AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?

ನಟ ಗುರು ನಂದನ್ ವಿಲ್ಲಾ ತೋಟಕ್ಕೆ ನುಗ್ಗಿದ ಆನೆ; ಮುಂದೇನಾಯ್ತು?

ರಾಜೇಶ್ ದುಗ್ಗುಮನೆ
|

Updated on: Mar 14, 2026 | 11:51 AM

Share

‘ಫಸ್ಟ್ ರ್ಯಾಂಕ್ ರಾಜು’ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದ ಗುರು ನಂದನ್ ಅವರ ವಿಲ್ಲಾ ತೋಟಕ್ಕೆ ಆನೆ ನುಗ್ಗಿದೆ. ಈ ವೇಳೆ ಸ್ವಿಮ್ಮಿಂಗ್ ಪೂಲ್ ಅಲ್ಲಿ ಇದ್ದ ನೀರನ್ನು ಆನೆ ಕುಡಿದಿದೆ. ಈ ವಿಷಯದ ಬಗ್ಗೆ ಅವರು ಬೇಸರ ಹೊರಹಾಕಿದ್ದಾರೆ. ಈ ಸಂದರ್ಭದ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಆ ವಿಡಿಯೋನ ನೀವೇ ನೋಡಿ.

‘ಫಸ್ಟ್ ರ‍್ಯಾಂಕ್ ರಾಜು’ ಸಿನಿಮಾ ಮೂಲಕ ಗಮನ ಸೆಳೆದ ನಟ ಗುರುನಂದನ್ ಅವರು ಈಗ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಗೋಣಿಬೀಡು ಕಸ್ಕೆಬೈಲ್ ಗ್ರಾಮದಲ್ಲಿ ಅವರ ಒಡೆತನದ ವಿಲ್ಲಾ ತೋಟಕ್ಕೆ ಆನೆ ನುಗ್ಗಿದೆ. ಇಡೀ ಗ್ರಾಮಕ್ಕೆ ಪ್ರತಿ ಬೇಸಿಗೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂದಿರುವ ಅವರು, ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿಲ್ಲ ಎಂದು ನಟ ಗುರುನಂದನ್ ಬೇಸರ ಹೊರಹಾಕಿದ್ದಾರೆ. ‘40-50 ಆನೆಗಳು ಬರುತ್ತವೆ. ನಾಡಿಗೆ ಬಂದು ಅವು ಹಾಳು ಮಾಡುತ್ತಿವೆ. ಶಾಸಕರು, ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕು’ ಎಂದು ಅವರು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us