ಪ್ಯಾಲೆಸ್ಟೈನ್, ಪಾಕ್ ಬೆಂಬಲಿಸಿ ಕರಪತ್ರ ಹಂಚಿದ ದೇಶದ್ರೋಹಿಗಳಿಗೆ ಹಿಗ್ಗಾಮುಗ್ಗ ಥಳಿಸಿದ ಸ್ಥಳೀಯ ನಾಗರಿಕರು
ಪಹಲ್ಗಾಮ್ ನಲ್ಲಿ ನಡೆದ ಪಾಕಿಸ್ತಾನ ಬೆಂಬಲಿತ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಆದರೆ ಈ ವೇಳೆ ಯಲ್ಲಿ ಭಾರತದಲ್ಲಿರುವ ಕೆಲವರು ಪಾಕಿಸ್ತಾನಕ್ಕೆ ಬೆಂಬಲ ನೀಡುವ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಆದರೆ ಇದೀಗ ಪ್ಯಾಲೆಸ್ಟೈನ್ ಮತ್ತು ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಇಬ್ಬರು ದೇಶದ್ರೋಹಿಗಳನ್ನು ನಡು ರಸ್ತೆಯಲ್ಲಿ ನಾಗರಿಕರು ಥಳಿಸಿದ್ದು ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪುಣೆ, ಮೇ 12: ಪಹಲ್ಗಾಮ್ (pahalgam) ಕೃತ್ಯಕ್ಕೆ ಪ್ರತೀಕಾರವಾಗಿ ಯೋಧರು ‘ಆಪರೇಷನ್ ಸಿಂಧೂರ’ (operation sindoor) ನಡೆಸಿ ಉಗ್ರರ ನೆಲೆ ನಾಶ ಮಾಡಿದ್ದಾರೆ. ಆದರೆ ಈ ಬೆನ್ನಲೇ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನ ವಾತಾವರಣ ಉಂಟಾಗಿದ್ದು, ಭಾರತದಲ್ಲಿ ನೆಲೆಸಿರುವ ಕೆಲವರು ಪಾಕ್ ಗೆ ಬೆಂಬಲ ಸೂಚಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಪುಣೆಯ ಕರ್ವೆ ನಗರದಲ್ಲಿ ಪ್ಯಾಲೆಸ್ಟೈನ್ ಮತ್ತು ಪಾಕಿಸ್ತಾನ (palestine and pakistan) ವನ್ನು ಬೆಂಬಲಿಸುವ ಇಬ್ಬರು ದೇಶದ್ರೋಹಿಗಳನ್ನು ಸ್ಥಳೀಯ ನಾಗರಿಕರು ಥಳಿಸಿದ್ದಾರೆ. ಹೌದು, ಪ್ಯಾಲೆಸ್ಟೈನ್ ಹಾಗೂ ಪಾಕಿಸ್ತಾನವನ್ನು ಬೆಂಬಲಿಸುವ ಮೂಲಕ ಕರಪತ್ರಗಳನ್ನು ವಿತರಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Meghaupadates ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಇದರಲ್ಲಿ ಪುಣೆಯ ಕರ್ವೆ ನಗರದಲ್ಲಿ ಪ್ಯಾಲೆಸ್ಟೈನ್ ಮತ್ತು ಪಾಕಿಸ್ತಾನವನ್ನು ಬೆಂಬಲಿಸುವ ಮೂಲಕ ಕರಪತ್ರಗಳನ್ನು ಸಹ ವಿತರಿಸುತ್ತಿದ್ದು ಈ ಇಬ್ಬರು ದೇಶದ್ರೋಹಿಗಳನ್ನು ಸ್ಥಳೀಯ ನಾಗರಿಕರು ಥಳಿಸುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅದೇ ಸಮಯದಲ್ಲಿ ಇಬ್ಬರು ಮಹಿಳಾ ಸಹಚರರು ಅವರ ರಕ್ಷಣೆಗೆ ಧಾವಿಸಿದ್ದು ಅವರಿಗೂ ಕೂಡ ಸ್ಥಳೀಯ ನಾಗರಿಕರು ಥಳಿಸಿದ್ದಾರೆ.
ಇದನ್ನೂ ಓದಿ : ಕಲಿಸುವುದು ಒಂದು, ಪ್ರದರ್ಶಿಸುವುದು ಇನ್ನೊಂದು : ಇದು ನಮ್ಮ ಶಿಕ್ಷಣದ ಸ್ಥಿತಿ ನೋಡಿ
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Two traitors supporting Palestine and Pakistan were thrashed by patriotic citizens in Karve Nagar, Pune. They were also distributing Pamphlets supporting Palestine
At that time, two female associates rushed to their defense but Serviced properly byPublic pic.twitter.com/EgYyHK7TON
— Megh Updates 🚨™ (@MeghUpdates) May 11, 2025
ಈ ವಿಡಿಯೋವೊಂದನ್ನು ಶೇರ್ ಮಾಡಿಕೊಳ್ಳಲಾಗುತ್ತಿದ್ದಂತೆ ಈಗಾಗಲೇ ಎರಡೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡುಕೊಂಡಿದ್ದು ಬಳಕೆದಾರರು ಈ ರೀತಿ ಕೃತ್ಯ ಎಸಗಿದ್ದವರ ವಿರುದ್ಧ ಗರಂ ಆಗಿದ್ದಾರೆ. ಬಳಕೆದಾರರೊಬ್ಬರು, ಅತಿರೇಕದ ವರ್ತನೆ ಎಂದಿದ್ದಾರೆ. ಇನ್ನೊಬ್ಬರು, ಈ ದೇಶದಲ್ಲಿದ್ದುಕೊಂಡೆ ದೇಶದ್ರೋಹದಂತಹ ಕೃತ್ಯದಲ್ಲಿ ಎಸಗುತ್ತಿರುವ ವ್ಯಕ್ತಿಗಳನ್ನು ಬೆಂಬಲಿಸಬೇಡಿ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ಈ ವ್ಯಕ್ತಿಗಳು ನಿಜವಾದ ದೇಶದ್ರೋಹಿಗಳು, ಇವರನ್ನು ಇಷ್ಟಕ್ಕೆ ಸುಮ್ಮನೆ ಬಿಡಬಾರದು’ ಎಂದು ಖಾರವಾಗಿಯೇ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ