AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿಯ ಸಿನಿಮಾ ಡೈಲಾಗ್​​ಗೆ ನಕ್ಕು ಖುಷಿ ಪಟ್ಟ ಅತಿಥಿಗಳು: ಹೇಳಿದ್ದೇನು?

Bigg Boss Kannada 12: ಬಿಗ್​​ಬಾಸ್ ಕನ್ನಡ ಸೀಸನ್ 12ರ ಮನೆಗೆ ಅತಿಥಿಗಳು ಬಂದಿದ್ದಾರೆ. ಅತಿಥಿಗಳು ಬಂದ ದಿನವೇ ಗಿಲ್ಲಿ ನಟನಿಗೂ ಅತಿಥಿಗಳಾದ ಉಗ್ರಂ ಮಂಜು ಮತ್ತು ರಜತ್ ನಡುವೆ ಜಗಳ ಶುರುವಾಗಿತ್ತು. ಆದರೆ ಬಳಿಕ ಅದು ಕಡಿಮೆ ಆಗಿದೆ. ನಿನ್ನೆಯಂತೂ ಗಿಲ್ಲಿ ಮಾಡಿದ ಕಾಮಿಡಿಗೆ ರಜತ್, ಉಗ್ರಂ ಮಂಜು ಸೇರಿದಂತೆ ಅತಿಥಿಗಳೆಲ್ಲ ನಕ್ಕು ಎಂಜಾಯ್ ಮಾಡಿದ್ದಾರೆ. ಗಿಲ್ಲಿ ಮಾಡಿದ ಕಾಮಿಡಿ ಏನು? ಇಲ್ಲಿದೆ ಮಾಹಿತಿ...

ಗಿಲ್ಲಿಯ ಸಿನಿಮಾ ಡೈಲಾಗ್​​ಗೆ ನಕ್ಕು ಖುಷಿ ಪಟ್ಟ ಅತಿಥಿಗಳು: ಹೇಳಿದ್ದೇನು?
Gilli In Bigg Boss
ಮಂಜುನಾಥ ಸಿ.
|

Updated on: Nov 28, 2025 | 8:53 AM

Share

ಗಿಲ್ಲಿ, ಬಿಗ್​​ಬಾಸ್ (Bigg Boss) ಮನೆಯಲ್ಲಿ ಏಕೈಕ ಎಂಟರ್ಟೈನ್​​ಮೆಂಟ್ ಮೆಟಿರಿಯಲ್. ಕೆಲವರಿಗೆ ಅವರು ಹಾಸ್ಯ ಮಾಡುವ ರೀತಿ ಮುಜುಗರ ಅಥವಾ ಇರಿಟೇಟಿಂಗ್ ಎನ್ನಿಸಬಹುದು, ವ್ಯಂಗ್ಯ ಮಾಡಿ ಅದನ್ನು ಹಾಸ್ಯ ಎನ್ನುತ್ತಾರೆ ಎಂದು ಸಹ ಕೆಲವರು ದೂರಿರುವುದು ಉಂಟು. ಆದರೆ ಅವರೊಬ್ಬ ಒಳ್ಳೆಯ ಕಮಿಡಿಯನ್ ಎಂಬುದನ್ನು ಅಲ್ಲಗಳೆಯಲಾಗದು. ಅದರಲ್ಲೂ ಅವರು ಸ್ಪಾಂಟೇನಿಯಸ್ ಆಗಿ ಹೊಡೆಯುವ ಡೈಲಾಗ್​​ಗಳು ಎಂಥಹವರಿಗೂ ನಗು ತರಿಸುತ್ತವೆ. ನಿನ್ನೆಯ ಎಪಿಸೋಡ್​​ನಲ್ಲಿಯೂ ಹೀಗೆಯೇ ಆಗಿದೆ.

ಬಿಗ್​​ಬಾಸ್ ಮನೆಗೆ ಉಗ್ರಂ ಮಂಜು, ಮೋಕ್ಷಿತಾ, ಚೈತ್ರಾ ಕುಂದಾಪುರ, ರಜತ್ ಮತ್ತು ತ್ರಿವಿಕ್ರಮ್ ಅವರುಗಳು ಅತಿಥಿಗಳಾಗಿ ಬಂದಿದ್ದಾರೆ. ಮೊದಲ ದಿನವೇ ಗಿಲ್ಲಿ ಹಾಗೂ ಉಗ್ರಂ ಮಂಜು, ರಜತ್ ನಡುವೆ ಕಿರಿಕ್ ಆಯ್ತು. ಗಿಲ್ಲಿಯ ಕಾಲೆಳೆಯುವ ಕಾಮಿಡಿ ಇಬ್ಬರಿಗೂ ಇಷ್ಟವಾಗಲಿಲ್ಲ. ಗಿಲ್ಲಿಗೆ ಇಬ್ಬರೂ ಎಚ್ಚರಿಕೆ ಕೊಟ್ಟರು. ಮನೆ ಮಂದಿಯೂ ಸಹ ಕೇಳಿ ಕೊಂಡಿದ್ದರಿಂದ ಗಿಲ್ಲಿ ತುಸು ಮೌನಕ್ಕೆ ಜಾರಿದ್ದರು. ತಮ್ಮ ಎಂದಿನ ಹಾಸ್ಯಮಯ ಪ್ರವೃತ್ತಿ ಬಿಟ್ಟು ತುಸು ಗಂಭೀರವಾಗಿದ್ದರು.

ಆದರೆ ನಿನ್ನೆಯ ಎಪಿಸೋಡ್​​ನಲ್ಲಿ ಬಿಗ್​​ಬಾಸ್​​ನ ಆದೇಶದಂತೆ ಅತಿಥಿಗಳನ್ನು ರಂಜಿಸಬೇಕಿತ್ತು. ಮನೆಯ ಮಹಿಳೆಯರು ಫ್ಯಾಷನ್ ಶೋ ಮಾಡಿದರು. ರಘು ಮತ್ತು ರಕ್ಷಿತಾ ಭಾವುಕ ನಾಟಕವೊಂದನ್ನು ಮಾಡಿ ಎಲ್ಲರನ್ನೂ ಭಾವುಕಗೊಳಿಸಿದರು. ಅಭಿ ಮತ್ತು ಸ್ಪಂದನಾ ಧಾರಾವಾಹಿ ಸೀನ್​ ಒಂದನ್ನು ರೀಕ್ರಿಯೇಟ್ ಮಾಡಿದರು. ಅಶ್ವಿನಿ, ಜಾನ್ವಿ ಮತ್ತು ಸ್ಪಂದನಾ ತಮಾಷೆಯ ಸ್ಕಿಟ್ ಒಂದನ್ನು ಮಾಡಿ ನಗಿಸಿದರು. ಗಿಲ್ಲಿ, ಏಕವ್ಯಕ್ತಿ ಪ್ರದರ್ಶನ ನೀಡಿದರು.

ಇದನ್ನೂ ಓದಿ:ಮದುವೆ ಆಗ್ತೀಯ ಎಂದ ತ್ರಿವಿಕ್ರಮ್: ರಕ್ಷಿತಾ ಹೇಳಿದ್ದೇನು?

ಮೊದಲಿಗೆ ‘ಮುಂಗಾರು ಮಳೆ’ ಸಿನಿಮಾದ ‘ಟೈಮ್ ಅನ್ನೋದು ಪಕ್ಕಾ 420’ ಡೈಲಾಗ್ ಅನ್ನು ಬಿಗ್​​ಬಾಸ್ ಮನೆಗೆ ಸಮೀಕರಿಸಿ ಡೈಲಾಗ್​​ ಹೇಳಿದರು. ‘ನನಗೆ ಕ್ಯಾಫ್ಟೆನ್ಸಿ ಸಿಗುತ್ತೆ, ಜಾರ್ ಆಫ್ ಫೋಟೊ ಫ್ರೇಂ ಸಿಗುತ್ತೆ ಅಂದುಕೊಂಡಿದ್ದೆ, ಆ ಟೈಮ್ ಬರಲೇ ಇಲ್ಲ’ ಎಂದು ಶುರು ಮಾಡಿದ ಗಿಲ್ಲಿ, ಅತಿಥಿಗಳ ಹೆಸರೇಳಿ, ಅವರನ್ನೂ ತಮ್ಮ ಡೈಲಾಗ್ ಒಳಗೆ ಸೇರಿಕೊಂಡು ಕಾಮಿಡಿ ಮಾಡಿದರು. ಗಿಲ್ಲಿಯ ಡೈಲಾಗ್​​ಗೆ ಅತಿಥಿಗಳು ಚಪ್ಪಾಳೆ ಹೊಡೆದರು.

ಬಳಿಕ ಮತ್ತೊಂದು ಡೈಲಾಗ್ ಹೊಡೆದ ಗಿಲ್ಲಿ, ಡೈಲಾಗ್ ಹೇಳುವ ಮುಂಚೆಯೇ ಅತಿಥಿಗಳಿಗೆ ಕೈಮುಗಿದು, ‘ಈ ಡೈಲಾಗ್ ಯಾವುದೇ ವ್ಯಕ್ತಿಗೆ, ಪ್ರಾಣಿಗೆ ಸಂಬಂಧಿಸಿದ್ದಲ್ಲ’ ಎಂದು ಡಿಸ್ಕೇಮರ್ ಹೇಳಿದರು. ಬಳಿಕ, ‘ಬಿಬಿ ಪ್ಯಾಲೆಸ್​​ಗೆ ಬಂದೆ ಕುಲುಮೇಲಿ ಬಿದ್ದಂಗಾಯ್ತು, ಆರ್ಡರ್ ಕೇಳಿದ್ಕೆ ಬಡುದ್ರು, ಟಿಪ್ಸ್ ಕೇಳಿದ್ಕೆ ತಟ್ಟುದ್ರು, ತಟ್ಟಿ, ತಟ್ಟಿ ಬಡ್ದು, ಬಡ್ದು ಈಗ ಕಬ್ಣ ಕತ್ತಿ ಆಗೈತೆ, ಈ ಕತ್ತಿಗೆ ಗೊತ್ತಿರೋದು ಒಂದೇ, ಕೇಳಿದ್ದನ್ನು ಸಪ್ಲೈ ಮಾಡೋದಷ್ಟೆ’ ಎಂದರು. ಗಿಲ್ಲಿ ಕೊನೆಯಲ್ಲಿ ಕೊಟ್ಟ ಟ್ವಿಸ್ಟ್​​ಗೆ ಅತಿಥಿಗಳು ಸೇರಿದಂತೆ ಇಡೀ ಮನೆ ಮಂದಿ ನಕ್ಕರು. ಗಿಲ್ಲಿ ಮೇಲೆ ಸಿಟ್ಟಾಗಿದ್ದ ರಜತ್, ಉಗ್ರಂ ಮಂಜು ಸಹ ಚಪ್ಪಾಳೆ ತಪ್ಪಿ ಅಭಿನಂದಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ಅರಮನೆ ಅಂಗಳದಲ್ಲಿ ಕನ್ನಡಾಂಬೆಗೆ ನಿತ್ಯವೂ ಪೂಜೆ; ಇತಿಹಾಸ ವಿವರಿಸಿದ ಅರ್ಚಕರು
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ: ರ‍್ಯಾಲಿಯಲ್ಲಿ ಘಟಾನುಘಟಿ ನಾಯಕರು ಭಾಗಿ
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ಹಿರೇಮಗಳೂರು ಕೋದಂಡರಾಮ ದೇಗುಲ: ನಿತ್ಯವೂ ಕನ್ನಡದಲ್ಲೇ ಪೂಜೆ, ಮಂತ್ರಘೋಷ!
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ದೆಹಲಿಯಲ್ಲಿ ಕನ್ನಡ ರಾಜ್ಯೋತ್ಸವ; ಧ್ವಜಾರೋಹಣ ನೆರವೇರಿಸಿದ ಸಿದ್ದರಾಮಯ್ಯ
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಹರಿದು ಬಂದ ಭಕ್ತರು
ಮೈಸೂರು:ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?
ಮೈಸೂರು:ಕನ್ನಡಾಂಬೆ ಭುವನೇಶ್ವರಿ ದೇಗುಲದ ಬಗ್ಗೆ ನಿಮಗೆಷ್ಟು ಗೊತ್ತು?
ಲವ್ ಮಾಡೋದು ಬಿಟ್ಟು ಆಟವಾಡು: ಸುದೀಪ್ ಎದುರಲ್ಲೇ ಸೌಂದರ್ಯಾಗೆ ಕಿರಣ್ ಟೀಕೆ
ಲವ್ ಮಾಡೋದು ಬಿಟ್ಟು ಆಟವಾಡು: ಸುದೀಪ್ ಎದುರಲ್ಲೇ ಸೌಂದರ್ಯಾಗೆ ಕಿರಣ್ ಟೀಕೆ
ಬೆಳಗಾವಿಯಲ್ಲಿ ಕಳೆಗಟ್ಟಿದ ಕನ್ನಡ ಹಬ್ಬ
ಬೆಳಗಾವಿಯಲ್ಲಿ ಕಳೆಗಟ್ಟಿದ ಕನ್ನಡ ಹಬ್ಬ
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!
ಇಂದು ಈ ರಾಶಿಯವರಿಗೆ ಗಜಕೇಸರಿ ಯೋಗ!
ಗಾಂಧಿ ಹತ್ಯೆಯ ನಾಟಕದ ವೇಳೆ ನಿರ್ದೇಶಕರಿಗೆ ಮಸಿ ಬಳಿದ ಕೈ ಕಾರ್ಯಕರ್ತರು
ಗಾಂಧಿ ಹತ್ಯೆಯ ನಾಟಕದ ವೇಳೆ ನಿರ್ದೇಶಕರಿಗೆ ಮಸಿ ಬಳಿದ ಕೈ ಕಾರ್ಯಕರ್ತರು