ಕ್ಯಾಪ್ಟನ್ ಆದ ಸಂಗೀತಾಗೆ ಕಿಚ್ಚ ಸುದೀಪ್ ಕ್ಲಾಸ್; ಮಾಡಿದ ತಪ್ಪೇನು?
ಬಿಗ್ ಬಾಸ್ ಕನ್ನಡ ಸೀಸನ್ 13ರ ವೀಕೆಂಡ್ ಪಂಚಾಯ್ತಿಯಲ್ಲಿ ಕ್ಯಾಪ್ಟನ್ ಸಂಗೀತಾ ಭಟ್‌ಗೆ ಕಿಚ್ಚ ಸುದೀಪ್ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಲೇಡೀಸ್ ಬಾತ್‌ರೂಮ್‌ನಲ್ಲಿ ನೀರು ಪೋಲಾಗುತ್ತಿದ್ದ ವಿಷಯದಲ್ಲಿ ಜಗ್ಗಿ ಧ್ವನಿ ಎತ್ತಿದಾಗ, ಸಮಸ್ಯೆ ಪರಿಹರಿಸುವ ಬದಲು ಸಂಗೀತಾ ಕೂಗಾಡಬೇಡಿ ಎಂದಿದ್ದಕ್ಕೆ ಸುದೀಪ್ ಗರಂ ಆಗಿ ಸರಿಯಾದ ಪಾಠ ಕಲಿಸಿದ್ದಾರೆ.

ಮುಖ್ಯಾಂಶಗಳು
- ಕ್ಯಾಪ್ಟನ್‌ಗೆ ಕಂಗ್ರಾಟ್ಸ್ ಬದಲು ಕಿಚ್ಚನ ಕ್ಲಾಸ್
- ಜಗ್ಗಿ ಎತ್ತಿದ ತಪ್ಪಿಗೆ ಸಂಗೀತಾ ಅಪ್ಸೆಟ್
- ಸಮಸ್ಯೆ ಬಿಟ್ಟು ಸೌಂಡ್ ಮೇಲೇಕೆ ಗಮನ?
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಈ ವಾರದ ಕಿಚ್ಚನ ಪಂಚಾಯ್ತಿ ಮೇಲೆ ಸಾಕಷ್ಟು ಕುತೂಹಲ ಮೂಡಿಸಿದೆ. ಇದಕ್ಕೆ ಕಾರಣವೂ ಇದೆ. ಈ ಬಾರಿ ಕಾಮನರ್ಸ್ಗಳು ಸಾಕಷ್ಟು ತಪ್ಪು ಮಾಡಿದ್ದಾರೆ. ಅದಕ್ಕೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಇದಕ್ಕಾಗಿ ವೀಕ್ಷಕರು ಕಾಯುತ್ತಿದ್ದಾರೆ. ಅದಕ್ಕೂ ಮೊದಲೂ ಒಂದು ಮೇಜರ್ ಟ್ವಿಸ್ಟ್ ಬಂದಿದೆ. ಸಂಗೀತಾ ಭಟ್ ಅವರಿಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣವೂ ಇದೆ.
ಸಂಗೀತಾ ಭಟ್ ಅವರು ಕ್ಯಾಪ್ಟನ್ ಆಗಿದ್ದಾರೆ. ಅವರು ಇಡೀ ಮನೆಯ ತಪ್ಪನ್ನು ಎತ್ತಿ ಹೇಳಬೇಕಿತ್ತು. ಆದರೆ, ಸಂಗೀತಾ ಭಟ್ ಅವರೇ ತಪ್ಪು ಮಾಡಿದ್ದಾರೆ. ವೀಕೆಂಡ್ ಎಪಿಸೋಡ್ಗೂ ಮೊದಲು ಜಗ್ಗಿ ಅವರು ಒಂದು ತಪ್ಪನ್ನು ಎತ್ತಿ ಹೇಳಿದರು. ‘ಲೇಡಿಸ್ ಬಾತ್ರೂಂನಲ್ಲಿ ನೀರು ಪೋಲಾಗುತ್ತಾ ಇತ್ತು. ಅದನ್ನ ಆಫ್ ಮಾಡಿದ್ದೇನೆ’ ಎಂದು ಜಗ್ಗಿ ಜೋರಾಗಿ ಕೂಗಿ ಹೇಳಿದರು.
ಇದಕ್ಕೆ ಉತ್ತರಿಸಿದ ಸಂಗೀತಾ ಭಟ್ ಅವರು, ‘ಎಲ್ಲಾ ಲೇಡೀಸ್ ಇಲ್ಲೇ ಇದ್ದಾರೆ. ಯಾಕೆ ಅಷ್ಟು ದೊಡ್ಡದಾಗಿ ಕೂಗ್ತೀರಾ’ ಎಂದು ಪ್ರಶ್ನೆ ಮಾಡಿದರು. ಇದು ಸುದೀಪ್ ಅವರಿಗೆ ಸರಿ ಎನಿಸಿಲ್ಲ. ‘ಸಂಗೀತಾ ಭಟ್ ಅವರೇ ಇದು ನನಗೆ ಏಕೋ ಸರಿ ಎನಿಸಿಲ್ಲ. ನಿಮಗೆ ಮೊದಲು ಕಂಗ್ರಾಜ್ಯುಲೇಷನ್ ಹೇಳಬೇಕು ಎಂದುಕೊಂಡಿದ್ದೆ. ಆದರೆ, ಮೊದಲು ತಪ್ಪು ಕಾಣಿಸುತ್ತಿದೆ’ ಎಂದು ಸುದೀಪ್ ಹೇಳಿದರು.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಈ ವಾರ ಪ್ರ್ಯಾಂಕ್ ಎಲಿಮಿನೇಷನ್? ಮಂಜು ಮೇಲೆ ಪ್ರಯೋಗ?
‘ನೀರು ಹೋಗ್ತಾ ಇದೆ ಎಂದಾಗ ಸಂಗೀತಾ ಅವರೇ ನೀವು ಸಮಸ್ಯೆ ಬಗ್ಗೆ ಗಮನ ಹರಿಸಿಲ್ಲ. ಯಾಕೆ ಅಷ್ಟು ಜೋರಾಗಿ ಕೂಗ್ತೀರಾ ಎಂದಷ್ಟೇ ಕೇಳಿದ್ರಿ. ಸಮಸ್ಯೆ ಮೇಲೆ ಬೆಳಕು ಚೆಲ್ಲಲೇ ಇಲ್ಲ’ ಎಂದರು. ಆ ಬಳಿಕ ಸಂಗೀತಾ ಅವರು ಕ್ಷಮೆ ಕೇಳಿದರು. ‘ಇನ್ನುಮುಂದೆ ಈ ರೀತಿ ತಪ್ಪು ಆಗಲ್ಲ’ ಎಂದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:02 pm, Sat, 19 September 26




