AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ನಲ್ಲಿ ಈ ವಾರ ಪ್ರ್ಯಾಂಕ್ ಎಲಿಮಿನೇಷನ್? ಮಂಜು ಮೇಲೆ ಪ್ರಯೋಗ?

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ನಾಮಿನೇಷನ್ ನಡೆದಿದ್ದರೂ ವೋಟಿಂಗ್ ಲೈನ್ಸ್ ಓಪನ್ ಆಗಿಲ್ಲ. ಓಂ ಪ್ರಕಾಶ್ ರಾವ್ ಅನಾರೋಗ್ಯದಿಂದ ಅರ್ಧಕ್ಕೇ ಹೊರಬಂದಿದ್ದರಿಂದ ಈ ವಾರ ನೋ ಎಲಿಮಿನೇಷನ್ ವೀಕ್ ಘೋಷಿಸಲಾಗಿದೆ. ಈ ಮಧ್ಯೆ ಅಗ್ನಿಪರೀಕ್ಷೆಯ ಕಾಮನ್ ಮ್ಯಾನ್ ಸ್ಪರ್ಧಿಗಳ ಮೇಲೆ ಪ್ರ್ಯಾಂಕ್ ಎಲಿಮಿನೇಷನ್ ನಡೆಯುವ ಸಾಧ್ಯತೆ ದಟ್ಟವಾಗಿದೆ.

ಬಿಗ್ ಬಾಸ್​ನಲ್ಲಿ  ಈ ವಾರ ಪ್ರ್ಯಾಂಕ್ ಎಲಿಮಿನೇಷನ್? ಮಂಜು ಮೇಲೆ ಪ್ರಯೋಗ?
ಮಂಜು
ರಾಜೇಶ್ ದುಗ್ಗುಮನೆ
|

Updated on: Sep 19, 2026 | 9:35 AM

Share

ಮುಖ್ಯಾಂಶಗಳು

  • ಓಂ ಪ್ರಕಾಶ್ ರಾವ್ ನಿರ್ಗಮನದಿಂದ ನೋ ಎಲಿಮಿನೇಷನ್ ವೀಕ್
  • ಕಾಮನ್ ಮ್ಯಾನ್‌ಗಳಿಗೆ ಬಿಗ್ ಬಾಸ್ ಶಾಕ್?
  • ಮಂಜು, ಕಿರಣ್ ಅಥವಾ ಲಿಖಿತ್ ಮೇಲೆ ಪ್ರ್ಯಾಂಕ್ ತೂಗುಕತ್ತಿ?

ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಲ್ಲಿ ದಿನಕ್ಕೊಂದು ವಿಚಿತ್ರ ತಿರುವುಗಳು ಸಿಗುತ್ತಿವೆ. ಈ ವಾರ ಮನೆಯಲ್ಲಿ ವಾಡಿಕೆಯಂತೆ ನಾಮಿನೇಷನ್ ಪ್ರಕ್ರಿಯೆ ಯಶಸ್ವಿಯಾಗಿ ನಡೆದಿದೆ. ಆದರೆ ಈ ವಾರ ವೋಟಿಂಗ್ ಲೈನ್ಸ್‌ಗಳನ್ನು ಓಪನ್ ಮಾಡಲಾಗಿಲ್ಲ. ಹೀಗಾಗಿ ಮನೆಯಿಂದ ಈ ವಾರ ಯಾರೊಬ್ಬರೂ ಹೊರ ಹೋಗೋದಿಲ್ಲ ಅನ್ನೋದು ಸ್ಪಷ್ಟವಾಗಿದೆ. ಆದರೆ, ಪ್ರ್ಯಾಂಕ್ ನಡೆಯುವ ಸಾಧ್ಯತೆ ಇದೆ.

ಈ ಎಲ್ಲಾ ಬೆಳವಣಿಗೆ ಪ್ರಮುಖ ಕಾರಣ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ನಿರ್ಗಮನ. ಇದ್ದಕ್ಕಿದ್ದಂತೆ ತೀವ್ರ ಅನಾರೋಗ್ಯ ಎದುರಾದ ಹಿನ್ನೆಲೆಯಲ್ಲಿ ಓಂ ಪ್ರಕಾಶ್ ರಾವ್ ಅವರು ದೊಡ್ಮನೆಯಿಂದ ಅರ್ಧಕ್ಕೇ ಹೊರಬಂದಿದ್ದಾರೆ. ಒಬ್ಬ ಸ್ಪರ್ಧಿ ಶೋ ತೊರೆದಿರುವುದರಿಂದ ಈ ವಾರ ಯಾವುದೇ ಎಲಿಮಿನೇಷನ್ ಇರುವುದಿಲ್ಲ ಎಂಬ ಮಾಹಿತಿ ಸಿಕ್ಕಿದೆ.

ಯಾವುದೇ ಎಲಿಮಿನೇಷನ್ ಇಲ್ಲದಿರುವ ಕಾರಣ ಬಿಗ್ ಬಾಸ್ ಈ ವಾರ ಹೊಸ ಗಿಮಿಕ್ ಮಾಡಲು ಮುಂದಾಗಿದ್ದಾರೆ. ಎಲಿಮಿನೇಷನ್ ಹೆಸರಿನಲ್ಲಿ ಸ್ಪರ್ಧಿಗಳಿಗೆ ದೊಡ್ಡ ಪ್ರ್ಯಾಂಕ್ ಮಾಡುವ ಸಾಧ್ಯತೆ ದಟ್ಟವಾಗಿದೆ. ವೀಕೆಂಡ್ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಈ ಸಸ್ಪೆನ್ಸ್ ಪ್ರ್ಯಾಂಕ್ ಅಸ್ತ್ರವನ್ನು ಬಳಸಲಿದ್ದಾರೆ ಎನ್ನಲಾಗುತ್ತಿದೆ.

ಈ ಪ್ರ್ಯಾಂಕ್‌ನ ಮುಖ್ಯ ಟಾರ್ಗೆಟ್ ಕಾಮನ್ ಮ್ಯಾನ್ ಸ್ಪರ್ಧಿಗಳೇ ಆಗುವ ಲಕ್ಷಣಗಳಿವೆ. ಸದ್ಯ ಮನೆಯಲ್ಲಿ ನಿಯಮ ಉಲ್ಲಂಘನೆ ಹಾಗೂ ಗಲಾಟೆಗಳಿಂದ ಸುದ್ದಿಯಲ್ಲಿರುವ ಅಗ್ನಿಪರೀಕ್ಷೆಯ ಸ್ಪರ್ಧಿಗಳಾದ ಮಂಜು, ಕಿರಣ್ ಶಾಸ್ತ್ರಿ ಅಥವಾ ಲಿಖಿತ್ ಅವರ ಮೇಲೆ ಈ ಪ್ರ್ಯಾಂಕ್ ತೂಗುಕತ್ತಿ ತೂಗುವ ಸಾಧ್ಯತೆ ಹೆಚ್ಚಾಗಿದೆ.

ಫೇಕ್ ಎಲಿಮಿನೇಷನ್ ಮಾಡುವ ಮೂಲಕ ಕಾಮನ್ ಮ್ಯಾನ್ ಸ್ಪರ್ಧಿಗಳಿಗೆ ತಕ್ಕ ಪಾಠ ಕಳಿಸಲು ಬಿಗ್ ಬಾಸ್ ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ. ಈ ಪ್ರ್ಯಾಂಕ್‌ನಿಂದ ಮನೆಯೊಳಗಿನ ಸ್ಪರ್ಧಿಗಳು ಮತ್ತಷ್ಟು ಅಲರ್ಟ್ ಆಗಲಿದ್ದು, ಮುಂಬರುವ ಸಂಚಿಕೆಗಳು ಇನ್ನಷ್ಟು ರೋಚಕತೆಯನ್ನು ಪಡೆದುಕೊಳ್ಳಲಿವೆ.

ಇದನ್ನೂ ಓದಿ: ‘ಒಬ್ಬರನ್ನು ಮನೆಗೆ ಕಳುಹಿಸಿಯೇ ಹೋಗೋದು’; ಲಿಖಿತ್-ಮಂಜು ವಿರುದ್ಧ ತೊಡೆತಟ್ಟಿದ ಧನುಷ್

ಕಾಮಾನ್ ಮ್ಯಾನ್ ಸ್ಪರ್ಧಿಗಳು ಸಾಕಷ್ಟು ಕಿರಿಕಿರಿ ಉಂಟು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಈ ವಾರ ಅವರಿಗೆ ಸುದೀಪ್ ಕಡೆಯಿಂದ ಖಡಕ್ ಪ್ರಶ್ನೆಗಳು ಎದುರಾಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More