AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lucky Zodiac Signs: ಈ ನಾಲ್ಕು ರಾಶಿಯವರಿಗೆ ಚಿನ್ನ ಧರಿಸುವುದು ಅತ್ಯಂತ ಶುಭ

ಜ್ಯೋತಿಷ್ಯದ ಪ್ರಕಾರ, ಚಿನ್ನವು ಗುರು ಗ್ರಹಕ್ಕೆ ಸಂಬಂಧಿಸಿದೆ. ಮೇಷ, ಸಿಂಹ, ಧನು ಮತ್ತು ಮೀನ ರಾಶಿಯವರಿಗೆ ಚಿನ್ನ ಧರಿಸುವುದು ಅತ್ಯಂತ ಶುಭ. ಇದು ಆತ್ಮವಿಶ್ವಾಸ, ಆರ್ಥಿಕ ಪ್ರಗತಿ, ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಪ್ರತಿಯೊಂದು ರಾಶಿಗೆ ಚಿನ್ನದ ಪ್ರಭಾವ ವಿಭಿನ್ನವಾಗಿರುತ್ತದೆ. ಈ ಲೇಖನದಲ್ಲಿ ಈ ನಾಲ್ಕು ರಾಶಿಗಳ ಚಿನ್ನ ಧರಿಸುವುದರಿಂದಾಗುವ ಲಾಭಗಳ ಬಗ್ಗೆ ತಿಳಿದುಕೊಳ್ಳಿ.

Lucky Zodiac Signs: ಈ ನಾಲ್ಕು ರಾಶಿಯವರಿಗೆ ಚಿನ್ನ ಧರಿಸುವುದು ಅತ್ಯಂತ ಶುಭ
Lucky Zodiac Signs (2)
ಅಕ್ಷತಾ ವರ್ಕಾಡಿ
|

Updated on: May 06, 2025 | 5:21 PM

Share

ಜ್ಯೋತಿಷ್ಯದ ಪ್ರಕಾರ, ಚಿನ್ನವು ಗುರು ಗ್ರಹಕ್ಕೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಆದರೆ ಚಿನ್ನ ಧರಿಸುವುದಕ್ಕೆ ಕೆಲವು ನಿಯಮಗಳಿವೆ. ಕೆಲವು ರಾಶಿಗಳಿಗೆ ಚಿನ್ನದ ಉಂಗುರ ಶುಭವಾದರೆ ಇನ್ನೂ ಕೆಲವರಿಗೆ ಅಶುಭವಾಗುವ ಸಾಧ್ಯತೆಯಿದೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿ ಚಿಹ್ನೆಗಳು ಚಿನ್ನವನ್ನು ಧರಿಸಿದರೆ ಅದೃಷ್ಟಶಾಲಿಯಾಗುತ್ತಾರೆ. ಇದು ಆರ್ಥಿಕವಾಗಿ ಉತ್ತಮವಾಗಿರುತ್ತದೆ. ಸಮೃದ್ಧಿ, ಉತ್ತಮ ಫಲಿತಾಂಶಗಳು ಮತ್ತು ಜೀವನದಲ್ಲಿ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ. ಆದ್ದರಿಂದ ಆ ರಾಶಿಗಳು ಯಾವುವು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಮೇಷ ರಾಶಿ:

ಮೇಷ ರಾಶಿಯವರು ಚಿನ್ನದ ಉಂಗುರ ಧರಿಸುವುದು ತುಂಬಾ ಶುಭ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಇದರಿಂದ ಅವರ ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೊತೆಗೆ ಆರ್ಥಿಕ ಬೆಳವಣಿಗೆಗೂ ಸಹಾಯಕ ಎಂದು ನಂಬಲಾಗಿದೆ.

ಸಿಂಹ ರಾಶಿ:

ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಚಿನ್ನದ ಉಂಗುರ ಬಲ ನೀಡುತ್ತದೆ. ಇದು ಅವರ ವ್ಯಕ್ತಿತ್ವವನ್ನು ಸುಧಾರಿಸುತ್ತದೆ. ಕೆಲಸದಲ್ಲಿ ನಿಮಗೆ ಗೌರವ ಸಿಗುತ್ತದೆ. ಇದರಿಂದ ಸಿಂಹ ರಾಶಿಯವರು ತೆಗೆದುಕೊಳ್ಳುವ ನಿರ್ಧಾರಗಳು ದಿಟ್ಟವಾಗಿರುತ್ತವೆ. ಭವಿಷ್ಯದಲ್ಲಿ ಒಳ್ಳೆಯ ದಾರಿಗಳು ತೆರೆದುಕೊಳ್ಳಬಹುದು.

ಇದನ್ನೂ ಓದಿ: ಎಷ್ಟೇ ದುಡಿದರೂ ಹಣ ಕೈಯಲ್ಲಿ ಉಳಿಯುತ್ತಿಲ್ಲವೇ, ಹಾಗಿದ್ರೆ ನಿಮ್ಮ ಪರ್ಸ್‌ನಲ್ಲಿ ಈ ವಸ್ತು ಇಡಿ

ಧನು ರಾಶಿ:

ಧನು ರಾಶಿಯವರು ಚಿನ್ನ ಧರಿಸುವುದು ಅದೃಷ್ಟ. ಇದರಿಂದ ನೀವು ಶಿಕ್ಷಣದಲ್ಲಿ ಯಶಸ್ಸನ್ನು ಸಾಧಿಸುವಿರಿ. ಕೆಲಸದಲ್ಲಿ ಮುಂದೆ ಸಾಗುವಿರಿ. ನಿಮಗೆ ಹೆಚ್ಚಿನ ಪ್ರೋತ್ಸಾಹ ಸಿಗುವ ಸಾಧ್ಯತೆಯಿದೆ ಎಂದು ನಂಬಲಾಗಿದೆ.

ಮೀನ ರಾಶಿ:

ಮೀನ ರಾಶಿಯವರು ಚಿನ್ನ ಧರಿಸಿದಾಗ ಮಾನಸಿಕವಾಗಿ ಹೆಚ್ಚು ಬಲಶಾಲಿಯಾಗುತ್ತಾರೆ. ಅವರ ಜೀವನದಲ್ಲಿ ಶಾಂತಿ ಬರುತ್ತದೆ. ಪ್ರೇಮ ಸಂಬಂಧಗಳು ಬಲಗೊಳ್ಳುತ್ತವೆ. ಆತ್ಮ ವಿಶ್ವಾಸ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ