AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಮ್ಮೆಯಿಂದ ತಾಳಿ ಧರಿಸಿ ಬಂದ ರಶ್ಮಿಕಾ; ಸಿಂದೂರ ನೋಡಿ ಫ್ಯಾನ್ಸ್ ಖುಷ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈಗ ಸುತ್ತಾಟದಲ್ಲಿದ್ದಾರೆ. ಮದುವೆ ಬಳಿಕ ಹಲವು ಊರುಗಳಿಗೆ, ದೇವಸ್ಥಾನಗಳಿಗೆ ಅವರಿಬ್ಬರು ಜೊತೆಯಾಗಿ ಭೇಟಿ ನೀಡುತ್ತಿದ್ದಾರೆ. ಅವರಿಬ್ಬರ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ. ರಶ್ಮಿಕಾ ಲುಕ್ ಕೂಡ ಗಮನ ಸೆಳೆದಿದೆ.

ಹೆಮ್ಮೆಯಿಂದ ತಾಳಿ ಧರಿಸಿ ಬಂದ ರಶ್ಮಿಕಾ; ಸಿಂದೂರ ನೋಡಿ ಫ್ಯಾನ್ಸ್ ಖುಷ್
ವಿಜಯ್-ರಶ್ಮಿಕಾ
ಮದನ್​ ಕುಮಾರ್​
|

Updated on: Mar 04, 2026 | 5:16 PM

Share

ಮದುವೆ ಸಂಭ್ರಮದ ಸಲುವಾಗಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ (Vijay Deverakonda) ಅವರು ಸಿನಿಮಾ ಕೆಲಸಗಳಿಗೆ ಬ್ರೇಕ್ ನೀಡಿದ್ದಾರೆ. ಮದುವೆ ಬಳಿಕ ಅವರು ಅನೇಕ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಅವರು ಹೋದಲ್ಲೆಲ್ಲ ಜಗಸಾಗರ ಸೇರುತ್ತಿದೆ. ಇತ್ತೀಚೆಗೆ ಅವರು ತೆಲಂಗಾಣದ ವಿಜಯ್ ಅವರ ಹಳ್ಳಿಗೆ ಭೇಟಿ ನೀಡಿದ್ದರು. ಅಲ್ಲಿಂದ ಮರಳಿದ ಈ ಜೋಡಿ, ಹೈದರಾಬಾದ್‌ನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ. ಮದುವೆಯ ನಂತರ ರಶ್ಮಿಕಾ (Rashmika Mandanna) ಮುಖದಲ್ಲಿ ಕಳೆ ಎದ್ದು ಕಾಣುತ್ತಿದೆ. ಅಲ್ಲದೇ, ಅವರ ತಾಳಿ (Mangalsutra) ಮತ್ತು ಸಿಂದೂರ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.

ಮದುವೆ ಆಗಿದ್ದರೂ ಕೂಡ ಹಲವು ನಟಿಯರು ತಾಳಿ ಧರಿಸುವುದಿಲ್ಲ. ಆದರೆ ರಶ್ಮಿಕಾ ಮಂದಣ್ಣ ಅವರು ಆ ರೀತಿ ಅಲ್ಲ. ಬಹಳ ಹೆಮ್ಮೆಯಿಂದ ಅವರು ಮಂಗಳಸೂತ್ರ ಧರಿಸಿದ್ದಾರೆ. ಅಲ್ಲದೇ, ಅವರ ಹಣೆಯಲ್ಲಿ ಸಿಂದೂರ ಇಡಲಾಗಿದೆ. ವೈರಲ್ ಆಗಿರುವ ವಿಡಿಯೋಗಳನ್ನು ಗಮನಿಸಿದ ಅಭಿಮಾನಿಗಳು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಉದಯಪುರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇಷ್ಟು ದಿನಗಳ ಕಾಲ ತಮ್ಮ ಪ್ರೀತಿಯನ್ನು ಗುಟ್ಟಾಗಿ ಇಡಲು ಪ್ರಯತ್ನಿಸುತ್ತಿದ್ದ ಅವರು ಈಗ ಕೈಕೈ ಹಿಡಿದುಕೊಂಡು ಬರುತ್ತಿದ್ದಾರೆ. ಈ ಜೋಡಿಯ ಫೋಟೋಗಳು ಮತ್ತು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಫಾರ್ಮ್​ಹೌಸ್ ಪೂಜೆ ನಡೆದಿದೆ. ಮದುವೆಯಾದ ತಕ್ಷಣವೇ ಈ ದಂಪತಿ ತುಮ್ಮನ್​ಪೇಟೆಯಲ್ಲಿರುವ ಹೊಸ ಮನೆಯಲ್ಲಿ ಸತ್ಯನಾರಾಯಣ ಸ್ವಾಮಿ ವ್ರತ ಮತ್ತು ಗೃಹಪ್ರವೇಶ ಕಾರ್ಯಕ್ರಮವನ್ನು ನೆರವೇರಿಸಿದ್ದಾರೆ. ಮದುವೆಯ ನಂತರದ ಎಲ್ಲಾ ವಿಧಿವಿಧಾನಗಳನ್ನು ಈ ಜೋಡಿ ಅತ್ಯಂತ ಭಕ್ತಿಯಿಂದ ಮತ್ತು ಸಂಪ್ರದಾಯಬದ್ಧವಾಗಿ ಆಚರಿಸುತ್ತಿದೆ. ಉದಯಪುರದಿಂದ ಮರಳಿದ ನಂತರ ವಿಜಯ್ ಮತ್ತು ರಶ್ಮಿಕಾ ಅವರು ತಿರುಮಲ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಇದನ್ನೂ ಓದಿ: ಗಂಡನ ಊರಿನಲ್ಲಿ ರಶ್ಮಿಕಾಗೆ ಭರ್ಜರಿ ಸ್ವಾಗತ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಸಂಭ್ರಮ ಇಂದೂ (ಮಾರ್ಚ್ 4) ಮುಂದುವರಿಯಲಿದೆ. ಹೈದರಾಬಾದ್‌ನಲ್ಲಿ ದಕ್ಷಿಣ ಭಾರತದ ಸಿನಿ ಗಣ್ಯರಿಗಾಗಿ ಅದ್ದೂರಿ ಆರತಕ್ಷತೆ ಸಮಾರಂಭ ಆಯೋಜಿಸಲಾಗಿದೆ. ಆದರೆ, ಭದ್ರತೆಯ ದೃಷ್ಟಿಯಿಂದ ಕೇವಲ ಆಮಂತ್ರಣ ಪತ್ರಿಕೆ ಇದ್ದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದ್ದು, ಕಾರ್ಯಕ್ರಮವನ್ನು ಖಾಸಗಿಯಾಗಿ ಇರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಅಶ್ಲೀಲ ಕಮೆಂಟ್ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ಸಾಧ್ಯತೆ: ಶಾಕಿಂಗ್ ವಿಷಯ
ಅಶ್ಲೀಲ ಕಮೆಂಟ್ ಮಾಡಿದವರಿಗೆ 7 ವರ್ಷ ಜೈಲು ಶಿಕ್ಷೆ ಸಾಧ್ಯತೆ: ಶಾಕಿಂಗ್ ವಿಷಯ
ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್
ಇದೆಂಥಾ ಪ್ರಶ್ನೆ? ಪತ್ರಕರ್ತರ ಪ್ರಶ್ನೆಗೆ ಕೆರಳಿದ ಇಶಾನ್ ಕಿಶನ್
ಒಳಮೀಸಲಾತಿ ಜಟಾಪಟಿ: ಸಭೆಯಲ್ಲಿ ಮಹತ್ವದ ತೀರ್ಮಾನ
ಒಳಮೀಸಲಾತಿ ಜಟಾಪಟಿ: ಸಭೆಯಲ್ಲಿ ಮಹತ್ವದ ತೀರ್ಮಾನ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಆರ್​ ಅಶೋಕ್‌ ಹೇಳಿದ ಮನಕಲಕುವ ಸತ್ಯ ಘಟನೆಗೆ ಸದನವೇ ನಿಶ್ಯಬ್ದ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ಆರ್ಥಿಕ ಪ್ರಗತಿ ಮತ್ತು ಆಕಸ್ಮಿಕ ಧನಯೋಗ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ವೃಶ್ಚಿಕ ರಾಶಿಗೆ ಈ ವರ್ಷ ಹೇಗಿರಲಿದೆ?
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಅಂತಾರಾಷ್ಟ್ರೀಯ ಮಟ್ಟದ ಬಸ್​ ನಿಲ್ದಾಣ
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!
ಶಾರ್ಟ್​ ಸರ್ಕೂಟ್​ನಿಂದ ಹೊತ್ತಿ ಉರಿದ ಕೊಳ್ಳೇಗಾಲ ಸಿಪಿಐ ಕಚೇರಿ!
ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಮುಂದೇನಾಯಿತು ನೋಡಿ
ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಮುಂದೇನಾಯಿತು ನೋಡಿ