ಜಿಮ್‌ಗೆ ಹೋಗುವ ಅವಶ್ಯಕತೆಯೇ ಇಲ್ಲ; ಮನೆಯಲ್ಲಿ ಈ ಕೆಲಸಗಳನ್ನು ಮಾಡುವ ಮೂಲಕ ತೂಕ ಇಳಿಸಿಕೊಳ್ಳಬಹುದು
ಅನಾರೋಗ್ಯಕರ ಜೀವನ ಶೈಲಿ, ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣದಿಂದಾಗಿ ಪ್ರಪಂಚದಾದ್ಯಂತ ಹೆಚ್ಚಿನ ಜನರು ಅಧಿಕ ತೂಕದಿಂದಾಗಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಕೆಲವರಂತೂ ತೂಕ ಇಳಿಸಿಕೊಳ್ಳಲು ಪ್ರತಿನಿತ್ಯ ಜಿಮ್‌ಗೆ ಹೋಗಿ ವರ್ಕೌಟ್ ಮಾಡ್ತಿದ್ದಾರೆ. ನಿಮಗೆ ಜಿಮ್‌ಗೆ ಹೋಗಲು ಟೈಮ್ ಇಲ್ಲವಾದರೆ ಮನೆಯಲ್ಲಿಯೇ ಈ ಕೆಲಸಗಳನ್ನು ಮಾಡುವ ಮೂಲಕ ತೂಕ ಇಳಿಸಿಕೊಳ್ಳಬಹುದು.

ಬದಲಾಗುತ್ತಿರುವ ಜೀವನಶೈಲಿ (Lifestyle), ಅನಾರೋಗ್ಯಕರ ಆಹಾರ ಪದ್ಧತಿ ಸೇರಿದಂತೆ ಕೆಲವೊಂದು ಕಾರಣಗಳಿಂದಾಗಿ ಇಂದು ತೂಕ ಹೆಚ್ಚಾಗುವುದು (Weight Gain) ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಜಡ ಜೀವನಶೈಲಿಯಿಂದಾಗಿ ಅನೇಕರಲ್ಲಿ ಬೊಜ್ಜಿನ ಸಮಸ್ಯೆ ಆವರಿಸಿಕೊಂಡಿದ್ದು, ಅನೇಕರು ಬೊಜ್ಜನ್ನು ಕರಗಿಸಲು, ತೂಕ ಇಳಿಸಲು, ದೇಹವನ್ನು ಫಿಟ್ ಆಗಿರಿಸಲು ಜಿಮ್, ವ್ಯಾಯಾಮ, ಡಯಟ್ ಫುಡ್ ಅಂತೆಲ್ಲಾ ಅನೇಕ ಸರ್ಕಸ್‌ಗಳನ್ನು ಮಾಡ್ತಿದ್ದಾರೆ. ನೀವು ಕೂಡಾ ಇದೇ ರೀತಿ ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಜಿಮ್‌ಗೆ ಹೋಗಿ ವರ್ಕೌಟ್ ಮಾಡಿ ತೂಕ ಇಳಿಸಿ (Weight Loss) ಕೊಳ್ಳುವಷ್ಟು ಟೈಮ್ ಇಲ್ವಾ? ಹಾಗಿದ್ರೆ ಮನೆಯಲ್ಲಿಯೇ ಈ ಕೆಲವೊಂದು ಕೆಲಸಗಳನ್ನು ಮಾಡುವ ಮೂಲಕ ಸುಲಭವಾಗಿ ತೂಕವನ್ನು ಇಳಿಸಿಕೊಳ್ಳಬಹುದು.
ತೂಕ ಇಳಿಸ್ಬೇಕು ಅಂದ್ರೆ ಮನೆಯಲ್ಲಿ ಈ ಕೆಲಸಗಳನ್ನು ಮಾಡಿದ್ರೆ ಸಾಕು:
ಮನೆ ಸ್ವಚ್ಛಗೊಳಿಸುವ ಕೆಲಸ ಮಾಡಿ:
ಜಿಮ್‌ಗೆ ಹೋಗದೆ ತೂಕ ಇಳಿಸಿಕೊಳ್ಳಬೇಕಿದ್ರೆ ನೀವು ಪ್ರತಿನಿತ್ಯ ಮನೆಗೆಲಸಗಳನ್ನು ಮಾಡಿ. ಹೌದು ಮನೆ ಸ್ವಚ್ಛಗೊಳಿಸುವ ಮೂಲಕ ಸುಲಭವಾಗಿ ತೂಕವನ್ನು ತಿಳಿಸಬಹುದಾಗಿದೆ. ನೆಲ ಒರೆಸುವುದು, ಗುಡಿಸುವುದು, ಪಾತ್ರೆ ತೊಳೆಯುವುದು ಹೀಗೆ ಎಲ್ಲಾ ಕೆಲಸಗಳನ್ನು ಮಾಡುವ ಮೂಲಕ ನೀವು ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜೊತೆಗೆ ಈ ಕೆಲಸಗಳನ್ನು ಮಾಡಿ ತೂಕವನ್ನು ಉಳಿಸಿಕೊಳ್ಳಬಹುದು. ಈ ಕೆಲಸಗಳೆಲ್ಲಾ ದೇಹಕ್ಕೆ ಒಂದು ವ್ಯಾಯಾಮ ಅಂತಾನೇ ಹೇಳಬಹುದು. ಇದು ಕ್ಯಾಲೋರಿಗಳನ್ನು ಸುಡಲು ಸಹಾಯ ಮಾಡುವುದು ಮಾತ್ರವಲ್ಲದೆ ನಿಮ್ಮ ಮನಸ್ಥಿತಿಯನ್ನು ಕೂಡಾ ಸುಧಾರಿಸುತ್ತದೆ.
ಬಟ್ಟೆ ಒಗೆಯುವುದು:
ವಾಷಿಂಗ್ ಮಷಿನ್‌ಗಳಲ್ಲಿ ಬಟ್ಟೆ ಒಗೆಯುವ ಬದಲು ನೀವು ಕೈಯಲ್ಲಿಯೇ ಬಟ್ಟೆಯನ್ನು ಒಗೆಯಿರಿ. ಹೀಗೆ ಪ್ರತಿನಿತ್ಯ ಬಟ್ಟೆ ಒಗೆಯುವ ಮೂಲಕವೂ ತೂಕವನ್ನು ಇಳಿಸಿಕೊಳ್ಳಬಹುದು. ಬಟ್ಟೆ ಒಗೆಯುವ ಕೆಲಸ ಕೂಡಾ ಒಂದು ವ್ಯಾಯಾಮ ಅಂತಾನೇ ಹೇಳಬಹುದು. ಕೈಯಿಂದ ಬಟ್ಟೆ ಒಗೆಯುವ ಮೂಲಕ 30 ನಿಮಿಷಗಳಲ್ಲಿ ಸುಮಾರು 120 ರಿಂದ 150 ರಷ್ಟು ಕ್ಯಾಲೋರಿಗಳನ್ನು ಸುಡಬಹುದು. ಇದು ದೇಹಕ್ಕೆ ಉತ್ತಮ ವ್ಯಾಯಾಮವಾಗಿದೆ.
ಮೆಟ್ಟಿಲು ಹತ್ತವುದು ಮತ್ತು ನಡೆಯುವುದು:
ತೂಕ ಇಳಿಸಿಕೊಳ್ಳಬೇಕು ಆದ್ರೆ ಜಿಮ್‌ಗೆ ಹೋಗಲು ಸಮಯ ಸಿಗುತ್ತಿಲ್ಲ ಎಂದಾದ್ರೆ ನೀವು ಮನೆಯಲ್ಲಿದ್ದು, ನಡೆಯುವುದು, ಮೆಟ್ಟಿಲು ಹತ್ತುವುದು ಇಳಿಯುವುದು ಮಾಡಲುವ ಮೂಲಕ ತೂಕವನ್ನು ಇಳಿಸಬಹುದು. ಪ್ರತಿನಿತ್ಯ ಅರ್ಧರಿಂದ ಒಂದು ಗಂಟೆಯ ತನಕ ನಡೆಯುವುದು ಮೆಟ್ಟಿಲು ಹತ್ತಿ ಇಳಿಯುವ ಸುಲಭ ವ್ಯಾಯಾಮವನ್ನು ಮಾಡಬಹುದು. ಇದು ನಿಮ್ಮ ಕಾಲುಗಳು ಮತ್ತು ಸೊಂಟವನ್ನು ಬಲಗೊಳಿಸುವುದು ಮಾತ್ರವಲ್ಲದೆ ಈ ವ್ಯಾಯಾಮ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಹೀಗೆ ಪ್ರತಿನಿತ್ಯ ಮೆಟ್ಟಿಲು ಹತ್ತಿ ಇಳಿಯುವುದು ಮಾಡುವ ಮೂಲಕ ನೀವು ಸುಮಾರು 200 ರಿಂದ 300 ರಷ್ಟು ಕ್ಯಾಲೋರಿಗಳನ್ನು ಸುಡಬಹುದು.
ಇದನ್ನೂ ಓದಿ: ದ್ರಾಕ್ಷಿ ಬೀಜದ ಎಣ್ಣೆಯಲ್ಲಿ ಅಡಗಿದೆ ಹೆಣ್ಣಿನ ಕೇಶದ ಸೌಂದರ್ಯ!
ತೋಟಗಾರಿಗೆ:
ನಿಮ್ಮ ಮನೆಯಲ್ಲಿ ಉದ್ಯಾನವನವಿದ್ದರೆ ಅಥವಾ ಹೂ ಗಿಡಗಳ ತೋಟವಿದ್ದರೆ ಉದ್ಯಾನವನಗಳನ್ನು ಸ್ವಚ್ಛಗೊಳಿಸುವ ಮೂಲಕ, ಅಲ್ಲಿ ಬಿದ್ದ ಎಲೆ, ಕಸಗಳನ್ನು ಸ್ವಚ್ಛಗೊಳಿಸುವ ಮೂಲಕ, ಕಳೆ ಕೀಳುವ, ಗಿಡಗಳಿಗೆ ನೀರು ಹಾಕುವ ಕೆಲಸಗಳನ್ನು ಮಾಡುವ ಮೂಲಕ ಕ್ಯಾಲೋರಿಗಳನ್ನು ಸುಡಬಹುದು. ತೋಟದ ಕೆಲಸ ಮಾಡುವುದು ಕೂಡಾ ಒಂದು ರೀತಿಯ ದೈಹಿಕ ಚಟುವಟಿಕೆಯಾಗಿದ್ದು, ಪ್ರತಿನಿತ್ಯ ಈ ಕೆಲಸಗಳನ್ನು ತಪ್ಪದೆ ಮಾಡುವ ಮೂಲಕ ತೂಕವನ್ನು ಇಳಿಸಿಕೊಳ್ಳಬಹುದು ಮತ್ತು ಗಿಡಮರಗಳೊಂದಿಗೆ ಸಮಯ ಕಳೆಯುವ ಮೂಲಕ ಮನಸ್ಥಿತಿಯನ್ನೂ ಸುಧಾರಿಸಬಹುದು.
ಮಕ್ಕಳೊಂದಿಗೆ ಆಟವಾಡುವುದು:
ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಸಂಜೆ ಹೊತ್ತು ಅವರೊಂದಿಗೆ ಆಟವಾಡುವ ಮೂಲಕವೂ ಸುಲಭವಾಗಿ ತೂಕವನ್ನು ಇಳಿಸಿಕೊಳ್ಳಬಹುದು. ಮಕ್ಕಳೊಂದಿಗೆ ಆಟವಾಡುವಾಗ ನೀವು ಅತ್ತಿಂದಿತ್ತ ಓಡಾಡುತ್ತಿರುತ್ತೀರಿ, ಇದು ಕೂಡಾ ಒಂದು ರೀತಿಯ ದೈಹಿಕ ಚಟುವಟಿಕೆ ಅಂತಾನೇ ಹೇಳಬಹುದು. ಹೀಗೆ ಪ್ರತಿನಿತ್ಯ ಮಕ್ಕಳೊಂದಿಗೆ ಸೇರಿ ಡ್ಯಾನ್ಸ್ ಮಾಡುವ ಮೂಲಕವೋ ಅಥವಾ ಕಣ್ಣಾಮುಚ್ಚಾಲೆ ಇತ್ಯಾದಿ ಆಟವಾಡುವ ಮೂಲಕ ಸುಲಭವಾಗಿ ಕ್ಯಾಲೋರಿಗಳನ್ನು ಸುಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








