AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿಮ್ಮನ್ನು ಸ್ವತಂತ್ರ್ಯಗೊಳಿಸುವ ಪ್ರೀತಿಯನ್ನು ಕಂಡುಕೊಳ್ಳಿ’; ರಶ್ಮಿಕಾ ಭಾವುಕ ಪೋಸ್ಟ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ವಿವಾಹದ ಬಳಿಕ ನಟನೆಯಿಂದ ವಿರಾಮ ತೆಗೆದುಕೊಂಡಿದ್ದಾರೆ. ಈ ಸಂದರ್ಭದಲ್ಲಿ, ರಶ್ಮಿಕಾ "ನಿಮ್ಮನ್ನು ಸ್ವತಂತ್ರಗೊಳಿಸುವ ಪ್ರೀತಿಯನ್ನು ಕಂಡುಕೊಳ್ಳಿ" ಎಂಬ ಭಾವುಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರು ಅವರ ಬಗ್ಗೆ ಬರೆದ ಟ್ವೀಟ್‌ನಿಂದ ಪ್ರೇರಿತರಾದ ರಶ್ಮಿಕಾ, ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.

‘ನಿಮ್ಮನ್ನು ಸ್ವತಂತ್ರ್ಯಗೊಳಿಸುವ ಪ್ರೀತಿಯನ್ನು ಕಂಡುಕೊಳ್ಳಿ’; ರಶ್ಮಿಕಾ ಭಾವುಕ ಪೋಸ್ಟ್
ವಿಜಯ್-ರಶ್ಮಿಕಾ
ರಾಜೇಶ್ ದುಗ್ಗುಮನೆ
|

Updated on: Mar 10, 2026 | 7:45 AM

Share

ರಶ್ಮಿಕಾ ಮಂದಣ್ಣ (Rashmika Mandanna) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ವಿಜಯ್ ದೇವರಕೊಂಡ ಅವರನ್ನು ವಿವಾಹ ಆಗುವ ಮೂಲಕ ಅವರು ಎಲ್ಲರ ಗಮನ ಸೆಳೆದರು. ಈಗ ರಶ್ಮಿಕಾ-ವಿಜಯ್ ನಟನೆಯಿಂದ ಒಂದು ಬ್ರೇಕ್ ಪಡೆದುಕೊಂಡಿದ್ದು, ಹಾಯಾಗಿ ಸುತ್ತಾಡುತ್ತಿದ್ದಾರೆ. ಈ ಮಧ್ಯೆ ರಶ್ಮಿಕಾ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಸಂದೇಶ ನೀಡಿದ್ದಾರೆ. ‘ನಿಮ್ಮನ್ನು ಸ್ವತಂತ್ರ್ಯಗೊಳಿಸುವ ಪ್ರೀತಿ ಹುಡುಕಿಕೊಳ್ಳಿ’ ಎಂದು ಅವರು ಹೇಳಿದ್ದಾರೆ.

ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅದ್ದೂರಿಯಾಗಿ ವಿವಾಹ ಆದರು. ಮದುವೆ ಬಳಿಕ ವಿಜಯ್ ಹುಟ್ಟೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಹೈದರಾಬಾದ್​​ನಲ್ಲಿಯೂ ಆರತಕ್ಷತೆ ಮಾಡಲಾಯಿತು. ಈಗ ರಶ್ಮಿಕಾಗೋಸ್ಕರ ಪ್ರೀತಿಯ ಸಂದೇಶವನ್ನು ಒಬ್ಬರು ಬರೆದುಕೊಂಡಿದ್ದರು. ಇದು ರಶ್ಮಿಕಾ ಅವರನ್ನು ಭಾವನಾತ್ಮಕವಾಗಿಸಿತು.

ಇದನ್ನೂ ಓದಿ: ವಿವಾಹದ ಬೆನ್ನಲ್ಲೇ ರಶ್ಮಿಕಾ ಮಂದಣ್ಣಗೆ ಸಿಕ್ತು ಸಿಹಿ ಸುದ್ದಿ; ಸಿಕ್ತು ಅವಾರ್ಡ್

ಧಾಮಿನಿ ಎಂಬುವವರು ರಶ್ಮಿಕಾ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಈ ಟ್ವೀಟ್​​ನ ರಶ್ಮಿಕಾ ರೀಟ್​ವೀಟ್ ಮಾಡಿದ್ದಾರೆ. ‘ಇಷ್ಟು ದಿನ ನನ್ನ ಬಗ್ಗೆ ಬರೆದದ್ದನ್ನು ಓದಿ ನಾನು ಇಷ್ಟೊಂದು ಭಾವನಾತ್ಮಕವಾಗಿ ವರ್ತಿಸಿಲ್ಲ. ನಾನು ಹೇಳಲು ಬಯಸುವುದು ಬಹಳಷ್ಟಿದೆ. ಆದರೆ ನಾನು ಹೇಳೋದು ತುಂಬಾ ಕಡಿಮೆ. ನಾನು ನನ್ನದೇ ಆದ ಜಾಗವನ್ನು ಹುಡುಕುತ್ತಿದ್ದೆ. ಅದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಅದನ್ನು ಗುರುತಿಸಿದ್ದಕ್ಕಾಗಿ ಧನ್ಯವಾದಗಳು. ಪ್ರೀತಿಯ ಬಗ್ಗೆ ನಾನು ಹೇಳುವುದು ಇಷ್ಟೇ, ‘ನಿಮ್ಮನ್ನು ಮುಕ್ತಗೊಳಿಸುವ ಅಥವಾ ಸ್ವತಂತ್ರಗೊಳಿಸುವ ಪ್ರೀತಿಯನ್ನು ಕಂಡುಕೊಳ್ಳಿ’ ಎಂದು ಅವರು ಬರೆದುಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ಅಭಿಮಾನಿಗಳು ಬರೆಯುವ ಕಮೆಂಟ್ ಹಾಗೂ ಪೋಸ್ಟ್​​ಗಳನ್ನು ಓದುತ್ತಾರಂತೆ. ಈ ಕಾರಣದಿಂದಲೇ ಧಾಮಿನಿ ಅವರು ಬರೆದ ಪೋಸ್ಟ್​​ನ ರಶ್ಮಿಕಾ ಓದಿದ್ದರು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us