AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಮಗನ ವಿರುದ್ಧ ಕುತಂತ್ರ ಮಾಡಲಾಗುತ್ತಿದೆ: ಪೃಥ್ವಿರಾಜ್ ಸುಕುಮಾರನ್ ತಾಯಿ

Prithviraj Sukumaran: ಪೃಥ್ವಿರಾಜ್ ಸುಕುಮಾರನ್ ಬಲು ಜನಪ್ರಿಯ ಪ್ಯಾನ್ ಇಂಡಿಯಾ ನಟ. ಅತ್ಯುತ್ತಮ ನಟನೆಗೆ ಹಲವು ಪ್ರಶಂಸೆಗಳನ್ನು ಅವರು ಪಡೆದಿದ್ದಾರೆ. ಮಲಯಾಳಂ ಚಿತ್ರರಂಗದಲ್ಲಿಯೇ ಪೃಥ್ವಿರಾಜ್ ವಿರುದ್ಧ ಕೆಲವರು ಕುತಂತ್ರ ಮಾಡುತ್ತಿದ್ದು, ಪೃಥ್ವಿರಾಜ್ ವೃತ್ತಿಯನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದ್ದು, ಈ ಕುರಿತು ಸ್ವತಃ ಪೃಥ್ವಿರಾಜ್ ಅವರ ತಾಯಿಯೇ ಆರೋಪ ಮಾಡಿದ್ದಾರೆ.

ನನ್ನ ಮಗನ ವಿರುದ್ಧ ಕುತಂತ್ರ ಮಾಡಲಾಗುತ್ತಿದೆ: ಪೃಥ್ವಿರಾಜ್ ಸುಕುಮಾರನ್ ತಾಯಿ
Prithviraj Sukumaran Mother
ಮಂಜುನಾಥ ಸಿ.
|

Updated on: Nov 28, 2025 | 9:43 AM

Share

ಪೃಥ್ವಿರಾಜ್ ಸುಕುಮಾರನ್ (Prithviraj Sukumaran), ಮಲಯಾಳಂನ ಸ್ಟಾರ್ ನಟ ಮಾತ್ರವಲ್ಲ ಅವರು ಪ್ಯಾನ್ ಇಂಡಿಯಾ ನಟರೂ ಹೌದು. ಪೃಥ್ವಿರಾಜ್ ಸುಕುಮಾರನ್ ಅವರು ಮಲಯಾಳಂ ಮಾತ್ರವೇ ಅಲ್ಲದೆ ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದು, ರಾಜಮೌಳಿ ಸೇರಿದಂತೆ ಹಲವು ನಿರ್ದೇಶಕರಿಂದ ಭಾರಿ ಹೊಗಳಿಕೆಯನ್ನು ಪಡೆದಿದ್ದಾರೆ. ಇದೀಗ ವಿಶ್ವ ಸಿನಿಮಾ ಪ್ರೇಮಿಗಳು ಎದುರು ನೋಡುತ್ತಿರುವ ‘ವಾರಣಾಸಿ’ ಸಿನಿಮಾದ ವಿಲನ್ ಸಹ ಆಗಿದ್ದಾರೆ ಪೃಥ್ವಿರಾಜ್. ಆದರೆ ಮಲಯಾಳಂ ಚಿತ್ರರಂಗದಲ್ಲಿಯೇ ಪೃಥ್ವಿರಾಜ್ ವಿರುದ್ಧ ಕೆಲವರು ಕುತಂತ್ರ ಮಾಡುತ್ತಿದ್ದು, ಪೃಥ್ವಿರಾಜ್ ವೃತ್ತಿಯನ್ನು ಕೊನೆಗಾಣಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದ್ದು, ಈ ಕುರಿತು ಸ್ವತಃ ಪೃಥ್ವಿರಾಜ್ ಅವರ ತಾಯಿಯೇ ಆರೋಪ ಮಾಡಿದ್ದಾರೆ.

ಪೃಥ್ವಿರಾಜ್ ಸುಕುಮಾರನ್ ನಟನೆಯ ‘ವಿಲಾಯತ್ ಬುದ್ಧ’ ಹೆಸರಿನ ಸಿನಿಮಾ ಕೆಲವೇ ದಿನಗಳ ಹಿಂದಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾ ಚಿತ್ರಮಂದಿರಗಳಿಗೆ ಬಿಡುಗಡೆ ಆಗುವ ಮುನ್ನವೇ ಸಿನಿಮಾದ ಮೇಲೆ ಸೈಬರ್ ಅಟ್ಯಾಕ್ ಮಾಡಲಾಗಿದ್ದು, ಪೈರಸಿ ಬಿಡುಗಡೆ ಮಾಡಲಾಗಿದೆ. ಇದರಿಂದಾಗಿ ಸಿನಿಮಾಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಈ ಬಗ್ಗೆ ಮಾತನಾಡಿರುವ ಪೃಥ್ವಿರಾಜ್ ಸುಕುಮಾರನ್ ಅವರ ತಾಯಿ, ಮಲಯಾಳಂ ಚಿತ್ರರಂಗದ ಖ್ಯಾತ ನಟಿಯೂ ಆಗಿದ್ದ ಮಲ್ಲಿಕಾ ಸುಕುಮಾರನ್, ‘ಇದು ನನ್ನ ಮಗನ ವೃತ್ತಿಯನ್ನು ಅಂತ್ಯಗೊಳಿಸಲು ಮಾಡಲಾಗಿರುವ ವ್ಯವಸ್ಥಿತ ಕುತಂತ್ರದ ಭಾಗ’ ಎಂದಿದ್ದಾರೆ.

ಪೃಥ್ವಿರಾಜ್ ಅವರ ಮೇಲೆ ಹಾಗೂ ಅವರ ಸಿನಿಮಾಗಳ ಮೇಲೆ ಸೈಬರ್ ದಾಳಿ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಮಲ್ಲಿಕಾ ಸುಕುಮಾರನ್, ‘ಚಿತ್ರರಂಗದಲ್ಲಿ ನನ್ನ ಮಗನನ್ನು ತುಳಿಯುವ ವ್ಯವಸ್ಥಿತ ಪ್ರಯತ್ನ ಕೆಲವು ವರ್ಷಗಳಿಂದ ನಡೆಯುತ್ತಿದ್ದು, ಈ ಸೈಬರ್ ದಾಳಿಯೂ ಸಹ ಅದರ ಭಾಗವೇ ಆಗಿದೆ. ಆದರೆ ಪೃಥ್ವಿರಾಜ್ ಸುಕುಮಾರನ್​ಗೆ ಬೆಂಬಲವಾಗಿ ಯಾವ ನಟ ಅಥವಾ ಸಿನಿಮಾದ ಸಂಘಗಳು ಬಂದಿಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:Eko: ಮಲಯಾಳಂ ಸಿನಿಮಾ ಮೂಲಕ ಮತ್ತೊಮ್ಮೆ ಯಶಸ್ಸು ಕಂಡ ರಾಜ್ ಬಿ. ಶೆಟ್ಟಿ

‘ನನ್ನ ಮಗನನ್ನು ಚಿತ್ರರಂಗದಿಂದ ತೆಗೆದು ಹಾಕುವುದು, ಅವನು ನಟ ಎಂಬ ಗುರುತನ್ನು ಅಳಿಸಿ ಹಾಕಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಅಂಥಹಾ ಗುಂಪುಗಳೇ ಮಾಡಿರುವ ವ್ಯವಸ್ಥಿತ ದಾಳಿ ಈ ಸೈಬರ್ ದಾಳಿ ಆಗಿದೆ. ಈ ಹಿಂದೆಯೂ ಇಂಥಹಾ ಕೆಲವು ಉದ್ದೇಶಪೂರ್ವಕ ದಾಳಿಗಳು ನನ್ನ ಮಗನ ಮೇಲೆ, ಅವನ ಸಿನಿಮಾಗಳ ಮೇಲೆ ಆಗಿವೆ. ಆಗಲೂ ಸಹ ಯಾರೂ ಸಹ ಆತನ ಬೆಂಬಲಕ್ಕೆ ಬಂದಿಲ್ಲ’ ಎಂದು ಪೃಥ್ವಿರಾಜ್ ಸುಕುಮಾರನ್ ತಾಯಿ ಹೇಳಿದ್ದಾರೆ.

ಪೃಥ್ವಿರಾಜ್ ಸುಕುಮಾರನ್ ಸಂಭಾವ್ಯ ನಟರಾಗಿ ಮಲಯಾಳಂ ಮಾತ್ರವಲ್ಲದೆ ಹಲವು ಚಿತ್ರರಂಗಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪೃಥ್ವಿರಾಜ್ ಯಾವುದೇ ವಿವಾದವನ್ನು ಮೈಮೇಲೆ ಎಳೆದುಕೊಂಡವರಲ್ಲ. ಆದರೆ ಅವರು ನಿರ್ದೇಶಿಸಿದ ‘ಲುಸಿಫರ್ 2’ ಸಿನಿಮಾದ ವಿರುದ್ಧ ಟ್ರೋಲ್ ಮಾಡಲಾಯ್ತು, ಕ್ಷಮೆಗೆ ಒತ್ತಾಯಿಸಲಾಯ್ತು, ದೂರು ಸಹ ನೀಡಲಾಯ್ತು. ಅವರ ನಟನೆಯ ‘ಆಡುಜೀವಿತಂ’ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಸಿಗಲಿಲ್ಲ. ಬಳಿಕ ಅವರ ವಿರುದ್ಧ ಕಸ್ಟಮ್ಸ್ ಅಧಿಕಾರಿಗಳು ದಾಳಿ ನಡೆಸಿ ಕಾರಿಗೆ ಸಂಬಂಧಿಸಿದಂತೆ ಕೇಸು ದಾಖಲಿಸಿದರು. ಈಗ ಸಿನಿಮಾ ವಿರುದ್ಧವೇ ದಾಳಿ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ