ಕೈ ತುಂಬಾ ಸಂಬಳವಿದ್ರು ಈ ಉದ್ಯೋಗಿಗೆ ಜಾಬ್ ನಲ್ಲಿ ತೃಪ್ತಿಯೇ ಇಲ್ವಂತೆ, ಅಸಲಿ ಕಾರಣ ಇಲ್ಲಿದೆ ನೋಡಿ
ಈಗಿನ ಕಾಲದಲ್ಲಿ ಕೈತುಂಬಾ ಸಂಬಳ ಸಿಗುವ ಕೆಲಸ ಸಿಕ್ಕರೆ ಸಾಕು ಎನ್ನುವವರೇ ಹೆಚ್ಚು. ಆದರೆ ಕೆಲವರು ಕೆಲಸದ ಒತ್ತಡದಿಂದ ಲಕ್ಷ ಲಕ್ಷ ಸಂಬಳ ಸಿಗುವ ಕೆಲಸವನ್ನು ತ್ಯಜಿಸುತ್ತಾರೆ. ಆದರೆ ಇದೀಗ ವೈರಲ್ ಆಗಿರುವ ಪೋಸ್ಟ್ ನಲ್ಲಿ ಈ ವ್ಯಕ್ತಿಯೂ ತಿಂಗಳಿಗೆ ಲಕ್ಷ ಸಂಬಳ ಗಳಿಸುತ್ತಾನೆ. ಆದರೆ ಕೆಲಸಮಾಡುವುದು ತಿಂಗಳಿಗೆ ಒಂದು ವಾರ ಮಾತ್ರವಂತೆ. ಆದರೆ ಹೆಚ್ಚುವರಿ ಕೆಲಸವಿಲ್ಲದೆ ಹಾಗೂ ತುಂಬಾನೇ ಬಿಡುವು ಇರುವ ಕಾರಣ ಈತನು ಬೇಸರ ಹೊಂದಿದ್ದಾನಂತೆ. ಈ ಬಗ್ಗೆ ಪೋಸ್ಟ್ ಮಾಡಿದ್ದು ಬಳಕೆದಾರರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಕೆಲಸ (job) ದ ಸ್ಥಳದಲ್ಲಿ ಕೆಲ ಉದ್ಯೋಗಿಗಳು ಅನುಭವಿಸುವ ಕಷ್ಟ ಒಂದೆರಡಲ್ಲ. ಆದರೆ ಅನಿವಾರ್ಯ ಕಾರಣಕ್ಕೆ ಕೆಲಸದ ಸ್ಥಳದಲ್ಲಿ ಎಷ್ಟೇ ಒತ್ತಡಭರಿತ ವಾತಾವರಣವಿರಲಿ, ಅನಿವಾರ್ಯಕ್ಕೆ ಕಟ್ಟು ಬಿದ್ದು ಕೆಲಸ ಮಾಡುತ್ತಾರೆ..ಆದರೆ ಈ ಉದ್ಯೋಗಿ (employee)ಕೈ ತುಂಬಾ ಲಕ್ಷ ಲಕ್ಷ ಸಂಪಾದನೆ ಮಾಡಿದರೂ ಕೂಡ ಕೆಲಸ ಕಡಿಮೆಯಿರುವುದೇ ಬೇಸರವಂತೆ. ಈ ಉದ್ಯೋಗಿಯ ಪೋಸ್ಟ್ ವೊಂದು ವೈರಲ್ (viral) ಆಗುತ್ತಿದ್ದಂತೆ ಚರ್ಚೆಗೆ ಕಾರಣವಾಗಿದೆ.
agreeable Bat 9722 ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಲಕ್ಷ ಲಕ್ಷ ಸಂಬಳ ಗಳಿಸುವ ಉದ್ಯೋಗಿಗೆ ಕೆಲಸದ ಮೇಲೆ ಅಸಮಾಧಾನವಂತೆ. ಈ ಪೋಸ್ಟ್ ನಲ್ಲಿ, ನಾನು ಪ್ರತಿವರ್ಷ 68 ಲಕ್ಷ ರೂಗಳನ್ನು ಗಳಿಸುತ್ತೇನೆ. ಪ್ರತಿ ತಿಂಗಳು ಕೇವಲ ಒಂದು ವಾರ ಮಾತ್ರ ಕೆಲಸ ಮಾಡುತ್ತೇನೆ. ಇನ್ನು ಉಳಿದ ಸಮಯದಲ್ಲಿ, ಅವನು ಟಿವಿ ಕಾರ್ಯಕ್ರಮಗಳನ್ನು ನೋಡುವುದು, ಡ್ರೈವಿಂಗ್ ಮಾಡುವುದು ಅಥವಾ ಪಾಡ್‌ಕಾಸ್ಟ್‌ಗಳನ್ನು ಕೇಳುವುದರಲ್ಲಿಯೇ ಸಮಯ ಕಳೆಯುತ್ತೇನೆ.
ಆದರೆ ನಾನು ಈ ಕೆಲಸಕ್ಕೆ ಸೇರಿದಾಗ ಈ ಕ್ಷೇತ್ರದಲ್ಲಿ ಯಾವುದೇ ಪದವಿ ಅಥವಾ ವಿಶೇಷ ಶಿಕ್ಷಣವನ್ನು ಪಡೆದಿರಲಿಲ್ಲ. ಆದರೆ ಪ್ರಾರಂಭದಲ್ಲಿ ಕಷ್ಟ ಪಟ್ಟು ಕೆಲಸ ಮಾಡಿದ್ದು ಆದರೆ ಇದೀಗ ಎಲ್ಲಾ ಕೆಲಸವನ್ನು ಸುಲಭವಾಗಿಯೇ ಮಾಡಿ ಮುಗಿಸುತ್ತೇನೆ. ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆಯಿದ್ದರೂ ಯಾವುದೇ ಸಮಾಧಾನವಿಲ್ಲ. ಅಂದಹಾಗೆ ನನಗೆ ನಾನು ಕೆಲಸ ಮಾಡುತ್ತಿರುವ ಕಂಪೆನಿಯ ಬಗ್ಗೆ ಯಾವುದೇ ದೂರುಗಳಿಲ್ಲ. ತಾನು ಅತ್ಯುತ್ತಮ ಕೆಲಸ ಗಾರ ಹಾಗೂ ತನ್ನ ಗ್ರಾಹಕರೊಂದಿಗೆ ಉತ್ತಮ ಸಂಬಂಧ ಕೂಡ ಹೊಂದಿದ್ದೇನೆ.ಎಲ್ಲಾ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುತ್ತೇನೆ. ಅದಲ್ಲದೇ ಬಿಡುವಿನ ಸಮಯದಲ್ಲಿ ಸಾಕಷ್ಟು ಅಧ್ಯಯನ ನಡೆಸುತ್ತಿದ್ದು, ವರ್ಷಕ್ಕೆ ಸರಿಸುಮಾರು 200 ಓದುತ್ತೇನೆ. ಆದರೆ ನನಗೆ ಬೇಸರವೊಂದು ಕಾಡುತ್ತಿದೆ. ಎಲ್ಲವನ್ನು ಸರಿಯಾಗಿ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ಭಾವಿಸಿದೆ. ನಾನು ಹೆಚ್ಚು ಸಾಧಿಸಿದ್ದೇನೆ, ಆದರೂ ನನಗೆ ಈ ಕೆಲಸದ ಬಗ್ಗೆ ಬೇಸರವಿದೆ ಎಂದು ಬರೆದುಕೊಂಡಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
I work one week a month and no one has noticed, while on a high salary. byu/Agreeable_Bat9722 inconfession
ಈ ಪೋಸ್ಟ್ ವೊಂದು ಎಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು ಈ ಪೋಸ್ಟ್ ಗೆ ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಒಬ್ಬ ಬಳಕೆದಾರರು, ‘ನನಗೆ ಇಂತಹ ಕೆಲಸ ಸಿಕ್ಕಿದರೆ ನನ್ನ ಜೀವನದ ಎಲ್ಲಾ ಕನಸುಗಳನ್ನು ಈಡೇರಿಸಿಕೊಳ್ಳುತ್ತಿದ್ದೆ’ ಎಂದಿದ್ದಾರೆ. ಇನ್ನೊಬ್ಬರು, ‘ನಾನು ಕೂಡ ತಿಂಗಳಿಗೆ 85 ಸಾವಿರ ಗಳಿಸುತ್ತೇವೆ. ನನಗೆ ವಾರಕ್ಕೆ 32 ರಿಂದ 36 ಗಂಟೆಗಳು ಇದ್ದರೂ ಕೂಡ ವಾರಕ್ಕೆ ಸರಿಯಾಗಿ 4-8 ಗಂಟೆಗಳ ಕಾಲ ಕೆಲಸವಷ್ಟೇ ಮಾಡುತ್ತೇನೆ, ಈ ಬಗ್ಗೆ ನನಗೂ ಕೂಡ ಬೇಸರವಿದೆ’ ಎಂದಿದ್ದಾರೆ. ಮತ್ತೊಬ್ಬರು, ‘ನನಗೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಕೆಲಸವೇ ಸಿಗುತ್ತಿಲ್ಲ’ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ