‘ಧುರಂಧರ್’ ಚಿತ್ರವನ್ನು ಹಾಡಿ ಹೊಗಳಿದ ಅಲ್ಲು ಅರ್ಜುನ್
ಅಲ್ಲು ಅರ್ಜುನ್ ಅವರು ಇತ್ತೀಚೆಗೆ 'ಧುರಂಧರ್' ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾ ಡಿಸೆಂಬರ್ 5ರಂದು ತೆರೆಕಂಡು ದೇಶಾದ್ಯಂತ 239 ಕೋಟಿ ರೂಪಾಯಿ ಗಳಿಸಿದೆ. ಅಲ್ಲು ಅರ್ಜುನ್, ರಣವೀರ್ ಸಿಂಗ್, ಅಕ್ಷಯ್ ಖನ್ನಾ ಸೇರಿದಂತೆ ಇಡೀ ತಾರಾಗಣ ಹಾಗೂ ನಿರ್ದೇಶಕ ಆದಿತ್ಯ ಧರ್ ಅವರ ಅದ್ಭುತ ಕೆಲಸವನ್ನು ಶ್ಲಾಘಿಸಿದ್ದಾರೆ.

ಅಲ್ಲು ಅರ್ಜುನ್ ಅವರು ಟಾಲಿವುಡ್ನ ಸ್ಟಾರ್ ಹೀರೋ. ಅವರು ತಮ್ಮ ಸಿನಿಮಾಗಳ ಜೊತೆಗೆ ಉತ್ತಮವಾಗಿರುವ ಇತರ ಸಿನಿಮಾಗಳನ್ನು ಹೊಗಳುವ ಕೆಲಸ ಮಾಡುತ್ತಾರೆ. ಈಗ ಅವರು ದೇಶಾದ್ಯಂತ ಜನಪ್ರಿಯತೆ ಪಡೆದ ‘ಧುರಂಧರ್’ ಚಿತ್ರವನ್ನು ವೀಕ್ಷಿಸಿದ್ದಾರೆ ಮತ್ತು ಸಿನಿಮಾ ಹೇಗಿದೆ ಎಂಬುದನ್ನು ಹೇಳಿದ್ದಾರೆ. ಅವರು ಇಡೀ ಸಿನಿಮಾ ಹಾಗೂ ತಂಡವನ್ನು ಹೊಗಳಿದ್ದಾರೆ.
‘ಧರುಂಧರ್’ ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಯಿತು. ಈ ಚಿತ್ರ ಸಾಕಷ್ಟು ಮೆಚ್ಚುಗೆ ಪಡೆದಿದೆ. ಬಾಲಿವುಡ್ ಮಂದಿ ಸಿನಿಮಾನ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅನೇಕ ಹೀರೋಗಳ ಮೆಚ್ಚುಗೆ ಪಡೆಯುತ್ತಿದೆ. ಇದಕ್ಕೆ ಅಲ್ಲು ಅರ್ಜುನ್ ಅವರು ಕೂಡ ಹೊರತಾಗಿಲ್ಲ. ಅವರು ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ 8 ದಿನಕ್ಕೆ 239 ಕೋಟಿ ರೂಪಾಯಿ ಗಳಿಕೆ ಮಾಡಿದೆ.
‘ಧುರಂಧರ್’ ಚಿತ್ರವನ್ನು ನೋಡಿದೆ. ಉತ್ತಮ ಅಭಿನಯ, ಅತ್ಯುತ್ತಮ ತಾಂತ್ರಿಕತೆ. ಅದ್ಭುತ ಮ್ಯೂಸಿಕ್ನಿಂದ ಕೂಡಿದ ಅದ್ಭುತ ಚಿತ್ರ. ನನ್ನ ಸಹೋದರ ರಣವೀರ್ ಸಿಂಗ್ ಅದ್ಭುತವಾಗಿ ನಟಿಸಿದ್ದಾರೆ. ಅವರು ತಮ್ಮ ಪ್ರತಿಭೆಯಿಂದ ಎಲ್ಲರನ್ನೂ ಬೆರಗುಗೊಳಿಸಿದರು. ಅಕ್ಷಯ್ ಖನ್ನಾ ಅವರ ವರ್ಚಸ್ಸು ಅದ್ಭುತವಾಗಿದೆ. ಉಳಿದಂತೆ ಸಂಜಯ್ ದತ್, ಮಾಧವನ್, ಅರ್ಜುನ್ ರಾಮ್ಪಾಲ್ ಉತ್ತಮವಾಗಿ ನಟಿಸಿದ್ದಾರೆ. ಉಳಿದ ಕಲಾವಿದರ ನಟನೆ ಕೂಡ ಉತ್ತಮವಾಗಿದೆ’ ಎಂದಿದ್ದಾರೆ ಅಲ್ಲು ಅರ್ಜುನ್.
‘ಎಲ್ಲಾ ತಂತ್ರಜ್ಞರು, ಪಾತ್ರವರ್ಗ, ಸಿಬ್ಬಂದಿ ಹಾಗೂ ನಿರ್ಮಾಪಕರು ಸೇರಿ ಇಡೀ ತಂಡಕ್ಕೆ ಅಭಿನಂದನೆಗಳು . ಅದ್ಭುತ ನಿರ್ದೇಶಕ ಆದಿತ್ಯ ಧಾರ್ ಅವರು ಶ್ರೇಷ್ಠ ಚಲನಚಿತ್ರ ನಿರ್ದೇಶಕರು. ಅವರು ಸಿನಿಮಾನ ಅದ್ಭುತವಾಗಿ ಮಾಡಿದ್ದಾರೆ.ನನಗೆ ಅದು ತುಂಬಾ ಇಷ್ಟವಾಯಿತು. ಸಿನಿಮಾ ನೋಡಿ ಆನಂದಿಸಿ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಜಾಹೀರಾತು ಚಿತ್ರೀಕರಣಕ್ಕೆ ಬಂದ ಅಲ್ಲು ಅರ್ಜುನ್; ಎಂಟ್ರಿ ಹೇಗಿತ್ತು ನೋಡಿ..
ಅಲ್ಲು ಅರ್ಜುನ್ ಅವರು ಇತ್ತೀಚೆಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಅಟ್ಲಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಪುಷ್ಪ 2’ ಚಿತ್ರದ ಮೂಲಕ ಪ್ರೋಮೋ ಈ ಸಿನಿಮಾ ಸೂಪರ್ ಹಿಟ್ ಆಗುವ ನಿರೀಕ್ಷೆ ಇದೆ. ಈ ಚಿತ್ರ ಸೈಂಟಿಫಿಕ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುವ ನಿರೀಕ್ಷೆ ಇದೆ. ಅವರು ಧುರಂಧರ್ ಚಿತ್ರವನ್ನು ಹೊಗಳಿರುವುದರಿಂದ ರಣವೀರ್ ಅಭಿಮಾನಿಗಳಿಗೆ ಖುಷಿ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



