ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಆಡು ಜೀವಿತಂ’ ಚಿತ್ರಕ್ಕಿಲ್ಲ ಪ್ರಶಸ್ತಿ; ಶುರುವಾಯ್ತು ಚರ್ಚೆ
Aadujeevithamm movie: ಕೆಲ ದಿನಗಳ ಹಿಂದಷ್ಟೆ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಘೋಷಣೆ ಆಗಿದೆ. 12 ಫೇಲ್ ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾ, ‘ದಿ ಕಾಶ್ಮೀರ್ ಫೈಲ್ಸ್’ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿವೆ. ಆದರೆ ಪೃಥ್ವಿರಾಜ್ ಸುಕುಮಾರನ್ ನಟನೆಯ ‘ಆಡುಜೀವಿತಂ’ ಸಿನಿಮಾಕ್ಕೆ ಯಾವುದೇ ಪ್ರಶಸ್ತಿ ಸಿಕ್ಕಿಲ್ಲ. ಈ ಬಗ್ಗೆ ಚರ್ಚೆ ಆರಂಭವಾಗಿದೆ.

ಇತ್ತೀಚೆಗೆ 71ನೇ ಸಾಲಿನ ರಾಷ್ಟ್ರಪ್ರಶಸ್ತಿ ಅವಾರ್ಡ್ನ ಅನೌನ್ಸ್ ಮಾಡಲಾಗಿದೆ. ‘ಜವಾನ್’ ಸಿನಿಮಾದ ನಟನೆಗಾಗಿ ಶಾರುಖ್ ಖಾನ್ ಹಾಗೂ ‘12th ಫೇಲ್’ ಸಿನಿಮಾದ ನಟನೆಗಾಗಿ ವಿಕ್ರಾಂತ್ ಮಾಸಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಇಬ್ಬರು ಅವಾರ್ಡ್ನ ಹಂಚಿಕೊಂಡಿದ್ದಾರೆ. ‘ಮಿಸೆಸ್ ಚಟರ್ಜಿ ವರ್ಸಸ್ ನಾರ್ವೆ’ ಸಿನಿಮಾದಲ್ಲಿನ ಅಭಿನಯಕ್ಕಾಗಿ ರಾಣಿ ಮುಖರ್ಜಿ ಅವರು ಅತ್ಯುತ್ತಮ ನಟಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡರು. ಈ ಮಧ್ಯೆ ಪೃಥ್ವಿರಾಜ್ಗೆ ಅವಾರ್ಡ್ ಸಿಗದೇ ಇರುವುದು ಚರ್ಚೆ ಹುಟ್ಟುಹಾಕಿದೆ.
2023ರಲ್ಲಿ ಸೆನ್ಸಾರ್ ಮಾಡಿಸಿಕೊಂಡ ಸಿನಿಮಾಗಳಿಗೆ ಅವಾರ್ಡ್ ನೀಡಾಗಿದೆ. ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಾಗಿದೆ. 2023ರಲ್ಲಿ ಸೆನ್ಸಾರ್ ಮಾಡಿಕೊಂಡು, 2024ರಲ್ಲಿ ಬಿಡುಗಡೆ ಕಂಡ ‘ಆಡುಜೀವಿತಂ’ ಸಿನಿಮಾಗೆ ಯಾವುದೇ ಅವಾರ್ಡ್ ಸಿಗದಿರುವುದು ಚರ್ಚೆ ಹುಟ್ಟುಹಾಕಿದೆ.
‘ಆಡು ಜೀವಿತಂ’ ಚಿತ್ರಕ್ಕೆ ಡಿಸೆಂಬರ್ 31, 2022ರಂದು ಸೆನ್ಸಾರ್ ಮಾಡಲಾಗಿದೆ. ಹೀಗಾಗಿ, ಈ ಚಿತ್ರ ನ್ಯಾಷನಲ್ ಅವಾರ್ಡ್ಗೆ ಅರ್ಹತೆ ಪಡೆದಿತ್ತು. ಬ್ಲೆಸ್ಸಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ನಜೀಬ್ ಎಂಬ ವ್ಯಕ್ತಿಯ ನಿಜವಾದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಕೇರಳ ಮೂಲದ ಈ ವ್ಯಕ್ತಿ ಸೌದಿ ಅರೇಬಿಯಾಗೆ ಕೆಲಸಕ್ಕೆ ಹೋಗುತ್ತಾನೆ. ಅಲ್ಲಿ ಅವನನ್ನು ಮರಳುಗಾಡಲ್ಲಿ ಕುರಿ ಕಾಯಲು ಹಾಕುತ್ತಾರೆ. ಅಲ್ಲಿಂದ ಆತ ಹೇಗೆ ತಪ್ಪಿಸಿಕೊಂಡು ಬರುತ್ತಾನೆ ಎಂಬುದು ಚಿತ್ರದ ಕಥೆ.
ಇದನ್ನೂ ಓದಿ:ಉದ್ಘಾಟನೆಯಾಯ್ತು 16ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮಾ ಉತ್ಸವ, ಇಲ್ಲಿವೆ ಚಿತ್ರಗಳು
ಈ ಚಿತ್ರದಲ್ಲಿ ನಜೀಬ್ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರು ನಟಿಸಿದ್ದಾರೆ. ಅವರು ಹಲವು ದಿನ ಊಟ ಮಾಡದೆ ಕಳೆದ ಉದಾಹರಣೆಯೂ ಇದೆ. ಇದಕ್ಕಾಗಿ ಸಾಕಷ್ಟು ತೂಕವನ್ನು ಕೂಡ ಇಳಿಸಿಕೊಂಡಿದ್ದಾರೆ. ಈ ಸಿನಿಮಾಗೆ ಎಆರ್ ರೆಹಮಾನ್ ಸಂಗೀತ ಸಂಯೋಜನೆ ಇತ್ತು. ಹೀಗಾಗಿ, ‘ಆಡು ಜೀವಿತಂ’ ಸಿನಿಮಾಗೆ ಒಂದಾದರೂ ರಾಷ್ಟ್ರಪ್ರಶಸ್ತಿ ಸಿಗಬಬಹುದು ಎಂಬ ನಿರೀಕ್ಷೆ ಇತ್ತು. ಅತ್ಯುತ್ತಮ ನಟ, ಅತ್ಯುತ್ತಮ ಫೀಚರ್ ಸಿನಿಮಾ, ಅತ್ಯುತ್ತಮ ನಿರ್ದೇಶಕ ವಿಭಾಗದ ಅಡಿಯಲ್ಲಿ ಅವಾರ್ಡ್ ಸಿಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಈ ಚಿತ್ರವನ್ನು 2024ನೇ ಸಾಲಿಗೆ ಜೂರಿಗಳು ಪರಿಗಣಿಸಿರಬಹುದು ಎಂದು ಕೂಡ ಹೇಳಲಾಗುತ್ತಿದೆ.
ಪ್ರಕ್ರಿಯೆ ಹೇಗೆ?
ಹಿಂದಿನ ವರ್ಷದ ಜನವರಿ 1ರಿಂದ ಡಿಸೆಂಬರ್ 31ರವರೆಗೆ ಸೆನ್ಸಾರ್ ಮಂಡಳಿ ಪ್ರಮಾಣೀಕರಿಸಿದ ಚಲನಚಿತ್ರಗಳು ಅರ್ಹವಾಗಿರುತ್ತವೆ. ಚಲನಚಿತ್ರೋತ್ಸವಗಳ ನಿರ್ದೇಶನಾಲಯವು ನೇಮಿಸಿದ ತೀರ್ಪುಗಾರರ ತಂಡವು ಪ್ರಶಸ್ತಿಗಳನ್ನು ಘೋಷಿಸುತ್ತದೆ ಮತ್ತು ಭಾರತದ ರಾಷ್ಟ್ರಪತಿಗಳು ಪ್ರದಾನ ಮಾಡುತ್ತಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:22 pm, Sun, 3 August 25



