AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಗ್ರರೂಪ ತೋರಿದ ಸುದೀಪ್: ಮಂಕಾದ ಮಹಾಕವಿ ಮಂಜ

ಎರಡನೇ ವಾರ ಬಿಗ್​​ಬಾಸ್ ಮನೆಯಲ್ಲಿ ನಡೆದ ಘಟನೆಗಳು ಸ್ಪರ್ಧಿಗಳಿಗೆ ಮಾತ್ರವಲ್ಲ, ವೀಕ್ಷಕರಿಗೂ ಸಹ ಕಿರಿ-ಕಿರಿ ತಂದಿತ್ತು. ಮಂಜ ಸೇರಿದಂತೆ ಕೆಲ ಸ್ಪರ್ಧಿಗಳು ಆಡಲು ಅಲ್ಲ ತಮ್ಮ ರೌಡಿತನ ತೋರಲು ಮನೆ ಸೇರಿದಂತೆ ವರ್ತಿಸಿದ್ದರು. ಹಾಗಾಗಿ ಸುದೀಪ್ ಅವರು ಅಂಥಹವರಿಗೆ ಅವರಿಗೆ ತಕ್ಕದಾದ ಭಾಷೆಯಲ್ಲಿಯೇ ಉತ್ತರ ನೀಡಿದರು. ವಿಶೇಷವಾಗಿ ಮಹಾಕವಿ ಮಾಡರ್ನ್ ಮಂಜನಿಗೆ.

ಉಗ್ರರೂಪ ತೋರಿದ ಸುದೀಪ್: ಮಂಕಾದ ಮಹಾಕವಿ ಮಂಜ
Sudeep Manja
ಮಂಜುನಾಥ ಸಿ.
|

Updated on: Sep 19, 2026 | 11:31 PM

Share

ಮುಖ್ಯಾಂಶಗಳು

  • ಕಿಚ್ಚ ಸುದೀಪ್ ಉಗ್ರರೂಪ ತೋರಿದರು.
  • ವಾರದಿಂದ ಅಬ್ಬರಿಸಿದ್ದ ಮಂಜ, ಸುದೀಪ್ ಮುಂದೆ ಥಂಡಾ ಹೊಡೆದ
  • ಮಂಜನಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಸುದೀಪ್

ಸುದೀಪ್, ಸಾಮಾನ್ಯವಾಗಿ ತಾಳ್ಮೆ ಕಳೆದುಕೊಂಡು ಮಾತನಾಡುವುದಿಲ್ಲ, ಈ ಬಿಗ್​​ಬಾಸ್ ವೇದಿಕೆ ಮೇಲೆ ಅವರು ತಾಳ್ಮೆ ಕಳೆದುಕೊಂಡಿದ್ದು ಬಲು ಅಪರೂಪ. 13ನೇ ಸೀಸನ್ನಿನ ಎರಡನೇ ವಾರ ಬಿಗ್​​ಬಾಸ್ ಮನೆಯಲ್ಲಿ ನಡೆದ ಘಟನೆಗಳು ಸ್ಪರ್ಧಿಗಳಿಗೆ ಮಾತ್ರವಲ್ಲ, ವೀಕ್ಷಕರಿಗೂ ಸಹ ಕಿರಿ-ಕಿರಿ ತಂದಿತ್ತು. ಮಂಜ ಸೇರಿದಂತೆ ಕೆಲ ಸ್ಪರ್ಧಿಗಳು ಆಡಲು ಅಲ್ಲ ತಮ್ಮ ರೌಡಿತನ ತೋರಲು ಮನೆ ಸೇರಿದಂತೆ ವರ್ತಿಸಿದ್ದರು. ಹಾಗಾಗಿ ಸುದೀಪ್ ಅವರು ಅಂಥಹವರಿಗೆ ಅವರಿಗೆ ತಕ್ಕದಾದ ಭಾಷೆಯಲ್ಲಿಯೇ ಉತ್ತರ ನೀಡಿದರು. ವಿಶೇಷವಾಗಿ ಮಹಾಕವಿ ಮಾಡರ್ನ್ ಮಂಜನಿಗೆ.

ಮಂಜ ಈ ವಾರ ಮಾಡಿದ್ದು ಒಂದೆರಡಲ್ಲ. ಸಿಕ್ಕ-ಸಿಕ್ಕವರ ಮೇಲೆಲ್ಲ ರೌಡಿತನ ತೋರಿದ್ದ. ಬಿಗ್​​ಬಾಸ್ ಮನೆಯ ಹಲವಾರು ನಿಯಮಗಳನ್ನು ಮುರಿದಿದ್ದ. ಹಿರಿಯರು, ಕಿರಿಯರು, ಮಹಿಳೆಯರು ಎಂದು ಸಹ ನೋಡದೆ ಕೆಟ್ಟದಾಗಿ ವರ್ತಿಸಿದ್ದ. ಖುದ್ದು ಬಿಗ್​​ಬಾಸ್ ಬಗ್ಗೆಯೂ ಕೆಟ್ಟದಾಗಿ, ಏಕವಚನದಲ್ಲಿ ಮಾತನಾಡಿದ್ದ. ಆದರೆ ಎಲ್ಲದಕ್ಕೂ ಸುದೀಪ್ ತಕ್ಕ ಉತ್ತರಗಳನ್ನೇ ನೀಡಿದರು.

ಇತರೆ ಸ್ಪರ್ಧಿಗಳನ್ನು ಐದು ಪೈಸೆ ಯೋಗ್ಯತೆ, 10 ಪೈಸೆ ಯೋಗ್ಯತೆ, 50 ಪೈಸೆ ಯೋಗ್ಯತೆ ಎಂದೆಲ್ಲ ಹೇಳಿದ್ದ. ಈ ಬಗ್ಗೆ ಮಾತನಾಡಿದ ಸುದೀಪ್, ‘ನಿನ್ನ ಯೋಗ್ಯತೆ ಎಷ್ಟು?’ ಎಂದರು. ‘ಯೋಗ್ಯತೆಯೇ ಇಲ್ಲದ ವ್ಯಕ್ತಿ ಇನ್ನೊಬ್ಬರ ಯೋಗ್ಯತೆ ಹೇಗೆ ಅಳೆಯಬಲ್ಲ’ ಎಂದು ಪರೋಕ್ಷವಾಗಿ ಮಂಜನ ಬೆಲೆ ಇಲ್ಲದವ ಎಂದು ಟೀಕೆ ಮಾಡಿದರು.

ವ್ಯಕ್ತಿಯೊಬ್ಬ ಮಾತನಾಡಿದ ಅದರಲ್ಲಿ ತೂಕ, ಅರ್ಥ ಇರಬೇಕು ಇರಬೇಕು ಇಲ್ಲವಾದರೆ ಅದನ್ನು ಬರೀ ಸೌಂಡ್ ಅಷ್ಟೆ ಅನ್ನುತ್ತೀವಿ, ನಿಮ್ಮದು ಬರೀ ಸೌಂಡ್, ನಿಮ್ಮ ಮಾತಿಗೆ ತೂಕ, ಅರ್ಥ ಇರುವುದಿಲ್ಲ’ ಎಂದರು. ಸುದೀಪ್ ಅವರನ್ನು ಮಂಜ ‘ಅಣ್ಣ’ ಎಂದು ಕರೆದಾಗ ‘ನನ್ನ ತಮ್ಮನಾಗಲು ಬೆಲೆ ಇರಬೇಕಾಗುತ್ತದೆ. ನಿನ್ನನ್ನು ತಮ್ಮ ಎಂದು ಒಪ್ಪಿಕೊಂಡರೆ, ನನ್ನನ್ನು ಅಣ್ಣ ಎಂದು ಕರೆದವರಿಗೆ ಅವಮಾನ ಮಾಡಿದಂತಾಗುತ್ತದೆ’ ಎಂದರು ಕಿಚ್ಚ. ಸುದೀಪ್ ಆಡಿದ ಪ್ರತಿಮಾತು, ಮಂಜನಿಗೆ ಕಪಾಳಕ್ಕೆ ಭಾರಿಸಿದಂತೆಯೇ ಇತ್ತು.

ಇದನ್ನೂ ಓದಿ:ಕ್ಯಾಪ್ಟನ್ ಆದ ಸಂಗೀತಾಗೆ ಕಿಚ್ಚ ಸುದೀಪ್ ಕ್ಲಾಸ್; ಮಾಡಿದ ತಪ್ಪೇನು?

ಬಿಗ್​​ಬಾಸ್ ಅನ್ನು ಏಕವಚನದಲ್ಲಿ ಮಾತಾಡ್ತೀರ, ನಾನು ಹೇಳಿದಂತೆ ಆಗಬೇಕು ಅನ್ನುತ್ತೀರ, ನಾನೇ ಗ್ರೇಟ್ ಅನ್ನುತ್ತೀರ, ನಿಮ್ಮ ವಯಸ್ಸಿಗೆ ಇದೆಲ್ಲ ಬೇಕ? ವಯಸ್ಸಿನ ಬಗ್ಗೆ ಆದರೂ ಮರ್ಯಾದೆ ಇರಲಿ. ಕ್ಯೆಮೆರಾ ಇದೆ ಎಂಬ ಕಾರಣಕ್ಕೆ ಎಲ್ಲರೂ ಮೌನವಾಗಿ ಸಹಿಸಿಕೊಂಡಿದ್ದಾರೆ. ಕ್ಯಾಮೆರಾ ಆಫ್ ಆದರೆ ಕತೆಯೇ ಬೇರೆ ಆಗುತ್ತೆ. ನಮ್ಮಲ್ಲಿ ಕವಿ ಎಂದರೆ ಬಹಳ ಗೌರವ ಇದೆ. ಸುನೀತರು, ಹೃದಯವಂತರು, ವಿನಯವಂತರು ಎಂದು ನೋಡುತ್ತೇವೆ. ಆದರೆ ನಿನ್ನ ರೀತಿ ಆಡೋರನ್ನ ‘ಕಿತ್ತೋಗಿರೋ ನನ್ನ ಮಕ್ಳು’ ಎಂದು ಕರೀತಾರೆ ಎಂದು ಖಾರವಾಗಿ ನುಡಿದರು ಸುದೀಪ್.

ವಾರವೆಲ್ಲ ಬಾಯಿಗೆ ಬಂದಂತೆ ಮಾತನಾಡಿ ಅಬ್ಬರಿಸಿದ್ದ ಮಹಾಕವಿ ಮಂಜ, ಸುದೀಪ್ ಎದುರು ಬಾಲ ಸುಟ್ಟ ಬೆಕ್ಕಿನಂತೆ ತಲೆ ಬಗ್ಗಿಸಿಕೊಂಡು ಕೂತಿದ್ದ. ಕ್ಷಮೆ ಕೇಳಿದ ಮಂಜನಿಗೆ, ‘ಮುಂದಿನ ವಾರ ಮತ್ತೆ ಬಂದಾಗ ಹೊಸ ಮಂಜನನ್ನು ನೋಡಬೇಕು, ನಾನು ಹೀಗೇ ಇರುತ್ತೀನಿ ಎಂದರೆ ಜನ ಮುಂದಿನದ್ದನ್ನು ನಿರ್ಧರಿಸುತ್ತಾರೆ’ ಎಂದರು ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ಗುಡಿಸಲಿನಲ್ಲಿ ಗ್ರಂಥಾಲಯ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಕೊನೆಗೂ ಪೆನ್​ಡ್ರೈವ್​ನಲ್ಲಿ ಏನಿದೆ ಎಂಬ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಹಾಸನ ಡಿಸಿ ಮತ್ತು ಜಿಲ್ಲಾ ಸಚಿವರ ಸಂಘರ್ಷ ಶುರುವಾಗಿದೆ ಎಂದು ಹೆಚ್​​ಡಿಕೆ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
ಸಿಜೆಪಿ ಪ್ರತಿಭಟನೆ ವಿರುದ್ಧ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾಗ್ದಾಳಿ
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
‘ಪ್ರೇಮದ ಊರಲಿ’ ಚಿತ್ರಕ್ಕಾಗಿ ನನ್ನ ಸಿನಿಮಾ ರಿಲೀಸ್ ಮುಂದಕ್ಕೆ ಹಾಕಿದ್ದೀನಿ’
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಬಳ್ಳಾರಿ ಸರ್ಕಾರಿ ಆಸ್ಪತ್ರೆಯಲ್ಲಿ ಕರೆಂಟ್ ಕಟ್: ತನಿಖೆ ಮಾಡುತ್ತೇವೆ, ಖಾದರ್
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಕನ್​​ಫೆಷನ್ ರೂಮಿನಲ್ಲಿ ಬಿಕ್ಕಿ-ಬಿಕ್ಕಿ ಅತ್ತ ಮಂಜ: ವಿಡಿಯೋ ನೋಡಿ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಪ್ರತಿಭಟನೆ ವೇಳೆ ದೆಹಲಿಯಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಪೊಲೀಸ್ ವಶಕ್ಕೆ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿಗೆ ರಭಸವಾಗಿ ಬಡಿದ ಗಿಡುಗ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ
ರಂಗನಾಥಸ್ವಾಮಿ ದೇಗುಲದಲ್ಲಿ ಎಚ್.ಡಿ. ಕುಮಾರಸ್ವಾಮಿ,ರೇವಣ್ಣ ವಿಶೇಷ ಪೂಜೆ