ಸೋಫಿಯಾ ಅನ್ಸಾರಿ ಅಂತಾಗಬೇಡಿ, ಸೋಫಿಯಾ ಖುರೇಷಿ ಅವರಂತಾಗಿ ಎಂದ ವ್ಯಕ್ತಿ
ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಭಾರತೀಯರ ಹತ್ಯಾಕಾಂಡಕ್ಕೆ ಪ್ರತೀಕಾರದ ದೊಡ್ಡ ಅಸ್ತ್ರವೆಂದರೆ ಅದುವೇ ಆಪರೇಷನ್ ಸಿಂಧೂರ್. ಈ ಕಾರ್ಯಾಚರಣೆ ಬಗ್ಗ ಎಳೆ ಎಳೆಯಾಗಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಎಲ್ಲರಿಗೂ ಕೂಡ ಚಿರಪರಿಚಿತರಾಗಿದ್ದಾರೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ನೀವು ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಸೋಫಿಯಾ ಅನ್ಸಾರಿ ಅಂತಾಗಬೇಡಿ, ಸೋಫಿಯಾ ಖುರೇಷಿ ಅವರಂತಾಗಿ ಎಂದಿದ್ದು ಅವರು ಮಾಡಿರುವ ಕೆಲಸಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ. ಈ ವಿಡಿಯೋ ವೊಂದು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ.

ಜಮ್ಮು ಕಾಶ್ಮೀರ (jammu kashmir) ದ ಪಹಲ್ಗಾಮ್ ನಲ್ಲಿ 26 ಪ್ರವಾಸಿಗರನ್ನು ಹತ್ಯೆಗೈದಿದ್ದರು. ಈ ಘಟನೆಯ ನಡೆದ ಹದಿಮೂರನೇ ದಿನಕ್ಕೆ ಭಾರತವು ಪಾಕಿಸ್ತಾನಕ್ಕೆ ಸರಿಯಾಗಿ ಉತ್ತರ ನೀಡುವ ಮೂಲಕ ಬಿಸಿ ಮುಟ್ಟಿಸಿತ್ತು. ಆಪರೇಷನ್ ಸಿಂಧೂರ್ (operation sindoor) ಹೆಸರಿನಲ್ಲಿ ಪಾಕಿಸ್ತಾನದ 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿತ್ತು. ಈ ಶಕ್ತಿಶಾಲಿ ಸೇನಾ ಕಾರ್ಯಾಚರಣೆ ‘ಆಪರೇಷನ್ ಸಿಂಧೂರ್’ ಯ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಅದರಲ್ಲಿಯೂ ಈ ಕರ್ನಾಟಕದ ಬೆಳಗಾವಿಯ ಸೊಸೆ ಕರ್ನಲ್ ಸೋಫಿಯಾ ಖುರೇಷಿ ನೇತೃತ್ವ ವಹಿಸಿದ್ದು ಎಲ್ಲರೂ ಕೂಡ ಹೆಮ್ಮೆ ಪಡುವ ಸಂಗತಿಯಾಗಿದ್ದು, ಇದೀಗ ವ್ಯಕ್ತಿಯೊಬ್ಬರು ಸೋಫಿಯಾ ಖುರೇಷಿ (sofia qureshi) ಅವರ ಕೆಲಸವನ್ನು ಮೆಚ್ಚಿಕೊಂಡಿದ್ದು ಇವರಂತೆ ನೀವಾಗಿ ಎಂದಿದ್ದಾರೆ.
@ibmindia20 ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು, ಬೆಳಗಾವಿಯ ಸೊಸೆ ಕರ್ನಲ್ ಸೋಫಿಯಾ ಖುರೇಷಿಯವರು ಆಪರೇಷನ್ ಸಿಂಧೂರ್ ನೇತೃತ್ವ ವಹಿಸಿರುವುದು ಹೆಮ್ಮೆ ಪಟ್ಟು ಕೊಂಡಿದ್ದಾರೆ. ಇದೇ ವೇಳೆ ಅರೇಬರೇ ಬಟ್ಟೆ ತೊಟ್ಟು ಫೇಮಸ್ ಆಗಿರುವ ಸೋಷಿಯಲ್ ಮೀಡಿಯಾ ಇನ್‌ಫ್ಲೂಯೆನ್ಸರ್ ಸೋಫಿಯಾ ಅನ್ಸಾರಿ ಫೋಟೋವನ್ನು ಹರಿದು ಹಾಕಿರುವುದನ್ನು ಕಾಣಬಹುದು. ಅದಲ್ಲದೇ ಸೋಫಿಯಾ ಖುರೇಷಿಯವರ ಅವರ ಸಾಧನೆಗೆ ನನ್ನದೊಂದು ಸೆಲ್ಯೂಟ್ ಎಂದಿದ್ದಾರೆ. ಅಷ್ಟೇ ಅಲ್ಲದೇ, ಇನ್‌ಫ್ಲೂಯೆನ್ಸರ್ ಸೋಫಿಯಾ ಅನ್ಸಾರಿ ಅಂತಾಗಬೇಡಿ, ಸೋಫಿಯಾ ಖುರೇಷಿ ಅವರಂತಾಗಿ ಎಂದಿರುವುದನ್ನು ನೀವಿಲ್ಲಿ ನೋಡಬಹುದು.
ಇದನ್ನೂ ಓದಿ : ಪ್ಯಾಲೆಸ್ಟೈನ್, ಪಾಕ್ ಬೆಂಬಲಿಸಿ ಕರಪತ್ರ ಹಂಚಿದ ದೇಶದ್ರೋಹಿಗಳಿಗೆ ಹಿಗ್ಗಾಮುಗ್ಗ ಥಳಿಸಿದ ಸ್ಥಳೀಯ ನಾಗರಿಕರು
ವೈರಲ್ ವಿಡಿಯೋ ಇಲ್ಲಿದೆ ನೋಡಿ:
बनना है तो सोफिया कुरैशी 🫡 सोफिया अंसारी नहीं
जज़्बा क़ायम रहे हिंदुस्तानियों 🇮🇳@ArunKosli #कायर_इंदिरा pic.twitter.com/KdrHT8yTKh
— Ms.Bhumi (@ibmindia20) May 11, 2025
ಈ ವಿಡಿಯೋವೊಂದು 1.3 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಕಾಮೆಂಟ್ ಮಾಡಿರುವ ಕಾಮೆಂಟ್ ಗಳು ಹೀಗಿವೆ. ಬಳಕೆದಾರರೊಬ್ಬರು, ನಿಜಕ್ಕೂ ಸೋಫಿಯಾ ಖುರೇಷಿಯವರು ನಮಗೆಲ್ಲರಿಗೂ ಮಾದರಿ ಎಂದಿದ್ದಾರೆ. ಇನ್ನೊಬ್ಬರು, ನಿಜಕ್ಕೂ ಹೆಣ್ಣು ಮಕ್ಕಳು ಸಾಧನೆ ಮಾಡುವುದನ್ನು ಕಂಡಾಗ ಖುಷಿಯಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು ಈ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸುವ ಮೂಲಕ ಹೃದಯದ ಸಿಂಬಲ್ ಕಳುಹಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ