ಈಜಿಪುರ ಫ್ಲೈಓವರ್ ಕಾಮಗಾರಿ ಪೂರ್ಣಗೊಳ್ಳಲು ಟ್ರಂಪ್ ಮಧ್ಯಸ್ಥಿಕೆ ವಹಿಸಿ ಎಂದು ಕೇಳಿಕೊಂಡ ಬೆಂಗಳೂರಿನ ನಿವಾಸಿ
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳ ರಸ್ತೆ, ಫ್ಲೈ ಓವರ್ ಸೇರಿದಂತೆ ಇನ್ನಿತ್ತರ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಎಷ್ಟೇ ಮನವಿ ಮಾಡಿಕೊಂಡರೂ ಕೆಲಸಕಾರ್ಯಗಳು ವೇಗಗತಿಯಲ್ಲಿ ಸಾಗುವುದು ಕಡಿಮೆಯೇ. ಆದರೆ ಇದೀಗ, ಬಿಬಿಎಂಪಿಯ ಯೋಜನೆಗಳಲ್ಲಿ ಒಂದಾದ ಕೋರಮಂಗಲದಲ್ಲಿರುವ ಈಜಿಪುರ ಫ್ಲೈಓವರ್ ಮತ್ತು ನಮ್ಮ ಮೆಟ್ರೋ ಹಳದಿ ಮಾರ್ಗ ಕಾರ್ಯಾಚರಣೆ ನಡೆಸಲು ಕೈ ಜೋಡಿಸಿ, ಈ ಕಾಮಗಾರಿ ಬೇಗ ಆಗುವಂತೆ ಮಾಡಿಕೊಡಿ ಎಂದು ಟ್ರಂಪ್ ಗೆ ನಾಗರೀಕರೊಬ್ಬರು ಮನವಿ ಮಾಡಿದ್ದಾರೆ. ಈ ಪೋಸ್ಟ್ ವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಬೆಂಗಳೂರು, ಮೇ 12 : ಇಂದು ನಾವು ಅಭಿವೃದ್ಧಿ (development) ಯತ್ತ ಸಾಗುತ್ತಿದ್ದೇವೆ. ಆದರೆ ಆಧುನಿಕತೆ ಒಗ್ಗಿಕೊಂಡಂತೆ ರಸ್ತೆ ವಿಸ್ತರಣೆ, ಹೊಸ ರಸ್ತೆ ನಿರ್ಮಾಣ, ಫ್ಲೈ ಓವರ್ ಬ್ರಿಡ್ಜ್ ನಿರ್ಮಾಣ ಸೇರಿದಂತೆ ಇನ್ನಿತ್ತರ ಕಾಮಗಾರಿಗಳು ನಡೆಯುತ್ತಿರುತ್ತದೆ. ಹೌದು, ಈ ಕಾಮಗಾರಿ ಕೆಲಸಗಳು ವಿಳಂಬಗತಿಯಲ್ಲಿ ನಡೆಯುವುದು ಇದೇ ಮೊದಲೇನಲ್ಲ. ಈಗಾಗಲೇ ಅದೆಷ್ಟೋ ಕಾಮಗಾರಿಗಳು ಅರ್ಧಕ್ಕೆ ನಿಂತು ಕೊನೆಗೆ ಜನಸಾಮಾನ್ಯರ ಅಗ್ರಹಕ್ಕೆ ಬೇಸೆತ್ತು ಕಾಮಗಾರಿ ಕೆಲಸಗಳನ್ನು ಪೂರ್ಣಗೊಳಿಸಿದ್ದು ಇದೆ. ಆದರೆ ಇದೀಗ, ಬೆಂಗಳೂರಿನ ಕೋರಮಂಗಲ (koramangal of bengaluru) ದಲ್ಲಿರುವ ಈಜಿಪುರ ಫ್ಲೈಓವರ್ (ejipura flyover) ನಮ್ಮ ಮೆಟ್ರೋ ಮಾರ್ಗ ಕಾರ್ಯಾಚರಣೆ ಆಗದೇ ವಿಳಂಬವಾಗುತ್ತಿದೆ. ಈ ಕಾಮಗಾರಿಯ ಕೆಲಸ ಆಗುವಂತೆ ಮಾಡಲು ನೀವು ಕೈ ಜೋಡಿಸಿ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಬೆಂಗಳೂರಿನ ನಿವಾಸಿಯೊಬ್ಬರು ಹೇಳಿದ್ದಾರೆ.
@BengaluruRains_ ಹೆಸರಿನ ಖಾತೆಯಿಂದ ಪೋಸ್ಟ್ ಮಾಡಿದ್ದು, ನಾಗರಿಕರೊಬ್ಬರು, ಹಲೋ ಡೋನಾಲ್ಡ್ ಟ್ರಂಪ್, ಬಿಬಿಎಂಪಿಯ ನಾಗರಿಕ ಯೋಜನೆಗಳಲ್ಲಿ ಒಂದಾಗಿರುವ ಕೋರಮಂಗಲದಲ್ಲಿರುವ ಈಜಿಪುರ ಫ್ಲೈಓವರ್ ಕಾಮಗಾರಿಯೂ ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಈಜಿಪುರ ಯೋಜನೆಗೆ ‘ಮೆಗಾ ಟ್ರಂಪ್ ಮೇಲ್ಸೇತುವೆ’ ಹಾಗೂ BM RCL ಜೊತೆ ನಿಮ್ಮ ಹೆಸರು ಇಡುತ್ತೇವೆ. ದಯವಿಟ್ಟು ಈ ಕಾಮಗಾರಿಯೂ ವೇಗವಾಗಿ ಆಗಲು ಮಧ್ಯಸ್ಥಿಕೆ ವಹಿಸಿ ಎಂದು ಮನವಿ ಮಾಡಿ ಎಂದು ಟ್ರಂಪ್ ಗೆ ಹೇಳಿರುವ ಪೋಸ್ಟ್ ವೊಂದು ವೈರಲ್ ಆಗಿದೆ.
ಇದನ್ನೂ ಓದಿ : ಪ್ರಬಂಧದಲ್ಲಿ ತನ್ನ ತಾಯಿಯ ವಿಶ್ವ ರೂಪದ ಬಗ್ಗೆ ಉಲ್ಲೇಖಿಸಿದ ಮುದ್ದಿನ ಮಗ, ವಿಡಿಯೋ ವೈರಲ್
ವೈರಲ್ ಪೋಸ್ಟ್ ಇಲ್ಲಿದೆ ನೋಡಿ
Hello @realDonaldTrump
Could you please mediate with BBMP to ESCALATE Ejipura flyover works in Bengaluru. We’ll name it as MAGA Trump flyover
& with BMRCL for Yellow line Metro Trains too in Bangalore
— Karnataka Weather (@BengaluruRains_) May 10, 2025
ಈ ಪೋಸ್ಟ್ ವೊಂದು ಎಂಭತ್ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು, ಈ ಪೋಸ್ಟ್ ನೋಡಿ ಸೋಶಿಯಲ್ ಮೀಡಿಯಾ ಬಳಕೆದಾರರು ಬಿದ್ದು ಬಿದ್ದು ನಕ್ಕಿದ್ದಾರೆ. ಬಳಕೆದಾರರೊಬ್ಬರು,’ ಈ ಈಜಿಪುರ ಫ್ಲೈಓವರ್ ಕಾಮಗಾರಿಗೆ ಪೂರ್ಣಗೊಳ್ಳಲು ಟ್ರಂಪ್ ಮಧ್ಯಸ್ಥಿಕೆ ಅತ್ಯಗತ್ಯ ಎಂದು ತಮಾಷೆಯಾಗಿಯೇ ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಟ್ರಂಪ್ ಟವರ್ಸ್ ನಿರ್ಮಿಸಲು ನಾವು ಅವರಿಗೆ ಭೂಮಿ ನೀಡಿದರೆ ಮಾತ್ರ ಈ ಕಾಮಗಾರಿ ವೇಗಗತಿಯಲ್ಲಿ ಆಗುವಂತೆ ಮಾಡಬಹುದು ‘ ಎಂದಿದ್ದಾರೆ. ಮತ್ತೊಬ್ಬರು, ಈ ಐಡಿಯಾ ನಮಗೆ ಹೊಳೆಯದೆ ಇಲ್ಲ, ನಿಜಕ್ಕೂ ಒಳ್ಳೆಯ ಐಡಿಯಾ ಎಂದು ಕಾಮೆಂಟ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:54 pm, Mon, 12 May 25








