AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಗಂಡ-ಹೆಂಡತಿ ಜಗಳ ಶಾಲೆ ತನಕ: ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?

ಈ ಗಂಡ-ಹೆಂಡತಿ ಜಗಳ ಶಾಲೆ ತನಕ: ಶಿಕ್ಷಕನಿಗಾಗಿ ಗಲಾಟೆ ಮಾಡಿದ ಪತ್ನಿ ಹೇಳಿದ್ದೇನು?

ಶಿವಕುಮಾರ್ ಪತ್ತಾರ್
| Edited By: |

Updated on: Mar 04, 2026 | 4:05 PM

Share

ಗಂಡ ಹೆಂಡ್ತಿ ಜಗಳ ಮನೆಯಲ್ಲಿ ಉಂಡು ಮಲಗುವ ತನಕ ಅಂತಾರೆ. ಆದ್ರೆ, ಈ ದಂಪತಿ ಗಲಾಟೆ ಶಾಲೆ ತನಕ ಬಂದಿದೆ. ಹೌದು... ಪ್ರೌಢಶಾಲೆಯ ಮುಖ್ಯ ಶಿಕ್ಷಕನ ಎರಡನೇ ಪತ್ನಿ ಶಾಲೆಗೆ ಬಂದು ದೊಡ್ಡ ಹೈಡ್ರಾಮಾ ಸೃಷ್ಟಿಸಿರುವ ಘಟನೆ ಕೊಪ್ಪಳ ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ನಡೆದಿದೆ.ಮುಖ್ಯ ಶಿಕ್ಷಕ ಸಿದ್ದೇಶ ಶೆಟ್ಟರ್ ಮನೆಗೆ ಬರುತ್ತಿಲ್ಲ ಎಂದು ಆರೋಪಿಸಿ, ಶಾಲೆ ಆವರಣದಲ್ಲಿಯೇ ಎರಡನೇ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ, (ಮಾರ್ಚ್​​ 04): ಗಂಡ ಹೆಂಡ್ತಿ  (Wife And Husband) ಜಗಳ ಮನೆಯಲ್ಲಿ ಉಂಡು ಮಲಗುವ ತನಕ ಅಂತಾರೆ. ಆದ್ರೆ, ಈ ದಂಪತಿ ಗಲಾಟೆ ಶಾಲೆ ತನಕ ಬಂದಿದೆ. ಹೌದು… ಪ್ರೌಢಶಾಲೆಯ ಮುಖ್ಯ ಶಿಕ್ಷಕನ ಎರಡನೇ ಪತ್ನಿ ಶಾಲೆಗೆ ಬಂದು ದೊಡ್ಡ ಹೈಡ್ರಾಮಾ ಸೃಷ್ಟಿಸಿರುವ ಘಟನೆ ಕೊಪ್ಪಳ (Koppal) ಕುಕನೂರು ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ನಡೆದಿದೆ.ಮುಖ್ಯ ಶಿಕ್ಷಕ ಸಿದ್ದೇಶ ಶೆಟ್ಟರ್ ಮನೆಗೆ ಬರುತ್ತಿಲ್ಲ ಎಂದು ಆರೋಪಿಸಿ, ಶಾಲೆ ಆವರಣದಲ್ಲಿಯೇ ಎರಡನೇ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲ ಪತ್ನಿ ಇದ್ದರೂ ಸಹ ಶಿಕ್ಷಕ ಸಿದ್ದೇಶ, ಚೆನ್ನಮ್ಮಳನ್ನ ವಿವಾಹವಾಗಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆಯೇ ಸಿದ್ದೇಶ ಹಾಗೂ ಚೆನ್ನಮ್ಮ ಮದುವೆಯಾಗಿದ್ದಾರೆ. ಆದ್ರೆ, ಪತಿ ಸಿದ್ದೇಶ ಮನೆಗೆ ಬರುತ್ತಿಲ್ಲ ಎಂದು ಪತ್ನಿ ಚೆನ್ನಮ್ಮ ಕೋಪಗೊಂಡಿದ್ದು, ಸಿದ್ದೇಶ ಇರುವ ಶಾಲೆಗೆ ಬಂದು ಗಲಾಟೆ ಮಾಡಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ರೆ, ಅವರು ಟೀಚರ್ ಆಗಿದ್ರೆ ನನಗೆ ಗಂಡ. ಮನೆಗೆ ಬರುತ್ತಿಲ್ಲ. ಅದಕ್ಕೆ ಇಲ್ಲಿಗೆ ಬಂದಿದ್ದೇನೆ ಎಂದಿದ್ದಾರೆ.

ಇದನ್ನೂ ನೋಡಿ: ಪತಿ ಮನೆಗೆ ಬಾರದ್ದಕ್ಕೆ ಸಿಟ್ಟು: ಶಾಲೆಗೆ ಬಂದು ಮುಖ್ಯ ಶಿಕ್ಷಕನ 2ನೇ ಪತ್ನಿಯ ಹೈಡ್ರಾಮಾ

Follow Us