ಭಾರತ-ಪಾಕ್ ಹೈವೋಲ್ಟೇಜ್ ಕದನ; ಪಂದ್ಯ ಎಷ್ಟು ಗಂಟೆಗೆ, ಎಲ್ಲಿ ವೀಕ್ಷಿಸಬಹುದು?
ಭಾರತ A ಮತ್ತು ಪಾಕಿಸ್ತಾನ A ನಡುವಿನ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ 2026 ಕ್ರಿಕೆಟ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ನವೆಂಬರ್ 22 ರಂದು ದೋಹಾದಲ್ಲಿ ನಡೆಯುವ ಈ ಹೈವೋಲ್ಟೇಜ್ ಕಾದಾಟವನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಉಭಯ ತಂಡಗಳು ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸದಲ್ಲಿವೆ. ಈ ಮಹತ್ವದ ಪಂದ್ಯದ ನೇರ ಪ್ರಸಾರ, ಸಮಯ, ಸ್ಥಳ ಮತ್ತು ತಂಡಗಳ ವಿವರ ಇಲ್ಲಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕುತೂಹಲ. ಎರಡೂ ತಂಡಗಳು ಮೈದಾನಕ್ಕಿಳಿದರೆ ಸಾಕು, ಪಂದ್ಯದ ರೋಚಕತೆ ಮತ್ತೊಂದು ಹಂತಕ್ಕೆ ತಲುಪುತ್ತದೆ. ಇದೀಗ ಮತ್ತೊಮ್ಮೆ ಅಂತಹದ್ದೇ ಹೈವೋಲ್ಟೇಜ್ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ 2026ರ ಪಂದ್ಯದಲ್ಲಿ ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಇದೇ ಭಾನುವಾರ ಅಂದರೆ ನವೆಂಬರ್ 22 ರಂದು ಮುಖಾಮುಖಿಯಾಗಲಿವೆ. ಈ ಟೂರ್ನಿಯಲ್ಲಿ ಉಭಯ ತಂಡಗಳಿಗೂ ಇದು ಎರಡನೇ ಪಂದ್ಯವಾಗಿದೆ. ಹೀಗಾಗಿ ಗೆಲುವಿನ ಓಟ ಮುಂದುವರಿಸುವುದರ ಜೊತೆಗೆ ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳುವುದು ಎರಡೂ ತಂಡಗಳ ಗುರಿಯಾಗಿದೆ. ಯುವ ಆಟಗಾರರ ನಡುವಿನ ಈ ಕಾದಾಟದಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.
ಗೆಲುವಿನೊಂದಿಗೆ ಅಭಿಯಾನ ಆರಂಭ
ಭಾರತ ಎ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಭರ್ಜರಿ ಪ್ರದರ್ಶನ ನೀಡಿತ್ತು. ಬರೋಬ್ಬರಿ 306 ರನ್‌ಗಳ ಅಂತರದಿಂದ ಗೆಲುವು ದಾಖಲಿಸಿ ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿತ್ತು. ಇತ್ತ ಪಾಕಿಸ್ತಾನ ಎ ತಂಡ ಕೂಡ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ 61 ರನ್‌ಗಳ ಜಯ ಸಾಧಿಸಿತ್ತು. ಹೀಗಾಗಿ ಎರಡೂ ತಂಡಗಳು ಉತ್ತಮ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿವೆ. ಇದೀಗ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನದಲ್ಲಿ ಯಾವ ತಂಡ ಗೆಲುವಿನ ನಗೆ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಭಾರತ-ಪಾಕಿಸ್ತಾನ ನಡುವಿನ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಪಂದ್ಯ ಎಲ್ಲಿ ನಡೆಯಲಿದೆ?
ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳ ನಡುವಿನ ಈ ಹೈವೋಲ್ಟೇಜ್ ಪಂದ್ಯ ಕತಾರ್ ರಾಜಧಾನಿ ದೋಹಾದ ವೆಸ್ಟ್ ಎಂಡ್ ಪಾರ್ಕ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ-ಪಾಕಿಸ್ತಾನ ನಡುವಿನ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಪಂದ್ಯ ಎಷ್ಟು ಗಂಟೆಗೆ ಆರಂಭ?
ಭಾರತ-ಪಾಕಿಸ್ತಾನ ನಡುವಿನ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಪಂದ್ಯ ಮಧ್ಯಾಹ್ನ ಮಧ್ಯಾಹ್ನ 3.30ಕ್ಕೆ ಆರಂಭ.
ಭಾರತ-ಪಾಕಿಸ್ತಾನ ನಡುವಿನ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಪಂದ್ಯವನ್ನು ವೀಕ್ಷಿಸುವುದು ಹೇಗೆ?
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವನ್ನು ಟಿವಿಯಲ್ಲಿ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳ ಮೂಲಕ ವೀಕ್ಷಿಸಬಹುದು. ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಸ್ಮಾರ್ಟ್ ಟಿವಿಯಲ್ಲಿ ಸೋನಿಲೈವ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಪಂದ್ಯದ ನೇರ ಪ್ರಸಾರ ಲಭ್ಯವಿರಲಿದೆ.
ಒಂದು ವಿಕೆಟ್ ಜಯದ ರೋಚಕತೆ; ಏಷ್ಯಾಕಪ್ ಗೆದ್ದ ಭಾರತಕ್ಕೆ ಮೋದಿ ಅಭಿನಂದನೆ
ಉಭಯ ತಂಡಗಳು
ಭಾರತ ಎ: ತಿಲಕ್ ವರ್ಮಾ (ನಾಯಕ), ರಜತ್ ಪಾಟಿದಾರ್, ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಪ್ರಭ್ಸಿಮ್ರಾನ್ ಸಿಂಗ್, ರಿಂಕು ಸಿಂಗ್, ಕುಮಾರ್ ಕುಶಾಗ್ರಾ, ಸೂರ್ಯಾಂಶ್ ಶೆಡ್ಗೆ, ಶಹಬಾಜ್ ಅಹ್ಮದ್, ವಿಪ್ರಜ್ ನಿಗಮ್, ಹರ್ಷ್ ದುಬೆ, ತನುಷ್ ಕೋಟ್ಯಾನ್, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಅರ್ಷದ್ ಖಾನ್.
ಪಾಕಿಸ್ತಾನ ಎ: ಅಬ್ದುಲ್ ಸಮದ್ (ನಾಯಕ), ಅಹ್ಮದ್ ದನಿಯಾಲ್, ಅಲಿ ರಜಾ, ಡ್ಯಾನಿಶ್ ಅಜೀಜ್, ಫರ್ಹಾನ್ ಯೂಸುಫ್, ಹೈದರ್ ಅಲಿ, ಹಸನ್ ನವಾಜ್, ಮಾಜ್ ಸದಾಕತ್, ಮೊಹಮ್ಮದ್ ಹಸ್ನೈನ್, ಮುಹಮ್ಮದ್ ಇಮ್ರಾನ್ ರಾಂಧವಾ, ರೋಹೈಲ್ ನಜೀರ್, ಸಾದ್ ಮಸೂದ್, ಶಹಜೈಬ್ ಖಾನ್, ಶಮಿಲ್ ಹುಸೇಬ್, ಸುಫ್ಯಾನ್ ಮೊಕಿನ್.




