ಆರಾಧ್ಯಾಳನ್ನು ಎಷ್ಟು ಸ್ಟ್ರಿಕ್ಟ್ ಆಗಿ ಬೆಳೆಸಲಾಗುತ್ತಿದೆ? ಅರ್ಥವಾಗಲು ಈ ಒಂದು ಉದಾಹರಣೆ ಸಾಕು
Aaradhya Bachchan: ಅಭಿಷೇಕ್ ಬಚ್ಚನ್ ಮಗಳು ಆರಾಧ್ಯರ ಪಾಲನೆ ಕುರಿತು ಮಾತನಾಡಿದ್ದಾರೆ. ವಿಚ್ಛೇದನ ವದಂತಿಗಳ ಬಗ್ಗೆ ಆರಾಧ್ಯಗೆ ಮಾಹಿತಿ ಇಲ್ಲ. ಆರಾಧ್ಯಗೆ ಫೋನ್ ಇಲ್ಲ, ತಾಯಿಯ ಫೋನ್ ಸ್ನೇಹಿತರಿಗೆ ಕರೆ ಮಾಡಲು ಮಾತ್ರ ಬಳಸುತ್ತಾರೆ. ಐಶ್ವರ್ಯಾ ಉತ್ತಮ ಮೌಲ್ಯಗಳನ್ನು ನೀಡಿದ್ದಾರೆ. ಗೂಗಲ್‌ನಲ್ಲಿ ತಮ್ಮ ಹೆಸರು ಹುಡುಕದಂತೆ ಅಭಿಷೇಕ್ ಎಚ್ಚರ ವಹಿಸಿದ್ದಾರೆ, ಇದು ಕಟ್ಟುನಿಟ್ಟಾದ ಪೋಷಣೆಯನ್ನು ಸೂಚಿಸುತ್ತದೆ.

ಬಾಲಿವುಡ್ (Bollywood) ನಟಿಯರಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ವಿವಿಧ ಚರ್ಚೆಗಳು ನಡೆದವು. ಆದಾಗ್ಯೂ, ಈ ಚರ್ಚೆಗಳ ಬಗ್ಗೆ ಅಭಿಷೇಕ್ ಬಚ್ಚನ್ ಅಥವಾ ಐಶ್ವರ್ಯ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ಮಧ್ಯೆ, ಐಶ್ವರ್ಯ ಮತ್ತು ಅಭಿಷೇಕ್ ಬಚ್ಚನ್ ಅವರ ವಿಚ್ಛೇದನ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಅದೆಲ್ಲ ಸುಳ್ಳು ಎಂಬುದು ಗೊತ್ತಾಗಿದೆ. ಈಗ ಅವರು ಮಗಳ ಬಗ್ಗೆ ಮಾತನಾಡಿದ್ದಾರೆ.
ಐಶ್ವರ್ಯ ರೈ ತಮ್ಮ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ವಿಮಾನ ನಿಲ್ದಾಣದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ. ಐಶ್ವರ್ಯ ಬಚ್ಚನ್ ಕುಟುಂಬದ ಯಾವುದೇ ಸದಸ್ಯರೊಂದಿಗೆ ಕಾಣಿಸಿಕೊಂಡಿಲ್ಲ. ಅದಕ್ಕಾಗಿಯೇ ಐಶ್ವರ್ಯ ಮತ್ತು ಬಚ್ಚನ್ ಕುಟುಂಬದ ನಡುವಿನ ವಿವಾದ ಉತ್ತುಂಗಕ್ಕೇರಿತು ಎಂದು ಹೇಳಲಾಗಿತ್ತು. ಅನಂತ್ ಅಂಬಾನಿಯವರ ಮದುವೆಗೆ ಐಶ್ವರ್ಯ ರೈ ಬಚ್ಚನ್ ಕುಟುಂಬದೊಂದಿಗೆ ಬರಲಿಲ್ಲ. ಅವರು ತಮ್ಮ ಮಗಳೊಂದಿಗೆ ಪ್ರತ್ಯೇಕವಾಗಿ ಬಂದರು. ಆದಾಗ್ಯೂ, ಆ ಸಮಯದಲ್ಲಿ, ಬಚ್ಚನ್ ಕುಟುಂಬವು ವಿಚ್ಛೇದನ ಚರ್ಚೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈಗ, ಮೊದಲ ಬಾರಿಗೆ, ಅಭಿಷೇಕ್ ಮಗಳ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ:ಬಾಲಿವುಡ್ಗೆ ಹೋಗಿ ಬಾಲಿವುಡ್ ಸ್ಟಾರ್ಗಳನ್ನೇ ಹಿಂದಿಕ್ಕಿದ ಧನುಶ್
ಅಭಿಷೇಕ್ ಬಚ್ಚನ್ ಇತ್ತೀಚೆಗೆ ಸಂದರ್ಶನ ಒಂದನ್ನು ನೀಡಿದ್ದಾರೆ. ಈ ಸಂದರ್ಶನದಲ್ಲಿ, ‘ನಿಮ್ಮ ವಿಚ್ಛೇದನ ವದಂತಿ ಬಗ್ಗೆ ಮಗಳು ಆರಾಧ್ಯಗೆ ಏನಾದರೂ ತಿಳಿದಿದೆಯೇ’ ಎಂದು ಅಭಿಷೇಕ್ ಅವರನ್ನು ಕೇಳಲಾಯಿತು. ಇದಕ್ಕೆ ಅಭಿಷೇಕ್ ಬಚ್ಚನ್ ಇಲ್ಲ ಎಂದು ಉತ್ತರಿಸಿದರು. ನನಗೆ ತಿಳಿದಿರುವಂತೆ, ‘ಅವಳಿಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ’ ಎಂದಿದ್ದಾರೆ.
‘ಅವಳ ಬಳಿ ಸ್ವಂತ ಫೋನ್ ಕೂಡ ಇಲ್ಲ. ಅವಳು ತುಂಬಾ ಅರ್ಥಮಾಡಿಕೊಳ್ಳುವವಳು. ತುಂಬಾ ಒಳ್ಳೆಯವಳು. ಐಶ್ವರ್ಯಾ ಅವಳಿಗೆ ತುಂಬಾ ಒಳ್ಳೆಯ ಮೌಲ್ಯಗಳನ್ನು ನೀಡಿದ್ದಾರೆ. ಆರಾಧ್ಯಳ ಸ್ನೇಹಿತರಿಗೆ ಕರೆ ಮಾಡಲು ತಾಯಿಯ ಫೋನ್ ಬಳಸುತ್ತಾಳೆ. ಅವಳು ಓದಲು ಮತ್ತು ಶಾಲೆಗೆ ಹೋಗಲು ಇಷ್ಟಪಡುತ್ತಾಳೆ. ಅವಳು ಗೂಗಲ್‌ನಲ್ಲಿ ನಮ್ಮ ಹೆಸರುಗಳನ್ನು ಹುಡುಕಬಾರದು ಎಂಬುದು ನನ್ನ ಅಭಿಪ್ರಾಯ’ ಎಂದಿದ್ದಾರೆ ಅಭಿಷೇಕ್. ಈ ಮೂಲಕ ಮಗಳನ್ನು ಅವರು ಸ್ಟ್ರಿಕ್ಟ್ ಆಗಿ ಬೆಳೆಸುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಅನೇಕರಿಗೆ ಖುಷಿ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



