AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಿಸುವುದು ಒಂದು, ಪ್ರದರ್ಶಿಸುವುದು ಇನ್ನೊಂದು : ಇದು ನಮ್ಮ ಶಿಕ್ಷಣದ ಸ್ಥಿತಿ ನೋಡಿ

ಶಾಲೆಗಳು ಮಕ್ಕಳು ಉತ್ತಮ ಭವಿಷ್ಯ ಕಟ್ಟಿಕೊಡುವುದರ ಜೊತೆಗೆ ಸಂಸ್ಕಾರ ಕಲಿಸುವ ದೇಗುಲ. ಹೌದು, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸಿ ಉತ್ತಮ ನಾಗರಿಕರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರದ್ದು. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಶಾಲಾ ಕಾಂಪೌಂಡ್ ಮೇಲೆ ಮರ ಕಡಿದವನು ಭಿಕ್ಷೆ ಬೇಡಿದ ಸೇರಿದಂತೆ ಇನ್ನಿತರ ಘೋಷವಾಕ್ಯಗಳಿದ್ದು, ಆದರೆ ಅಲ್ಲೇ ಇದ್ದ ಸಾಲು ಮರಗಳನ್ನು ಕಡಿದಿರುವುದನ್ನು ನೋಡಬಹುದು. ಈ ವಿಡಿಯೋವೊಂದು ವೈರಲ್ ಆಗುತ್ತಿದ್ದಂತೆ ಖಾರವಾಗಿ ಕಾಮೆಂಟ್ ಮಾಡಿದ್ದಾರೆ.

ಕಲಿಸುವುದು ಒಂದು, ಪ್ರದರ್ಶಿಸುವುದು ಇನ್ನೊಂದು : ಇದು ನಮ್ಮ ಶಿಕ್ಷಣದ ಸ್ಥಿತಿ ನೋಡಿ
ವೈರಲ್​​ ವಿಡಿಯೋ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: May 12, 2025 | 2:48 PM

Share

ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ..ಇಂತಹ ಅಗತ್ಯ ಪಾಠಗಳನ್ನು ಶಿಕ್ಷಕರು ಪಠ್ಯದ ಜೊತೆಗೆ ಹೇಳಿಕೊಡುತ್ತಾರೆ. ಕೆಲವರು ಶಾಲಾ ಕಾಲೇಜುಗಳ ಆವರಣ ಸೇರಿದಂತೆ ಶಾಲಾ ಕಾಂಪೌಂಡ್ ಗಳ ಮೇಲೆ ಈ ಬಗೆಗಿನ ಘೋಷವಾಕ್ಯಗಳಿರುತ್ತದೆ. ಆದರೆ ಕೆಲವೊಮ್ಮೆ ಈ ಘೋಷವಾಕ್ಯಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿಯೂ ಅಲ್ಲಿರುತ್ತದೆ ಎನ್ನುವುದನ್ನೂ ಒಪ್ಪಿಕೊಳ್ಳಲೇ ಬೇಕು. ಇದೀಗ ಇಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಶಾಲಾ ಪಕ್ಕದಲ್ಲಿರುವ ಸಾಲು ಸಾಲು ಮರಗಳನ್ನು ಕಡಿಯಲಾಗಿದ್ದು, ಆದರೆ ಕಾಂಪೌಂಡ್ ಗಳ ಮೇಲೆ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತಹ ಸ್ಲೋಗನ್ ಗಳಿವೆ.

rashmis diaryy ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ಈ ಜನರು ಪ್ರಶ್ನೆಗಳನ್ನು ಕೇಳದಂತೆ ಮೌನವಾಗಿರಲು ಪ್ರಯತ್ನಿಸುತ್ತಿದ್ದಾರೆ. ಯಾರಾದರೂ ಪ್ರಶ್ನೆ ಕೇಳಲು ಧೈರ್ಯ ಮಾಡಿದಾಗಲೂಆ ಪ್ರಶ್ನೆಗಳು ಮೌನಕ್ಕೆ ಜಾರುತ್ತದೆ. ಈ ವೀಡಿಯೊವನ್ನು ಡಿಲೀಟ್ ನನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ..ನನ್ನ ಬಗ್ಗೆ ಸುಳ್ಳು ವದಂತಿಗಳನ್ನು ಹರಡುತ್ತಿದ್ದಾರೆ. ಆದರೆ ಅವರು ಎಷ್ಟೇ ಪ್ರಯತ್ನಗಳನ್ನು ಮಾಡಿದರೂ, ಈ ವೀಡಿಯೊವನ್ನು ತೆಗೆದು ಹಾಕಲಾಗುವುದಿಲ್ಲ. ನಾನು ಮೌನವಾಗಿರುವಂತೆ ಮಾಡಲು ನಿಮ್ಮಿಂದ ಸಾಧ್ಯವಿಲ್ಲ. ನೀರಿಗಾಗಿ ಭಿಕ್ಷೆ ಬೇಡ್ತಿರೋ ವೃಕ್ಷವುದು ಇನ್ನೊಂದು. ವೃಕ್ಷ ಕಡಿದವನು ದುಡ್ಡಿಸ್ಕೊಂಡು ಮೀನ್ಸಾರು ಮಾಡ್ಕಂಡ್ ಉಂಡು ಮಲಗಿದ. ನಮ್ಮ ಶಿಕ್ಷಣ ವ್ಯವಸ್ಥೆಯು ತಾವು ಹೇಳಿದಂತೆ ನಡೆದುಕೊಳ್ಳುವುದಿಲ್ಲ. ಇನ್ನು ಈ ವಿದ್ಯಾರ್ಥಿಗಳು ಹೇಗೆ ಕಲಿಯಬಹುದು? ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿ
Image
ಹೆಣ್ಣಿನ ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ
Image
ಈ ನಾಲ್ಕು ರಾಶಿಯವರಿಗೆ ಚಿನ್ನ ಧರಿಸುವುದು ಅತ್ಯಂತ ಶುಭ
Image
ಮೇ 8 ಮೋಹಿನಿ ಏಕಾದಶಿ; ಪೂಜಾ ವಿಧಾನ ಮತ್ತು ಮಹತ್ವ
Image
ಶಿವನ ವಿಶೇಷ ಅನುಗ್ರಹ ಪಡೆಯಲು ಈ ಸರಳ ಪರಿಹಾರವನ್ನು ಪ್ರಯತ್ನಿಸಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ :

ಈ ವಿಡಿಯೋದಲ್ಲಿ ಶಾಲಾ ಕಾಂಪೌಂಡ್ ಗಳ ಮೇಲೆ ಪರಿಸರ ಸಂರಕ್ಷಣೆಯ ಸ್ಲೋಗನ್ ಗಳನ್ನು ಕಾಣಬಹುದು. ಆದರೆ ಅದರ ಪಕ್ಕದಲ್ಲಿರುವ ಸಾಲು ಸಾಲು ಮರಗಳನ್ನು ಕಡಿಯಲಾಗಿದೆ. ಈ ಬಗ್ಗೆ ಮಹಿಳೆಯೊಬ್ಬರು ಶಾಲೆಯ ಸುತ್ತಮುತ್ತಲಿನ ಪರಿಸರದಲ್ಲಿ ಕಂಡು ಬಂದ ವಾಸ್ತವ ಸ್ಥಿತಿಯನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾಳೆ.

ಇದನ್ನೂ ಓದಿ : ಈಜಿಪುರ ಫ್ಲೈಓವರ್ ಕಾಮಗಾರಿ ಪೂರ್ಣಗೊಳ್ಳಲು ಟ್ರಂಪ್ ಮಧ್ಯಸ್ಥಿಕೆ ವಹಿಸಿ ಎಂದು ಕೇಳಿಕೊಂಡ ಬೆಂಗಳೂರಿನ ನಿವಾಸಿ

ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಒಂದು ಲಕ್ಷ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆ ದಾರರು ಹೀಗೆ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು, ಪುಸ್ತಕದಲ್ಲಿ ಇದ್ದರೂ, ಸಮಾಜದಲ್ಲಿ ಇರೋದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ರೀತಿಯ ದೃಶ್ಯ ನೋಡಲು ನಿಜಕ್ಕೂ ಬೇಸರವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, ಈ ಪ್ರಪಂಚದಲ್ಲಿ ಕೆಟ್ಟ ಶಿಕ್ಷಣವಿದ್ದರೆ ಅದು ಭಾರತದಲ್ಲಿ ಮಾತ್ರ ಎಂದು ಕಟುವಾಸ್ತವತೆಯನ್ನು ಬಿಚ್ಚಿಟ್ಟಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ