ಕಿಚ್ಚ ಕ್ಲಾಸಿಗೆ ಸುಸ್ತು, ಕೈಮುಗಿದು ಕ್ಷಮೆ ಕೇಳಿದ ಶಾಸ್ತ್ರಿ
ಸಾಮಾನ್ಯರ ಖೋಟಾದಿಂದ ಒಳಗೆ ಹೋಗಿರುವ ಮಂಜ, ಕಿರಣ್, ಲಿಖಿತ್ ಮತ್ತು ಧನುಶ್ ಅವರ ಆಟೋಟೋಪಕ್ಕೆ ಮಿತಿಯೇ ಇಲ್ಲದಂತಾಗಿದೆ. ಅದರಲ್ಲೂ ಕಿರಣ್ ಶಾಸ್ತ್ರಿ ಅಂತೂ ಮನೆಯ ಯಾರಿಗೂ ಕನಿಷ್ಟ ಗೌರವವನ್ನು ಸಹ ನೀಡದೆ ತನಗೆ ತೋಚಿದಂತೆ ವಾದ ಮಾಡುತ್ತಾರೆ. ಕಳೆದ ವಾರ ಟಾಸ್ಕ್ಗೆ ಸಂಬಂಧಿಸಿದಂತೆ ಸೋತ ಬಳಿಕ ಉಸ್ತುವಾರಿಗಳಾದ ತಾಂಡವ್, ಗಗನ್ ಇನ್ನೂ ಕೆಲವರ ಮೇಲೆ ತೀರ ಅಗೌರವದಿಂದ, ಅವಾಚ್ಯವಾಗಿ ಮಾತನಾಡಿದರು. ಇದೀಗ ಕಿರಣ್ ಆಡಿದ ಪ್ರತಿ ಮಾತಿಗೂ ಸುದೀಪ್ ಸರಿಯಾಗಿ ಉತ್ತರ ನೀಡಿದ್ದಾರೆ.

ಮುಖ್ಯಾಂಶಗಳು
- ಕಿರಣ್ ಶಾಸ್ತ್ರಿಗೆ ಸಖತ್ ಕ್ಲಾಸ್ ಕೊಟ್ಟ ಸುದೀಪ್
- ಅಗೌರವದಿಂದ ನಡೆದುಕೊಂಡಿದ್ದ ಕಿರಣ್ಗೆ ಪಾಠ ಕಲಿಸಿದ ಸುದೀಪ್
- ಸುದೀಪ್ ಮಾತಿಗೆ ಬೆಚ್ಚಿ ಬಿದ್ದ ಕಿರಣ್ ಶಾಸ್ತ್ರಿ
ಬಿಗ್ಬಾಸ್ ಮನೆಯಲ್ಲಿ ಕಳೆದ ವಾರ ಸಾಕಷ್ಟು ಗಲಾಟೆ, ಜಗಳ, ಮಾತಿಗೆ ಮಾತು, ವಾದ-ವಿವಾದ ಇನ್ನೂ ಏನೇನೋ ನಡೆಯಿತು. ಅದರಲ್ಲೂ ಸಾಮಾನ್ಯರ ಖೋಟಾದಿಂದ ಒಳಗೆ ಹೋಗಿರುವ ಮಂಜ, ಕಿರಣ್, ಲಿಖಿತ್ ಮತ್ತು ಧನುಶ್ ಅವರ ಆಟೋಟೋಪಕ್ಕೆ ಮಿತಿಯೇ ಇಲ್ಲದಂತಾಗಿದೆ. ಅದರಲ್ಲೂ ಕಿರಣ್ ಶಾಸ್ತ್ರಿ ಅಂತೂ ಮನೆಯ ಯಾರಿಗೂ ಕನಿಷ್ಟ ಗೌರವವನ್ನು ಸಹ ನೀಡದೆ ತನಗೆ ತೋಚಿದಂತೆ ವಾದ ಮಾಡುತ್ತಾರೆ. ಕಳೆದ ವಾರ ಟಾಸ್ಕ್ಗೆ ಸಂಬಂಧಿಸಿದಂತೆ ಸೋತ ಬಳಿಕ ಉಸ್ತುವಾರಿಗಳಾದ ತಾಂಡವ್, ಗಗನ್ ಇನ್ನೂ ಕೆಲವರ ಮೇಲೆ ತೀರ ಅಗೌರವದಿಂದ, ಅವಾಚ್ಯವಾಗಿ ಮಾತನಾಡಿದರು. ಇದೀಗ ಕಿರಣ್ ಆಡಿದ ಪ್ರತಿ ಮಾತಿಗೂ ಸುದೀಪ್ ಸರಿಯಾಗಿ ಉತ್ತರ ನೀಡಿದ್ದಾರೆ.
ಟಾಸ್ಕ್ ವೇಳೆ ನಿಯಮ ಬಾಹಿರವಾಗಿ ಕಿರಣ್ ಶಾಸ್ತ್ರಿ ಅವರು ಪಂಚೆಯಲ್ಲಿ ವಸ್ತುಗಳನ್ನು ತಂದಿದ್ದರು. ಆ ಕಾರಣಕ್ಕಾಗಿ ಅವರನ್ನು ಡಿಸ್ಕ್ವಾಲಿಫೈ ಮಾಡಲಾಯ್ತು. ಆದರೆ ಇದನ್ನು ಕಿರಣ್ ಶಾಸ್ತ್ರಿ ವಿರೋಧಿಸಿ, ತಾಂಡವ್, ಗಗನ್ ಇನ್ನಿತರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ. ‘ದಂಡಪಿಂಡ’, ‘ತಲೆಯಲ್ಲಿ ಸಗಣಿ’, ‘ಮೂರು ಪೈಸಕ್ಕೆ ಯೋಗ್ಯತೆ ಇಲ್ಲದವರು’ ಇನ್ನೂ ಏನೇನೋ ಬಾಯಿಗೆ ಬಂದಂತೆಲ್ಲ ಮಾತನಾಡಿದ. ಯಾರೇ ಬುದ್ಧಿ ಹೇಳಲು ಬಂದರೂ ಅವರ ವಿರುದ್ಧ ಕಿರಣ್ ನಿಂದನಾತ್ಮಕವಾಗಿ ಮಾತನಾಡಿದ್ದ.
ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಅವರು ಕಿರಣ್ ಆಡಿದ ಪ್ರತಿ ಮಾತಿಗೂ ಕೌಂಟರ್ ಕೊಟ್ಟರು. ಎಲ್ಲದಕ್ಕೂ ಮೊದಲು, ಕಿರಣ್ ಖುದ್ದು, ‘ಪಂಚೆ ನನ್ನ ಉಡುಪು, ಇದರಲ್ಲಿ ವಸ್ತು ತರಲ್ಲ’ ಎಂದು ಹೇಳಿದ್ದನ್ನು ಅವರಿಗೆ ನೆನಪು ಮಾಡಿದರು. ನೀವೇ ಹೇಳಿ, ಬಳಿಕ ನೀವೇ ನಿಯಮ ಮುರಿದಿದ್ದೀರ ಎಂದು ನೆನಪು ಮಾಡಿಸಿದರು. ಆ ಬಳಿಕ ಕಿರಣ್, ಸ್ಪರ್ಧಿಗಳಿಗೆ ಹೇಳಿದ್ದ ಮಾತುಗಳಿಗೆ ತಕ್ಕ ‘ಜವಾಬು’ ನೀಡಿದರು.
ಇದನ್ನೂ ಓದಿ:ಬಿಗ್ಬಾಸ್ ಕೊಟ್ಟ ಶಿಕ್ಷೆಗೆ ಗಳ-ಗಳನೆ ಅತ್ತ ಕಿರಣ್ ಶಾಸ್ತ್ರಿ: ವಿಡಿಯೋ
‘ತಲೆಯಲ್ಲಿ ಸಗಣಿ’ ತುಂಬುಕೊಂಡಿದ್ದೀರಿ ಎಂದು ಕಿರಣ್ ಶಾಸ್ತ್ರಿ ತಾಂಡವ್ ಮತ್ತು ಗಗನ್ಗೆ ಹೇಳಿದ್ದರು. ‘ನಮ್ಮಲ್ಲಿ ಸಗಣಿಗೆ ಪೂಜ್ಯ ಸ್ಥಾನ ಇದೆ, ನಿಮ್ಮ ತಲೆಯಲ್ಲಿ ಅದಕ್ಕಿಂತಲೂ ಹೀನವಾದುದು ಇರಬಹುದು. ಅದು ಮನುಷ್ಯರ ತ್ಯಾಜ್ಯವೋ ಅಥವಾ ಪ್ರಾಣಿಯ ತ್ಯಾಜ್ಯವೊ ಗೊತ್ತಿಲ್ಲ’ ಎಂದರು ಕಿಚ್ಚ.
ನಿಮ್ಮಲ್ಲೇ ತಪ್ಪು ಇರಿಸಿಕೊಂಡು, ನೀವೇ ತಪ್ಪು ಮಾಡಿಯೂ ಉಸ್ತುವಾರಿಗಳ ಮೇಲೆ ಆರ್ಭಟ ಮಾಡಿದ್ರಲ್ಲ ಸರಿಯಾ? ಅವರನ್ನು ಮುಠ್ಠಾಳ ಎಂದ ನೀವು ಈಗ ಮುಠ್ಠಾಳ ಆಗಿದ್ದೀರಿ. ಅವರನ್ನು ದಂಡ-ಪಿಂಡ ಎಂದು ನೀವೇ ದಂಡ-ಪಿಂಡ ಆಗಿದ್ದೀರಿ ಎಂದರು. ಮಾತು ಮುಂದುವರೆಸಿ, ‘ನಿಮ್ಮ ರೀತಿ ಅಗೌರವದಿಂದ ಮಾತನಾಡಲು ಅವರಿಗೆ ಬರುವುದಿಲ್ಲ ಎಂದಲ್ಲ, ಆದರೆ ನಿಮ್ಮ ಮಟ್ಟಕ್ಕೆ ಇಳಿಯಲು ಇಷ್ಟ ಇಲ್ಲ ಎಂದು ಸುಮ್ಮನಿದ್ದಾರೆ’ ಎಂದರು ಸುದೀಪ್.
ಶಾಸ್ತ್ರಿ ಮಾತ್ರವೇ ಅಲ್ಲದೆ ನಾಲ್ಕೂ ಜನ ಸಾಮಾನ್ಯರಿಗೂ ಸಮಾನವಾಗಿ ಕ್ಲಾಸ್ ತೆಗೆದುಕೊಂಡ ಸುದೀಪ್, ನಾಲ್ಕೂ ಜನ ಈ ವಾರ ಮಾಡಿದ ತಪ್ಪುಗಳ ಪಟ್ಟಿ ನೀಡಿದರು. ಜೊತೆಗೆ ‘12 ಸೀಸನ್ನಿನಿಂದ ನಾವು (ಬಿಗ್ಬಾಸ್) ಕೋಟಿಗಟ್ಟಲೆ ಪ್ರೇಕ್ಷಕರನ್ನು ಸಂಪಾದಿಸಿದ್ದೀವಿ, ಕೇವಲ ನಾಲ್ಕು ಜನಕ್ಕಾಗಿ ಅದನ್ನು ಕಳೆದುಕೊಳ್ಳುವುದು ನಮಗೆ ಇಷ್ಟವಿಲ್ಲ’ ಎಂದರು. ಆ ಮೂಲಕ ನೇರವಾಗಿಯೇ ಹೊರಗೆ ಕಳಿಸುವುದಾಗಿ ಎಚ್ಚರಿಕೆ ನೀಡಿದರು.
ಕಿಚ್ಚನ ಪಾತಿಗೆ ತತ್ತರಿಸಿ ಹೋದ ಕಿರಣ್ ಶಾಸ್ತ್ರಿ ಆ ಕೂಡಲೇ ಎಲ್ಲರ ಬಳಿಯೂ ಕೈ ಮುಗಿದು ಕ್ಷಮೆ ಕೇಳಿದರು. ಇನ್ನು ಮುಂದೆ ಯಾರಿಗೂ ಅಗೌರೆವದಿಂದ ಮಾತನಾಡುವುದಿಲ್ಲ ಎಂದು ಸುದೀಪ್ ಎದುರು ಪ್ರತಿಜ್ಞೆ ಮಾಡಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:56 pm, Sat, 19 September 26




