ಪ್ರಬಂಧದಲ್ಲಿ ತನ್ನ ತಾಯಿಯ ವಿಶ್ವ ರೂಪದ ಬಗ್ಗೆ ಉಲ್ಲೇಖಿಸಿದ ಮುದ್ದಿನ ಮಗ, ವಿಡಿಯೋ ವೈರಲ್
ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಿ ಜೀವವೇ ಹಾಗೆ ತನ್ನ ಮಕ್ಕಳಿಗೆ ಯಾವುದೇ ತೊಂದರೆ ಆಗಬಾರದು ಎಂದು ಬಯಸುತ್ತಾಳೆ. ಆದರೆ ಕೆಲವೊಮ್ಮೆ ಮಕ್ಕಳು ತಪ್ಪು ಮಾಡಿದಾಗ ಹೆತ್ತವಳು ಜೋರಿನವಳಾಗಿ ಕಾಣುತ್ತಾಳೆ. ಆದರೆ ಇದೀಗ ಪುಟಾಣಿ ಕಂದಮ್ಮ ತನ್ನ ತಾಯಿ ತನ್ನ ಮನೆಯಲ್ಲಿರುವ ಸದ್ಯಸರಿಗೆ ಹೇಗೆಲ್ಲಾ ಕಾಣಿಸುತ್ತಾಳೆ ಎನ್ನುವುದನ್ನು ಶಾಲೆಯ ಪ್ರಬಂಧದಲ್ಲಿ ಉಲ್ಲೇಖಿಸಿದ್ದು, ಇದನ್ನು ನೋಡಿದ ಬಳಕೆದಾರರು ಬಿದ್ದು ಬಿದ್ದು ನಕ್ಕಿದ್ದಾರೆ.

ಎಲ್ಲಾ ತಾಯಂದಿರು (mothers) ಮಕ್ಕಳಿಗೆ ಎಷ್ಟು ಮುದ್ದು ಮಾಡುತ್ತಾರೋ ಅಷ್ಟೇ ಶಿಸ್ತಿನಿಂದ ಬೆಳೆಸುವುದನ್ನು ನೋಡಬಹುದು. ಮಕ್ಕಳು ಚೆನ್ನಾಗಿ ಓದಲಿ, ಒಳ್ಳೆಯ ಭವಿಷ್ಯ ಸಿಗಲಿ ಎಂದು ಬಯಸುವುದೇನೊ ನಿಜ. ಆದರೆ ಅದೇ ಮಕ್ಕಳ ಪಾಲಿಗೆ ಅಮ್ಮ ಈ ಮೊಬೈಲ್ ವಿಚಾರದಲ್ಲಿ ಜೋರಿನವಳಾಗಿ ಕಾಣುತ್ತಾಳೆ. ಕೆಲವೊಮ್ಮೆ ಸಣ್ಣ ಪುಟ್ಟ ವಿಷಯಕ್ಕೆ ಗದರಿದರೂ ಅದರಲ್ಲಿ ವಿವರಿಸಲಾಗದ ಪ್ರೀತಿಯೂ ಖಂಡಿತ ಅಡಗಿರುತ್ತದೆ. ಆದರೆ ಇಲ್ಲೊಬ್ಬ ಪುಟಾಣಿ ತಾಯಂದಿರ ದಿನ (mothers day) ದ ಪ್ರಯುಕ್ತ ಶಿಕ್ಷಕ್ಕರು ಪ್ರಬಂಧ (essay) ಬರೆಯಲು ಹೇಳಿದ್ದು ತನ್ನ ಕುಟುಂಬ ಸದಸ್ಯರಿಗೆ ಅಮ್ಮ ಯಾವ ರೀತಿ ಕಾಣುತ್ತಾಳೆ ಎಂದು ಬರೆದಿದ್ದು, ಇದನ್ನು ಓದಿದ ತಾಯಿಯೂ ಶಾಕ್ ಆಗಿದ್ದಾಳೆ.
@HasnaZaruriHai ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಶಾಲೆಯಿಂದ ಬಂದ ಮಗನು ತನ್ನ ತಾಯಿ ಬಳಿ ಇವತ್ತು ಹಿಂದಿ ಮೇಡಂ ತಾಯಂದಿರ ದಿನಾಚರಣೆ ಪ್ರಯುಕ್ತ ಪ್ರಬಂಧ ಬರೆಯಲು ಹೇಳಿದ್ರು ಎಂದು ಹೇಳುವುದನ್ನು ನೋಡಬಹುದು. ಆ ಬಳಿಕ ಮಗನು ಬರೆದ ಪ್ರಬಂಧವನ್ನು ಜೋರಾಗಿ ಓದಿದ್ದು, ಇದನ್ನು ಓದಿದ ತಾಯಿ ಶಾಕ್ ಆಗಿದ್ದಾಳೆ. ಈ ಪುಟಾಣಿ ಬಾಲಕನು ತನ್ನ ತಾಯಿಯೂ ಮನೆಯ ಮಂದಿಗೆ ಯಾವ ರೀತಿ ಕಾಣಿಸುತ್ತಾಳೆ ಎಂದು ಉಲ್ಲೇಖಿಸಿರುವುದನ್ನು ನೋಡಬಹುದು.
ವೈರಲ್ ವಿಡಿಯೋ ಇಲ್ಲಿದೆ ನೋಡಿ
Mother’s Day पर माँ पे ऐसा निबंध आज किसी ने नहीं लोखा होगा 😜😜😜😜😜😜😜😜 pic.twitter.com/7x1SD0bSLS
— HasnaZarooriHai🇮🇳 (@HasnaZaruriHai) May 11, 2025
ಅಪ್ಪ ಹೇಳ್ತಾರೆ, ಅವಳು ಹಾವು ಎಂದು. ನನ್ನ ಅಜ್ಜಿ ನನ್ನ ಮಗಳು ಹಸುವಿನ ಹಾಗೆ ಎಂದು ಹೇಳುತ್ತಾರೆ. ಅಜ್ಜ ಅವಳು ಗಿಣಿಯಂತೆ ಮಾತನಾಡುತ್ತಾಳೆ ಎಂದು ಹೊಗಳುತ್ತಾರೆ. ಆದರೆ ನನಗೆ ನನ್ನ ತಾಯಿ ಸಿಂಹಿಣಿಯಂತೆ ಕಾಣುತ್ತಾಳೆ. ಫೋನ್ ಬಳಸುವುದಕ್ಕೆ ಬಿಡುವುದಿಲ್ಲ, ಸದಾ ನನಗೆ ಬೈಯುತ್ತಿರುತ್ತಾಳೆ. ಆಕೆ ಮಾತ್ರ ಫೇಸ್‌ಬುಕ್ ಮತ್ತು ವಾಟ್ಸಾಪ್‌ನಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ. ಹೀಗೆ ಅನೇಕ ವಿಚಾರಗಳನ್ನು ಈ ಪ್ರಬಂಧದಲ್ಲಿ ಬರೆದಿರುವುದನ್ನು ನೋಡಬಹುದು.
ಇದನ್ನೂ ಓದಿ :ಅಮೆಜಾನ್ನಲ್ಲಿ 70,000 ಲಾಲಿಪಾಪ್ ಆರ್ಡರ್ ಮಾಡಿದ ಬಾಲಕ, ಮಗನ ಈ ಕೆಲಸಕ್ಕೆ ಶಾಕ್ ಆದ ತಾಯಿ
ಈ ವಿಡಿಯೋವೊಂದು ಅರವತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಸೋಶಿಯಲ್ ಮೀಡಿಯಾ ಬಳಕೆದಾರರು ಮಗುವಿನ ಮನಸ್ಸಿನ ಮಾತನ್ನು ಕೇಳಿ ಬಿದ್ದು ಬಿದ್ದು ನಕ್ಕಿದ್ದಾರೆ. ಬಳಕೆದಾರರೊಬ್ಬರು, ‘ ಎಂತಹ ಅದ್ಭುತ ಮಾತು ಎಂದಿದ್ದಾರೆ. ಇನ್ನೊಬ್ಬರು, ‘ಎಷ್ಟು ದಿನಗಳಿಂದ ಮನಸ್ಸಿನಲ್ಲಿಯೇ ಇಟ್ಟುಕೊಂಡಿದ್ದ ಮಾತುಗಳು ಇಂದು ಹೊರಬಿತ್ತು’ ಎಂದಿದ್ದಾರೆ. ಮತ್ತೊಬ್ಬರು, ‘ಸತ್ಯಗಳು ಯಾವತ್ತಿಗೂ ಕಹಿಯಾಗಿಯೇ ಇರುತ್ತದೆ. ಆದರೆ ಅದನ್ನು ಅರಗಿಸಿಕೊಳ್ಳಬೇಕಷ್ಟೆ’ ಎಂದು ಈ ಪುಟಾಣಿಯ ಪರವಾಗಿ ಮಾತನಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿ ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:48 am, Mon, 12 May 25








