ಮದುವೆಯಲ್ಲಿ ತನ್ನ ಬಗ್ಗೆ ವಿಚಾರಿಸಿಲ್ಲ ಎಂದು ಕೋಪಗೊಂಡ ಫೋಟೋಗ್ರಾಫರ್ ಮಾಡಿದ್ದೇನು ಗೊತ್ತಾ?
ಬೆಳಗ್ಗೆಯಿಂದ ಸಂಜೆ ತನಕ ನಿಂತುಕೊಂಡೆ ಮದುವೆಯ ಸುಂದರ ಫೋಟೋಗಳನ್ನುಗಳನ್ನು ಕ್ಲಿಕಿಸಿಕೊಳ್ಳುವವರೇ ಈ ಫೋಟೋಗ್ರಾಫರ್. ಆದರೆ ಮದುವೆ ಮನೆಯವರು ಅಥವಾ ಮದುವೆ ಮಂಟಪದಲ್ಲಿ ಈ ಫೋಟೋಗ್ರಾಫರ್ ಬಗ್ಗೆ ವಿಚಾರಿಸುವುದೇ ಇಲ್ಲ. ಆದರೆ ಇಲ್ಲೊಬ್ಬ ಫೋಟೋಗ್ರಾಫರ್ ಈ ವಿಚಾರವಾಗಿ ಸಿಟ್ಟುಗೊಂಡಿದ್ದು, ಮಾಡಿದ ಕೆಲಸ ತಿಳಿದರೆ ಅಚ್ಚರಿಯಾಗುತ್ತದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಎಲ್ಲರೂ ಕೂಡ ತಮ್ಮ ಮದುವೆ (marriage) ಕ್ಷಣಗಳನ್ನು ಸೆರೆಹಿಡಿಯಬೇಕೆಂದು ಅಂದುಕೊಂಡುತ್ತಾರೆ. ಹೀಗಾಗಿ ಎಷ್ಟೇ ಖರ್ಚು ಆದರೂ ಸರಿಯೇ ಚೆನ್ನಾಗಿ ಫೋಟೋ ತೆಗೆಯುವ ಫೋಟೋಗ್ರಾಫರ್ (photographer) ಗಳನ್ನು ಮದುವೆಗೆಂದೇ ಹೇಳುತ್ತಾರೆ. ಆದರೆ ಬೆಳಗ್ಗೆ ಯಿಂದ ಸಂಜೆ ನಿಂತುಕೊಂಡೆ ಕೆಲಸ ಮಾಡುವ ಈ ಫೋಟೋಗ್ರಾಫರ್ ಕಷ್ಟ ಕೇಳುವವರು ಯಾರು, ಅವರಿಗೂ ಕೂಡ ಕೋಪ ಅನ್ನೋದು ಬರುತ್ತದೆ. ಆದರೆ ಕೆಲವೊಮ್ಮೆ ಅವರ ಬಳಿ ಯಾರು ಕೂಡ ಊಟ ತಿಂಡಿ ಆಯ್ತಾ, ನೀರು ಬೇಕಾ ಎಂದು ಕೇಳುವುದಿಲ್ಲ. ಇದೀಗ ಇಲ್ಲೊಬ್ಬ ಫೋಟೋಗ್ರಾಫರ್ ಊಟ ನೀರು ಕೊಡಲಿಲ್ಲ, ತನ್ನ ಬಗ್ಗೆ ಯಾರು ಕೂಡ ವಿಚಾರಿಸಿಲ್ಲ ಎಂದು ಕೋಪಗೊಂಡಿದ್ದು ಮದುವೆಯ ಫೋಟೋಗಳನ್ನೆ ಡಿಲೀಟ್ ಮಾಡಿದ್ದಾನೆ ಎನ್ನಲಾಗಿದೆ. ಈ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
Famous plus ಹೆಸರಿನ ಖಾತೆಯಲ್ಲಿ ಈ ಬಗೆಗಿನ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಘಟನೆಯ ಬಗ್ಗೆ ವಿವರವಾಗಿ ಬರೆಯಲಾಗಿದೆ.. ಫೋಟೊಗ್ರಾಫರ್ ತುಂಬಾ ಹೊತ್ತು ಪೋಟೊ ತೆಗೆದ ಕಾರಣ ಸುಸ್ತಾಗಿ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಈ ವೇಳೆ ಯಲ್ಲಿ ವಧು ವರರ ಕಡೆಯವರ ಬಳಿ ಊಟ, ನೀರು ಕೊಡುವಂತೆ ಕೇಳಿಕೊಂಡಿದ್ದಾರೆ. ಆದರೆ ಮದುಮಕ್ಕಳ ಕಡೆಯವರು ಇವರ ಮಾತಿಗೆ ಯಾವುದೇ ಬೆಲೆ ಕೊಡಲೇ ಇಲ್ಲ. ಬೆಳಗ್ಗೆಯಿಂದ ನಿಂತುಕೊಂಡೆ ಫೋಟೋ ಕ್ಲಿಕಿಸಿದ ಈ ಫೋಟೋಗ್ರಾಫರ್ ಸ್ವಲ್ಪ ಸಮಯ ವಿಶ್ರಾಂತಿ ತೆಗೆದುಕೊಂಡದ್ದಕ್ಕೆ ನಿಷ್ಠುರವಾಗಿ ಮಾತನಾಡಿದ್ದಾರಂತೆ. ಇದರಿಂದ ಕೋಪಗೊಂಡ ಫೋಟೋಗ್ರಾಫರ್ ತನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದ ವಧುವರರ ಮದುವೆಯ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡಿ ಅಲ್ಲಿಂದ ಹೊರಟು ಹೋಗಿದ್ದಾನೆ.
ಇದನ್ನೂ ಓದಿ : ಕೈ ತುಂಬಾ ಸಂಬಳವಿದ್ರು ಈ ಉದ್ಯೋಗಿಗೆ ಜಾಬ್ ನಲ್ಲಿ ತೃಪ್ತಿಯೇ ಇಲ್ವಂತೆ, ಅಸಲಿ ಕಾರಣ ಇಲ್ಲಿದೆ ನೋಡಿ
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
View this post on Instagram
ಈ ಪೋಸ್ಟ್ ವೊಂದು ಇಪ್ಪತ್ತಾರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಕಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಫೋಟೋಗ್ರಾಫರ್ ಮಾಡಿದ ಕೆಲಸ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು, ‘ಈ ಫೋಟೋಗ್ರಾಫರ್ ಈ ರೀತಿ ಮಾಡಿರುವುದು ನಿಜಕ್ಕೂ ತಪ್ಪು’ ಎಂದಿದ್ದಾರೆ. ಇನ್ನೊಬ್ಬರು, ‘ಪ್ರತಿಯೊಬ್ಬರನ್ನು ಗೌರವಿಸಿ. ಆ ವ್ಯಕ್ತಿಯು ಈ ರೀತಿ ಕೆಲಸದಿಂದ ನಿಜಕ್ಕೂ ಪಾಠವನ್ನು ಕಲಿತ’ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ‘ನಾನು ಈ ಫೋಟೋ ಗ್ರಾಫರ್ ಪರ ನಿಲ್ಲುತ್ತೇನೆ’ ಎಂದಿದ್ದಾರೆ. ಕೆಲವರು ಫೋಟೋಗ್ರಾಫರ್ ಮಾಡಿದ್ದೆ ಸರಿ ಎಂದರೆ ಇನ್ನು ಕೆಲವರು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








