AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅವತಾರ್’ಗಿಂತಲೂ ಅದ್ಭುತ ‘ರಾಕಾ’: ಹೈಪ್ ಹೆಚ್ಚಿಸಿದ ನಿರ್ದೇಶಕ

ತಮಿಳು ನಿರ್ದೇಶಕ ಸಿಬಿ ಚಕ್ರವರ್ತಿ ಇತ್ತೀಚೆಗಷ್ಟೆ ‘ರಾಕಾ’ ಸಿನಿಮಾದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ‘ರಾಕಾ’ ಸಿನಿಮಾದ ದೃಶ್ಯವೈಭವ ಜೇಮ್ಸ್ ಕ್ಯಾಮರೂನ್ ಅವರ ‘ಅವತಾರ್’ಗಿಂತಲೂ ಮೇಲ್ಮಟ್ಟದ್ದು ಎಂದು ಅವರು ಹೇಳಿದ್ದಾರೆ. ಸಿಬಿ ಅವರ ಮಾತುಗಳು ‘ರಾಕಾ’ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿವೆ. ಸಿಬಿ ಅವರದ್ದು ಅಭಿಮಾನದ ಮಾತುಗಳಾ? ಅಥವಾ ವಾಸ್ತವವನ್ನೇ ಹೇಳಿದ್ದಾರಾ ಎಂಬ ಅನುಮಾನಗಳು ಸಹ ಮೂಡುತ್ತಿವೆ.

‘ಅವತಾರ್’ಗಿಂತಲೂ ಅದ್ಭುತ ‘ರಾಕಾ’: ಹೈಪ್ ಹೆಚ್ಚಿಸಿದ ನಿರ್ದೇಶಕ
Raakha
ಮಂಜುನಾಥ ಸಿ.
|

Updated on: Sep 19, 2026 | 9:11 PM

Share

ಮುಖ್ಯಾಂಶಗಳು

  • ಅಲ್ಲು ಅರ್ಜುನ್ ನಟನೆಯ ಸಿನಿಮಾ ‘ರಾಕಾ’
  • ‘ರಾಕಾ’ ಸಿನಿಮಾ ಅನ್ನು ‘ಅವತಾರ್’ ಸಿನಿಮಾಕ್ಕೆ ಹೋಲಿಸಿದ್ದಾರೆ.
  • ತಮಿಳಿನ ನಿರ್ದೇಶಕನೊಬ್ಬ ಈ ಹೋಲಿಕೆ ಮಾಡಿದ್ದಾರೆ.

‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಬ್ಲಾಕ್ ಬಸ್ಟರ್ ಕೊಟ್ಟ ಅಲ್ಲು ಅರ್ಜುನ್, ಆ ನಂತರ ಅವರ ಮುಂದೆ ಹಲವು ದೊಡ್ಡ ನಿರ್ದೇಶಕರುಗಳು ಆಫರ್ ಇದ್ದರೂ ಸಹ ತಮಿಳಿನ ಅಟ್ಲಿ ಅವರೊಟ್ಟಿಗೆ ಕೈ ಜೋಡಿಸಿದರು. ಅದೂ ಸಹ ಸಾಧಾರಣ ಕತಾಹಂದರ ಅಲ್ಲದೆ, ಸೂಪರ್ ಹೀರೋ ಮಾದರಿಯ ಕತೆಯುಳ್ಳ ‘ರಾಕಾ’ ಸಿನಿಮಾಕ್ಕೆ ಅಲ್ಲು ಅರ್ಜುನ್ ಓಕೆ ಎಂದರು. ಈ ಬಗ್ಗೆ ಆರಂಭದಲ್ಲಿ ಖುದ್ದು ಅಲ್ಲು ಅರ್ಜುನ್ ಅಭಿಮಾನಿಗಳೇ ಅಸಮಾಧಾನ ಹೊರಹಾಕಿದ್ದರು. ಆದರೆ ಇದೀಗ ನಿರ್ದೇಶಕರೊಬ್ಬರು ‘ರಾಕಾ’ ಸಿನಿಮಾವನ್ನು ಹೊಗಳಿ ಅಟ್ಟಕ್ಕೇರಿಸಿದ್ದು, ಇದು ಅಲ್ಲು ಅರ್ಜುನ್ ಅಭಿಮಾನಿಗಳು ಮಾತ್ರವಲ್ಲದೆ ಸಿನಿಮಾ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

ತಮಿಳು ನಿರ್ದೇಶಕ ಸಿಬಿ ಚಕ್ರವರ್ತಿ ಇತ್ತೀಚೆಗಷ್ಟೆ ‘ರಾಕಾ’ ಸಿನಿಮಾದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ‘ರಾಕಾ’ ಸಿನಿಮಾದ ದೃಶ್ಯವೈಭವ ಜೇಮ್ಸ್ ಕ್ಯಾಮರೂನ್ ಅವರ ‘ಅವತಾರ್’ಗಿಂತಲೂ ಮೇಲ್ಮಟ್ಟದ್ದು ಎಂದು ಅವರು ಹೇಳಿದ್ದಾರೆ. ಸಿಬಿ ಅವರ ಮಾತುಗಳು ‘ರಾಕಾ’ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿವೆ. ಸಿಬಿ ಅವರದ್ದು ಅಭಿಮಾನದ ಮಾತುಗಳಾ? ಅಥವಾ ವಾಸ್ತವವನ್ನೇ ಹೇಳಿದ್ದಾರಾ ಎಂಬ ಅನುಮಾನಗಳು ಸಹ ಮೂಡುತ್ತಿವೆ.

ಚೆನ್ನೈನಲ್ಲಿ ನಡೆದ ವಿಜಯ್ ಸೇತುಪತಿ ನಟನೆಯ ‘ಬತ್ತಾ’ ತಮಿಳು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಸಿಬಿ ಮಾತನಾಡಿದರು. ಅಟ್ಲಿ ತಮಗೆ ‘ರಾಕಾ’ದ ಕೆಲವು ದೃಶ್ಯಗಳನ್ನು ತೋರಿಸಿದ್ದರು ಎಂದು ಅವರು ತಿಳಿಸಿದರು. ಆ ದೃಶ್ಯಗಳು ಅಸಾಧಾರಣವಾಗಿದ್ದವು, ‘ಅವತಾರ್’ನಲ್ಲೂ ಇಂತಹ ದೃಶ್ಯಗಳಿವೆ ಎಂದು ನನಗೆ ಅನಿಸುವುದಿಲ್ಲ, ಮೂರು ದಿನಗಳಲ್ಲಿ ಎಲ್ಲರಿಗೂ ತಾನು ಏನು ಹೇಳುತ್ತಿದ್ದೇನೆ ಎಂಬುದು ಅರ್ಥವಾಗುತ್ತದೆ ಎಂದೂ ಸಹ ಅವರು ಹೇಳಿದರು.

ಎಸ್.ಎಸ್. ರಾಜಮೌಳಿ ಭಾರತೀಯ ಸಿನಿಮಾವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿರುವಂತೆ, ಅಟ್ಲೀ ಅವರು ಭಾರತೀಯ ಸಿನಿಮಾವನ್ನು ಜಾಗತಿಕ ಭೂಪಟದಲ್ಲಿ ಪ್ರತಿಷ್ಠಾಪಿಸುತ್ತಾರೆ ಎಂಬ ನಂಬಿಕೆಯನ್ನೂ ಸಿಬಿ ವ್ಯಕ್ತಪಡಿಸಿದರು. ಅದೇ ಕಾರ್ಯಕ್ರಮದಲ್ಲಿ ಅಟ್ಲಿ ಅವರನ್ನು ಕೊಂಡಾಡಿದ ಸಿಬಿ, ‘ರಜನೀಕಾಂತ್ ಅವರ ಸಿನಿಮಾ ಕೈತಪ್ಪಿ ನಾನು ತೀವ್ರ ದುಃಖದಲ್ಲಿದ್ದಾಗ ಅಟ್ಲಿ ಫೋನ್ ಮಾಡಿ ನನಗೆ ಧೈರ್ಯ ತುಂಬಿದರು’ ಎಂದು ಸಹ ಅವರು ಹೇಳಿದರು.

ಇದನ್ನೂ ಓದಿ:ಈ ಪ್ಯಾನ್ ಇಂಡಿಯಾ ಸ್ಟಾರ್ ನಟನಿಗೆ ಶಿವಣ್ಣನ ಆ ಸಿನಿಮಾ ಬಲು ಇಷ್ಟ

ಅಲ್ಲು ಅರ್ಜುನ್ ನಟಿಸುತ್ತಿರುವ ‘ರಾಕಾ’ ಸಿನಿಮಾ ಹಾಲಿವುಡ್​​ನ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ರೀತಿಯ ಕತೆ ಒಳಗೊಂಡಿದೆ. ಸಿನಿಮಾದ ಕತೆ ಯಾವುದೋ ಲೋಕದಲ್ಲಿ ನಡೆಯುತ್ತದೆಯಂತೆ. ಅಲ್ಲಿ ಚಿತ್ರ-ವಿಚಿತ್ರ ಜೀವಿಗಳು ಇರುತ್ತವೆ. ಅತ್ಯಾಧುನಿಕ ಆಯುಧಗಳು, ವಾಹನಗಳು ಇರಲಿವೆ. ಸಿನಿಮಾಕ್ಕಾಗಿ ಅಟ್ಲಿ ಅವರು ಹಾಲಿವುಡ್​​ನ ಕೆಲವು ಅತ್ಯುತ್ತಮ ವಿಎಫ್​​ಎಕ್ಸ್ ಮತ್ತು ಪ್ರಾಸ್ತೆಟಿಕ್ ಕಂಪೆನಿಗಳೊಟ್ಟಿಗೆ ಕೈ ಜೋಡಿಸಿದ್ದಾರೆ. ಈ ಸ್ಪೈ ಆಕ್ಷನ್ ಸಿನಿಮಾವನ್ನು ಕಲಾನಿಧಿ ಮಾರನ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಜಾನ್ಹವಿ ಕಪೂರ್ ಮತ್ತು ಮೃಣಾಲ್ ಠಾಕೂರ್ ಅವರುಗಳು ನಟಿಸುತ್ತಿದ್ದಾರೆ. ಸಿನಿಮಾ 2027ರಲ್ಲಿ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಸಿದ್ದರಾಮಯ್ಯ ಪ್ರತಿಮೆ ತೆರವು ಸಮರ್ಥಿಸಿಕೊಂಡ ಪ್ರಿಯಾಂಕ್ ಖರ್ಗೆ
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಕಲಬುರಗಿ ಯುವತಿಯನ್ನ ಬಾಂಗ್ಲಾದೇಶಕ್ಕೆ ಕರೆದೊಯ್ದು ಟಾರ್ಚರ್
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ
ಗರ್ಭಿಣಿ ಹಸುವನ್ನು ಅರ್ಧ ತಿಂದು ರೈತನನ್ನು ಬೆನ್ನಟ್ಟಿದ ಹುಲಿ
ಸಂಘಟನೆಗೆ ಮತ್ತಷ್ಟು ಬಲ‌ ತುಂಬಲು ಕಾಂಗ್ರೆಸ್ ಪ್ಲ್ಯಾನ್: ಹೊಸ ಸಮಿತಿ
ಸಂಘಟನೆಗೆ ಮತ್ತಷ್ಟು ಬಲ‌ ತುಂಬಲು ಕಾಂಗ್ರೆಸ್ ಪ್ಲ್ಯಾನ್: ಹೊಸ ಸಮಿತಿ
ಬಿಸಿಯೂಟ ಮೆನುಗೆ ಚಿಕನ್ ಬಿರಿಯಾನಿ ಸೇರ್ಪಡೆಗೆ ತಮಿಳುನಾಡು ಸರ್ಕಾರ ಚಿಂತನೆ
ಬಿಸಿಯೂಟ ಮೆನುಗೆ ಚಿಕನ್ ಬಿರಿಯಾನಿ ಸೇರ್ಪಡೆಗೆ ತಮಿಳುನಾಡು ಸರ್ಕಾರ ಚಿಂತನೆ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ
ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಬಿಜೆಪಿ ಶಾಸಕ ಅಸಮಾಧಾನ
ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!
ಬಳ್ಳಾರಿ: 2 ತಿಂಗಳಿನಿಂದ ವೇತನವಿಲ್ಲದೆ ಬಿಸಿಯೂಟ ಕಾರ್ಯಕರ್ತರ ಪರದಾಟ!
ಭಾರತೀಯ ವಾಯುಪಡೆಗೆ ಹೆಚ್ಎಎಲ್ ನಿರ್ಮಿತ ಯುದ್ಧ ವಿಮಾನಗಳ ಹಸ್ತಾಂತರ
ಭಾರತೀಯ ವಾಯುಪಡೆಗೆ ಹೆಚ್ಎಎಲ್ ನಿರ್ಮಿತ ಯುದ್ಧ ವಿಮಾನಗಳ ಹಸ್ತಾಂತರ
ಅವಕಾಶ ಕೊಟ್ಟ ವೇದಿಕೆಗೆ ಅಗೌರವ; ಕಿಚ್ಚನ ಕ್ಲಾಸ್ ಹೇಗಿದೆ ನೋಡಿ
ಅವಕಾಶ ಕೊಟ್ಟ ವೇದಿಕೆಗೆ ಅಗೌರವ; ಕಿಚ್ಚನ ಕ್ಲಾಸ್ ಹೇಗಿದೆ ನೋಡಿ
ಕೆಪಿಎಸ್​ಸಿ ಹಗರಣ: ಜ್ಞಾನೇಂದ್ರ ಕುಮಾರ್, ಕನ್ನಾಳೆ ಬಂಧಿಸಿದ ಇಡಿ
ಕೆಪಿಎಸ್​ಸಿ ಹಗರಣ: ಜ್ಞಾನೇಂದ್ರ ಕುಮಾರ್, ಕನ್ನಾಳೆ ಬಂಧಿಸಿದ ಇಡಿ