AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದೆಂಥಾ ಕಾಲ ಬಂತಪ್ಪಾ… ಹೋಟೆಲ್​ಗಳ ಬಿಲ್​ನಲ್ಲಿ ಜಿಎಸ್​ಟಿ ಜತೆ ಸೇರ್ಪಡೆಯಾಯ್ತು ಗ್ಯಾಸ್ ಶುಲ್ಕ!

ಬೆಂಗಳೂರು ಮತ್ತು ಚೆನ್ನೈ ಹೋಟೆಲ್‌ಗಳಲ್ಲಿ ಈಗ ತಿಂಡಿ ಬಿಲ್‌ನೊಂದಿಗೆ ಹೊಸ ‘ಗ್ಯಾಸ್ ಶುಲ್ಕ’ ಸೇರಿಸಲಾಗುತ್ತಿರುವುದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ವಾಣಿಜ್ಯ ಗ್ಯಾಸ್ ಸಿಲಿಂಡರ್ ಪೂರೈಕೆ ಕೊರತೆ ಮತ್ತು ಹೆಚ್ಚಿದ ಬೇಡಿಕೆಯಿಂದಾಗಿ ಹೋಟೆಲ್ ಮಾಲೀಕರು ಈ ಹೊರೆಯನ್ನು ಗ್ರಾಹಕರ ಮೇಲೆ ಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಿಲ್‌ನ ಫೋಟೋಗಳು ವೈರಲ್ ಆಗಿದ್ದು, ಗ್ರಾಹಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದೆಂಥಾ ಕಾಲ ಬಂತಪ್ಪಾ... ಹೋಟೆಲ್​ಗಳ ಬಿಲ್​ನಲ್ಲಿ ಜಿಎಸ್​ಟಿ ಜತೆ ಸೇರ್ಪಡೆಯಾಯ್ತು ಗ್ಯಾಸ್ ಶುಲ್ಕ!
ಹೋಟೆಲ್ ಬಿಲ್​​ನಲ್ಲಿ ಗ್ಯಾಸ್ ಶುಲ್ಕImage Credit source: X @GuruDharanidhar
ಗಣಪತಿ ಶರ್ಮಾ
|

Updated on: Mar 13, 2026 | 12:44 PM

Share

ಬೆಂಗಳೂರು, ಮಾರ್ಚ್ 13: ನಾವು ಯಾವುದೇ ದುಬಾರಿ ಹೋಟೆಲ್‌ಗೆ ಹೋದಾಗ ಬಿಲ್​ನ ಕೊನೆಯಲ್ಲಿ ಜಿಎಸ್‌ಟಿ (GST) ಶುಲ್ಕವನ್ನೂ ಸೇರಿಸುವುದು ಸಾಮಾನ್ಯ. ಆದರೆ ಈಗ, ಅದರ ಜೊತೆ ಮತ್ತೊಂದು ಶುಲ್ಕವನ್ನು ಸೇರಿಸುತ್ತಿದ್ದಾರೆ. ದೇಶಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ (Commercial cylinder) ಪೂರೈಕೆ ವ್ಯತ್ಯಯ, ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೋಟೆಲ್ ವ್ಯವಸ್ಥಾಪಕರು ಗ್ರಾಹಕರ ಮೇಲೆ ಆ ಹೊರೆಯನ್ನು ಹಾಕುತ್ತಿದ್ದಾರೆ. ಗ್ಯಾಸ್ ಪೂರೈಕೆ ಸಮಸ್ಯೆ ಹೆಸರಿನಲ್ಲಿ ತಿಂಡಿಯ ಬಿಲ್‌ಗೆ ಹೆಚ್ಚುವರಿ ‘ಗ್ಯಾಸ್ ಶುಲ್ಕ (Gas Fee)’ ಸೇರಿಸುತ್ತಿದ್ದಾರೆ. ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಈ ರೀತಿಯ ಘಟನೆ ಬೆಳಕಿಗೆ ಬಂದಿದೆ.

ಚೆನ್ನೈಯಲ್ಲಿ ತಿಂಡಿ ತಿನ್ನಲು ಹೋಟೆಲ್‌ಗೆ ತೆರಳಿದ ಗ್ರಾಹಕರೊಬ್ಬರು ಇಡ್ಲಿ ಮತ್ತು ವಡಾ ತಿಂದಿದ್ದಾರೆ. ನಂತರ ಬಿಲ್ ಕೇಳಿದಾಗ, ಹೋಟೆಲ್ ಮ್ಯಾನೇಜರ್ ಬಿಲ್‌ನಲ್ಲಿ ತಿಂಡಿ ಜೊತೆಗೆ ಗ್ಯಾಸ್ ಶುಲ್ಕವನ್ನು ಜಿಎಸ್‌ಟಿ ಜತೆ ಸೇರಿಸಿದ್ದಾರೆ. ‘ಗ್ಯಾಸ್ ಶುಲ್ಕ – 9.52 ರೂ.’ ಎಂದು ನಮೂದಾಗಿದ್ದುದನ್ನು ನೋಡಿ ಗ್ರಾಹಕ ಆಘಾತಕ್ಕೊಳಗಾಗಿದ್ದಾರೆ. ನಂತರ, ಅವರು ಬಿಲ್ ಪಾವತಿಸಿ ಅದರ ಫೋಟೋ ತೆಗೆದು ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ, ‘‘ಇದು ವಿಚಾರ. ಇಂಥಾ ದಿನ ಬರಬಹುದೆಂದು ನಾವು ಊಹಿಸಿದ್ದೆವಾ’’ ಎಂದು ಅವರು ಪ್ರಶ್ನಿಸಿದ್ದಾರೆ. ಈ ಫೋಟೊ ಸದ್ಯ ವೈರಲ್ ಆಗುತ್ತಿದೆ.

ಹೋಟೆಲ್​ ಬಿಲ್​ನಲ್ಲಿ ಗ್ಯಾಸ್ ಶುಲ್ಕ ನಮೂದಾಗಿರುವ ಫೋಟೊ

ಇದೀಗ ಹೋಟೆಲ್​​ಗಳ ಬಿಲ್​​​ನಲ್ಲಿ ಗ್ಯಾಸ್ ಶುಲ್ಕ ಸೇರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಇನ್ನು ಕೆಲವು ಹೋಟೆಲ್​​ಗಳ ಬಿಲ್​ಗಳಲ್ಲಿ ಗ್ಯಾಸ್ ಶುಲ್ಕ ಎಂದು ನಮೂದಿಸದಿದ್ದರೂ, ಎಲ್​​ಪಿಜಿ ಪೂರೈಕೆ ಸಮಸ್ಯೆಯ ನೆಪವೊಡ್ಡಿ ಗ್ರಾಹಕರಿಂದ ಹೆಚ್ಚು ದುಡ್ಡು ವಸೂಲಿ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿಯೂ ಅದೇ ಕಥೆ!

ಚೆನ್ನೈಯಲ್ಲಿ ಮಾತ್ರವಲ್ಲದೆ ದೇಶದಾದ್ಯಂತದ ಅನೇಕ ಪ್ರಮುಖ ನಗರಗಳಲ್ಲಿಯೂ ಈ ಪರಿಸ್ಥಿತಿ ಇದೆ. ಬೆಂಗಳೂರಿನಲ್ಲಿ ಕೂಡ ಇದೇ ರೀತಿಯ ಘಟನೆ ಬೆಳಕಿಗೆ ಬಂದಿದೆ. ನಗರದ ಹೋಟೆಲ್‌ಗೆ ಊಟಕ್ಕೆ ಹೋದ ಗ್ರಾಹಕನಿಗೆ ಗ್ಯಾಸ್ ಚಾರ್ಜ್ ಹೆಸರಿನಲ್ಲಿ ಹೆಚ್ಚುವರಿಯಾಗಿ 30 ರೂ. ಶುಲ್ಕ ವಿಧಿಸಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಗ್ಯಾಸ್ ಕೊರತೆಯಿಂದಾಗಿ ಪಿಜಿಗಳಲ್ಲಿ ಆಹಾರವನ್ನು ನೀಡುತ್ತಿಲ್ಲ ಮತ್ತು ಇದರಿಂದಾಗಿ ಹೋಟೆಲ್​​ಗೆ ಹೋದರೆ ಅವರು ಜನರನ್ನು ಲೂಟಿ ಮಾಡುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ಎಕ್ಸ್​​​ನಲ್ಲಿ ಹೋಟೆಲ್ ಬಿಲ್ ಪೋಸ್ಟ್ ಮಾಡಿ, ನಗರ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ: ಎಲ್​ಪಿಜಿ ಸಿಲಿಂಡರ್ ಕೊರತೆ ಬೆನ್ನಲ್ಲೇ ಅರಣ್ಯ ಇಲಾಖೆ ಹೈ ಅಲರ್ಟ್​ ಆಗಿದ್ಯಾಕೆ ಗೊತ್ತಾ?

ಸದ್ಯ ಹೋಟೆಲ್​ ಬಿಲ್​ಗಳಲ್ಲಿ ಗ್ಯಾಸ್ ಶುಲ್ಕಗಳಿಗೆ ಸಂಬಂಧಿಸಿದ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಇವುಗಳನ್ನು ನೋಡಿದ ನೆಟಿಜನ್‌ಗಳು ಹೋಟೆಲ್ ಆಡಳಿತ ಮಂಡಳಿಗಳ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ಯಾಸ್ ಕೊರತೆ ಇದ್ದರೆ, ಅವರು ಮುಂಚಿತವಾಗಿ ಸ್ಟಾಕ್ ತರಬೇಕಿತ್ತು. ಅದು ಬಿಟ್ಟು ಆ ಹೊರೆಯನ್ನು ಗ್ರಾಹಕರ ಮೇಲೆ ಏಕೆ ಹಾಕಬೇಕು ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಇರಾನ್-ಇಸ್ರೇಲ್ ಯುದ್ಧ, ಮಧ್ಯಪ್ರಾಚ್ಯ ಸಂಘರ್ಷ ಭಾರತದ ಹೋಟೆಲ್​​ಗಳ ಬಿಲ್​ಗಳಲ್ಲಿ ‘ಗ್ಯಾಸ್ ಶುಲ್ಕ’ ಸೇರ್ಪಡೆಗೆ ಕಾರಣವಾಗಿದ್ದು ಸುಳ್ಳಲ್ಲ!

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us