
Rashmika Mandanna
ರಶ್ಮಿಕಾ ಮಂದಣ್ಣ ಕನ್ನಡ, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಟಿ. 1996ರ ಏಪ್ರಿಲ್ 5ರಂದು ಕರ್ನಾಟಕದ ವಿರಾಜಪೇಟೆಯಲ್ಲಿ ಜನಿಸಿದರು. 2016ರ ಕನ್ನಡ ಸಿನಿಮಾ ‘ಕಿರಿಕ್ ಪಾರ್ಟಿ’ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಈ ಸಿನಿಮಾ ವ್ಯಾಪಕ ಮನ್ನಣೆ ಮತ್ತು ಪುರಸ್ಕಾರಗಳನ್ನು ಪಡೆಯಿತು. ಅವರ ನಟನೆಯು ಇಷ್ಟ ಆಯಿತು. ಅವರು ಕರ್ನಾಟಕ ಕ್ರಶ್ ಆದರು. ‘ಗೀತ ಗೋವಿಂದಂ’, ‘ಪುಷ್ಪ’ ಸೇರಿ ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಅನಿಮಲ್’ ಚಿತ್ರದಿಂದ ಅವರಿಗೆ ಬಾಲಿವುಡ್ನಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಇದಲ್ಲದೆ ತಮಿಳು ಚಿತ್ರರಂಗದಲ್ಲೂ ಅವರಿಗೆ ಸಖತ್ ಬೇಡಿಕೆ ಇದೆ. ಅವರ ಇನ್ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಿದೆ. ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ಡೇಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ಇಲ್ಲ.
ಸಲ್ಮಾನ್ ಖಾನ್ ಸಿನಿಮಾದಲ್ಲಿ ಕಂತೆ ಕಂತೆ ನಕಲಿ ನೋಟು ಬಳಕೆ; ಇಲ್ಲಿದೆ ಸಾಕ್ಷಿ
ಬಿಡುಗಡೆಗೂ ಮುನ್ನವೇ ‘ಸಿಕಂದರ್’ ಸಿನಿಮಾ ಟ್ರೋಲ್ ಆಗುತ್ತಿದೆ. ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ನಟನೆಯ ಈ ಚಿತ್ರ ಈದ್ ಪ್ರಯುಕ್ತ ತೆರೆಕಾಣಲಿದೆ. ಅನುಭವಿ ನಿರ್ದೇಶಕ ಎ.ಆರ್. ಮುರುಗದಾಸ್ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಈ ಚಿತ್ರದ ದೃಶ್ಯದಲ್ಲಿ ನಕಲಿ ನೋಟುಗಳು ಬಳಕೆ ಆಗಿರುವುದನ್ನು ನೆಟ್ಟಿಗರು ಪತ್ತೆ ಹಚ್ಚಿದ್ದಾರೆ.
- Madan Kumar
- Updated on: Mar 26, 2025
- 6:32 pm
ಪಬ್ಲಿಕ್ನಲ್ಲಿ ಡ್ಯಾನ್ಸ್ ಮಾಡೋ ಕೋರಿಕೆ ಇಟ್ಟ ಅಭಿಮಾನಿ; ರಶ್ಮಿಕಾ ಉತ್ತರ ಏನು?
ರಶ್ಮಿಕಾ ಮಂದಣ್ಣ ಅವರ ಹೊಸ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಅಭಿಮಾನಿಯೊಬ್ಬ ಅವರ ಮುಂದೆ ಡ್ಯಾನ್ಸ್ ಮಾಡಿ, ರಶ್ಮಿಕಾಗೂ ನೃತ್ಯಕ್ಕೆ ಆಹ್ವಾನಿಸಿದ್ದಾರೆ. ರಶ್ಮಿಕಾ ಅವರು ನೇರವಾಗಿ ನಿರಾಕರಿಸಿದರೂ, ಅಭಿಮಾನಿಯ ಉತ್ಸಾಹವನ್ನು ಮೆಚ್ಚಿ ಪ್ರತಿಕ್ರಿಯಿಸಿದ್ದಾರೆ. ಇದು ಅವರ ಸ್ವಭಾವ ಹೇಗಿದೆ ಎಂಬುದನ್ನು ತೋರಿಸುತ್ತದೆ.
- Shreelaxmi H
- Updated on: Mar 25, 2025
- 8:30 am
ರಶ್ಮಿಕಾಗೆ ನ್ಯಾಷನಲ್ ಕ್ರಶ್ ಎಂದಿದ್ದ ಹಿಂದಿ ಪ್ರೇಕ್ಷಕರೇ ಈಗ ತಿರುಗಿ ಬಿದ್ರು; ಟ್ರೋಲ್ ಶುರು
‘ಸಿಕಂದರ್’ ಟ್ರೇಲರ್ನಲ್ಲಿ ರಶ್ಮಿಕಾ ಮಂದಣ್ಣ ನಟನೆ ನೋಡಿ ಅನೇಕರು ಟೀಕೆ ಮಾಡುತ್ತಿದ್ದಾರೆ. ಅವರಿಗೆ ಸರಿಯಾಗಿ ಲಿಪ್ ಸಿಂಕ್ ಕೂಡ ಮಾಡಲು ಬಂದಿಲ್ಲ ಎಂದು ಟ್ರೋಲ್ ಮಾಡಲಾಗುತ್ತಿದೆ. ಇನ್ನು, ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ತಂದೆ-ಮಗಳ ರೀತಿ ಕಾಣುತ್ತಿದೆ ಎಂದು ನೆಟ್ಟಿಗರು ಜರಿದಿದ್ದಾರೆ.
- Madan Kumar
- Updated on: Mar 24, 2025
- 8:47 pm
Sikandar Trailer: ಮಾಸ್ ಅವತಾರದಲ್ಲಿ ಸಲ್ಮಾನ್ ಖಾನ್; ಕ್ಯೂಟ್ ಆಗಿ ಕಾಣಿಸಿದ ರಶ್ಮಿಕಾ
ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅವರ ‘ಸಿಕಂದರ್’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಸಲ್ಮಾನ್ ಮಾಸ್ ಅವತಾರದಲ್ಲಿ, ರಶ್ಮಿಕಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್, ಲವ್ ಸ್ಟೋರಿ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಒಳಗೊಂಡ ಈ ಚಿತ್ರ ಮಾರ್ಚ್ 30 ರಂದು ತೆರೆ ಕಾಣಲಿದೆ.
- Web contact
- Updated on: Mar 24, 2025
- 8:21 am
‘ರಶ್ಮಿಕಾ ಅಪ್ಪನಿಗೆ ಇಲ್ಲದೆ ತೊಂದರೆ ನಿಮಗೇಕೆ’; ಸಲ್ಮಾನ್ ಖಾನ್ ನೇರ ಪ್ರಶ್ನೆ
ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ಸಿಕಂದರ್' ಚಿತ್ರದ ಟ್ರೈಲರ್ ಬಿಡುಗಡೆಯಾಯಿತು. ಸಲ್ಮಾನ್ ಮತ್ತು ರಶ್ಮಿಕಾ ಅವರ ವಯಸ್ಸಿನ ಅಂತರದ ಬಗ್ಗೆ ಟ್ರೋಲಿಂಗ್ ನಡೆದಿದ್ದರೂ, ಸಲ್ಮಾನ್ ರಶ್ಮಿಕಾ ಅವರ ತ್ಯಾಗವನ್ನು ಶ್ಲಾಘಿಸಿದರು. ರಶ್ಮಿಕಾ 'ಪುಷ್ಪ 2' ಮತ್ತು 'ಸಿಕಂದರ್' ಚಿತ್ರಗಳ ಚಿತ್ರೀಕರಣದಲ್ಲಿ ಏಕಕಾಲದಲ್ಲಿ ಭಾಗವಹಿಸಿದ್ದರು ಎಂದು ಸಲ್ಮಾನ್ ಹೇಳಿದರು.
- Shreelaxmi H
- Updated on: Mar 24, 2025
- 7:50 am
ವಿಜಯ್ ದೇವರಕೊಂಡಗೆ ರಶ್ಮಿಕಾ ಪ್ರೀತಿಯಿಂದ ಏನೆಂದು ಕರೆಯುತ್ತಾರೆ?
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ನಡುವಿನ ಸಂಬಂಧದ ಬಗ್ಗೆ ಇತ್ತೀಚೆಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ರಶ್ಮಿಕಾ ಅವರು ವಿಜಯ್ ಅವರನ್ನು ಪ್ರೀತಿಯಿಂದ ಏನೆಂದು ಕರೆಯುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ. "ಗೀತ ಗೋವಿಂದ" ಮತ್ತು "ಡಿಯರ್ ಕಾಮ್ರೇಡ್" ಚಿತ್ರಗಳ ನಂತರ ಅವರ ನಡುವೆ ಬಾಂಡಿಂಗ್ ಹೆಚ್ಚಾಗಿದೆ.
- Shreelaxmi H
- Updated on: Mar 18, 2025
- 7:53 am
‘ಪುಷ್ಪ 3’ ಚಿತ್ರಕ್ಕಾಗಿ ಎಷ್ಟು ವರ್ಷ ಕಾಯಬೇಕು? ಸಂಪೂರ್ಣ ಮಾಹಿತಿ ಕೊಟ್ಟ ನಿರ್ಮಾಪಕ
‘ಪುಷ್ಪ 2’ ಚಿತ್ರದ ಬೃಹತ್ ಯಶಸ್ಸಿನ ನಂತರ, ‘ಪುಷ್ಪ 3’ ಚಿತ್ರದ ಬಗ್ಗೆ ಅಭಿಮಾನಿಗಳು ಉತ್ಸುಕರಾಗಿದ್ದಾರೆ. ನಿರ್ಮಾಪಕ ರವಿ ಶಂಕರ್ ಅವರು 2028 ರ ವೇಳೆಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮುಖ್ಯ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ.
- Rajesh Duggumane
- Updated on: Mar 17, 2025
- 3:59 pm
ಸತತ 3 ಸಿನಿಮಾ 500 ಕೋಟಿ ರೂ. ಕಲೆಕ್ಷನ್! ಯಾವ ನಟಿಯರೂ ಮಾಡಿರದ ಸಾಧನೆ ಮಾಡಿದ ರಶ್ಮಿಕಾ
ನಟಿ ರಶ್ಮಿಕಾ ಮಂದಣ್ಣ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದೆ. ಅವರು ನಟಿಸಿದ ‘ಅನಿಮಲ್’, ‘ಪುಷ್ಪ 2’, ‘ಛಾವ’ ಸಿನಿಮಾಗಳು ತಲಾ 500 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿವೆ. ಹೀಗೆ ಸತತ ಮೂರು ಸಿನಿಮಾಗಳಲ್ಲಿ 500 ಕೋಟಿ ರೂಪಾಯಿ ಸಕ್ಸಸ್ ಕಂಡ ಏಕೈಕ ನಟಿ ಎಂದರೆ ಅದು ರಶ್ಮಿಕಾ ಮಂದಣ್ಣ.
- Madan Kumar
- Updated on: Mar 9, 2025
- 9:15 pm
ಇನ್ನೂ ತಗ್ಗಿಲ್ಲ ‘ಛಾವ’ ಹವಾ; 23ನೇ ದಿನವೂ 13 ಕೋಟಿ ರೂ. ಕಲೆಕ್ಷನ್; ಒಟ್ಟು 516 ಕೋಟಿ ರೂ!
2025ರ ಅತಿ ದೊಡ್ಡ ಸಕ್ಸಸ್ ಸಿಕ್ಕಿರುವುದು ‘ಛಾವ’ ಸಿನಿಮಾಗೆ. ಈ ಚಿತ್ರದ ಕಲೆಕ್ಷನ್ 516 ಕೋಟಿ ರೂಪಾಯಿ ಮೀರಿದೆ. ಸಿನಿಮಾ ತೆರೆಕಂಡು 24 ದಿನಗಳು ಕಳೆದಿದ್ದರೂ ಕೂಡ ಪ್ರತಿ ದಿನ ಬಹುಕೋಟಿ ರೂಪಾಯಿ ಕಲೆಕ್ಷನ್ ಆಗುತ್ತಿದೆ. ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಕ್ಷಯ್ ಖನ್ನಾ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
- Madan Kumar
- Updated on: Mar 9, 2025
- 3:04 pm
ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋ ನಾಯಕಿಯರು ಇವರೇ ನೋಡಿ
ದಕ್ಷಿಣ ಭಾರತದ ಚಿತ್ರರಂಗದಲ್ಲಿ ರಶ್ಮಿಕಾ ಮಂದಣ್ಣ, ತ್ರಿಷಾ, ನಯನತಾರಾ, ಸಮಂತಾ ಮತ್ತು ಸಾಯಿ ಪಲ್ಲವಿ ಅವರಂತಹ ನಟಿಯರು ಅಪಾರ ಜನಪ್ರಿಯತೆ ಮತ್ತು ಯಶಸ್ಸನ್ನು ಗಳಿಸಿದ್ದಾರೆ. ಈ ನಟಿಯರು ತಮ್ಮ ಚಲನಚಿತ್ರಗಳಿಗೆ ಅಗಾಧವಾದ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಈ ಲೇಖನವು 2025ರ ವೇಳೆಗೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.
- Shreelaxmi H
- Updated on: Mar 7, 2025
- 8:31 am