Karnataka Government Holidays List : 2027ರ ಸರ್ಕಾರಿ ರಜಾ ದಿನಗಳ ಪಟ್ಟಿ ಇಲ್ಲಿದೆ ನೋಡಿ, 18 ಸಾರ್ವತ್ರಿಕ ರಜೆ, 21 ಪರಿಮಿತ ರಜೆ
ಕರ್ನಾಟಕ ಸರ್ಕಾರವು 2027ರ ಅಧಿಕೃತ ರಜೆಗಳ ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು 18 ಸಾರ್ವತ್ರಿಕ ಮತ್ತು 19 ಪರಿಮಿತ ರಜೆಗಳನ್ನು ಘೋಷಿಸಲಾಗಿದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳೂ ರಜೆ ಇರಲಿವೆ. ಸರ್ಕಾರಿ ನೌಕರರು ಪೂರ್ವಾನುಮತಿ ಪಡೆದು 2 ಪರಿಮಿತ ರಜೆಗಳನ್ನು ತೆಗೆದುಕೊಳ್ಳಬಹುದು. ಕೊಡಗು ಜಿಲ್ಲೆಗೆ ಪ್ರತ್ಯೇಕ ಸ್ಥಳೀಯ ರಜೆಗಳೂ ಇವೆ. ರಜೆಗಳನ್ನು ಯೋಜಿಸಲು ಈ ಪಟ್ಟಿ ಸಹಕಾರಿ.

ಬೆಂಗಳೂರು, ನವೆಂಬರ್ 21: ಕರ್ನಾಟಕ ಸರ್ಕಾರವು 2027ನೇ ಸಾಲಿನ ಸರ್ಕಾರಿ ರಜೆಗಳ ಅಧಿಕೃತ ಪಟ್ಟಿಯನ್ನು ಪ್ರಕಟಿಸಿದೆ. ಮುಂದಿನ ವರ್ಷ ಒಟ್ಟು 18 ಸಾರ್ವತ್ರಿಕ ರಜೆಗಳನ್ನು ಘೋಷಿಸಲಾಗಿದ್ದು, ಇದರ ಜೊತೆಗೆ 19 ನಿರ್ಬಂಧಿತ ರಜೆಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಭಾನುವಾರಗಳ ಜೊತೆಗೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರಗಳೂ ಸರ್ಕಾರಿ ಕಚೇರಿಗಳಿಗೆ ರಜೆ ಇರಲಿದೆ. ನವೆಂಬರ್ 21ರಂದು ಹೊರಡಿಸಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಸೂಚನೆಯಲ್ಲಿ ಈ ಮಾಹಿತಿ ನೀಡಲಾಗಿದೆ.
2027ರ ಸಾರ್ವತ್ರಿಕ ರಜೆಗಳ ಪಟ್ಟಿ
- ಜನವರಿ 15 ಶುಕ್ರವಾರ ಮಕರ ಸಂಕ್ರಾಂತಿ
- ಜನವರಿ 26 ಮಂಗಳವಾರ ಗಣರಾಜ್ಯೋತ್ಸವ
- ಮಾರ್ಚ್ 6 ಶನಿವಾರ ಮಹಾಶಿವರಾತ್ರಿ
- ಮಾರ್ಚ್ 10 ಬುಧವಾರ ಖುತುಬ್-ಎ-ರಂಜಾನ್ಮಾ
- ರ್ಚ್ 26 ಶುಕ್ರವಾರ ಗುಡ್ ಫ್ರೈಡೇ
- ಏಪ್ರಿಲ್ 7 ಬುಧವಾರ ಯುಗಾದಿ
- ಏಪ್ರಿಲ್ 14 ಬುಧವಾರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
- ಮೇ 1 ಶನಿವಾರ ಕಾರ್ಮಿಕರ ದಿನಾಚರಣೆ
- ಮೇ 17 ಸೋಮವಾರ ಬಕ್ರೀದ್ಜೂ
- ನ್ 16 ಬುಧವಾರ ಮೊಹರಂ ಕಡೇ ದಿನ
- ಸೆಪ್ಟೆಂಬರ್ 4 ಶನಿವಾರ ವರಸಿದ್ಧಿ ವಿನಾಯಕ ವ್ರತ
- ಸೆಪ್ಟೆಂಬರ್ 29 ಬುಧವಾರ ಮಹಾಲಯ ಅಮಾವಾಸ್ಯೆ
- ಅಕ್ಟೋಬರ್ 2 ಶನಿವಾರ ಗಾಂಧಿ ಜಯಂತಿ
- ಅಕ್ಟೋಬರ್ 15 ಶುಕ್ರವಾರ ವಾಲ್ಮೀಕಿ ಜಯಂತಿ
- ಅಕ್ಟೋಬರ್ 28 ಗುರುವಾರ ನರಕ ಚತುರ್ದಶಿ
- ಅಕ್ಟೋಬರ್ 30 ಶನಿವಾರ ದೀಪಾವಳಿ
- ನವೆಂಬರ್ 1 ಸೋಮವಾರ ಕನ್ನಡ ರಾಜ್ಯೋತ್ಸವ
- ನವೆಂಬರ್ 16 ಮಂಗಳವಾರ ಕನಕದಾಸ ಜಯಂತಿ
19 ಪರಿಮಿತ ರಜೆಗಳೂ ಪ್ರಕಟ
ಸಾರ್ವತ್ರಿಕ ರಜೆಗಳ ಜೊತೆಗೆ ಸರ್ಕಾರ 19 ಪರಿಮಿತ ರಜೆಗಳನ್ನೂ ಪ್ರಕಟಿಸಿದೆ. ಇವುಗಳಲ್ಲಿ ಜನವರಿ 1ರ ಹೊಸ ವರ್ಷದ ದಿನ, ಫೆಬ್ರವರಿ 15ರ ಮಧ್ವನವಮಿ, ಮಾರ್ಚ್ 5ರ ಜುಮಾತ್-ಉಲ್-ವಿದಾ, ಏಪ್ರಿಲ್ 15ರ ಶ್ರೀರಾಮನವಮಿ, ಮೇ 20ರ ಬುದ್ಧ ಪೂರ್ಣಿಮೆ, ಆಗಸ್ಟ್ 24ರ ಶ್ರೀಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ 17ರ ವಿಶ್ವಕರ್ಮ ಜಯಂತಿ ಮತ್ತು ಡಿಸೆಂಬರ್ 24ರ ಕ್ರಿಸ್‌ಮಸ್ ಈವ್ ಸೇರಿವೆ.

ಪರಿಮಿತ ರಜೆಗಳ ಪಟ್ಟಿಯಲ್ಲಿ ವರಮಹಾಲಕ್ಷ್ಮಿ ವ್ರತ, ಋಗ್ ಉಪಾಕರ್ಮ, ಯಜುರ್ ಉಪಾಕರ್ಮ, ಸ್ವರ್ಣಗೌರಿ ವ್ರತ, ಕನ್ಯಾ ಮರಿಯಮ್ಮ ಜಯಂತಿ, ಅನಂತ ಪದ್ಮನಾಭ ವ್ರತ, ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ, ತುಲಾ ಸಂಕ್ರಮಣ ಮತ್ತು ಹುತ್ತರಿ ಹಬ್ಬವೂ ಇವೆ. ರಾಜ್ಯ ಸರ್ಕಾರಿ ನೌಕರರು ವರ್ಷದಲ್ಲಿ ಗರಿಷ್ಠ ಎರಡು ನಿರ್ಬಂಧಿತ ರಜೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಪೂರ್ವಾನುಮತಿ ಪಡೆದು ಬಳಸಿಕೊಳ್ಳಬಹುದು.
ಕೆಲವು ಹಬ್ಬಗಳಿಗೆ ಪ್ರತ್ಯೇಕ ರಜೆ ಇಲ್ಲ
2027ರಲ್ಲಿ ಮಹಾವೀರ ಜಯಂತಿ ಏಪ್ರಿಲ್ 18ರಂದು, ಬಸವೇಶ್ವರ ಜಯಂತಿ ಮೇ 9ರಂದು, ಸ್ವಾತಂತ್ರ್ಯ ದಿನಾಚರಣೆ ಮತ್ತು ಈದ್-ಮಿಲಾದ್ ಆಗಸ್ಟ್ 15ರಂದು ಬರುತ್ತವೆ. ಇವು ಭಾನುವಾರದಂದು ಇರುವುದರಿಂದ ಸಾರ್ವತ್ರಿಕ ರಜೆಗಳ ಪಟ್ಟಿಯಲ್ಲಿ ಪ್ರತ್ಯೇಕವಾಗಿ ಸೇರಿಸಿಲ್ಲ.
ಇದೇ ರೀತಿ, ಮಹಾನವಮಿ ಮತ್ತು ಆಯುಧ ಪೂಜೆ ಅಕ್ಟೋಬರ್ 9ರಂದು ಎರಡನೇ ಶನಿವಾರದಂದು, ವಿಜಯದಶಮಿ ಅಕ್ಟೋಬರ್ 10ರಂದು ಭಾನುವಾರದಂದು ಬರುತ್ತವೆ. ಕ್ರಿಸ್‌ಮಸ್ ಡಿಸೆಂಬರ್ 25ರಂದು ನಾಲ್ಕನೇ ಶನಿವಾರದಂದು ಇರುವುದರಿಂದ ಪ್ರತ್ಯೇಕ ರಜೆ ಘೋಷಿಸಿಲ್ಲ.
ಕೊಡಗು ಜಿಲ್ಲೆಗೆ ಮೂರು ಸ್ಥಳೀಯ ರಜೆ
ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಮೂರು ಸ್ಥಳೀಯ ರಜೆಗಳನ್ನು ಘೋಷಿಸಲಾಗಿದೆ. ಸೆಪ್ಟೆಂಬರ್ 3ರಂದು ಕೈಲ್ ಮುಹೂರ್ತ, ಅಕ್ಟೋಬರ್ 18ರಂದು ತುಲಾ ಸಂಕ್ರಮಣ ಮತ್ತು ಡಿಸೆಂಬರ್ 13ರಂದು ಹುತ್ತರಿ ಹಬ್ಬದ ಪ್ರಯುಕ್ತ ಸ್ಥಳೀಯ ರಜೆ ಇರಲಿದೆ. ಶಿಕ್ಷಣ ಇಲಾಖೆಗೆ ಸಂಬಂಧಿಸಿದ ರಜೆಗಳ ಪ್ರತ್ಯೇಕ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸಲಿದ್ದಾರೆ. ತುರ್ತು ಕೆಲಸಗಳಿಗಾಗಿ ಅಗತ್ಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸರ್ಕಾರಿ ಕಚೇರಿಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ನವೆಂಬರ್ 10, ಮಂಗಳವಾರ ಷೇರುಮಾರುಕಟ್ಟೆಗೆ ರಜೆ; ಈ ವರ್ಷ ಇರುವ ಇತರ ರಜಾದಿನಗಳಿವು…
ಮುಸ್ಲಿಂ ಹಬ್ಬಗಳ ದಿನಾಂಕಗಳು ಚಂದ್ರದರ್ಶನವನ್ನು ಅವಲಂಬಿಸಿರುವುದರಿಂದ, ಅಧಿಸೂಚನೆಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಹಬ್ಬ ಆಚರಣೆಯ ದಿನಾಂಕದಲ್ಲಿ ವ್ಯತ್ಯಾಸವಾದರೆ ಅದಕ್ಕೆ ಅನುಗುಣವಾಗಿ ರಜೆ ನೀಡುವ ಅವಕಾಶವನ್ನೂ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ 2027ರಲ್ಲಿ ಸರ್ಕಾರಿ ನೌಕರರು ತಮ್ಮ ರಜೆಗಳನ್ನು ಮುಂಚಿತವಾಗಿ ಯೋಜಿಸಿಕೊಳ್ಳಲು ಸರ್ಕಾರದ ಈ ಅಧಿಕೃತ ಪಟ್ಟಿ ಸಹಾಯಕವಾಗಲಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




