟಿಆರ್, ಬಲು ಜನಪ್ರಿಯ ದೋಸೆ ಹೋಟೆಲ್. ಕೆಲ ವರ್ಷದ ಹಿಂದಷ್ಟೆ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಸಹ ಸಿಟಿಆರ್​​ಗೆ ಭೇಟಿ ನೀಡಿದ್ದರು. ಅನುಷ್ಕಾ ಶರ್ಮಾ ಅವರು ತಮ್ಮ ವಿದ್ಯಾಭ್ಯಾಸ ಮಾಡಿದ್ದು ಬೆಂಗಳೂರಿನಲ್ಲೇ ಹಾಗಾಗಿ ಅವರಿಗೂ ಸಹ ಸಿಟಿಆರ್ ಪರಿಚಯ ಮೊದಲಿನಿಂದಲೂ ಇದೆ.

ದೀಪಿಕಾ ಪಡುಕೋಣೆ ಭೇಟಿ ನೀಡಿರುವ ಮಲ್ಲೇಶ್ವರದ ಸಿಟಿಆರ್, 100 ವರ್ಷಕ್ಕೂ ಅಧಿಕ ಇತಿಹಾಸವನ್ನು ಹೊಂದಿದೆ. 1920ರಲ್ಲಿ ವೈವಿ ಸುಬ್ರಹ್ಮಣ್ಯಂ ಎಂಬುವರು ಈ ಹೋಟೆಲ್ ಆರಂಭಿಸಿದರು. ಬಳಿಕ 1950ರಲ್ಲಿ ರಾಘವೇಂದ್ರ, ಬಳಿಕ ರಾಮಕೃಷ್ಣ ಹೊಳ್ಳ ಹೀಗೆ ಕೈಗಳು ಬದಲಾಗುತ್ತಾ ಸಾಗಿತು. 1992 ರಲ್ಲಿ ಸಂಜೀವ ಎಸ್ ಪೂಜಾರಿ ಅವರು ಹೋಟೆಲ್ ಖರೀದಿ ಮಾಡಿ, ಸಿಟಿಆರ್ ಜೊತೆಗೆ ಶ್ರೀಸಾಗರ್ ಎಂಬ ಹೆಸರು ಸೇರಿಸಿದರು. ಅದೇ ಕುಟುಂಬವೇ ಈಗಲೂ ಹೋಟೆಲ್ ನಡೆಸಿಕೊಂಡು ಬರುತ್ತಿದೆ. ಬೆಣ್ಣೆ ಮಸಾಲೆ ದೋಸೆ, ರವೆ ಇಡ್ಲಿ, ಪೂರಿ ಸಾಗು, ಮಂಗಳೂರು ಬಜ್ಜಿ ಇನ್ನೂ ಕೆಲವು ಖಾದ್ಯಗಳು ಬಲು ಜನಪ್ರಿಯ ಜೊತೆಗೆ ಫಿಲ್ಟರ್ ಕಾಫಿ ಸಹ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:45 pm, Sun, 22 November 26

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More