ಬಾಲಿವುಡ್ಗೆ ಹೋಗಿ ಬಾಲಿವುಡ್ ಸ್ಟಾರ್ಗಳನ್ನೇ ಹಿಂದಿಕ್ಕಿದ ಧನುಶ್
Dhanush Hindi movie: ಧನುಶ್ ಅವರ ಸಿನಿಮಾಗಳು ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತವೆ. ಧನುಶ್ ಅವರ ಕೆಲ ಸಿನಿಮಾಗಳು ಕರ್ನಾಟಕದಲ್ಲಿಯೂ ಉತ್ತಮ ಪ್ರದರ್ಶನ ಕಂಡಿದ್ದುಂಟು. ದಕ್ಷಿಣದಲ್ಲಿ ಇರುವಂತೆಯೇ ಧನುಶ್ ಅವರಿಗೆ ಬಾಲಿವುಡ್ನಲ್ಲೂ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಧನುಶ್, ಹಿಂದಿ ಸಿನಿಮಾನಲ್ಲಿ ನಟಿಸಿದ್ದು, ಈ ಸಿನಿಮಾದ ಕಲೆಕ್ಷನ್, ಬಾಲಿವುಡ್ ಸ್ಟಾರ್ ನಟರ ಕಲೆಕ್ಷನ್ಗಳನ್ನು ಸಹ ಮೀರಿಸಿದೆ.

ಧನುಶ್ (Dhanush), ತಮಿಳು ಚಿತ್ರರಂಗದ ಸ್ಟಾರ್ ನಟ, ದಕ್ಷಿಣ ಭಾರತದಲ್ಲಿ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಧನುಶ್ ಅವರ ಸಿನಿಮಾಗಳು ತಮಿಳುನಾಡು, ಆಂಧ್ರ, ತೆಲಂಗಾಣಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತವೆ. ಧನುಶ್ ಅವರ ಕೆಲ ಸಿನಿಮಾಗಳು ಕರ್ನಾಟಕದಲ್ಲಿಯೂ ಉತ್ತಮ ಪ್ರದರ್ಶನ ಕಂಡಿದ್ದುಂಟು. ದಕ್ಷಿಣದಲ್ಲಿ ಇರುವಂತೆಯೇ ಧನುಶ್ ಅವರಿಗೆ ಬಾಲಿವುಡ್ನಲ್ಲೂ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಧನುಶ್, ಹಿಂದಿ ಸಿನಿಮಾನಲ್ಲಿ ನಟಿಸಿದ್ದು, ಈ ಸಿನಿಮಾದ ಕಲೆಕ್ಷನ್, ಬಾಲಿವುಡ್ ಸ್ಟಾರ್ ನಟರ ಕಲೆಕ್ಷನ್ಗಳನ್ನು ಸಹ ಮೀರಿಸಿದೆ.
ಧನುಶ್ ‘ತೇರೆ ಇಷ್ಕ್ ಮೇ’ ಹೆಸರಿನ ಹಿಂದಿ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾ ಕೆಲವೇ ದಿನಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಕೃತಿ ಸನೊನ್ ನಾಯಕಿಯಾಗಿದ್ದ ಈ ಸಿನಿಮಾ ಇದೀಗ 100 ಕೋಟಿ ಕಲೆಕ್ಷನ್ ದಾಟಿದೆ. ಬಾಲಿವುಡ್ನ ಹಲವು ಸ್ಟಾರ್ ನಟರುಗಳ ಸಿನಿಮಾಗಳೇ ಇತ್ತೀಚೆಗೆ 100 ಕೋಟಿ ಕ್ಲಬ್ ಸೇರಲು ಹೆಣಗಾಡುತ್ತಿವೆ. ವರುಣ್ ಧವನ್, ಟೈಗರ್ ಶ್ರಾಫ್, ಅಜಯ್ ದೇವಗನ್, ಅಕ್ಷಯ್ ಕುಮಾರ್ ಅವರಂಥ ನಟರುಗಳ ಸಿನಿಮಾಗಳೇ 100 ಕೋಟಿ ಗಡಿ ದಾಟುತ್ತಿಲ್ಲ ಅಂಥಹುದರಲ್ಲಿ ದಕ್ಷಿಣದ ನಟರೊಬ್ಬರು ನಟಿಸಿರುವ ಹಿಂದಿ ಸಿನಿಮಾವನ್ನು ಬಾಲಿವುಡ್ ಪ್ರೇಕ್ಷಕರು ಗೆಲ್ಲಿಸಿದ್ದಾರೆ.
‘ತೇರೆ ಇಷ್ಕ್ ಮೇ’ ಸಿನಿಮಾನಲ್ಲಿ ಧನುಶ್ ಅವರದ್ದು ಪಾಗಲ್ ಪ್ರೇಮಿಯ ಪಾತ್ರ. ಸಿನಿಮಾದ ಕತೆ, ಧನುಶ್ ಹಾಗೂ ಕೃತಿ ಅವರ ನಟನೆಯನ್ನು ಜನ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಒಂದು ಕಡೆ ರಣ್ವೀರ್ ಸಿಂಗ್ ಅವರ ‘ಧುರಂದರ್’ ಸಿನಿಮಾ ಭಾರಿ ದೊಡ್ಡ ಕಲೆಕ್ಷನ್ ಮಾಡುತ್ತಿರುವಾಗಲೇ ಆ ಸಿನಿಮಾಕ್ಕೆ ಕಠಿಣ ಪ್ರತಿಸ್ಪರ್ಧೆ ಒಡ್ಡುತ್ತಾ ‘ತೇರೆ ಇಷ್ಕ್ ಮೇ’ ಸಿನಿಮಾ ಸಹ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ‘ಧರುಂದರ್’ ಸಿನಿಮಾದ ಎದುರು ಒಂದೇ ದಿನ 23 ಕೋಟಿ ಗಳಿಕೆ ಮಾಡಿದೆ ‘ತೇರೆ ಇಷ್ಕ್ ಮೇ’ ಅದೂ ಸಿನಿಮಾ ಬಿಡುಗಡೆ ಆಗಿ ಮೂರು ವಾರಗಳ ಬಳಿಕ.
ಇದನ್ನೂ ಓದಿ:ಕ್ಯಾಪ್ಟನ್ ಆದ ಧನುಶ್, ಮಂಜು ಶ್ರಮ ವ್ಯರ್ಥ ಮಾಡಿದ ಸೂರಜ್
ಧನುಶ್ ಅವರಿಗೆ ಹಿಂದಿ ಸಿನಿಮಾಗಳು ಹೊಸದೇನೂ ಅಲ್ಲ. ಹಿಂದಿ ಚಿತ್ರರಂಗದ ಕಲ್ಟ್ ಪ್ರೇಮಕತಾ ಸಿನಿಮಾಗಳಲ್ಲಿ ಒಂದಾಗಿರುವ ‘ರಾಂಝನಾ’ನಲ್ಲಿ ಧನುಶ್ ನಟಿಸಿದ್ದಾರೆ. ಈ ಸಿನಿಮಾದಿಂದಾಗಿ ಈಗಲೂ ಧನುಶ್ಗೆ ಬಾಲಿವುಡ್ನಲ್ಲಿ ದೊಡ್ಡ ಅಭಿಮಾನಿ ವರ್ಗವಿದೆ. ‘ರಾಂಝನಾ’ ಸಿನಿಮಾ ನಿರ್ದೇಶಿಸಿದ್ದ ಆನಂದ್ ಎಲ್ ರಾಯ್ ಅವರೇ ಈಗ ‘ತೇರೆ ಇಷ್ಕ್ ಮೇ’ ಸಿನಿಮಾವನ್ನೂ ಸಹ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಬಿಡುಗಡೆ ಆಗಿದ್ದ ಧನುಶ್ ನಟಿಸಿದ್ದ ‘ಅತರಂಗಿ ರೇ’ ಸಿನಿಮಾವನ್ನೂ ಸಹ ಅವರೇ ನಿರ್ದೇಶನ ಮಾಡಿದ್ದರು. ಆದರೆ ‘ಅತರಂಗಿ ರೇ’ ಸಿನಿಮಾ ದೊಡ್ಡ ಹಿಟ್ ಆಗಿರಲಿಲ್ಲ. ಆದರೆ ‘ತೇರೆ ಇಷ್ಕ್ ಮೇ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




