Dream Science: ಕನಸಿನಲ್ಲಿ ಕೊಳಕು ಅಥವಾ ಹರಿದ ಬಟ್ಟೆ ಧರಿಸಿದಂತೆ ಕಂಡರೆ ಏನರ್ಥ? ಸ್ವಪ್ನ ಶಾಸ್ತ್ರ ಹೇಳುವುದೇನು?
ಕನಸಿನಲ್ಲಿ ಕೊಳಕು ಅಥವಾ ಹರಿದ ಬಟ್ಟೆ ಕಂಡರೆ ಏನರ್ಥ? ನಿದ್ದೆಯಲ್ಲಿ ಬೀಳುವ ಪ್ರತಿಯೊಂದು ಕನಸಿಗೂ ತನ್ನದೇ ಆದ ಸಕಾರಾತ್ಮಕ ಅಥವಾ ನಕಾರಾತ್ಮಕ ಅರ್ಥವಿರುತ್ತದೆ ಎಂದು ಸ್ವಪ್ನ ಶಾಸ್ತ್ರ ಹೇಳುತ್ತದೆ. ಕನಸಿನಲ್ಲಿ ಕೊಳಕು ಬಟ್ಟೆ ಧರಿಸುವುದು ನಿಮ್ಮ ಗೌರವ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಬೀರುವ ಪ್ರಭಾವವೇನು? ಯಾವ ಕನಸು ಶುಭ, ಯಾವುದು ಅಶುಭ? ಸಂಪೂರ್ಣ ಮಾಹಿತಿ ಇಲ್ಲಿದೆ.

ಸ್ವಪ್ನ ಶಾಸ್ತ್ರದ (Dream Science) ಪ್ರಕಾರ, ಒಬ್ಬ ವ್ಯಕ್ತಿಯು ನಿದ್ದೆಯಲ್ಲಿ ಕಾಣುವ ಪ್ರತಿಯೊಂದು ಕನಸೂ ಆತನ ಭವಿಷ್ಯದಲ್ಲಿ ನಡೆಯಬಹುದಾದ ಶುಭ ಅಥವಾ ಅಶುಭ ಘಟನೆಗಳ ಸಂಕೇತವಾಗಿರುತ್ತದೆ. ಕೆಲವು ಕನಸುಗಳು ಮನಸ್ಸಿಗೆ ಮುದ ನೀಡಿದರೆ, ಇನ್ನು ಕೆಲವು ಆತಂಕವನ್ನು ಹುಟ್ಟುಹಾಕುತ್ತವೆ. ಅನೇಕ ಬಾರಿ ಜನರು ತಮ್ಮ ಕನಸಿನಲ್ಲಿ ಕೊಳಕು ಅಥವಾ ಹರಿದ ಬಟ್ಟೆಗಳನ್ನು ಧರಿಸಿದಂತೆ ಕಾಣುತ್ತಾರೆ. ಅಂತಹ ಕನಸುಗಳು ಶುಭವೇ ಅಥವಾ ಅಶುಭವೇ? ಅವು ಭವಿಷ್ಯದ ಬಗ್ಗೆ ಯಾವ ರೀತಿಯ ಎಚ್ಚರಿಕೆಯನ್ನು ನೀಡುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಕೊಳಕು ಬಟ್ಟೆ ಧರಿಸಿದಂತೆ ಕನಸು ಬಿದ್ದರೆ ಎಚ್ಚರ ವಹಿಸಿ:
ಕನಸಿನಲ್ಲಿ ಕೊಳಕು ಅಥವಾ ಮಲಿನವಾದ ಬಟ್ಟೆಗಳನ್ನು ಧರಿಸಿರುವಂತೆ ನಿಮ್ಮನ್ನು ನೀವೇ ಕಂಡರೆ, ಅದನ್ನು ಸ್ವಪ್ನ ಶಾಸ್ತ್ರದಲ್ಲಿ ಮಂಗಳಕರ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಈ ಕನಸು ನೀವು ಭವಿಷ್ಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂಬುದನ್ನು ಸೂಚಿಸುತ್ತದೆ. ನಿಮ್ಮ ನಡವಳಿಕೆ ಅಥವಾ ಸಮಾಜದಲ್ಲಿ ನಿಮ್ಮ ಗೌರವ-ಖ್ಯಾತಿಗೆ ಧಕ್ಕೆ ಬರಬಹುದು ಎಂಬುದರ ಮುನ್ಸೂಚನೆ ಇದಾಗಿದೆ. ಜೊತೆಗೆ, ನಿಮಗೆ ಅತ್ಯಂತ ಹತ್ತಿರವಿರುವವರಿಂದಲೇ ನೋವು ಅನುಭವಿಸುವ ಸಾಧ್ಯತೆಯಿರುತ್ತದೆ.
ಹರಿದ ಬಟ್ಟೆ ಕಾಣುವುದು ಆರ್ಥಿಕ ನಷ್ಟದ ಮುನ್ಸೂಚನೆ:
ನೀವು ಹರಿದ ಬಟ್ಟೆಗಳನ್ನು ಧರಿಸಿರುವಂತೆ ಕನಸು ಬಿದ್ದರೆ, ಅದು ಕೂಡ ಅಶುಭ ಸಂಕೇತವಾಗಿದೆ. ಇದು ಮುಖ್ಯವಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡಬಹುದು ಎಂಬುದನ್ನು ಸೂಚಿಸುತ್ತದೆ. ಅನಗತ್ಯ ವೆಚ್ಚಗಳು ಹೆಚ್ಚಾಗುವುದು, ಕೈಗೊಂಡ ಪ್ರಮುಖ ಕೆಲಸಗಳು ಅಥವಾ ಯೋಜನೆಗಳು ವಿಫಲವಾಗುವುದು ಈ ಕನಸಿನ ಸಂಕೇತ. ಆದ್ದರಿಂದ ಹಣಕಾಸಿನ ವಹಿವಾಟು ಹಾಗೂ ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಇನ್ನು ಬೇರೊಬ್ಬ ವ್ಯಕ್ತಿ ಕೊಳಕು ಬಟ್ಟೆಯಲ್ಲಿ ಕಾಣಿಸಿಕೊಂಡರೆ, ನಿಮ್ಮ ಸುತ್ತಮುತ್ತಲಿನ ಜನರ ಬಗ್ಗೆ ಜಾಗರೂಕರಾಗಿರಬೇಕು ಎಂದರ್ಥ.
ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ
ಬಟ್ಟೆ ಒಗೆಯುತ್ತಿರುವ ಕನಸು ಬಿದ್ದರೆ ಸಕಾರಾತ್ಮಕ ಬದಲಾವಣೆ:
ಕನಸಿನಲ್ಲಿ ಕೊಳಕು ಬಟ್ಟೆಗಳನ್ನು ಕಾಣುವುದು ಅಶುಭವಾದರೂ, ನೀವು ಬಟ್ಟೆಗಳನ್ನು ಒಗೆಯುತ್ತಿರುವಂತೆ (ತೊಳೆಯುತ್ತಿರುವಂತೆ) ಕನಸು ಕಂಡರೆ ಅದನ್ನು ಅತ್ಯಂತ ಶುಭ ಮತ್ತು ಸಕಾರಾತ್ಮಕ ಎಂದು ಪರಿಗಣಿಸಲಾಗುತ್ತದೆ. ನಿಮ್ಮ ಜೀವನದಲ್ಲಿ ಸುದೀರ್ಘ ಕಾಲದಿಂದ ಇದ್ದ ಸಮಸ್ಯೆಗಳು, ಮನಃಶಾಂತಿ ಕೆಡಿಸಿದ್ದ ಒತ್ತಡಗಳು ಮತ್ತು ಸಂಘರ್ಷಗಳು ಕ್ರಮೇಣ ಬಗೆಹರಿಯಲಿವೆ ಎಂಬುದನ್ನು ಈ ಕನಸು ಸೂಚಿಸುತ್ತದೆ. ಇದು ನಿಮ್ಮ ಜೀವನದಲ್ಲಿ ಹೊಸ ಆಶಾದಾಯಕರ ಆರಂಭ ಹಾಗೂ ಉತ್ತಮ ಅವಕಾಶಗಳ ಸೂಚನೆಯಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




