AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಕೋಪದಲ್ಲಿದ್ದಾಗ ಈ ಮಾತುಗಳನ್ನಾಡುವ ತಪ್ಪನ್ನು ಎಂದಿಗೂ ಮಾಡ್ಬೇಡಿ

ಕೋಪವು ಮನುಷ್ಯನ ಸಹಜ ಗುಣ. ಕೋಪ ಎಲ್ಲರಿಗೂ ಬಂದೇ ಬರುತ್ತದೆ. ಆದರೆ ಕೆಲವರು ಮಾತ್ರ ಕೋಪ ಬಂದಾಗ ಅತಿಯಾಗಿ ಆಡುತ್ತಾರೆ. ಏನೇನೋ ಮಾತುಗಳನ್ನಾಡಿ ಬೇರೆಯವರಿಗೆ ನೋವುಂಟುಮಾಡುತ್ತಾರೆ. ಈ ರೀತಿ ಮಾಡುವುದು ತುಂಬಾನೇ ದೊಡ್ಡ ತಪ್ಪು. ಅದರಲ್ಲೂ ಕೋಪದಲ್ಲಿರುವಾಗ ಈ ಐದು ಕೆಲಸವನ್ನು ಮಾಡುವುದರಿಂದ ಒಂದು ಸುಂದರ ಸಂಬಂಧವೇ ಹಾಳಾಗಬಹುದು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಹಾಗಿದ್ದರೆ ಕೋಪದಲ್ಲಿ ಯಾವೆಲ್ಲಾ ಕೆಲಸಗಳನ್ನು ಮಾಡಬಾರದು ಎಂಬುದನ್ನು ನೋಡೋಣ ಬನ್ನಿ.

Chanakya Niti: ಕೋಪದಲ್ಲಿದ್ದಾಗ ಈ ಮಾತುಗಳನ್ನಾಡುವ ತಪ್ಪನ್ನು ಎಂದಿಗೂ ಮಾಡ್ಬೇಡಿ
ಸಾಂದರ್ಭಿಕ ಚಿತ್ರ Image Credit source: Pexels
ಮಾಲಾಶ್ರೀ ಅಂಚನ್​
|

Updated on: Nov 21, 2026 | 8:27 PM

Share

ಕೋಪ (Anger) ಮನುಷ್ಯನ ಸಹಜ ಗುಣ. ಯಾರಿಗೆ ತಾನೇ ಕೋಪ ಬರೋದಿಲ್ಲ ಹೇಳಿ, ಪ್ರತಿಯೊಬ್ಬರೂ ಕೂಡ ಒಂದಲ್ಲಾ ಒಂದು ವಿಚಾರಕ್ಕೆ ಕೋಪ ಮಾಡಿಕೊಳ್ಳುತ್ತಾರೆ. ಇದರಲ್ಲಿ ಅನೇಕರು ಮಾಡುವ ತಪ್ಪೇನೆಂದರೆ, ಕೋಪದಲ್ಲಿ ಏನೇನೋ ಮಾತುಗಳನ್ನಾಡುವುದು. ಕೋಪದಲ್ಲಾಡುವ ಈ ಕಠೋರ ಮಾತುಗಳಿಗೆ ಒಂದು ಸುಂದರ ಸಂಬಂಧವನ್ನೇ ಹಾಳು ಮಾಡುವ ಶಕ್ತಿಯಿದೆ. ಹಾಗಾಗಿ ಕೋಪಗೊಂಡಾಗಲೆಲ್ಲಾ ಶಾಂತ ರೀತಿಯಲ್ಲಿ ವರ್ತಿಸುವುದು, ಮೌನವಾಗಿರುವುದು ತುಂಬಾನೇ ಮುಖ್ಯ ಎಂದಿದ್ದಾರೆ ಆಚಾರ್ಯ ಚಾಣಕ್ಯ. ಅದರಲ್ಲೂ ಕೋಪದಲ್ಲಿರುವಾಗ ಈ ಕೆಲವೊಂದು ಮಾತುಗಳನ್ನು ಆಡಲೇಬಾರದು ಎಂದಿದ್ದಾರೆ. ಈ ಕುರಿತ ಪೂರ್ಣ ವಿವರ ಇಲ್ಲಿದೆ.

ಕೋಪದಲ್ಲಿ ಈ ಮಾತುಗಳನ್ನಾಡಬೇಡಿ:

ಕೋಪದಲ್ಲಿ ಯಾರನ್ನೂ ಅವಮಾನಿಸಬಾರದು:

ಆಚಾರ್ಯ ಚಾಣಕ್ಯರ ಪ್ರಕಾರ, ನಾವು ನಮ್ಮ ಮಾತನ್ನು ನಿಯಂತ್ರಿಸಬೇಕು ಮತ್ತು ಯಾರೊಂದಿಗೂ ಅಗೌರವದಿಂದ ಮಾತನಾಡುವುದನ್ನು ತಪ್ಪಿಸಬೇಕು. ಮನೆಯಲ್ಲಿಯೇ ಆಗಿರಲಿ ಅಥವಾ ಕೆಲಸದ ಸ್ಥಳದಲ್ಲಿಯೇ ಆಗಿರಲಿ, ನೀವು ಕೋಪದಲ್ಲಿ ಎಂದಿಗೂ ಅವಮಾನಿಸಲು ಹೋಗಬೇಡಿ. ಏಕೆಂದರೆ ಇದರಿಂದ ಸುಂದರ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ. ಇದಲ್ಲದೆ ಕೆಲಸದ ಸ್ಥಳದಲ್ಲಿ ನೀವು ಯಾರನ್ನಾದರೂ ಅವಮಾನಿಸಿದರೆ ಇದು ಕೆಲಸದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಆದ್ದರಿಂದ ಕೋಪ ಬಂದಾಗ ಯಾರಿಗೂ ಚುಚ್ಚು ಮಾತುಗಳನ್ನಾಡಬೇಡಿ.

ಹಿಂದಿನ ತಪ್ಪುಗಳ ಬಗ್ಗೆ ಪದೇ ಪದೇ ಹೇಳುವುದು:

ಕೆಲವರು ಜಗಳವಾಡುವಾಗ, ತಾವು ಯಾರೊಂದಿಗೆ ಜಗಳವಾಡುತ್ತಿದ್ದಾರೋ ಆ ವ್ಯಕ್ತಿಯ ಹಿಂದಿನ ತಪ್ಪುಗಳ ಬಗ್ಗೆ ಪದೇ ಪದೇ ಮಾತನಾಡುತ್ತಾರೆ. ಈ ಸಣ್ಣ ತಪ್ಪು ಬೆಂಕಿಗೆ ತುಪ್ಪ ಸುರಿದಂತೆ, ಇದು ಜಗಳವನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಅಲ್ಲದೆ ಈ ಒಂದು ತಪ್ಪು ಎದುರಿರುವ ವ್ಯಕ್ತಿಯ ಮನಸ್ಸಿಗೆ ಸಾಕಷ್ಟು ನೋವನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೋಪಗೊಂಡಾಗ ಈ ರೀತಿ ಮಾತನಾಡುವ ಬದಲು ಮೌನವಾಗಿರುವುದೇ ಲೇಸು. ಇದು ಜಗಳವನ್ನು ತಣಿಸಲು ಸಹಾಯ ಮಾಡುತ್ತದೆ.

ಇನ್ನೊಬ್ಬ ವ್ಯಕ್ತಿಯ ಕುಟುಂಬದ ಬಗ್ಗೆ ಕೆಟ್ಟದಾಗಿ ಮಾತನಾಡುವುದು:

ಕೆಲವರಿಗೆ ಕೋಪದಲ್ಲಿ ಏನೇನೋ ಮಾತನಾಡುವ ಅಭ್ಯಾಸ ಇರುತ್ತದೆ. ತಾವು ಯಾರ ಮೇಲೆ ಕೋಪ ಮಾಡಿಕೊಂಡಿದ್ದಾರೋ, ಅವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನಾಡುವುದಲ್ಲದೆ, ಅವರ ಕುಟುಂಬವನ್ನೂ ಜಗಳಕ್ಕೆ ಎಳೆದು ತರುತ್ತಾರೆ. ಈ ರೀತಿ ಬೇರೆಯವರ ಪೋಷಕರು, ಒಡಹುಟ್ಟಿದವರು ಅಥವಾ ಅವರ ಇತರ ಕುಟುಂಬ ಸದಸ್ಯರ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವುದು ಗಂಭೀರವಾದ ತಪ್ಪು. ಇದು ಆ ವ್ತಕ್ತಿಯನ್ನು ಆಳವಾಗಿ ನೋಯಿಸಬಹುದು. ಆದ್ದರಿಂದ ಮಾತುಗಳ ಮೇಲೆ ನಿಗಾ ವಹಿಸುವುದು ತುಂಬಾನೇ ಮುಖ್ಯ ಎಂದಿದ್ದಾರೆ ಚಾಣಕ್ಯ.

ಇದನ್ನೂ ಓದಿ: ಅತ್ತೆ-ಸೊಸೆ ಹೀಗಿದ್ದರೆ ಮನೆಯಲ್ಲಿ ಯಾವುದೇ ಜಗಳಗಳು ನಡೆಯೋಲ್ಲ ಎಂದಿದ್ದಾರೆ ಚಾಣಕ್ಯ

ಒಬ್ಬರ ವೈಯಕ್ತಿಕ ಮಾಹಿತಿಯನ್ನು ಇತರರಿಗೆ ಹೇಳಬೇಡಿ:

ಯಾವುದೇ ಸಂಬಂಧದ ಅಡಿಪಾಯ ನಂಬಿಕೆಯ ಮೇಲೆ ನಿಂತಿದೆ. ಹೀಗಿರುವಾಗ ಕೋಪದಲ್ಲಿ ಯಾರೊಬ್ಬರ ವೈಯಕ್ತಿಕ ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು. ಕೆಲವರು ಯಾರೊಬ್ಬರ ಜೊತೆ ಕೋಪ ಮಾಡಿಕೊಂಡರೆ, ಆ ಕೋಪದಲ್ಲಿ ಅವರ ವೈಯಕ್ತಿಕ ಮಾಹಿತಿ, ತಪ್ಪುಗಳು, ಸೀಕ್ರೆಟ್‌ಗಳನ್ನು ಇತರರ ಬಳಿ ಶೇರ್‌ ಮಾಡಿ ಅವರನ್ನು ಅವಮಾನಿಸಬಾರದು. ಇದು ನಿಮ್ಮ ಮೇಲಿನ ಅವರ ನಂಬಿಕೆಯನ್ನು ಮುರಿಯುವುದಲ್ಲದೆ, ಸಂಬಂಧವನ್ನು ಹಾಳು ಮಾಡಬಹುದು. ಜೊತೆಗೆ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯೂ ಇದೆ ಎಂದಿದ್ದಾರೆ ಚಾಣಕ್ಯ.

ಸಂಬಂಧವನ್ನು ಕೊನೆಗೊಳಿಸುವ ಮಾತುಗಳನ್ನಾಡುವುದು ತಪ್ಪು ಮಾಡಬೇಡಿ:

ಕೆಲವೊಮ್ಮೆ, ಸಣ್ಣ ವಿಷಯಗಳ ಬಗ್ಗೆ ವಾದಗಳು ಹೇಗೆ ಹೆಚ್ಚಾಗುತ್ತವೆ. ಈ ಸಮಯದಲ್ಲಿ ಹೆಚ್ಚಿನವರು ಸಂಬಂಧವನ್ನು ಕೊನೆಗೊಳಿಸುವ ಮಾತುಗಳನ್ನಾಡುತ್ತಾರೆ. ಈ ರೀತಿಯ ಪುನರಾವರ್ತಿತ ಹೇಳಿಕೆಗಳು ಸಂಬಂಧದ ಮೇಲಿನ ನಂಬಿಕೆಯನ್ನು ಕುಗ್ಗಿಸುತ್ತವೆ. ಪ್ರತಿ ಸಣ್ಣ ವಿಷಯಕ್ಕೂ ಬ್ರೇಕಪ್‌ ಅಥವಾ ಸಂಬಂಧವನ್ನು ಕೊನೆಗೊಳಿಸುವ ಬೆದರಿಕೆ ಹಾಕಿದಾಗ ಅಂತಹ ಸುಂದರ ಸಂಬಂಧವೇ ಹಾಳಾಗುವ ಸಾಧ್ಯತೆ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More