AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಯೂ ಇಲ್ಲ, ಗೊಂಬೆಯನ್ನೇ ಸರ್ವಸ್ವ ಎಂದುಕೊಂಡಿರುವ ಪಂಚ್ ಕೋತಿಯಿಂದ ಗೊಂಬೆಯನ್ನು ದೂರ ಮಾಡ್ತಾರಾ?

ತಾಯಿಯೂ ಇಲ್ಲ, ಗೊಂಬೆಯನ್ನೇ ಸರ್ವಸ್ವ ಎಂದುಕೊಂಡಿರುವ ಪಂಚ್ ಕೋತಿಯಿಂದ ಗೊಂಬೆಯನ್ನು ದೂರ ಮಾಡ್ತಾರಾ?

ನಯನಾ ರಾಜೀವ್
|

Updated on: Mar 04, 2026 | 11:10 AM

Share

ಜಪಾನ್​​ನ ಮೃಗಾಲಯದಲ್ಲಿರುವ ಪಂಚ್ ಕೋತಿಯ ಬಗ್ಗೆ ಈಗ ಇಡೀ ಪ್ರಪಂಚಕ್ಕೆ ಗೊತ್ತಿದೆ. ಹುಟ್ಟಿನಿಂದಲೇ ತಾಯಿ ಪ್ರೀತಿ ಕಳೆದುಕೊಂಡಿದ್ದ ಕೋತಿಗೆ ಅದರ ಬಳಿ ಇರುವ ಕೋತಿಯ ಗೊಂಬೆಯೇ ಆಸರೆ. ನೋವಾದರೂ, ಬೇಸರವೆನಿಸಿದರೂ, ಬೇರೆ ಕೋತಿಗಳು ದಾಳಿ ಮಾಡಿದಾಗಲೂ ಈ ಕೋತಿ ಹೋಗಿ ಅಪ್ಪಿಕೊಂಡಿದ್ದು, ಆ ಗೊಂಬೆಯನ್ನೇ ಹೊರತು ಮತ್ತೊಂದು ಕೋತಿಯನ್ನಲ್ಲ.

ಜಪಾನ್, ಮಾರ್ಚ್​ 04: ಜಪಾನ್​​ನ ಮೃಗಾಲಯದಲ್ಲಿರುವ ಪಂಚ್ ಕೋತಿಯ ಬಗ್ಗೆ ಈಗ ಇಡೀ ಪ್ರಪಂಚಕ್ಕೆ ಗೊತ್ತಿದೆ. ಹುಟ್ಟಿನಿಂದಲೇ ತಾಯಿ ಪ್ರೀತಿ ಕಳೆದುಕೊಂಡಿದ್ದ ಕೋತಿಗೆ ಅದರ ಬಳಿ ಇರುವ ಕೋತಿಯ ಗೊಂಬೆಯೇ ಆಸರೆ. ನೋವಾದರೂ, ಬೇಸರವೆನಿಸಿದರೂ, ಬೇರೆ ಕೋತಿಗಳು ದಾಳಿ ಮಾಡಿದಾಗಲೂ ಈ ಕೋತಿ ಹೋಗಿ ಅಪ್ಪಿಕೊಂಡಿದ್ದು, ಆ ಗೊಂಬೆಯನ್ನೇ ಹೊರತು ಮತ್ತೊಂದು ಕೋತಿಯನ್ನಲ್ಲ.

ಅದರ ಮೇಲೆ ತಲೆಇಟ್ಟು ಮಲಗುವ, ತಿಂಡಿ ಮಾಡುವಾಗಲೂ, ಎಲ್ಲೇ ನಡೆದಾಡುವಾಗಲೂ ಆ ಗೊಂಬೆಯನ್ನೇ ಹೊತ್ತು ತಿರುಗುವ ಕೋತಿಯಿಂದ ಆ ಗೊಂಬೆಯನ್ನು ಕಸಿದುಕೊಳ್ಳಲಾಗುತ್ತಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಆ ಗೊಂಬೆಯನ್ನು ಐಕಿಯಾದಿಂದ ಖರೀದಿಸಲಾಗಿದೆ.

ಒಂದೊಮ್ಮೆ ಆ ಗೊಂಬೆ ಅದರೊಟ್ಟಿಗಿದ್ದರೆ ಈ ಕೋತಿ ಮರಿ ಉಳಿದ ಕೋತಿಗಳ ಜತೆ ಸ್ನೇಹ ಬೆಳೆಸುವುದಿಲ್ಲ, ಕೊನೆಯವರೆಗೂ ಅದು ಒಂಟಿಯಾಗಿರುವ ಪ್ರಸಂಗ ಬಂದರೂ ಬರಬಹುದು ಈ ದೃಷ್ಟಿಯಿಂದ ಆ ಮತಿಯಿಂದ ಗೊಂಬೆಯನ್ನು ಹಿಂಪಡೆಯಲಾಗುತ್ತದೆ ಎನ್ನುವ ಮಾತು ಕೇಳಿಬರುತ್ತಿದೆ.

ಆರು ತಿಂಗಳ ವಯಸ್ಸಿನಲ್ಲಿ ಈ ಕೋತಿಗಳು ಹಾಲು ಕುಡಿಯುವುದು ಬಿಡಬೇಕು ಹಾಗೂ ಸ್ವತಂತ್ರವಾಗಿರಬೇಕು ಇದೇ ನಿಯಮ. ಹಾಗಾಗಿ ಅದರ ಬಳಿ ಇರುವ ಆಟಿಕೆಯನ್ನು ಶೀಘ್ರ ತೆಗೆದುಕೊಂಡು ಹೋಗಲಾಗುವುದು ಎಂದು ಪೋಸ್ಟ್​ನಲ್ಲಿ ತಿಳಿಸಲಾಗಿದೆ.

ಈ ವಿಡಿಯೋಗೆ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿದ್ದು, ಸ್ವಲ್ಪ ದಿನ ಆಟಿಕೆ ಅದರ ಬಳಿಯೇ ಇರಬಹುದಲ್ಲಾ ಎಂದಿದ್ದಾರೆ. ಇನ್ನು ಮನುಷ್ಯನ ಬಗ್ಗೆ ಮಾತನಾಡುವುದಾಗಿ ಮಕ್ಕಳು ಚಿಕ್ಕವರಿದ್ದಾಗಲೇ ಯಾವುದೇ ಒಂದಕ್ಕೆ ಅಡಿಕ್ಟ್​ ಆದರೆ ಅದನ್ನು ಬಿಡಿಸುವುದು ಕಷ್ಟ ಹಾಗೆಯೇ ಕೋತಿಗಳು ಕೂಡ. ಅವರ ಬೆಳವಣಿಗೆಗೆ ಈ ಗೊಂಬೆಗಳು ಅಡ್ಡಿಯಾಗಬಹುದು. ಜಪಾನಿನ ಮಕಾಕ್ ಪ್ರಸ್ತುತ ಇಚಿಕಾವಾ ಸಿಟಿ ಮೃಗಾಲಯದಲ್ಲಿದೆ. ಆದರೆ ಮೃಗಾಲಯದಿಂದ ಇದರ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ಪಂಚ್​​ಗೆ ಈಗ 8 ತಿಂಗಳಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us