AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ಹಾವುಗಳು ಮನೆ ಸುತ್ತ ಬರದಂತೆ ತಡೆಯಲು ಈ ಸುರಕ್ಷಾತ ಕ್ರಮಗಳನ್ನು ಅನುಸರಿಸಲೇಬೇಕು

ಮಳೆಗಾಲದಲ್ಲಿ ವಾತಾವರಣವು ತುಂಬಾ ತಂಪಾಗಿರುತ್ತದೆ ಮತ್ತು ತೇವಯುಕ್ತವಾಗಿರುತ್ತದೆ. ಆದ್ದರಿಂದ ಹಾವುಗಳು ಬಿಲದಿಂದ ಹೊರಬಂದು ಬೆಚ್ಚಗಿನ ಸ್ಥಳವನ್ನು ಹುಡುಕುತ್ತಾ ಮನೆಗಳಿರುವ ಪ್ರದೇಶಗಳ ಬಳಿ ಬರುತ್ತವೆ. ಹೀಗೆ ಹಾವುಗಳು ಬರುತ್ತವೆ ಎಂದು ಬೆಳ್ಳುಳ್ಳಿ, ಬೇವಿನ ಎಣ್ಣೆ ಅಂತೆಲ್ಲಾ ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ. ಇವು ಅಷ್ಟು ಪರಿಣಾಮಕಾರಿಯಲ್ಲ. ಇದರ ಬದಲು ಈ ಕೆಲವೊಂದು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಹಾವುಗಳು ಮನೆಯೊಳಗೆ ಪ್ರವೇಶಿಸದಂತೆ ನೋಡಿಕೊಳ್ಳಿ.

ಮಳೆಗಾಲದಲ್ಲಿ ಹಾವುಗಳು ಮನೆ ಸುತ್ತ ಬರದಂತೆ ತಡೆಯಲು ಈ ಸುರಕ್ಷಾತ ಕ್ರಮಗಳನ್ನು ಅನುಸರಿಸಲೇಬೇಕು
ಸಾಂದರ್ಭಿಕ ಚಿತ್ರ Image Credit source: Getty Images
ಮಾಲಾಶ್ರೀ ಅಂಚನ್​
|

Updated on: Aug 02, 2026 | 4:53 PM

Share

ಮುಖ್ಯಾಂಶಗಳು

  • ಮಳೆಗಾಲದಲ್ಲಿ ಹಾವುಗಳ ಹಾವಳಿ ತೀರಾ ಹೆಚ್ಚಿರುತ್ತದೆ
  • ಮಳೆಗಾಲದಲ್ಲಿ ಹಾವುಗಳು ಮನೆಯೊಳಗೆ ಬರದಂತೆ ತಡೆಯಲು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಬೇಕು
  • ಹಾವುಗಳು ಬರದಂತೆ ನೋಡಿಕೊಳ್ಳಲು ಮನೆ ಸುತ್ತ ನೀರು ಸಂಗ್ರಹವಾಗದಂತೆ ಕಾಳಜಿ ವಹಿಸಿ

ಮಳೆಗಾಲದ ತಂಪಾದ ವಾತಾರಣ ಮನಸ್ಸಿಗೆ ಮುದ ನೀಡುವುದೇನೋ ನಿಜ ಆದರೆ ಈ ಸಮಯದಲ್ಲಿ ಸೊಳ್ಳೆ, ನೊಣ, ಕೀಟಗಳ ಕಾಟವೂ ಹೆಚ್ಚಾಗುತ್ತದೆ. ಹಾವುಗಳು (snake) ಕೂಡ ಇದಕ್ಕೆ ಹೊರತಿಲ್ಲ. ನಿರಂತರ ಮಳೆಯಿಂದಾಗಿ ಬಿಲಗಳು ಒದ್ದೆಯಾಗುತ್ತವೆ. ಆದ್ದರಿಂದ ಹಾವುಗಳು ಶುಷ್ಕ ಮತ್ತು ಸುರಕ್ಷಿತ ಸ್ಥಳವನ್ನು ಹಾಗೂ ಆಹಾರವನ್ನು ಹುಡುಕುತ್ತಾ ಜನವಸತಿ ಪ್ರದೇಶಗಳ ಬಳಿ ಹೋಗುತ್ತವೆ. ಮತ್ತು ಶೂ ಒಳಗೆ, ಹೆಲ್ಮೆಟ್‌ ಒಳಗೆ ಅವಿತು ಕುಳಿತುಬಿಡುತ್ತವೆ, ಇಲ್ಲವೇ ಮನೆಯೊಳಗೆಯೇ ಪ್ರವೇಶಿಸುತ್ತವೆ. ಹೀಗಿರುವಾಗ ಹೆಚ್ಚಿನವರು ಹಾವುಗಳು ಮನೆಯೊಳಗೆ ಬಾರದಂತೆ ನೋಡಿಕೊಳ್ಳಲು ಬೆಳ್ಳುಳ್ಳಿ, ಬೇವಿನ ಎಣ್ಣೆಯಂತಹ ಮನೆಮದ್ದುಗಳ ಮೊರೆ ಹೋಗುತ್ತಾರೆ. ಆದರೆ ಇವು ಅಷ್ಟೇನೂ ಪರಿಣಾಮಕಾರಿಯಲ್ಲ. ಈ ಮನೆಮದ್ದುಗಳ ಬದಲು ಈ ಕೆಲವೊಂದು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಹಾವುಗಳು ಮನೆ ಸುತ್ತ ಸುಳಿಯದಂತೆ ನೋಡಿಕೊಳ್ಳಬಹುದು.

ಹಾವುಗಳು ಮನೆಯೊಳಗೆ ಪ್ರವೇಶಿಸುವುದನ್ನು ತಡೆಯಲು ಪಾಲಿಸಬೇಕಾದ ಕ್ರಮಗಳು:

ಮನೆ ಮತ್ತು ಬಾಲ್ಕನಿಯಲ್ಲಿ ತ್ಯಾಜ್ಯ ಸಂಗ್ರಹವಾಗಲು ಬಿಡಬೇಡಿ: ಮಳೆಗಾಲದಲ್ಲಿ, ಹಳೆಯ ಮಡಕೆ, ಪಾಟ್‌ಗಳು, ಇಟ್ಟಿಗೆಗಳು, ರಟ್ಟಿನ ಪೆಟ್ಟಿಗೆಗಳನ್ನು ಬಾಲ್ಕನಿ ಮತ್ತು ಮನೆಯ ಹೊರ ಭಾಗದಲ್ಲಿ ಸಂಗ್ರಹಿಸಡಬೇಡಿ, ಜೊತೆಗೆ ಮರದಿಂದ ಬಿದ್ದಂತಹ ಒಣ ಎಲೆಗಳನ್ನು ಅಂಗಳದಲ್ಲಿ ಸಂಗ್ರಹವಾಗಲು ಬಿಡಬೇಡಿ. ಹೀಗೆ ತ್ಯಾಜ್ಯಗಳನ್ನು ಅಲ್ಲಲ್ಲಿ ಸಂಗ್ರಹಿಸುವುದರಿಂದ ಹಾವುಗಳು ತ್ಯಾಜ್ಯಗಳ ಒಳಗೆ ಬಂದು ಅವಿತುಕೊಳ್ಳುತ್ತವೆ. ಆದ್ದರಿಂದ, ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಮತ್ತು ಅನಗತ್ಯ ವಸ್ತುಗಳನ್ನು ತೆಗೆದುಹಾಕಿ, ಬಾಲ್ಕನಿ, ಮನೆ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಸಿ. ಜೊತೆಗೆ  ನಿಮ್ಮ ಮನೆ ಬಾಲ್ಕನಿ ಅಥವಾ ಟೆರೇಸ್‌ನಲ್ಲಿ ನೀವು ಗಿಡಗಳಿದ್ದರೆ ಅವುಗಳ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಡಿ ಮತ್ತು ಅತಿಯಾದ ಹುಲ್ಲು ಅಥವಾ ಬಳ್ಳಿಗಳು ಬೆಳೆಯದಂತೆ ನೋಡಿಕೊಳ್ಳಿ. ನಿಮ್ಮ ತೋಟ ಅಥವಾ ಅಂಗಳದಲ್ಲಿ ನಿಯಮಿತವಾಗಿ ಹುಲ್ಲು ಕತ್ತರಿಸುತ್ತಿರಿ. ಯಾವಾಗಲೂ ಕಸವನ್ನು ಮುಚ್ಚಿಡಿ ಮತ್ತು ಆಗಾಗ್ಗೆ ವಿಲೇವಾರಿ ಮಾಡಿ.

ಮನೆಯಲ್ಲಿ ಬಿರುಬಿಟ್ಟ ಸ್ಥಳಗಳನ್ನು ಮುಚ್ಚಿ:  ಸಣ್ಣ ರಂಧ್ರಗಳು ಮತ್ತು ಬಿರುಕುಗಳು ಸಹ ಹಾವುಗಳ ಸಂತಾನೋತ್ಪತ್ತಿಯ ಸ್ಥಳವಾಗಬಹುದು. ಬಾಗಿಲುಗಳ ಕೆಳಗಿನ ಅಂತರಗಳು, ಗೋಡೆಗಳಲ್ಲಿನ ಬಿರುಕುಗಳು, ಒಳಚರಂಡಿ ಹೊರಹರಿವುಗಳು ಇವೆಲ್ಲದ ಮೂಲಕವೂ ಹಾವುಗಳು ಪ್ರವೇಶಿಸಬಹುದು. ಆದ್ದರಿಂದ ಬಿರುಕುಬಿಟ್ಟ ಗೋಡೆಗಳನ್ನು ಮುಚ್ಚಿ, ಯಾವಾಗಲೂ ಕಿಟಕಿ ಬಾಗಿಲುಗಳನ್ನು ಮುಚ್ಚಿಡಿ.

ನೀರು ಸಂಗ್ರಹವಾಗಲು ಬಿಡಬೇಡಿ: ಮಳೆಗಾಲದಲ್ಲಿ ಮಡಿಕೆ, ಬಕೆಟ್‌ಗಳು, ಟೈರ್‌ಗಳು ಅಥವಾ ಇತರ ಪಾತ್ರೆಗಳಲ್ಲಿ ನೀರು ಸಂಗ್ರಹವಾಗುವುದು ಸಾಮಾನ್ಯ. ಇದರಲ್ಲಿ ಸೊಳ್ಳೆಗಳನ್ನು ಸಂತಾನೋತ್ಪತ್ತಿ ಮಾಡುವುದಲ್ಲದೆ, ಇದು  ಕಪ್ಪೆಗಳು ಮತ್ತು ಕೀಟಗಳನ್ನು ಸಹ ಆಕರ್ಷಿಸುತ್ತದೆ. ಹಾವುಗಳು ಈ ಜೀವಿಗಳನ್ನು ಬೇಟೆಯಾಡುವುದರಿಂದ, ಅವು ಆಹಾರವನ್ನರಸುತ್ತಾ ನಿಮ್ಮ ಮನೆ ಬಳಿಯೂ ಬರಬಹುದು. ಆದ್ದರಿಂದ ಮನೆ ಸುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಿ. ಆದಷ್ಟು ಮನೆ ಸುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಿ.  ಇದಲ್ಲದೆ ಇಲಿಗಳು ಇದ್ದರೂ ಹಾವುಗಳು ಬರುತ್ತದೆ. ಆದ್ದರಿಂದ ಸಾಕುಪ್ರಾಣಿಗಳ ಆಹಾರವನ್ನು ತೆರೆದ ಸ್ಥಳದಲ್ಲಿ ಇಡುವುದನ್ನು ತಪ್ಪಿಸಿ, ಕಸದ ಡಬ್ಬಿಗಳನ್ನು ಮುಚ್ಚಿಡಿ, ಯಾವುದೇ ಇಲಿ ಸಮಸ್ಯೆಗಳನ್ನು ತಕ್ಷಣ ಪರಿಹರಿಸಿ.

ಇದನ್ನೂ ಓದಿ: ಮಹಿಳೆಯರೇ… ಬೆಳಗೆದ್ದು ಅಡುಗೆ ಮನೆ ಸ್ವಚ್ಛಗೊಳಿಸುವಾಗ ಕ್ರಮಗಳನ್ನು ಅನುಸರಿಸಿ

ಮರಗಳ ಕೊಂಬೆಗಳು ಮತ್ತು ಬಳ್ಳಿಗಳನ್ನು ಸಮಯಕ್ಕೆ ಸರಿಯಾಗಿ ಕತ್ತರಿಸಿ: ಮರದ ಕೊಂಬೆಗಳು ನಿಮ್ಮ ಬಾಲ್ಕನಿ ಅಥವಾ ಟೆರೇಸ್ ತಲುಪಿದರೆ, ಅಥವಾ ನಿಮ್ಮ ಗೋಡೆಗಳ ಮೇಲೆ ದಟ್ಟವಾದ ಬಳ್ಳಿಗಳು ಬೆಳೆಯುತ್ತಿದ್ದರೆ, ಅವುಗಳನ್ನು ಕತ್ತರಿಸಬೇಕು. ಇಲ್ಲದಿದ್ದರೆ ಆ ಕೊಂಬೆಗಳು, ಬಳ್ಳಿಯ ಮೂಲಕ ಹಾವುಗಳು ನಿಮ್ಮ ಮನೆಯೊಳಗೆ ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಯಾವುದೇ ಕೊಂಬೆಗಳು ಅಥವಾ ಬಳ್ಳಿಗಳು ನಿಮ್ಮ ಮನೆಯ ಟೆರೇಸ್‌ ಅಥವಾ ಗೋಡೆಗಳನ್ನು ಮುಟ್ಟದಂತೆ ನೋಡಿಕೊಳ್ಳಿ.

ಬೆಳಕಿನ ಬಗ್ಗೆಯೂ ಕಾಳಜಿ ವಹಿಸಿ: ಹಾವುಗಳು ಕತ್ತಲೆ ಮತ್ತು ತೇವಾಂಶವುಳ್ಳ ಸ್ಥಳಗಳನ್ನು ಬಯಸುತ್ತವೆ. ನಿಮ್ಮ ಮನೆಯ ಒಳಗೆ ಮತ್ತು ಹೊರಗೆ, ವಿಶೇಷವಾಗಿ ರಾತ್ರಿಯಲ್ಲಿ ದೀಪಗಳನ್ನು ಆನ್ ಮಾಡಿಡಿ. ಇದು ಹಾವುಗಳು ನಿಮ್ಮ ಮನೆಸುತ್ತ ಸುಳಿಯದಂತೆ ನೋಡಿಕೊಳ್ಳುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us