AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರವೇ ತಲೆಕೆಳಗೆ; ಒಂದೇ ವಾರಕ್ಕೆ ‘ಧುರಂಧರ್’ ದಾಖಲೆಯ ಗಳಿಕೆ

ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿದೆ. ಫ್ಲಾಪ್ ಆಗುತ್ತದೆ ಎಂದು ಭವಿಷ್ಯ ನುಡಿದರೂ, ಈ ಚಿತ್ರ ಕೇವಲ 7 ದಿನಗಳಲ್ಲಿ 200 ಕೋಟಿ ರೂ. ಗಳಿಸಿ ಅಚ್ಚರಿ ಮೂಡಿಸಿದೆ. ನೆಗೆಟಿವಿಟಿ, ದೀರ್ಘ ರನ್ ಟೈಮ್ ನಡುವೆಯೂ ಸಕಾರಾತ್ಮಕ ವಿಮರ್ಶೆಗಳಿಂದ ಚಿತ್ರ ಯಶಸ್ಸು ಕಂಡಿದೆ. ವಾರದ ದಿನಗಳಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದ್ದು, ಸ್ಪರ್ಧೆಯಿದ್ದರೂ ಮುನ್ನುಗ್ಗುತ್ತಿದೆ.

ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರವೇ ತಲೆಕೆಳಗೆ; ಒಂದೇ ವಾರಕ್ಕೆ ‘ಧುರಂಧರ್’ ದಾಖಲೆಯ ಗಳಿಕೆ
ಧುರಂಧರ್
ರಾಜೇಶ್ ದುಗ್ಗುಮನೆ
|

Updated on: Dec 12, 2025 | 11:49 AM

Share

ಯಾವುದೇ ಬಿಗ್ ಬಜೆಟ್ ಸಿನಿಮಾ ರಿಲೀಸ್ ಆಗುವಾಗ ಈ ಚಿತ್ರ ಎಷ್ಟು ಮೈಲೇಜ್ ಪಡೆಯಬಹುದು, ಎಷ್ಟು ಗಳಿಕೆ ಮಾಡಬಹುದು ಎಂದು ಬಾಕ್ಸ್ ಆಫೀಸ್ ಪಂಡಿತರು ಲೆಕ್ಕಾಚಾರ ಹಾಕುತ್ತಾರೆ. ಈ ಲೆಕ್ಕಾಚಾರ ಕೆಲವೊಮ್ಮೆ ಉಲ್ಟಾ ಆಗಬಹುದು. ಹೆಚ್ಚು ಗಳಿಕೆ ಮಾಡುತ್ತವೆ ಎಂದು ವಿರಿಸಿದ ಸಿನಿಮಾಗಳು ಸೋತ ಉದಾಹರಣೆ ಇದೆ. ಅದೇ ರೀತಿ ಸಿನಿಮಾ ಫ್ಲಾಪ್ ಆಗುತ್ತದೆ ಎಂದು ಭವಿಷ್ಯ ನುಡಿದು ಚಿತ್ರಗಳು ಹಿಟ್ ಆಗಿದ್ದಿದೆ. ಇದಕ್ಕೆ ಉತ್ತಮ ಉದಾಹರಣೆ ರಣವೀರ್ ಸಿಂಗ್ ನಟನೆಯ ಧುರಂಧರ್ (Dhuranadhar).

‘ಧುರಂಧರ್’ ಸಿನಿಮಾ ಯಾವುದೇ ಕಾರಣಕ್ಕೂ ಫ್ಲಾಪ್ ಆಗುತ್ತದೆ ಎಂದು ಅನೇಕರು ಭಾವಿಸಿದ್ದರು. ಆದರೆ, ಅಲ್ಲಾಗಿದ್ದೇ ಬೇರೆ. ಚಿತ್ರ ನೆಗೆಟಿವಿಟಿ, ದೀರ್ಘ ರನ್ ಟೈಮ್ (3 ಗಂಟೆ 36 ನಿಮಿಷ) ಮಧ್ಯೆಯೂ ಯಶಸ್ಸು ಕಂಡಿದೆ. ಈ ಚಿತ್ರ ಕೇವಲ ಏಳು ದಿನಕ್ಕೆ ಕಲೆಕ್ಷನ್ ಮಾಡಿದ್ದು ಬರೋಬ್ಬರಿ 200 ಕೋಟಿ ರೂಪಾಯಿ.

ಧುರಂಧರ್ ಸಿನಿಮಾ ಸಾಧಾರಣ ಓಪನಿಂಗ್ ಪಡೆಯಿತು. ಚಿತ್ರಕ್ಕೆ ಸಿಕ್ಕ ಪಾಸಿಟಿವ್ ವಿಮರ್ಶೆಗಳು ಚಿತ್ರಕ್ಕೆ ಸಹಕಾರಿ ಆದವು. ಆ ಬಳಿಕ ಸಿನಿಮಾದ ಕಲೆಕ್ಷನ್ ಹೆಚ್ಚುತ್ತಲೇ ಹೋಗಿದೆ. ವಾರದ ದಿನವೂ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಮಂಗಳವಾರ, ಬುಧವಾರ ಹಾಗೂ ಗುರುವಾರ ಸಿನಿಮಾ ತಲಾ 27 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 208 ಕೋಟಿ ರೂಪಾಯಿ ಆಗಿದೆ.

ತೆಲುಗಿನಲ್ಲಿ ‘ಅಖಂಡ 2’ ಹಾಗೂ ಕನ್ನಡದಲ್ಲಿ ದರ್ಶನ್ ನಟನೆಯ ‘ಡೆವಿಲ್ 2’ ಸಿನಿಮಾ ತೆರೆಗೆ ಬಂದಿದೆ. ಈ ಎರಡೂ ಸಿನಿಮಾಗಳು ‘ಧುರಂಧರ್’ ಚಿತ್ರಕ್ಕೆ ಟಫ್ ಫೈಟ್ ನೀಡುವ ಸಾಧ್ಯತೆ ಇದೆ. ಆದರೆ, ಈ ಎರಡು ಸಿನಿಮಾಗಳ ಎಫೆಕ್ಟ್ ಚಿತ್ರದ ಕಲೆಕ್ಷನ್ ಮೇಲೆ ಹೆಚ್ಚಿನ ಪ್ರಭಾವ ಬೀರಿಲ್ಲ ಎಂಬುದು ವಿಶೇಷ.

ಇದನ್ನೂ ಓದಿ: ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಚಿತ್ರ ಆರು ದೇಶಗಳಲ್ಲಿ ಬ್ಯಾನ್

ಹಿಂದಿ ಬೆಲ್ಟ್​ನಲ್ಲಿ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರಕ್ಕೆ ಫೈಟ್ ನೀಡಲು ಹಿಂದಿ ಭಾಷೆಯಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಸಿನಿಮಾಗಳು ತೆರೆಗೆ ಬರುತ್ತಿಲ್ಲ. ಇದು ಚಿತ್ರಕ್ಕೆ ಸಹಕಾರಿ ಆಗುವ ಸಾಧ್ಯತೆ ಇದೆ. ‘ಅವತಾರ್ 3’ ಚಿತ್ರದ ರಿಲೀಸ್ ಈ ಸಿನಿಮಾ ಮೇಲೆ ಕೊಂಚ ಎಫೆಕ್ಟ್ ಕೊಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.