AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ENG: ಸೆಮೀಸ್​ಗೂ ಮುನ್ನ ಸಿದ್ಧಿ ವಿನಾಯಕನ ಪಾದಕ್ಕೆರಗಿದ ಟೀಂ ಇಂಡಿಯಾ ಆಟಗಾರರು

IND vs ENG: ಸೆಮೀಸ್​ಗೂ ಮುನ್ನ ಸಿದ್ಧಿ ವಿನಾಯಕನ ಪಾದಕ್ಕೆರಗಿದ ಟೀಂ ಇಂಡಿಯಾ ಆಟಗಾರರು

ಪೃಥ್ವಿಶಂಕರ
|

Updated on: Mar 04, 2026 | 3:31 PM

Share

2026 T20 World Cup Semi-Final: 2026ರ ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ಭಾರತ-ಇಂಗ್ಲೆಂಡ್ ಸಜ್ಜಾಗಿವೆ. ಮಹತ್ವದ ಪಂದ್ಯಕ್ಕೂ ಮುನ್ನ ಇಶಾನ್ ಕಿಶನ್, ಅಭಿಷೇಕ್ ಶರ್ಮಾ, ಅಕ್ಷರ್ ಪಟೇಲ್ ಮುಂಬೈನ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಸೋತ ತಂಡಕ್ಕೆ ಟೂರ್ನಿಯಿಂದ ಗೇಟ್‌ಪಾಸ್ ಸಿಗಲಿದ್ದು, ಕಳಪೆ ಫಾರ್ಮ್‌ನಲ್ಲಿರುವ ಅಭಿಷೇಕ್ ಶರ್ಮಾ ಪಾಲಿಗೆ ಈ ಸೆಮಿಫೈನಲ್ ನಿರ್ಣಾಯಕವಾಗಿದೆ. ಗೆಲುವಿಗಾಗಿ ಆಟಗಾರರು ದೇವರ ಮೊರೆ ಹೋಗಿದ್ದಾರೆ.

2026 ರ ಟಿ20 ವಿಶ್ವಕಪ್​ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಮಾರ್ಚ್​ 5 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಫೈನಲ್ ಟಿಕೆಟ್ ಸಿಕ್ಕರೆ, ಸೋತ ತಂಡಕ್ಕೆ ಟಿ20 ವಿಶ್ವಕಪ್​ನಿಂದ ಗೇಟ್​ಪಾಸ್ ಸಿಗಲಿದೆ. ಹೀಗಾಗಿ ಇಂತಹ ಮಹತ್ವದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಮತ್ತು ಅಕ್ಷರ್ ಪಟೇಲ್ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಭಗವಂತನ ಆಶೀರ್ವಾದ ಪಡೆದಿದ್ದಾರೆ.

ವಾಸ್ತವವಾಗಿ ಪ್ರಮುಖ ಪಂದ್ಯಗಳಿಗೂ ಮೊದಲು ಭಾರತೀಯ ಆಟಗಾರರು ದೇವಾಲಯಗಳಿಗೆ ಭೇಟಿ ನೀಡುವುದು ವಾಡಿಕೆ. ಅದರಂತೆ ಇಶಾನ್ ಕಿಶನ್, ಅಭಿಷೇಕ್ ಶರ್ಮಾ ಮತ್ತು ಅಕ್ಷರ್ ಪಟೇಲ್ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ್ದಾರೆ. ಮೂವರು ಆಟಗಾರರು ಟೀಂ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಆಡುವವರಾಗಿದ್ದಾರೆ. ಅದರಲ್ಲೂ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಅಭಿಷೇಕ್ ಶರ್ಮಾಗೆ ಸೆಮಿಫೈನಲ್ ಕಾಳಗ ನಿರ್ಣಾಯಕವಾಗಿದೆ. ಇತ್ತ ಉತ್ತಮ ಫಾರ್ಮ್‌ನಲ್ಲಿರುವ ಇಶಾನ್ ಕಿಶನ್ ಮತ್ತು ಆಲ್‌ರೌಂಡರ್ ಆಗಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಅಕ್ಷರ್ ಪಟೇಲ್ ಕೂಡ ಭಗವಂತನ ದರ್ಶನ ಪಡೆದರು.

2026 ರ ಟಿ20 ವಿಶ್ವಕಪ್ ಪ್ರಾರಂಭವಾಗುವ ಮೊದಲು ಕುಲ್ದೀಪ್ ಯಾದವ್ ಮತ್ತು ವರುಣ್ ಚಕ್ರವರ್ತಿ ಕೂಡ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಗಣೇಶನ ಆಶೀರ್ವಾದ ಪಡೆದಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಸೂಪರ್ 8 ಪಂದ್ಯಕ್ಕೂ ಮುನ್ನ ಕೋಲ್ಕತ್ತಾದ ಕಾಳಿಘಾಟ್ ಕಾಳಿ ದೇವಸ್ಥಾನದಲ್ಲಿ ಅಕ್ಷರ್ ಪಟೇಲ್ ಮತ್ತು ಅಭಿಷೇಕ್ ಶರ್ಮಾ ಪೂಜೆ ಸಲ್ಲಿಸಿದ್ದರು. ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಶಾ ಶೆಟ್ಟಿ ಕೂಡ ಹಾಜರಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us