AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿರಾಜ್ ವಿಚಾರದಲ್ಲಿ ಕಾಂಗ್ರೆಸ್‌ನಲ್ಲೇ ಭಿನ್ನಮತ: ಮಸೂದ್‌ಗೆ ರಂಜೀತ್ ರಂಜನ್ ತಿರುಗೇಟು

ನ್ಯೂಜಿಲೆಂಡ್ ವಿರುದ್ಧ ಸಿರಾಜ್ ಅವರನ್ನು ತಂಡದಿಂದ ಕೈಬಿಟ್ಟಿದ್ದು ರಾಜಕೀಯ ವಿವಾದಕ್ಕೆ ತಿರುಗಿದೆ. ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಧಾರ್ಮಿಕ ತಾರತಮ್ಯ ಆರೋಪಿಸಿದರೆ, ಸ್ವಪಕ್ಷದ ರಂಜೀತ್ ರಂಜನ್ ಕ್ರೀಡೆಗೆ ರಾಜಕೀಯ ಮತ್ತು ಧರ್ಮವನ್ನು ಬೆರೆಸಬಾರದೆಂದರು. ಆಯ್ಕೆ ಸಾಮರ್ಥ್ಯ ಆಧರಿಸಿರಬೇಕು ಎಂದಿದ್ದು, ಈ ಬಗ್ಗೆ ಬಿಜೆಪಿ ಹಾಗೂ ಎಐಎಂಐಎಂ ಪ್ರತಿಕ್ರಿಯಿಸಿ, ಚರ್ಚೆಯನ್ನು ತೀವ್ರಗೊಳಿಸಿವೆ.

ಸಿರಾಜ್ ವಿಚಾರದಲ್ಲಿ ಕಾಂಗ್ರೆಸ್‌ನಲ್ಲೇ ಭಿನ್ನಮತ: ಮಸೂದ್‌ಗೆ ರಂಜೀತ್ ರಂಜನ್ ತಿರುಗೇಟು
Mohammed SirajImage Credit source: PTI
ಪೃಥ್ವಿಶಂಕರ
|

Updated on:Nov 21, 2026 | 5:37 PM

Share

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಆಡುವ ಹನ್ನೊಂದರ ಬಳಗಕ್ಕೆ ಆಯ್ಕೆ ಮಾಡದಿರುವ ವಿಚಾರ ಇದೀಗ ರಾಜಕೀಯ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ. ಸಿರಾಜ್ ಅವರನ್ನು ತಂಡದಿಂದ ಕೈಬಿಟ್ಟಿರುವುದರ ಹಿಂದೆ ಧಾರ್ಮಿಕ ತಾರತಮ್ಯವಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರಿಗೆ ಇದೀಗ ಸ್ವಪಕ್ಷದ ರಾಜ್ಯಸಭಾ ಸದಸ್ಯೆ ರಂಜೀತ್ ರಂಜನ್ ತಿರುಗೇಟು ನೀಡಿದ್ದಾರೆ. ಕ್ರೀಡೆಗೆ ಧರ್ಮ ಮತ್ತು ರಾಜಕೀಯವನ್ನು ಬೆರೆಸಬಾರದು. ಆಟಗಾರರ ಆಯ್ಕೆ ಅವರ ಸಾಮರ್ಥ್ಯ, ಪ್ರದರ್ಶನ ಮತ್ತು ಅರ್ಹತೆಯ ಆಧಾರದ ಮೇಲೆ ನಡೆಯಬೇಕು ಎಂದು ರಂಜೀತ್ ರಂಜನ್ ಕಿವಿಮಾತು ಹೇಳಿದ್ದಾರೆ.

ಕ್ರೀಡೆಯಲ್ಲಿ ನಾವು ಹಸ್ತಕ್ಷೇಪ ಮಾಡಬಾರದು

‘ಮಸೂದ್ ಜಿ ಅವರಿಗೆ ನಾನು ಹೇಳುವುದಿಷ್ಟೇ, ದಯವಿಟ್ಟು ರಾಜಕೀಯ ಮತ್ತು ಕ್ರೀಡೆಯನ್ನು ಪ್ರತ್ಯೇಕವಾಗಿಡಿ. ಕ್ರೀಡೆಯಲ್ಲಿ ನಾವು ಹಸ್ತಕ್ಷೇಪ ಮಾಡಬಾರದು. ಕ್ರೀಡೆಗೆ ತನ್ನದೇ ಆದ ನಿಯಮಗಳಿವೆ, ಅರ್ಹತೆಗೆ ತನ್ನದೇ ಆದ ಮಾನದಂಡಗಳಿವೆ. ಪ್ರತಿಯೊಬ್ಬ ಆಟಗಾರನಿಗೂ ತನ್ನದೇ ಆದ ಹೋರಾಟವಿರುತ್ತದೆ. ರಾಜಕೀಯದಲ್ಲಿ ನಾವು ನಮ್ಮದೇ ಲೆಕ್ಕಾಚಾರಗಳನ್ನು ಮಾಡಿಕೊಳ್ಳಬಹುದು. ಆದರೆ ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ರಾಜಕೀಯ ಚರ್ಚೆಗೆ ಎಳೆದು ತರಬಾರದು. ಇದು ಸಂಪೂರ್ಣವಾಗಿ ಒಪ್ಪಲಾಗದ ವಿಚಾರ’ ಎಂದು ಮಸೂದ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಇದಕ್ಕೂ ಮೊದಲು ಶುಕ್ರವಾರ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ್ದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ‘ಉತ್ತಮ ಪ್ರದರ್ಶನ ನೀಡಿದರೂ ಅವರಿಗೆ ತಂಡದಲ್ಲಿ ಅವಕಾಶ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಅವರ ಹೆಸರು ‘ಸಿರಾಜ್’ ಎಂಬ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಲ್ಲ. ಉತ್ತಮ ಪ್ರದರ್ಶನದ ಹೊರತಾಗಿಯೂ ತಂಡಕ್ಕೆ ಆಯ್ಕೆ ಮಾಡದಿದ್ದರೆ ಅದು ಸ್ಪಷ್ಟ ತಾರತಮ್ಯವೇ ಆಗಿದೆ’ ಎಂದು ಮಸೂದ್ ಆರೋಪಿಸಿದ್ದರು.

ಬಿಜೆಪಿಯಿಂದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ

ಮಸೂದ್ ಹೇಳಿಕೆಗೆ ಬಿಜೆಪಿ ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಕಾಂಗ್ರೆಸ್ ವಿರುದ್ಧ ವೋಟ್ ಬ್ಯಾಂಕ್ ರಾಜಕಾರಣದ ಆರೋಪ ಮಾಡಿದ್ದು, ‘ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು. ಇದೀಗ ಕ್ರಿಕೆಟ್ ತಂಡದ ಆಯ್ಕೆಯಲ್ಲೂ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಸಿರಾಜ್ ಅವರನ್ನು ಮುಸ್ಲಿಂ ಎಂಬ ಕಾರಣಕ್ಕೆ ಕೈಬಿಡಲಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ರವೀಂದ್ರ ಜಡೇಜಾ ಅವರನ್ನೂ ತಂಡದಿಂದ ಹೊರಗಿಡಲಾಗಿದೆ. ಪ್ರತಿಯೊಬ್ಬ ಕ್ರಿಕೆಟಿಗನೂ ಭಾರತದ ಜೆರ್ಸಿ ಧರಿಸಿ ದೇಶವನ್ನು ಪ್ರತಿನಿಧಿಸುತ್ತಾನೆ. ಭಾರತೀಯ ಕ್ರಿಕೆಟ್ ತಂಡವನ್ನು ಧರ್ಮದ ಆಧಾರದ ಮೇಲೆ ವಿಭಜಿಸುವುದನ್ನು ನಿಲ್ಲಿಸಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಆದರೆ ಟೀಕೆಗಳಿಗೆ ಜಗ್ಗದ ಇಮ್ರಾನ್ ಮಸೂದ್, ಶನಿವಾರ ಮತ್ತೆ ತಮ್ಮ ಆರೋಪವನ್ನು ಸಮರ್ಥಿಸಿಕೊಂಡಿದ್ದು, ‘ಮೊಹಮ್ಮದ್ ಶಮಿ ಇದ್ದಾರೆ, ಸರ್ಫರಾಜ್ ಇದ್ದಾರೆ. ಇನ್ನೂ ಅನೇಕ ಆಟಗಾರರಿದ್ದಾರೆ. ತಂಡದ ಆಯ್ಕೆ ಪ್ರದರ್ಶನದ ಆಧಾರದ ಮೇಲೆ ನಡೆಯಬೇಕು. ಒಬ್ಬ ಆಟಗಾರ ಉತ್ತಮವಾಗಿ ಆಡುತ್ತಿದ್ದರೆ, ಆತ ಎಲ್ಲಿಂದ ಬಂದಿದ್ದಾನೆ ಎಂಬುದು ಮುಖ್ಯವಾಗಬಾರದು’ ಎಂದು ಹೇಳಿದ್ದಾರೆ.

ICC Awards: ಮೊಹಮ್ಮದ್ ಸಿರಾಜ್ ಐತಿಹಾಸಿಕ ಸಾಧನೆಗೆ ಒಲಿದ ಐಸಿಸಿ ಪ್ರಶಸ್ತಿ

ಸಿರಾಜ್ ಪರ ವಾರಿಸ್ ಪಠಾಣ್ ಧ್ವನಿ

ಎಐಎಂಐಎಂ ನಾಯಕ ವಾರಿಸ್ ಪಠಾಣ್ ಕೂಡ ಮಸೂದ್ ಅವರ ಅಭಿಪ್ರಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ‘ಸರ್ಫರಾಜ್ ವಿಚಾರದಲ್ಲೂ ಇದೇ ಆಗಿತ್ತು. ಮೊಹಮ್ಮದ್ ಶಮಿ ವಿಚಾರದಲ್ಲೂ ಹೀಗೆಯೇ ನಡೆಯಿತು. ಈಗ ಸಿರಾಜ್ ಸಕಾರಾತ್ಮಕ ಮನೋಭಾವದಿಂದ ಆಡುತ್ತಾರೆ. ತಂಡಕ್ಕೆ ಅಗತ್ಯವಿದ್ದಾಗಲೆಲ್ಲಾ ಉತ್ತಮ ಪ್ರದರ್ಶನ ನೀಡುತ್ತಾರೆ. ಎಲ್ಲವೂ ಅವರ ಪರವಾಗಿದ್ದರೂ ಅವರನ್ನು ಏಕೆ ಆಯ್ಕೆ ಮಾಡುತ್ತಿಲ್ಲ? ಬೆಂಚ್‌ನಲ್ಲಿ ಏಕೆ ಕೂರಿಸಲಾಗಿದೆ? ಇನ್ನು ಮುಂದೆ ಆಯ್ಕೆ ಪ್ರತಿಭೆ ಮತ್ತು ಪ್ರದರ್ಶನದ ಆಧಾರದ ಮೇಲೆ ನಡೆಯುತ್ತದೆಯೇ ಅಥವಾ ಆಟಗಾರನ ಹೆಸರಿನ ಆಧಾರದ ಮೇಲೆ ನಡೆಯುತ್ತದೆಯೇ ಎಂಬ ಪ್ರಶ್ನೆ ಮೂಡುತ್ತದೆ’ ಎಂದು ಪಠಾಣ್ ಹೇಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:32 pm, Sat, 21 November 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
ಸರ್ಕಾರಿ ಜಮೀನು ಸಿಬ್ಬಂದಿ ಹೆಸರಿಗೆ ವರ್ಗಾವಣೆ; ಅಧಿಕಾರಿಗಳು ಸಸ್ಪೆಂಡ್
ಸರ್ಕಾರಿ ಜಮೀನು ಸಿಬ್ಬಂದಿ ಹೆಸರಿಗೆ ವರ್ಗಾವಣೆ; ಅಧಿಕಾರಿಗಳು ಸಸ್ಪೆಂಡ್
ಠಾಣೆಗಳಲ್ಲಿ ಇನ್ಮುಂದೆ ನೋ ಸೆಟ್ಲ್‌ಮೆಂಟ್: ನೂತನ ಚೀಫ್ ಕಮಿಷನರ್ ಹಿತೇಂದ್ರ
ಠಾಣೆಗಳಲ್ಲಿ ಇನ್ಮುಂದೆ ನೋ ಸೆಟ್ಲ್‌ಮೆಂಟ್: ನೂತನ ಚೀಫ್ ಕಮಿಷನರ್ ಹಿತೇಂದ್ರ
"ಸನ್ಯಾಸಿ, ಸಿಎಂ ಎಲ್ಲವೂ ಹೊರಗಷ್ಟೇ, ಅಮ್ಮನ ಮುಂದೆ ಕೇವಲ ಮಗ
ಕಿಚ್ಚನ ಪಂಚಾಯ್ತಿ: ಅಧಿಕಾರದ ಉಪಯೋಗ, ದುರುಪಯೋಗದ ಚರ್ಚೆ
ಕಿಚ್ಚನ ಪಂಚಾಯ್ತಿ: ಅಧಿಕಾರದ ಉಪಯೋಗ, ದುರುಪಯೋಗದ ಚರ್ಚೆ
ವಿದ್ಯಾಭ್ಯಾಸಕ್ಕೆ ನೆರವಾಗಿದ್ದವನಿಂದಲೇ ಕೃತ್ಯ
ವಿದ್ಯಾಭ್ಯಾಸಕ್ಕೆ ನೆರವಾಗಿದ್ದವನಿಂದಲೇ ಕೃತ್ಯ
ಹಿರಿಯೂರು ಉಪಚುನಾವಣೆ: ಅಮಿತ್​ ಶಾ ಭೇಟಿಯಾಗಿ ರಿಪೋರ್ಟ್​ ಕೊಟ್ಟ ವಿಜಯೇಂದ್ರ
ಹಿರಿಯೂರು ಉಪಚುನಾವಣೆ: ಅಮಿತ್​ ಶಾ ಭೇಟಿಯಾಗಿ ರಿಪೋರ್ಟ್​ ಕೊಟ್ಟ ವಿಜಯೇಂದ್ರ
ಬಸವ ಮಂಟಪ ಕೃತಿ ವಿವಾದ: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
ಬಸವ ಮಂಟಪ ಕೃತಿ ವಿವಾದ: ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ವಶಕ್ಕೆ
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ