AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾಪ್ಟನ್ ಆದ ಧನುಶ್, ಮಂಜು ಶ್ರಮ ವ್ಯರ್ಥ ಮಾಡಿದ ಸೂರಜ್

Bigg Boss Kannada season 12: ಬಿಗ್​​ಬಾಸ್ ಮನೆಗೆ ಈ ವಾರ ಹೊಸ ಅತಿಥಿಗಳು ಬಂದಿದ್ದರು. ಉಗ್ರಂ ಮಂಜು, ತ್ರಿವಿಕ್ರಮ್, ರಜತ್, ಚೈತ್ರಾ ಹಾಗೂ ಮೋಕ್ಷಿತಾ. ಕ್ಯಾಪ್ಟೆನ್ಸಿ ಟಾಸ್ಕ್​​ನಲ್ಲಿ ಅತಿಥಿಗಳು ಸ್ಪರ್ಧಿಗಳಿಗೆ ಸಹಾಯ ಮಾಡಿದರು. ಅತಿಥಿಗಳ ಸಹಾಯದಿಂದ ಧನುಶ್ ಮತ್ತೆ ಕ್ಯಾಪ್ಟನ್ ಆಗಿದ್ದಾರೆ. ಆದರೆ ಉಗ್ರಂ ಮಂಜು ಅವರ ಶ್ರಮವನ್ನು ಸೂರಜ್ ವ್ಯರ್ಥ ಮಾಡಿದ್ದಾರೆ.

ಕ್ಯಾಪ್ಟನ್ ಆದ ಧನುಶ್, ಮಂಜು ಶ್ರಮ ವ್ಯರ್ಥ ಮಾಡಿದ ಸೂರಜ್
Bigg Boss Captain
ಮಂಜುನಾಥ ಸಿ.
|

Updated on: Nov 28, 2025 | 10:28 AM

Share

ಬಿಗ್​​ಬಾಸ್ (Bigg Boss) ಮನೆಗೆ ಉಗ್ರಂ ಮಂಜು, ರಜತ್, ಚೈತ್ರಾ ಕುಂದಾಪುರ, ಮೋಕ್ಷಿತಾ, ತ್ರಿವಿಕ್ರಮ್ ಅವರುಗಳು ಅತಿಥಿಗಳಾಗಿ ಬಂದಿದ್ದರು. ವಾರವೆಲ್ಲ, ಮನೆ ಸ್ಪರ್ಧಿಗಳು ಅವರ ಸೇವೆಗಳನ್ನು ಮಾಡಿದರು. ಕೆಲವು ಸಂದರ್ಭಗಳಲ್ಲಿ ಅತಿಥಿಗಳು ಮತ್ತೆ ಆತಿಥ್ಯ ವಹಿಸಿದವರ ನಡುವೆ ಮನಸ್ಥಾಪವೂ ಸಹ ನಡೆಯಿತು. ಆದರೆ ಗುರುವಾರದ ಎಪಿಸೋಡ್​​ನಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ಆಡಿಸಬೇಕಿತ್ತು. ಯಾರಿಗೆ ಹೆಚ್ಚು ಅಂಕಗಳು ಇವೆಯೋ ಅವರಿಗೆ ಮಾತ್ರ ಕ್ಯಾಪ್ಟೆನ್ಸಿ ಟಾಸ್ಕ್ ಆಡಲು ಅವಕಾಶ ಇತ್ತು.

ಅದರಂತೆ ರಘು, ಅಭಿಷೇಕ್, ಧನುಶ್, ಸೂರಜ್, ಸ್ಪಂದನಾ ಅವರುಗಳಿಗೆ ಕ್ಯಾಪ್ಟೆನ್ಸಿ ಓಟಕ್ಕೆ ಅವಕಾಶ ಸಿಕ್ಕಿತು. ಇವರುಗಳು ವಾರದಲ್ಲಿ ನಡೆದ ಟಾಸ್ಕ್ನಲ್ಲಿ ಹೆಚ್ಚಿನ ಪಾಯಿಂಟ್ಸ್​​ಗಳನ್ನು ಸಂಪಾದನೆ ಮಾಡಿದ್ದರು. ಪಾಯಿಂಟ್ಸ್ ಶೇರಿಂಗ್ ವಿಚಾರಕ್ಕೆ ತುಸು ಅಸಮಾಧಾನ ಉಂಟಾಯ್ತಾದರೂ ಅಂತಿಮವಾಗಿ ರಘು, ಸೂರಜ್, ಅಭಿ, ಧನುಶ್ ಮತ್ತು ಸ್ಪಂದನಾ ಅವರಿಗೆ ಹೆಚ್ಚು ಪಾಯಿಂಟ್ಸ್ ದೊರೆತು ಅವರುಗಳು ಮಾತ್ರವೇ ಕ್ಯಾಪ್ಟೆನ್ಸಿ ಟಾಸ್ಕ್​​ಗೆ ಆಯ್ಕೆ ಆದರು.

ಆದರೆ ಅವರಿಗೆ ಬಿಗ್​​ಬಾಸ್ ಷರತ್ತೊಂದನ್ನು ವಿಧಿಸಿದರು. ಅತಿಥಿಗಳ ಮನವೊಲಿಸಿ ಪ್ರತಿಯೊಬ್ಬರೂ ತಮ್ಮೊಟ್ಟಿಗೆ ಒಬ್ಬ ಅತಿಥಿಯನ್ನು ಟಾಸ್ಕ್​​ಗೆ ಕರೆತರಬೇಕು ಎಂಬುದು ಆ ಷರತ್ತು. ಅದರಂತೆ ಎಲ್ಲ ಸ್ಪರ್ಧಿಗಳು ಅತಿಥಿಗಳ ಬಳಿ ಮನವಿ ಮಾಡಿ ಅವರ ಮನವೊಲಿಸುವ ಯತ್ನ ಮಾಡಿದರು. ಅಂತಿಮವಾಗಿ ಧನುಶ್ ಪರವಾಗಿ ತ್ರಿವಿಕ್ರಮ್, ಸೂರಜ್ ಪರವಾಗಿ ಉಗ್ರಂ ಮಂಜು, ರಘು ಪರವಾಗಿ ಮೋಕ್ಷಿತಾ, ಅಭಿ ಪರವಾಗಿ ಚೈತ್ರಾ ಕುಂದಾಪುರ, ಸ್ಪಂದನಾ ಪರವಾಗಿ ರಜತ್ ಆಡಲು ರೆಡಿಯಾದರು.

ಇದನ್ನೂ ಓದಿ:ಎಲ್ಲಾ ಸ್ಪರ್ಧಿಗಳು ಹೊರಕ್ಕೆ: ಖಾಲಿ ಖಾಲಿಯಾಗಿರುವ ಬಿಗ್‌ಬಾಸ್‌ ಮನೆ ಹೇಗಿದೆ ನೋಡಿ

ಟಾಸ್ಕ್ ಎರಡು ಹಂತದಲ್ಲಿತ್ತು. ಮೊದಲ ಹಂತವನ್ನು ಅತಿಥಿಗಳು, ಎರಡನೇ ಹಂತವನ್ನು ಸ್ಪರ್ಧಿಗಳು ಆಡಬೇಕಿತ್ತು. ಉಗ್ರಂ ಮಂಜು ಅದ್ಭುತವಾಗಿ ಆಡಿ ಎಲ್ಲರಿಗಿಂತಲೂ ಮೊದಲು ಸೂರಜ್​​ ಅವರಿಗೆ ಆಟವನ್ನು ಬಿಟ್ಟುಕೊಟ್ಟರು. ಆದರೆ ಬ್ಯಾಲೆನ್ಸ್ ಮಾಡುವ ಆಟದಲ್ಲಿ ಸೂರಜ್ ಎಡವಿದರು. ಪದೇ ಪದೇ ಎಡವಿದರು. ಸಾಕಷ್ಟು ಪ್ರಯತ್ನಗಳ ಬಳಿಕವೂ ಅವರಿಗೆ ಕಡ್ಡಿಗಳನ್ನು ಬ್ಯಾಲೆನ್ಸ್ ಮಾಡಲು ಆಗಲಿಲ್ಲ. ರಘು ಒಮ್ಮೆ ಬ್ಯಾಲೆನ್ಸ್ ಮಾಡಿದರೂ ಸಹ ಅದು ನಿಲ್ಲಲಿಲ್ಲ. ಬಳಿಕ ತ್ರಿವಿಕ್ರಮ್ ಜೊತೆಗೂಡಿ ಆಡಿದ ಧನುಶ್ ತಡವಾಗಿ ಅವಕಾಶ ಸಿಕ್ಕರೂ ಸಹ ಸರಿಯಾಗಿ ಬ್ಯಾಲೆನ್ಸ್ ಮಾಡಿ ಆಟ ಗೆದ್ದು ಮತ್ತೊಮ್ಮೆ ಕ್ಯಾಪ್ಟನ್ ಆದರು. ಧನುಶ್ ಇದು ಎರಡನೇ ಬಾರಿ ಕ್ಯಾಪ್ಟನ್ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಫೈರಿಂಗ್‌: ಶಾಕಿಂಗ್ ರಿಯಾಕ್ಷನ್
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಹೊಸ ವರ್ಷಾಚರಣೆಗೆ ಆಂಧ್ರದಲ್ಲಿ ಅಪರೂಪದ ಟಗರು ಕಾಳಗ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?