‘ಕಾಂತಾರ: ಚಾಪ್ಟರ್ 1’ ದಾಖಲೆ ಮುರಿಯಲು ರೆಡಿ ಆದ ‘ಧುರಂಧರ್’; ದೊಡ್ಡ ರೆಕಾರ್ಡ್ ಬ್ರೇಕ್?
'ಧುರಂಧರ್' ಸಿನಿಮಾ 350 ಕೋಟಿಗೂ ಹೆಚ್ಚು ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. 'ಎ' ಪ್ರಮಾಣಪತ್ರದ ನಡುವೆಯೂ ಯಶಸ್ಸು ಗಳಿಸಿರುವ ಈ ಸ್ಪೈ ಥ್ರಿಲ್ಲರ್, 'ಕಾಂತಾರ: ಚಾಪ್ಟರ್ 1' ದಾಖಲೆಯನ್ನು ಮುರಿಯುವತ್ತ ಸಾಗಿದೆ. ಇದು ರಣವೀರ್ ಸಿಂಗ್ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್ ನೀಡಿದ್ದು, ಮುಂದಿನ ದಿನಗಳಲ್ಲಿ ಇದರ ಅಬ್ಬರ ಮತ್ತಷ್ಟು ಹೆಚ್ಚುವ ನಿರೀಕ್ಷೆಯಿದೆ.

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್’ ಸಿನಿಮಾ (Dhurandhar Movie) ಸುನಾಮಿ ಎಬ್ಬಿಸುತ್ತಿದೆ. ಈ ಚಿತ್ರದ ಭಾರತದ ಕಲೆಕ್ಷನ್ 240 ಕೋಟಿ ರೂಪಾಯಿ ಆಗಿದೆ. ಇನ್ನು, ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಚಿತ್ರದ ಕಲೆಕ್ಷನ್ 350 ಕೋಟಿ ರೂಪಾಯಿ ದಾಟಿದೆ. ಈ ಸಿನಿಮಾದ ಒಟ್ಟಾರೆ ಕಲೆಕ್ಷನ್ ಎಷ್ಟಾಗಲಿದೆ ಎಂಬ ಕುತೂಹಲ ಮೂಡಿದೆ. ಈ ಸಿನಿಮಾ ‘ಕಾಂತಾರ: ಚಾಪ್ಟರ್ 1’ ಚಿತ್ರದ ಒಟ್ಟಾರೆ ದಾಖಲೆಯನ್ನು ಮುರಿಯುತ್ತದೆಯೇ ಎನ್ನುವ ಪ್ರಶ್ನೆ ಮೂಡಿದೆ.ಈ ಬಗ್ಗೆ ಚರ್ಚೆ ನಡೆಯುತ್ತಿದೆ.
‘ಧುರಂಧರ್’ ಸಿನಿಮಾಗೆ ಸೆನ್ಸಾರ್ ಮಂಡಳಿ ನೀಡಿರೋದು ‘ಎ’ ಪ್ರಮಾಣಪತ್ರ ನೀಡಲಾಗಿದೆ. ‘ಎ’ ಪ್ರಮಾಣಪತ್ರ ಇದ್ದರೆ ಸಿನಿಮಾದಲ್ಲಿ ವೈಲೆನ್ಸ್ ತುಂಬಾನೇ ಹೆಚ್ಚಿದೆ ಎಂದರ್ಥ. ಹೀಗಾಗಿ, 18 ವರ್ಷಕ್ಕಿಂತ ಸಣ್ಣವರು ಸಿನಿಮಾನ ವೀಕ್ಷಣೆ ಮಾಡುವಂತೆ ಇಲ್ಲ. ಆದಾಗ್ಯೂ ಸಿನಿಮಾ ಅಬ್ಬರದ ಗಳಿಕೆ ಮಾಡುತ್ತಿದೆ. ಸ್ಪೈ ಕಥಾ ಹಂದರ ಹೊಂದಿರುವ ಈ ಚಿತ್ರ ಮೆಚ್ಚುಗೆ ಪಡೆಯುತ್ತಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಕೇವಲ ಒಂದು ತಿಂಗಳಲ್ಲಿ 850 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈಗ ‘ಧುರಂಧರ್’ ಸಿನಿಮಾ ಆ ದಾಖಲೆಯನ್ನು ಮುರಿಯುವತ್ತ ಮುನ್ನುಗ್ಗುತ್ತಿದೆ. ಕೇವಲ ಒಂದೇ ವಾರದಲ್ಲಿ ಈ ಚಿತ್ರ 350 ಕೋಟಿ ರೂಪಾಯಿ ಗಳಿಕೆ ಮಾಡಿರುವುದರಿಂದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ದಾಖಲೆಯನ್ನು ಸಿನಿಮಾ ಹಿಂದಿಕ್ಕಬಹುದು ಎಂದು ಊಹಿಸಲಾಗಿದೆ.
ಇದನ್ನೂ ಓದಿ: ದಿ ಡೆವಿಲ್, ಅಖಂಡ 2, ಧುರಂಧರ್ ಸಿನಿಮಾಗಳ ನಡುವೆ ಕ್ಲ್ಯಾಶ್: ಯಾರಿಗೆ ಲಾಭ?
‘ಧುರಂಧರ್’ ಸಿನಿಮಾ ರಣವೀರ್ ಸಿಂಗ್ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್ ನೀಡಿದೆ. ಇತ್ತೀಚೆಗೆ ಗೆಲುವು ಕಾಣದೆ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದರು. ‘ಧುರಂಧರ್’ ಗೆಲುವಿನ ಮೇಲೆ ‘ಡಾನ್ 3’ ಸಿನಿಮಾ ಮಾಡಬೇಕೋ ಅಥವಾ ಬೇಡವೋ ಎಂದು ಫರ್ಹಾನ್ ಅಖ್ತರ್ ನಿರ್ಧರಸುತ್ತಾರೆ ಎಂದು ಹೇಳಲಾಗಿತ್ತು. ಮಾರ್ಚ್ 19ರಂದು ‘ಧುರಂಧರ್ 2’ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರ ‘ಟಾಕ್ಸಿಕ್’ ಸಿನಿಮಾ ಜೊತೆ ಕ್ಲ್ಯಾಶ್ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




