AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನವೆಂಬರ್ ತಿಂಗಳಲ್ಲಿ ದೀಪಾವಳಿ, ಕನಕದಾಸ ಜಯಂತಿ ಇತ್ಯಾದಿ ಹಬ್ಬ ಹರಿದಿನ; 15 ದಿನಗಳವರೆಗೆ ಬ್ಯಾಂಕ್ ರಜೆ

ಆರ್​ಬಿಐ ಹಾಲಿಡೇ ಕ್ಯಾಲೆಂಡರ್ ಪ್ರಕಾರ, 2026ರ ನವೆಂಬರ್​ನಲ್ಲಿ ಭಾರತದಾದ್ಯಂತ ಬ್ಯಾಂಕುಗಳಿಗೆ 15 ದಿನಗಳವರೆಗೆ ರಜೆ ಇದೆ. ಇದರಲ್ಲಿ ದೀಪಾವಳಿ ಹಬ್ಬ, ವಿವಿಧ ಜಯಂತಿಗಳು ಇತ್ಯಾದಿ ವಿಶೇಷ ದಿನಗಳು ಇವೆ. ಕರ್ನಾಟಕದಲ್ಲಿ 8 ದಿನಗಳು ರಜೆ ಇವೆ. ದೀಪಾವಳಿ ಹಬ್ಬ ಹಾಗೂ ಕನಕದಾಸ ಜಯಂತಿ ದಿನಗಳು ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ರಜೆ ಇದೆ.

ನವೆಂಬರ್ ತಿಂಗಳಲ್ಲಿ ದೀಪಾವಳಿ, ಕನಕದಾಸ ಜಯಂತಿ ಇತ್ಯಾದಿ ಹಬ್ಬ ಹರಿದಿನ; 15 ದಿನಗಳವರೆಗೆ ಬ್ಯಾಂಕ್ ರಜೆ
ಬ್ಯಾಂಕ್Image Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 28, 2026 | 3:27 PM

Share

ನವದೆಹಲಿ, ಅಕ್ಟೋಬರ್ 28: ನವೆಂಬರ್ ತಿಂಗಳಲ್ಲಿ ದೀಪಾವಳಿ, ಬಲಿಪಾಢ್ಯಮಿ, ಧನಲಕ್ಷ್ಮೀ ಪೂಜೆ, ಕನಕದಾಸ ಜಯಂತಿ ಇತ್ಯಾದಿ ಹಲವು ಹಬ್ಬ ಹರಿದಿನಗಳು ಇವೆ. ಶನಿವಾರ ಮತ್ತು ಭಾನುವಾರದ ರಜೆಗಳನ್ನೂ ಸೇರಿಸಿ 15 ದಿನಗಳವರೆಗೆ ರಜೆ ಇದೆ. ಇದರಲ್ಲಿ ಪ್ರಾದೇಶಿಕ ವಿಶೇಷ ರಜೆಗಳೂ ಒಳಗೊಂಡಿವೆ. ಕರ್ನಾಟಕದಲ್ಲಿ ಒಟ್ಟು 8 ದಿನಗಳಷ್ಟು ರಜೆ ಇದೆ.

2026ರ ನವೆಂಬರ್​ನಲ್ಲಿ ದೇಶಾದ್ಯಂತ ಇರುವ ಬ್ಯಾಂಕ್ ರಜೆಗಳು

  • ನವೆಂಬರ್ 1: ಭಾನುವಾರದ ರಜೆ
  • ನವೆಂಬರ್ 8: ಭಾನುವಾರದ ರಜೆ
  • ನವೆಂಬರ್ 9, ಸೋಮವಾರ: ದೀಪಾವಳಿ, ಲಕ್ಷ್ಮೀ ಪೂಜೆ, ಗೋವರ್ಧನ್ ಪೂಜೆ (ಹಲವು ರಾಜ್ಯಗಳಲ್ಲಿ ರಜೆ)
  • ನವೆಂಬರ್ 10, ಮಂಗಳವಾರ: ದೀಪಾವಳಿ, ಬಲಿಪಾಡ್ಯಮಿ, ವಿಕ್ರಮ ಸಂವತ್ಸರ ಹೊಸ ವರ್ಷ (ಕರ್ನಾಟಕ ಸೇರಿ ಹಲವೆಡೆ ರಜೆ)
  • ನವೆಂಬರ್ 11, ಬುಧವಾರ: ಭಾಯ್ ದೂಜ್, ನಿಂಗೋಲ್ ಚಕ್ಕೋಬಾ, ಚಿತ್ರಗುಪ್ತ್ ಜಯಂತಿ (ಬಂಗಾಳ, ಉತ್ತರಪ್ರದೇಶ, ಹಿಮಾಚಲ, ಸಿಕ್ಕಿಂ ಮೊದಲಾದೆಡೆ ರಜೆ)
  • ನವೆಂಬರ್ 13, ಶುಕ್ರವಾರ: ವಂಗಲ ಉತ್ಸವ (ಮೇಘಾಲಯದಲ್ಲಿ ರಜೆ)
  • ನವೆಂಬರ್ 14: ಎರಡನೇ ಶನಿವಾರದ ರಜೆ
  • ನವೆಂಬರ್ 15: ಭಾನುವಾರದ ರಜೆ
  • ನವೆಂಬರ್ 16, ಸೋಮವಾರ: ಛಾತ್ ಪೂಜೆ (ಬಿಹಾರ, ಜಾರ್ಖಂಡ್ ರಾಜ್ಯಗಳಲ್ಲಿ ರಜೆ)
  • ನವೆಂಬರ್ 20, ಶುಕ್ರವಾರ: ಇಗಸ್ ಬಾಗವಲ್ (ಉತ್ತರಾಖಂಡ್​ನಲ್ಲಿ ರಜೆ)
  • ನವೆಂಬರ್ 22: ಭಾನುವಾರದ ರಜೆ
  • ನವೆಂಬರ್ 23, ಸೋಮವಾರ: ಸೆಂಗ್ ಕುಟ್ ಸ್ನೆಮ್ (ಮೇಘಾಲಯ ರಾಜ್ಯದಲ್ಲಿ ರಜೆ)
  • ನವೆಂಬರ್ 24, ಮಂಗಳವಾರ: ಗುರು ನಾನಕ್ ಜಯಂತಿ, ಕಾರ್ತಿಕ ಪೂರ್ಣಿಮಾ (ದೆಹಲಿ, ಮಹಾರಾಷ್ಟ್ರ, ಬಂಗಾಳ, ಚಂಡೀಗಡ, ರಾಜಸ್ಥಾನ, ಯುಪಿ, ತೆಲಂಗಾಣ, ಮಧ್ಯಪ್ರದೇಶ ರಾಜ್ಯಗಳಲ್ಲಿ ರಜೆ)
  • ನವೆಂಬರ್ 27, ಶುಕ್ರವಾರ: ಕನಕದಾಸ ಜಯಂತಿ
  • ನವೆಂಬರ್ 29: ಭಾನುವಾರದ ರಜೆ

ಇದನ್ನೂ ಓದಿ: Gold Rates 28 October: ಚಿನ್ನದ ಬೆಲೆ ಸತತ ನಾಲ್ಕನೇ ದಿನವೂ ಏರಿಕೆ; ಇಲ್ಲಿದೆ ದರಪಟ್ಟಿ

ಕರ್ನಾಟಕದಲ್ಲಿ ನವೆಂಬರ್​ನಲ್ಲಿ ಬ್ಯಾಂಕ್ ರಜಾದಿನಗಳು

  • ನವೆಂಬರ್ 1: ಭಾನುವಾರದ ರಜೆ
  • ನವೆಂಬರ್ 8: ಭಾನುವಾರದ ರಜೆ
  • ನವೆಂಬರ್ 10, ಮಂಗಳವಾರ: ದೀಪಾವಳಿ, ಬಲಿಪಾಡ್ಯಮಿ
  • ನವೆಂಬರ್ 14: ಎರಡನೇ ಶನಿವಾರದ ರಜೆ
  • ನವೆಂಬರ್ 15: ಭಾನುವಾರದ ರಜೆ
  • ನವೆಂಬರ್ 22: ಭಾನುವಾರದ ರಜೆ
  • ನವೆಂಬರ್ 27, ಶುಕ್ರವಾರ: ಕನಕದಾಸ ಜಯಂತಿ
  • ನವೆಂಬರ್ 29: ಭಾನುವಾರದ ರಜೆ

ಬ್ಯಾಂಕ್ ರಜಾದಿನಗಳಂದು ಬ್ಯಾಂಕ್ ಕಚೇರಿ ಬಾಗಿಲು ಬಂದ್ ಆಗಿರುತ್ತದಾದರೂ, ಹೆಚ್ಚಿನ ಬ್ಯಾಂಕಿಂಗ್ ಸೇವೆಗಳು ಆನ್​ಲೈನ್​ನಲ್ಲಿ ಲಭ್ಯ ಇರುತ್ತವೆ. ಕ್ಯಾಷ್​ಗಾಗಿ ಎಟಿಎಂಗಳು ತೆರೆದಿರುತ್ತವೆ. ಯುಪಿಐ, ಆನ್​ಲೈನ್ ಬ್ಯಾಂಕಿಂಗ್, ಫೋನ್ ಬ್ಯಾಂಕಿಂಗ್ ಇತ್ಯಾದಿ 24 ಗಂಟೆ ಲಭ್ಯ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಬಳ್ಳಾರಿಯ ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
ಬಳ್ಳಾರಿಯ ಹೋಟೆಲ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ
ಫ್ರೀ ಟೀ-ಕಾಫಿಗಾಗಿ ಬೇಕರಿ ಒಡತಿಗೆ ಜೀವ ಬೆದರಿಕೆ!
ಫ್ರೀ ಟೀ-ಕಾಫಿಗಾಗಿ ಬೇಕರಿ ಒಡತಿಗೆ ಜೀವ ಬೆದರಿಕೆ!
ಬರದಿಂದ ತತ್ತರಿಸಿದ್ದ ಬೆಂಗಳೂರು ದಕ್ಷಿಣದಲ್ಲಿ ವರುಣ ಕೃಪೆ: ಕೆರೆಗಳು ಫುಲ್!
ಬರದಿಂದ ತತ್ತರಿಸಿದ್ದ ಬೆಂಗಳೂರು ದಕ್ಷಿಣದಲ್ಲಿ ವರುಣ ಕೃಪೆ: ಕೆರೆಗಳು ಫುಲ್!
'ಮತದಾರರ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇವೆ': ಸಿಎಂ ಡಿಕೆಶಿ
'ಮತದಾರರ ತೀರ್ಪನ್ನು ಗೌರವಪೂರ್ವಕವಾಗಿ ಸ್ವೀಕರಿಸುತ್ತೇವೆ': ಸಿಎಂ ಡಿಕೆಶಿ
'ಪ್ರಜ್ವಲ್​​ ರೇವಣ್ಣ ಸಿ.ಡಿ ತಂದುಕೊಟ್ಟಿದ್ದೇ ಕುಮಾರಸ್ವಾಮಿಯಂತೆ'
'ಪ್ರಜ್ವಲ್​​ ರೇವಣ್ಣ ಸಿ.ಡಿ ತಂದುಕೊಟ್ಟಿದ್ದೇ ಕುಮಾರಸ್ವಾಮಿಯಂತೆ'
ಬಿಜೆಪಿ-ಜೆಡಿಎಸ್​​ ಒಂದಾಗಿರುವ ಕಾರಣ ಅವರ ಶಕ್ತಿ ಹೆಚ್ಚಿದೆ: ಸತೀಶ್​​
ಬಿಜೆಪಿ-ಜೆಡಿಎಸ್​​ ಒಂದಾಗಿರುವ ಕಾರಣ ಅವರ ಶಕ್ತಿ ಹೆಚ್ಚಿದೆ: ಸತೀಶ್​​
ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಪಲ್ಸರ್ ಬೈಕ್!
ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಪಲ್ಸರ್ ಬೈಕ್!
ಸೌಜನ್ಯ ಪ್ರಕರಣ ಮರುತನಿಖೆ: ಸಿಎಂ ಡಿಕೆಶಿ ಭೇಟಿಯಾದ ಎಸ್‌ಐಟಿ ಮುಖ್ಯಸ್ಥ
ಸೌಜನ್ಯ ಪ್ರಕರಣ ಮರುತನಿಖೆ: ಸಿಎಂ ಡಿಕೆಶಿ ಭೇಟಿಯಾದ ಎಸ್‌ಐಟಿ ಮುಖ್ಯಸ್ಥ
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ವ್ಹೀಲ್ ಚೇರ್‌ನಲ್ಲಿ ಕಸ ಸಾಗಾಟ!
ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ವ್ಹೀಲ್ ಚೇರ್‌ನಲ್ಲಿ ಕಸ ಸಾಗಾಟ!
ಬಿಗ್ ಬಾಸ್ ಮನೆಗೆ ಕಾಲಿಟ್ಟ ರಕ್ಷಿತಾ ಶೆಟ್ಟಿ; ಶೆಟ್ಟಿ ಕುಟುಂಬದಲ್ಲಿ ಹರ್ಷ
ಬಿಗ್ ಬಾಸ್ ಮನೆಗೆ ಕಾಲಿಟ್ಟ ರಕ್ಷಿತಾ ಶೆಟ್ಟಿ; ಶೆಟ್ಟಿ ಕುಟುಂಬದಲ್ಲಿ ಹರ್ಷ