
Allu Arjun
ನಿರ್ಮಾಪಕ ಅಲ್ಲು ಅರವಿಂದ್ ಪುತ್ರ, ತೆಲುಗು ಚಿತ್ರರಂಗದ ಹಿರಿಯ ನಟ ಅಲ್ಲು ರಾಮಲಿಂಗಯ್ಯ ಅವರ ಮೊಮ್ಮಗ ಅಲ್ಲು ಅರ್ಜುನ್ ಜನಿಸಿದ್ದು ಏಪ್ರಿಲ್ 8, 1982. ಕೇವಲ ಮೂರು ವರ್ಷದ ಮಗುವಿದ್ದಾಗಲೇ ಸಿನಿಮಾಗಳಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್, ಕಮಲ್ ಹಾಸನ್ರ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ ‘ಸ್ವಾತಿ ಮುತ್ಯಂ’ನಲ್ಲಿಯೂ ಬಾಲನಟನಾಗಿ ನಟಿಸಿದ್ದರು. ಚಿರಂಜೀವಿಯ ‘ಡ್ಯಾಡಿ’ ಸಿನಿಮಾದಲ್ಲಿನ ಸಣ್ಣ ಪಾತ್ರ ಅಲ್ಲು ಅರ್ಜುನ್ಗೆ ಗುರುತು ತಂದುಕೊಟ್ಟಿತು. ಬಳಿಕ ‘ಗಂಗೋತ್ರಿ’ ಸಿನಿಮಾ ಮೂಲಕ ನಾಯಕ ನಟನಾದರು. ಆದರೆ ಅವರಿಗೆ ಭಾರಿ ದೊಡ್ಡ ಹಿಟ್ ನೀಡಿ, ನಾಯಕನಾಗಿ ನೆಲೆ ನಿಲ್ಲುವಂತೆ ಮಾಡಿದ್ದು ‘ಆರ್ಯ’ ಸಿನಿಮಾ. ಈವರೆಗೆ 20 ಸಿನಿಮಾಗಳಲ್ಲಿ ನಾಯಕನಾಗಿ ಅಲ್ಲು ಅರ್ಜುನ್ ನಟಿಸಿದ್ದಾರೆ.
ಅಲ್ಲು ಅರ್ಜುನ್ ಚಿತ್ರಕ್ಕೆ ಬಾಲಿವುಡ್ನಿಂದ ಬರ್ತಿದ್ದಾರೆ ಮೂವರು ಬೆಡಗಿಯರು
ಅಲ್ಲು ಅರ್ಜುನ್ ಅವರ ಮುಂದಿನ ಚಿತ್ರಕ್ಕೆ ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನ ಮಾಡುತ್ತಿದ್ದು, ಪ್ರಿಯಾಂಕಾ ಚೋಪ್ರಾ, ಜಾನ್ವಿ ಕಪೂರ್, ಮತ್ತು ದಿಶಾ ಪಟಾಣಿ ಅವರು ನಾಯಕಿಯರಾಗಿ ಅಭಿನಯಿಸುವ ಸಾಧ್ಯತೆ ಇದೆ. ಅಲ್ಲು ಅರ್ಜುನ್ ತ್ರಿವಳಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 2026ರಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.
- Shreelaxmi H
- Updated on: Apr 16, 2025
- 10:58 am
ಅಲ್ಲು ಅರ್ಜುನ್ ಮನೆ ಎದುರು ಅಭಿಮಾನಿಗಳ ದಂಡು; ಎಚ್ಚರಿಕೆಯಿಂದ ನಡೆದುಕೊಂಡ ನಟ
ಅಲ್ಲು ಅರ್ಜುನ್ ಅವರಿಗೆ ಇರುವ ಅಭಿಮಾನಿ ಬಳಗ ದೊಡ್ಡದು. ಹುಟ್ಟುಹಬ್ಬದ ದಿನ ಅವರಿಗೆ ವಿಶ್ ಮಾಡಲು ಫ್ಯಾನ್ಸ್ ಆಗಮಿಸಿದ್ದಾರೆ. ಮನೆ ಎದುರು ಬಂದ ಅಭಿಮಾನಿಗಳನ್ನು ಅಲ್ಲು ಅರ್ಜುನ್ ಅವರು ಭೇಟಿ ಮಾಡಿದ್ದಾರೆ. ಆದರೆ ಯಾವುದೇ ನೂಕುನೂಗ್ಗಲು ಉಂಟಾಗದ ರೀತಿಯಲ್ಲಿ ಅವರು ಎಚ್ಚರಿಕೆ ವಹಿಸಿದ್ದಾರೆ.
- Madan Kumar
- Updated on: Apr 8, 2025
- 7:11 pm
ಅಲ್ಲು ಅರ್ಜುನ್ಗೆ ಪ್ರಿಯಾಂಕಾ ಚೋಪ್ರಾ ನಾಯಕಿ? ನಿರ್ದೇಶಕ ಅಟ್ಲಿ ಮಾಸ್ಟರ್ ಪ್ಲ್ಯಾನ್
ಖ್ಯಾತ ನಿರ್ದೇಶಕ ಅಟ್ಲಿ ಅವರು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡಲಿದ್ದಾರೆ. ಆ ಪ್ರಾಜೆಕ್ಟ್ಗೆ ಈಗಾಗಲೇ ತಯಾರಿ ನಡೆಯುತ್ತಿದೆ. ನಾಯಕಿಯಾಗಿ ಪ್ರಿಯಾಂಕಾ ಚೋಪ್ರಾ ಅವರನ್ನು ಆಯ್ಕೆ ಮಾಡಿಕೊಳ್ಳಲು ಅಟ್ಲಿ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರು ಒಂದು ಸುತ್ತಿನ ಮಾತುಕಥೆ ನಡೆಸಿದ್ದಾರೆ ಎಂದು ವರದಿ ಆಗಿದೆ.
- Madan Kumar
- Updated on: Apr 4, 2025
- 6:24 pm
ಪುಷ್ಪ ರಾಜ್ ಪಾತ್ರಕ್ಕೆ ನಿಜವಾದ ಸ್ಮಗ್ಲರ್ ಸ್ಫೂರ್ತಿ; ಇಂಟರೆಸ್ಟಿಂಗ್ ವಿಷಯ ಹೇಳಿದ ಸುಕುಮಾರ್
ನಟ ಅಲ್ಲು ಅರ್ಜುನ್ ಅವರು ಪುಷ್ಪ ರಾಜ್ ಪಾತ್ರಕ್ಕೆ ಜೀವ ತುಂಬಿದರು. ಅದು ಒಬ್ಬ ನಿಜವಾದ ಸ್ಮಗ್ಲರ್ನ ಹೆಸರು ಎಂದು ಸುಕುಮಾರ್ ಹೇಳಿದ್ದಾರೆ. ಆ ಸ್ಮಗರ್ನನ್ನು ಸುಕುಮಾರ್ ಅವರು ಭೇಟಿ ಆಗಿದ್ದರು. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಸುಕುಮಾರ್ ಅವರು ಈ ವಿಷಯ ತಿಳಿಸಿದ್ದಾರೆ.
- Madan Kumar
- Updated on: Apr 3, 2025
- 6:47 pm
ಹೆಸರು ಬದಲಾವಣೆ ಮಾಡಿಕೊಳ್ಳಲಿರುವ ಅಲ್ಲು ಅರ್ಜುನ್, ಕಾರಣವೇನು?
Allu Arjun: ನಟ ಅಲ್ಲು ಅರ್ಜುನ್, ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಅದೃಷ್ಟ ಅವರ ಜೊತೆಗೇ ಇದೆ. ಹೀಗಿದ್ದರೂ ಸಹ ಅಲ್ಲು ಅರ್ಜುನ್ ತಮ್ಮ ಹೆಸರು ಬದಲಾವಣೆಗೆ ಮುಂದಾಗಿದ್ದಾರೆ. ಸಂಖ್ಯಾಶಾಸ್ತ್ರಜ್ಞರು ಮತ್ತು ಜ್ಯೋತಿಷಿಗಳನ್ನು ಭೇ ಟಿ ಮಾಡುತ್ತಿದ್ದಾರೆ. ಅಷ್ಟಕ್ಕೂ ಈಗ ಅಲ್ಲು ಅರ್ಜುನ್ ಹೆಸರು ಬದಲಾವಣೆ ಮಾಡಿಕೊಳ್ಳುತ್ತಿರುವುದು ಏಕೆ?
- Manjunatha C
- Updated on: Apr 3, 2025
- 11:19 am
ಚಿತ್ರರಂಗದಲ್ಲಿ 22 ವರ್ಷ ಪೂರೈಸಿದ ಅಲ್ಲು ಅರ್ಜುನ್; ಮುಂದಿದೆ ದೊಡ್ಡ ಸವಾಲು
2003ರಲ್ಲಿ ಹೀರೋ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಅಲ್ಲು ಅರ್ಜುನ್ ಅವರು ಈಗ ಸೂಪರ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಚಿತ್ರರಂಗದಲ್ಲಿ 22 ವರ್ಷಗಳನ್ನು ಪೂರೈಸಿದ ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ‘ಪುಷ್ಪ 2’ ಸಿನಿಮಾದಿಂದ ಹಲವು ಹೊಸ ದಾಖಲೆ ಮಾಡಿರುವ ಅಲ್ಲು ಅರ್ಜುನ್ ಅವರು ಮುಂದಿನ ಸಿನಿಮಾಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
- Madan Kumar
- Updated on: Mar 28, 2025
- 7:49 pm
ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣಲಿದೆ ಸೂಪರ್ ಹಿಟ್ ಸಿನಿಮಾ ‘ಪುಷ್ಪ 2’
ಕಲರ್ಸ್ ಕನ್ನಡ ವಾಹಿನಿಯು ಅಲ್ಲು ಅರ್ಜುನ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಪುಷ್ಪ 2’ ಅನ್ನು ಶೀಘ್ರದಲ್ಲೇ ಪ್ರಸಾರ ಮಾಡಲಿದೆ ಎಂದು ಘೋಷಿಸಿದೆ. ಥಿಯೇಟರ್ ಮತ್ತು ಒಟಿಟಿಯಲ್ಲಿ ಭರ್ಜರಿ ಯಶಸ್ಸು ಕಂಡ ಈ ಸಿನಿಮಾ ಈಗ ಕನ್ನಡ ದೂರದರ್ಶನದಲ್ಲಿ ವೀಕ್ಷಕರನ್ನು ರಂಜಿಸಲಿದೆ. ಪ್ರಸಾರ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ವಾಹಿನಿ ತಿಳಿಸಿದೆ.
- Shreelaxmi H
- Updated on: Mar 28, 2025
- 8:32 am
‘ಧಮ್ ಇದ್ರೆ ಹಿಡ್ಕೊಳ್ಳೋ ಇನ್ವಿಜಿಲೇಟರು..’; ‘ಎಕ್ಸಾಮ್ ಗೋಡೆ ಮೇಲೆ ‘ಪುಷ್ಪ’ ಡೈಲಾಗ್ ಬರೆದ ವಿದ್ಯಾರ್ಥಿ
‘ಪುಷ್ಪ’ ಮತ್ತು ‘ಪುಷ್ಪ 2’ ಚಿತ್ರಗಳು ಯುವ ಪೀಳಿಗೆ ಮತ್ತು ವಿದ್ಯಾರ್ಥಿಗಳ ಮೇಲೆ ಬೀರುತ್ತಿರುವ ಪ್ರಭಾವದ ಬಗ್ಗೆ ಚರ್ಚೆಗಳು ಜೋರಾಗಿದೆ. ರಕ್ತಚಂದನ ಕಳ್ಳಸಾಗಣೆಯನ್ನು ಹೀರೋಯಿಸಂ ಆಗಿ ತೋರಿಸುವುದರಿಂದ ಉಂಟಾಗುವ ನಕಾರಾತ್ಮಕ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತವಾಗಿದೆ. ಆಂಧ್ರಪ್ರದೇಶದ ಪರೀಕ್ಷಾ ಕೇಂದ್ರದ ಗೋಡೆಯ ಮೇಲೆ 'ಪುಷ್ಪ 2' ಚಿತ್ರದ ಡೈಲಾಗ್ ಅನ್ನು ಬರೆದಿರುವುದು ಇದಕ್ಕೆ ಉದಾಹರಣೆಯಾಗಿದೆ.
- Rajesh Duggumane
- Updated on: Mar 19, 2025
- 11:51 am
‘ಪುಷ್ಪ 3’ ಚಿತ್ರಕ್ಕಾಗಿ ಎಷ್ಟು ವರ್ಷ ಕಾಯಬೇಕು? ಸಂಪೂರ್ಣ ಮಾಹಿತಿ ಕೊಟ್ಟ ನಿರ್ಮಾಪಕ
‘ಪುಷ್ಪ 2’ ಚಿತ್ರದ ಬೃಹತ್ ಯಶಸ್ಸಿನ ನಂತರ, ‘ಪುಷ್ಪ 3’ ಚಿತ್ರದ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ನಿರ್ಮಾಪಕ ರವಿ ಶಂಕರ್ ಅವರು 2028 ರ ವೇಳೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮುಖ್ಯ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ.
- Rajesh Duggumane
- Updated on: Mar 17, 2025
- 3:59 pm
ನಿರ್ದೇಶಕ ಅಟ್ಲಿಗೆ ಪದೇಪದೇ ವಿಘ್ನ; ಅಲ್ಲು ಅರ್ಜುನ್ ಜತೆಗಿನ ಸಿನಿಮಾಗೂ ತೊಂದರೆ
ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಮಾಡಲು ಸ್ಟಾರ್ ಹೀರೋಗಳು ಸಿದ್ಧವಾಗಿದ್ದಾರೆ. ಆದರೆ ಹಲವು ವಿಘ್ನಗಳ ಕಾರಣದಿಂದ ಸಿನಿಮಾಗಳು ಸೆಟ್ಟೇರುವುದು ತಡ ಆಗುತ್ತಿದೆ. ಅಲ್ಲು ಅರ್ಜುನ್, ಸಲ್ಮಾನ್ ಖಾನ್ ಮುಂತಾದ ನಟರಿಂದ ಬುಲಾವ್ ಬಂದಿದ್ದರೂ ಕೂಡ ಅಟ್ಲಿ ಅವರು ಸಿನಿಮಾ ಕೆಲಸ ಆರಂಭಿಸಲು ಕಷ್ಟ ಆಗುತ್ತಿದೆ.
- Madan Kumar
- Updated on: Mar 14, 2025
- 8:06 am