AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಟಗಾರರ ಕೈಸೇರದ ಕಿಟ್; ಜಪಾನ್​ಗೆ ತೆರಳದ ಟೀಂ ಇಂಡಿಯಾ

2026ರ ಏಷ್ಯನ್ ಕ್ರೀಡಾಕೂಟಕ್ಕಾಗಿ ಭಾರತ ಕ್ರಿಕೆಟ್ ತಂಡದ ಜಪಾನ್ ಪ್ರಯಾಣ ಜೆರ್ಸಿ ಸಮಸ್ಯೆಗಳಿಂದ ವಿಳಂಬವಾಗಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ತಂಡಕ್ಕೆ ಎರಡು ವಿಭಿನ್ನ ಜೆರ್ಸಿಗಳಿದ್ದು, ಕೆಲವು ಆಟಗಾರರಿಗೆ ಸರಿಯಾದ ಅಳತೆಯ ಜೆರ್ಸಿ ಸಿಕ್ಕಿಲ್ಲ. ಕ್ರೀಡಾ ಗ್ರಾಮದಲ್ಲಿ ವಸತಿ ಕೊರತೆಯಿಂದಾಗಿ ಬಿಸಿಸಿಐ ಆಟಗಾರರಿಗಾಗಿ ಪ್ರತ್ಯೇಕ ಖಾಸಗಿ ಹೋಟೆಲ್ ಅನ್ನು ಬುಕ್ ಮಾಡಿದೆ. ತಂಡವು ಸೆಪ್ಟೆಂಬರ್ 22ರಂದು ಜಪಾನ್ ವಿರುದ್ಧ ಟಿ20 ಪಂದ್ಯ ಆಡಲಿದೆ.

ಆಟಗಾರರ ಕೈಸೇರದ ಕಿಟ್; ಜಪಾನ್​ಗೆ ತೆರಳದ ಟೀಂ ಇಂಡಿಯಾ
ಟೀಂ ಇಂಡಿಯಾ
ಪೃಥ್ವಿಶಂಕರ
|

Updated on: Sep 19, 2026 | 8:24 PM

Share

2026 ರ ಏಷ್ಯನ್ ಕ್ರೀಡಾಕೂಟಕ್ಕಾಗಿ ಭಾರತೀಯ ಕ್ರಿಕೆಟ್ ತಂಡ ಭಾನುವಾರ ಬೆಳಿಗ್ಗೆ ಜಪಾನ್‌ಗೆ ತೆರಳಬೇಕಾಗಿದೆ. ಆದರೆ ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಟೀಂ ಇಂಡಿಯಾ, ಜಪಾನ್​ಗೆ ತೆರಳುವುದು ವಿಳಂಬವಾಗುವ ಸಾಧ್ಯತೆಗಳಿವೆ. ಅಷ್ಟಕ್ಕೂ ಟೀಂ ಇಂಡಿಯಾ ಸರಿಯಾದ ಸಮಯಕ್ಕೆ ಜಪಾನ್​ಗೆ ಪ್ರಯಾಣಿಸದಿರಲು ಕಾರಣ ಜೆರ್ಸಿಗಳಲ್ಲಿನ ಸಮಸ್ಯೆ. ತಂಡದ ಎಲ್ಲಾ ಆಟಗಾರರಿಗೆ ಇದುವರೆಗೆ ಅವರವರ ಅಳತೆಯ ಜೆರ್ಸಿ ಸಿಕ್ಕಿಲ್ಲ. ಇದರಿಂದಾಗಿ ಶ್ರೇಯಸ್ ಅಯ್ಯರ್ ನೇತೃತ್ವದ ತಂಡದ ನಿರ್ಗಮನ ವಿಳಂಬಗೊಳಿಸಬಹುದು ಎಂದು ವರದಿಯಾಗಿದೆ.

ಜೆರ್ಸಿ ಅಳತೆಯಲ್ಲಿ ಸಮಸ್ಯೆ

ಈ ಪ್ರವಾಸದಲ್ಲಿ ಟೀಂ ಇಂಡಿಯಾ ಆಟಗಾರರು ಎರಡು ವಿಭಿನ್ನ ಜೆರ್ಸಿಗಳನ್ನು ಧರಿಸಲಿದ್ದಾರೆ. ಟೀಂ ಇಂಡಿಯಾ ಸೆಪ್ಟೆಂಬರ್ 22 ರಂದು ಜಪಾನ್ ವಿರುದ್ಧ ಟಿ20 ಪಂದ್ಯವನ್ನು ಆಡಲಿದ್ದು, ಇದರಲ್ಲಿ ಆಟಗಾರರು ಬಿಸಿಸಿಐ ಜೆರ್ಸಿಯನ್ನು ಧರಿಸಲಿದ್ದಾರೆ. ಏಷ್ಯನ್ ಗೇಮ್ಸ್ ಕ್ರಿಕೆಟ್ ಪಂದ್ಯಾವಳಿ ಸೆಪ್ಟೆಂಬರ್ 28 ರಂದು ಪ್ರಾರಂಭವಾಗಲಿದ್ದು, ಇದರಲ್ಲಿ ಆಟಗಾರರು ಐಒಎ ಸೂಚಿಸಿದ ಅಧಿಕೃತ ಏಷ್ಯನ್ ಗೇಮ್ಸ್ ಕಿಟ್‌ಗಳನ್ನು ಧರಿಸುತ್ತಾರೆ. ಎರಡು ವಿಭಿನ್ನ ಕಿಟ್‌ಗಳಲ್ಲಿ ಕೆಲವು ಆಟಗಾರರ ಜೆರ್ಸಿ ಅಳತೆ ಸರಿಯಾಗಿಲ್ಲ. ಅದರಲ್ಲೂ ಕೆಲವು ಆಟಗಾರರಿಗೆ ಅವರ ಅಳತೆಯನ್ನು ಜೆರ್ಸಿಯನ್ನು ನೀಡಲಾಗಿದ್ದು, ಉಳಿದಿರುವ ಕೆಲವರಿಗೆ ಆದಷ್ಟು ಬೇಗ ಸರಿಯಾದ ಅಳತೆಯ ಜೆರ್ಸಿ ನೀಡಲಾಗುವುದು ಎಂದು ಪ್ರಾಯೋಜಕರು ತಿಳಿಸಿರುವುದಾಗಿ ವರದಿಯಾಗಿದೆ.

ಆಟಗಾರರಿಗೆ ಖಾಸಗಿ ಹೋಟೆಲ್ ಬುಕ್

ನಗೋಯಾದಲ್ಲಿ ಕ್ರೀಡಾ ಗ್ರಾಮ ಇಲ್ಲದ ಕಾರಣ, ಆಟಗಾರರಿಗೆ ಕ್ರೂಸ್ ಹಡಗುಗಳು, ಹೋಟೆಲ್‌ಗಳು ಮತ್ತು ಕಂಟೇನರ್ ವಸತಿಗಳಲ್ಲಿ ವಸತಿ ಕಲ್ಪಿಸಲಾಗುತ್ತಿದೆ. ಪುರುಷರ ತಂಡಕ್ಕೆ ನೀಡಲಾದ ಕೊಠಡಿಗಳಲ್ಲಿ ಕ್ರಿಕೆಟಿಗರ ಭಾರವಾದ ಕಿಟ್ ಬ್ಯಾಗ್‌ಗಳನ್ನು ಇಡಲು ಕಷ್ಟಸಾಧ್ಯ. ಹೀಗಾಗಿ ಬಿಸಿಸಿಐ, ಇಡೀ ತಂಡ ಜಪಾನ್‌ಗೆ ತೆರಳುವ ಮೊದಲೇ ಆಟಗಾರರ ವಿಶ್ರಾಂತಿ ಮತ್ತು ತರಬೇತಿಯ ಮೇಲೆ ಯಾವುದೇ ಪರಿಣಾಮ ಬೀರದಂತೆ ಖಾಸಗಿ ಹೋಟೆಲ್ ಕೊಠಡಿಗಳನ್ನು ವ್ಯವಸ್ಥೆ ಮಾಡಿದೆ.

ಟೀಂ ಇಂಡಿಯಾದ ವೇಳಾಪಟ್ಟಿ

  • ಸೆಪ್ಟೆಂಬರ್ 22, 2026; ಭಾರತ vs ಜಪಾನ್
  • 28 ಸೆಪ್ಟೆಂಬರ್ 2026; ಏಷ್ಯನ್ ಗೇಮ್ಸ್ ಕ್ವಾರ್ಟರ್-ಫೈನಲ್: ಭಾರತ vs ಗ್ರೂಪ್ ಎ ನ ರನ್ನರ್-ಅಪ್
  • 1 ಅಕ್ಟೋಬರ್ 2026; ಏಷ್ಯನ್ ಗೇಮ್ಸ್ ಸೆಮಿಫೈನಲ್: (ಭಾರತ ಅರ್ಹತೆ ಪಡೆದರೆ)
  • 3 ಅಕ್ಟೋಬರ್ 2026: ಕಂಚಿನ ಪದಕ / ಚಿನ್ನದ ಪದಕ ಪಂದ್ಯ: (ಭಾರತ ಅರ್ಹತೆ ಪಡೆದರೆ)

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ