AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹನುಮಾನ್ 2: ದಿ ರೈಸ್ ಆಫ್ ವಾನರಾಸ್’ ಚಿತ್ರದಲ್ಲಿ ಪಂಜ ವೈಷ್ಣವ್ ತೇಜ್ ಹೀರೋ

ಆಕರ್ಷಕ ಪೋಸ್ಟರ್ ಮೂಲಕ ‘ಹನುಮಾನ್ 2: ದಿ ರೈಸ್ ಆಫ್ ವಾನರಾಸ್’ ಸಿನಿಮಾ ಅನೌನ್ಸ್ ಮಾಡಲಾಗಿದೆ. ಈ ಬಹುನಿರೀಕ್ಷಿತ ಚಿತ್ರದಲ್ಲಿ ನಟ ಪಂಜ ವೈಷ್ಣವ್ ತೇಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿ.ಐ. ಆನಂದ್ ಅವರು ಈ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ.

‘ಹನುಮಾನ್ 2: ದಿ ರೈಸ್ ಆಫ್ ವಾನರಾಸ್’ ಚಿತ್ರದಲ್ಲಿ ಪಂಜ ವೈಷ್ಣವ್ ತೇಜ್ ಹೀರೋ
Hanuman 2 The Rise Of Vanaras Poster
ಮದನ್​ ಕುಮಾರ್​
|

Updated on:Nov 22, 2026 | 1:48 PM

Share

2024ರ ಜನವರಿ 12ರಂದು ‘ಹನು-ಮಾನ್’ ಸಿನಿಮಾ ಬಿಡುಗಡೆಯಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅಬ್ಬರಿಸಿತ್ತು. ಸೂಪರ್ ಹೀರೋ ಕಥೆಯನ್ನು ಹೊಂದಿದ್ದ ಆ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು. ‘ಹನು-ಮಾನ್’ ಸಿನಿಮಾದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ನಿರ್ಮಾಣ ಸಂಸ್ಥೆ ‘ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್’ ತನ್ನ ಫ್ಯಾಂಟಸಿ ಸಿನಿಮಾ ಜಗತ್ತನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಮುಂದಾಗಿದೆ. ಈ ಸಂಸ್ಥೆಯು ತನ್ನ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರಕ್ಕೆ ‘ಹನುಮಾನ್ 2: ದಿ ರೈಸ್ ಆಫ್ ವಾನರಾಸ್’ ಎಂದು ಶೀರ್ಷಿಕೆ ಇಟ್ಟಿದೆ. ಅಲ್ಲದೇ, ಸಿನಿಮಾವನ್ನು ಅಧಿಕೃತವಾಗಿ ಘೋಷಿಸಲಾಗಿದೆ.

‘ಹನುಮಾನ್ 2: ದಿ ರೈಸ್ ಆಫ್ ವಾನರಾಸ್’ ಸಿನಿಮಾದಲ್ಲಿ ಯುವ ನಟ ಪಂಜ ವೈಷ್ಣವ್ ತೇಜ್ ಅವರು ಹೀರೋ ಆಗಿ ನಟಿಸಲಿದ್ದಾರೆ. ಪುರಾಣ ಮತ್ತು ಕಲ್ಪನೆಯ ಕಥೆ ಹೊಂದಿರುವ ಈ ಚಿತ್ರವು ಪ್ರೇಕ್ಷಕರಿಗೆ ಹೊಸದೊಂದು ರೋಚಕ ಸಿನಿಮ್ಯಾಟಿಕ್ ಅನುಭವ ನೀಡುವ ಭರವಸೆ ನೀಡಿದೆ. ಚಿತ್ರದ ಶೀರ್ಷಿಕೆಯ ಜೊತೆಗೆ ಬಿಡುಗಡೆಯಾಗಿರುವ ಅನೌನ್ಸ್‌ಮೆಂಟ್ ಪೋಸ್ಟರ್ ಕೂಡ ಗಮನ ಸೆಳೆಯುತ್ತಿದೆ.

ಈ ಪೋಸ್ಟರ್​ನಲ್ಲಿ ಹನುಮಂತನ ಚಿತ್ರವು ಹಿನ್ನೆಲೆಯಲ್ಲಿ ಕಾಣಿಸಿದೆ. ವಾನರನ ಬಾಲದ ಮೇಲೆ ವ್ಯಕ್ತಿಯೊಬ್ಬರು ಮೇಲೇರುತ್ತಿರುವ ದೃಶ್ಯವಿದೆ. ಮೋಡಗಳನ್ನು ಸೀಳಿಕೊಂಡು ಮುನ್ನುಗ್ಗುತ್ತಿರುವ ಆ ಪಾತ್ರ ಯಾರದ್ದು ಎಂಬುದು ಗೌಪ್ಯವಾಗಿದೆ. ಒಟ್ಟಾರೆಯಾಗಿ ಈ ಪೋಸ್ಟರ್ ನೋಡಿದರೆ ಇದೊಂದು ಪಕ್ಕಾ ಫ್ಯಾಂಟಸಿ ಸಿನಿಮಾ ಆಗಿರಲಿದೆ ಎಂಬುದು ಖಚಿತವಾಗಿದೆ.

ವಿ.ಐ. ಆನಂದ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ವಿಭಿನ್ನ ಕಲ್ಪನಾತ್ಮಕ ಮತ್ತು ಫ್ಯಾಂಟಸಿ ಕಥೆಗಳನ್ನು ಹೇಳುವುದರಲ್ಲಿ ಹೆಸರುವಾಸಿಯಾಗಿರುವ ಅವರು ಈ ಮಹತ್ವಾಕಾಂಕ್ಷೆಯ ಸಿನಿಮಾಗೆ ಕಥೆ ಬರೆದಿದ್ದಾರೆ. ವಿ.ಐ. ಆನಂದ್ ಅವರ ಸೃಜನಶೀಲ ದೃಷ್ಟಿಕೋನ ಮತ್ತು ಪಂಜ ವೈಷ್ಣವ್ ತೇಜ್ ಅವರ ನಟನೆಯ ಸಂಗಮವು ತೆರೆಯ ಮೇಲೆ ಹೊಸ ಮ್ಯಾಜಿಕ್ ಸೃಷ್ಟಿಸಲಿದೆ ಎಂಬುದನ್ನು ನೋಡಲು ಸಿನಿಪ್ರಿಯರು ಕಾದಿದ್ದಾರೆ.

ಇದನ್ನೂ ಓದಿ: ‘ಹನುಮಾನ್ 2’ vs ‘ಜೈ ಹನುಮಾನ್‘: ಏನಿದು ವಿವಾದ?

‘ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ಅವರು ‘ಹನುಮಾನ್ 2: ದಿ ರೈಸ್ ಆಫ್ ವಾನರಾಸ್’ ಚಿತ್ರಕ್ಕೆ ಅದ್ದೂರಿಯಾಗಿ ಬಂಡವಾಳ ಹೂಡುತ್ತಿದ್ದಾರೆ. ಈಗಾಗಲೇ ‘ಹನು-ಮಾನ್’ ಮೂಲಕ ದೊಡ್ಡ ಗೆಲುವು ಕಂಡಿರುವ ಈ ನಿರ್ಮಾಪಕರು ಹಲವು ಬಹುನಿರೀಕ್ಷಿತ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:46 pm, Sun, 22 November 26

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More