AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್ ಓಡಿಸುತ್ತಿರುವಾಗಲೇ ಹೃದಯಾಘಾತ, ಆಘಾತಕಾರಿ ವಿಡಿಯೋ ವೈರಲ್

ಇತ್ತೀಚೆಗಿನ ದಿನಗಳಲ್ಲಿ ಸಾವು ಹೇಗೆ ಸಂಭವಿಸುತ್ತದೆ ಎಂದು ಊಹೆ ಮಾಡಲು ಅಸಾಧ್ಯ. ಈಗ ತಾನೇ ಚೆನ್ನಾಗಿ ಮಾತನಾಡುತ್ತಿದ್ದ ವ್ಯಕ್ತಿಯ ಪ್ರಾಣ ಪಕ್ಷಿ ಏಕಾಏಕಿ ಹಾರಿ ಬಿಡಬಹುದು. ಇದೀಗ ಬೈಕ್ ಓಡಿಸುತ್ತಿರುವಾಗಲೇ ಯುವಕನೊಬ್ಬನಿಗೆ ಹೃದಯಘಾತವಾಗಿದ್ದು, ಅಲ್ಲೇ ಕುಸಿದು ಬಿದ್ದಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಬಳಕೆದಾರರು ಈ ದೃಶ್ಯ ಕಂಡು ಆತಂಕ ವ್ಯಕ್ತಪಡಿಸಿದ್ದಾರೆ.

ಬೈಕ್ ಓಡಿಸುತ್ತಿರುವಾಗಲೇ ಹೃದಯಾಘಾತ, ಆಘಾತಕಾರಿ ವಿಡಿಯೋ ವೈರಲ್
ವೈರಲ್​​ ವಿಡಿಯೋ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: May 13, 2025 | 12:56 PM

Share

ಉತ್ತರ ಪ್ರದೇಶ, ಮೇ 13 : ಸಾವು ಹೇಗೆ ಯಾವಾಗ ಬರುತ್ತದೆ ಎಂದು ಹೇಳಲು ಅಸಾಧ್ಯ. ಆದರೆ ಇತ್ತೀಚೆಗಿನ ದಿನಗಳಲ್ಲಿ ಹೃದಯಾಘಾತ (heart attack) ಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಣ್ಣ ವಯಸ್ಸಿನ ಯುವಕ ಯುವತಿಯರಲ್ಲಿ ಹೆಚ್ಚಾಗಿ ಹೃದಯಾಘಾತವಾಗುತ್ತಿದೆ. ಈ ರೀತಿಯ ಹಠಾತ್ ಸಾವು ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಬೈಕ್ ಓಡಿಸುತ್ತಿರುವಾಗಲೇ ಹೃದಯಘಾತಕ್ಕೆ ಒಳಗಾಗಿ ಸಾವನ್ನಪಿದ್ದಾರೆ. ಈ ಹೃದಯ ವಿದ್ರಾವಕ ಘಟನೆಯೂ ಉತ್ತರ ಪ್ರದೇಶ (uttar pradesh) ದ ಮೊರಾದಾಬಾದ್ ನ ಕತ್ ಘರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಚ್ ಪೇಡಾ ಪ್ರದೇಶ (pach peda area under kat ghar police station, moradabad) ದಲ್ಲಿ ನಡೆದಿದ್ದು, ಈ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವಿಡಿಯೋ ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಈ ರೀತಿ ಹಠಾತ್ ಹೃದಯಘಾತಕ್ಕೆ ಒಳಗಾಗುತ್ತಿರುವುದು ಕಂಡು ಶಾಕ್ ಆಗಿದ್ದಾರೆ.

@priyarajputlive ಹೆಸರಿನ ಖಾತೆಯಲ್ಲಿ ಈ ಘಟನೆಯ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ 22 ವರ್ಷದ ಯುವಕನೊಬ್ಬನು ಬೈಕ್ ನಲ್ಲಿ ಓಡಿಸುವುದನ್ನು ಕಾಣಬಹುದು. ಆದರೆ ಏಕಾಏಕಿ ಯುವಕನು ಬೈಕ್ ನಲ್ಲಿ ಸಮತೋಲನ ಕಳೆದುಕೊಂಡು ಬೈಕ್ ಮೇಲೆ ಬಿದ್ದು ವಿಲವಿಲ ಒದ್ದಾಡುತ್ತಿದ್ದಾನೆ. ಅಲ್ಲೇ ಇದ್ದ ಜನರು ಯುವಕನನ್ನು ಕಂಡೊಡನೆ ಓಡೋಡಿ ಬಂದಿದ್ದಾರೆ. ಕೊನೆಗೆ, ಸಿಪಿಆರ್ ಮಾಡಿ ಯುವಕನನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಇದು ಸಾಧ್ಯವಾಗದೇ ಇದ್ದಾಗ ಆಸ್ಪತ್ರೆಗೆ ಕರೆದು ಹೋಗಿದ್ದಾರೆ. ಇದಾದ ಹದಿನೈದು ಇಪ್ಪತ್ತು ನಿಮಿಷದೊಳಗೆ ಈ ಯುವಕನು ಮೃತ ಪಟ್ಟಿದ್ದು, ಈ ಬಗ್ಗೆ ಸ್ವತಃ ವೈದ್ಯರೇ ಘೋಷಿಸಿದ್ದಾರೆ.

ಇದನ್ನೂ ಓದಿ : ರಾಮ್ತಾ ಜೋಗಿ’ ಹಾಡಿಗೆ ಅದ್ಭುತ ಸ್ಟೆಪ್ ಹಾಕಿದ ಬೆಂಗಳೂರಿನ ಕಾಲೇಜು ವಿದ್ಯಾರ್ಥಿಗಳು, ವಿಡಿಯೋ ವೈರಲ್

ವೈರಲ್ ವಿಡಿಯೋ ಇಲ್ಲಿದೆ ನೋಡಿ:

ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಎರಡು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಬಳಕೆದಾರರು ಈ ದೃಶ್ಯ ನೋಡಿ ಆತಂಕ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ಈ ದೃಶ್ಯ ನೋಡಿದರೆ ನಿಜಕ್ಕೂ ಭಯವಾಗುತ್ತಿದೆ. ಈ ಸಾವು ಸಾವು ನ್ಯಾಯವೇ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ಸಣ್ಣ ವಯಸ್ಸಿನ ಯುವಕ ಯುವತಿಯರು ಈ ರೀತಿ ಸಾವನ್ನಪ್ಪುತ್ತಿರುವುದು ಕಂಡಾಗ ಏನು ಆಗುತ್ತಿದೆ ಎನ್ನುವುದೇ ತಿಳಿಯುತ್ತಿಲ್ಲ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡಿ, ಈಗ ಸಾವು ಯಾವಾಗ ಹೇಗೆ ಬರುತ್ತದೆ ಎಂದು ಊಹಿಸಲು ಅಸಾಧ್ಯ’ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ