AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೂರ್ಣ ಪ್ರಮಾಣದಲ್ಲಿ ‘ಧುರಂಧರ್ 2’ ಟಿಕೆಟ್ ಬುಕಿಂಗ್ ವಿಳಂಬ: ಹಲವು ಕಾರಣ

ಮಾರ್ಚ್ 19ರಂದು ‘ಧುರಂಧರ್ 2’ ಬಿಡುಗಡೆ ಆಗಲಿದೆ. ಮಾರ್ಚ್ 18ರ ಸಂಜೆ ಪೇಯ್ಡ್ ಪ್ರೀಮಿಯರ್ ನಡೆಯಲಿದೆ. ಮಾ.19ರ ಟಿಕೆಟ್ ಬುಕಿಂಗ್ ಆರಂಭ ಆಗುವುದು ಬಾಕಿ ಇದೆ. ಈ ವಿಳಂಬಕ್ಕೆ ಕೆಲವು ಕಾರಣಗಳಿವೆ ಎನ್ನಲಾಗಿದೆ. ಕೇವಲ ಪೇಯ್ಡ್ ಪ್ರೀವ್ಯೂ ಶೋಗಳಿಗೆ ಮಾತ್ರ ಬುಕಿಂಗ್ ಆರಂಭ ಆಗಿರುವುದರಿಂದ ಟಿಕೆಟ್ ಬೆಲೆ ಗಗನಕ್ಕೆ ಏರಿದೆ.

ಪೂರ್ಣ ಪ್ರಮಾಣದಲ್ಲಿ ‘ಧುರಂಧರ್ 2’ ಟಿಕೆಟ್ ಬುಕಿಂಗ್ ವಿಳಂಬ: ಹಲವು ಕಾರಣ
Ranveer Singh
ಮದನ್​ ಕುಮಾರ್​
|

Updated on: Mar 13, 2026 | 9:03 PM

Share

ಭಾರತೀಯ ಚಿತ್ರರಂಗದ ಈ ವರ್ಷದ ಬಹುನಿರೀಕ್ಷಿತ ಸಿನಿಮಾ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಬಿಡುಗಡೆಗೆ ಕೆಲವೇ ದಿನ ಬಾಕಿ ಇದೆ. ಆದಿತ್ಯ ಧಾರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ಈ ಸಿನಿಮಾದ ಟ್ರೇಲರ್ ಈಗಾಗಲೇ ಧೂಳೆಬ್ಬಿಸಿದೆ. ಸದ್ಯಕ್ಕೆ ಪೇಯ್ಡ್ ಪ್ರೀಮಿಯರ್ ಶೋ ಬುಕಿಂಗ್ ಮಾತ್ರ ಶುರುವಾಗಿದೆ. ಅದಕ್ಕೆ ಅತ್ಯುತ್ತಮ ರೆಸ್ಪಾನ್ಸ್ ಬಂದಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ‘ಧುರಂಧರ್ 2’ (Dhurandhar 2) ಸಿನಿಮಾದ ಟಿಕೆಟ್ ಬುಕಿಂಗ್ ಆರಂಭಿಸಲು ವಿಳಂಬ ಆಗಿದೆ. ಅದಕ್ಕೆ ಒಂದಷ್ಟು ಕಾರಣಗಳಿವೆ.

ಮಾರ್ಚ್ 18ರಂದು ಸಂಜೆ 5 ಗಂಟೆಯಿಂದ ಚಿತ್ರದ ಪೇಯ್ಡ್ ಪ್ರಿವ್ಯೂಗಳು ಆರಂಭವಾಗಲಿವೆ. ಈ ಪ್ರದರ್ಶನಗಳ ಟಿಕೆಟ್ ದರ ಗಗನಕ್ಕೇರಿದ್ದರೂ ಕೂಡ ದೆಹಲಿ, ಮುಂಬೈ ಬೆಂಗಳೂರು ಮುಂತಾದ ನಗರಗಳಲ್ಲಿ ಟಿಕೆಟ್‌ಗಳು ಬಿಸಿ ಬಿಸಿ ಕಜ್ಜಾಯದಂತೆ ಮಾರಾಟವಾಗುತ್ತಿವೆ. ಆದರೆ, ವಾರಾಂತ್ಯದ ಸಾಮಾನ್ಯ ಪ್ರದರ್ಶನಗಳ ಬುಕಿಂಗ್ ಇನ್ನೂ ಓಪನ್ ಆಗಿಲ್ಲ.

ಸಿನಿಮಾ ನಿರ್ಮಾಣ ಸಂಸ್ಥೆ ‘ಜಿಯೋ ಸ್ಟುಡಿಯೋಸ್’ ಚಿತ್ರಮಂದಿರಗಳ ಮಾಲೀಕರಿಂದ ಒಂದು ಕಠಿಣ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಮೊದಲ 4 ವಾರಗಳ ಕಾಲ ಕೇವಲ ‘ಧುರಂಧರ್ 2’ ಚಿತ್ರವನ್ನೇ ಪ್ರದರ್ಶಿಸಬೇಕು ಮತ್ತು ಬೇರೆ ಯಾವುದೇ ಸಿನಿಮಾಗೆ ಶೋಗಳನ್ನು ಹಂಚಬಾರದು ಎಂಬುದು ಇವರ ಶರತ್ತು. ಆದರೆ, ಈ ಚಿತ್ರ ಬಿಡುಗಡೆಯಾದ 4ನೇ ವಾರದಲ್ಲಿ ಅಕ್ಷಯ್ ಕುಮಾರ್ ಅವರ ‘ಭೂತ್ ಬಂಗ್ಲ’ ಸಿನಿಮಾ ತೆರೆಗೆ ಬರಲಿದೆ. ಹೀಗಾಗಿ, ಚಿತ್ರಮಂದಿರಗಳ ಮಾಲೀಕರು ಅಕ್ಷಯ್ ಚಿತ್ರಕ್ಕೆ ಶೋ ನೀಡಲು ಬಯಸುತ್ತಿದ್ದು, ಈ ಕುರಿತು ತಿಕ್ಕಾಟ ನಡೆಯುತ್ತಿದೆ.

ವಿತರಕರ ಜೊತೆ ಲಾಭದ ಹಂಚಿಕೆಯಲ್ಲಿ ಮಾತುಕಥೆ ಅಂತಿಮವಾಗಿಲ್ಲ. ‘ಧುರಂಧರ್’ ಮೊದಲ ಭಾಗವು ನಿಧಾನವಾಗಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಆಗ ವಿತರಕರಿಗೆ ಸರಿಯಾದ ಲಾಭದ ಪಾಲು ಸಿಕ್ಕಿರಲಿಲ್ಲ ಎನ್ನಲಾಗಿದೆ. ಆದ್ದರಿಂದ, ಈ ಬಾರಿ ವಿತರಕರು ಹೆಚ್ಚಿನ ಶೇಕಡವಾರು ಲಾಭದ ಪಾಲನ್ನು ಕೇಳುತ್ತಿದ್ದಾರೆ. ಈ ಮಾತುಕತೆಗಳು ಇತ್ಯರ್ಥವಾಗದ ಕಾರಣ ಪೂರ್ಣ ಪ್ರಮಾಣದ ಬುಕಿಂಗ್ ವಿಳಂಬ ಆಗಿದೆ.

ಇದನ್ನೂ ಓದಿ: ಅಡ್ವಾನ್ಸ್ ಬುಕಿಂಗ್​​ನಿಂದ 60 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಧುರಂಧರ್ 2’; ಹೊಸ ದಾಖಲೆ

ಪೂರ್ಣ ಪ್ರಮಾಣದಲ್ಲಿ ಬುಕಿಂಗ್ ಆರಂಭವಾಗದ ಕಾರಣ, ಪ್ರೇಕ್ಷಕರು ಅನಿವಾರ್ಯವಾಗಿ ಹೆಚ್ಚಿನ ಹಣ ಕೊಟ್ಟು ಪೇಯ್ಡ್ ಪ್ರಿವ್ಯೂಗಳ ಟಿಕೆಟ್ ಖರೀದಿಸುತ್ತಿದ್ದಾರೆ. ಇದು ಪ್ರಿವ್ಯೂ ಪ್ರದರ್ಶನಗಳಿಗೆ ಲಾಭ ತಂದರೂ, ಸಾಮಾನ್ಯ ಪ್ರೇಕ್ಷಕರಿಗೆ ಹೊರೆಯಾಗುತ್ತಿದೆ. ಒಟ್ಟಿನಲ್ಲಿ ‘ಧುರಂಧರ್ 2’ ಸಿನಿಮಾದಿಂದ ಬಾಕ್ಸ್ ಆಫೀಸ್​​ನಲ್ಲಿ ಹಣದ ಹೊಳೆ ಹರಿಯುವ ಸೂಚನೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಸಲಾಲ್ ಡ್ಯಾಂನ ಗೇಟ್​ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ