AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಂಡನಾದವನು ಹೆಂಡತಿಯನ್ನು ಕೇಳದೆ ಈ ಕೆಲಸಗಳನ್ನು ಮಾಡಲೇಬಾರದು

ಕೆಲ ಗಂಡಸರು ಏನಾದರೂ ಕೆಲಸಗಳನ್ನು ಮಾಡಬೇಕಾದರೆ, ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದರೆ ತಮ್ಮ ಹೆಂಡತಿಯ ಬಳಿ ಆ ವಿಷಯಗಳನ್ನು ಹೇಳುವುದಿಲ್ಲ ಅಥವಾ ಅದರ ಬಗ್ಗೆ ಚರ್ಚಿಸುವುದಿಲ್ಲ. ಹೀಗೆ ಮಾಡುವುದರಿಂದ ಕೆಲವೊಮ್ಮೆ ತಪ್ಪುಗಳಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಕೆಲವೊಂದು ಕೆಲಸಗಳನ್ನು ಮಾಡಬೇಕಾದರೆ ಗಂಡನಾದವನು ಹೆಂಡತಿಯ ಮಾತನ್ನು ಕೇಳಲೇಬೇಕಂತೆ. ಹಾಗಿದ್ರೆ ಪತಿಯಾದವನು ಯಾವೆಲ್ಲಾ ಕೆಲಸವನ್ನು ಪತ್ನಿಯ ಬಳಿ ಹೇಳಿಯೇ ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.

ಗಂಡನಾದವನು ಹೆಂಡತಿಯನ್ನು ಕೇಳದೆ ಈ ಕೆಲಸಗಳನ್ನು ಮಾಡಲೇಬಾರದು
ಸಾಂದರ್ಭಿಕ ಚಿತ್ರImage Credit source: Getty Images
ಮಾಲಾಶ್ರೀ ಅಂಚನ್​
|

Updated on: May 11, 2025 | 5:49 PM

Share

ಪತ್ನಿಯನ್ನು (Wife) ಅರ್ಧಾಗಿ ಎಂದು ಕರೆಯಲಾಗುತ್ತದೆ. ಅಂದರೆ ಪತ್ನಿಯನ್ನು ಪತಿಯ (Husband) ದೇಹದ ಒಂದು ಭಾಗವೆಂದು ಪರಿಗಣಿಸಲಾಗುತ್ತದೆ. ಅಂತೆಯೇ ಪತ್ನಿಯಾದವಳು ತನ್ನ ಗಂಡನ ಸುಖ ದುಃಖಗಳಲ್ಲಿ ಜೊತೆಯಾಗಿ ನಿಲ್ಲುತ್ತಾಳೆ. ಇದೇ ಕಾರಣಕ್ಕೆ ಗಂಡನಾದವನು ಏನಾದರೂ ಕೆಲಸ ಮಾಡಬೇಕೆಂದರೆ ಮೊದಲು ಹೆಂಡತಿಯ ಒಪ್ಪಿಗೆ ಅಥವಾ ಆಕೆಯ ಅಭಿಪ್ರಾಯವನ್ನು ಕೇಳಬೇಕು ಎಂದು ಹೇಳ್ತಾರೆ. ಹೌದು ಕುಟುಂಬ (Family) ಸಂಸಾರ ಅನ್ನೋ ವಿಚಾರದಲ್ಲಿ ಹೆಂಡತಿಯಾದವಳು ತುಂಬಾನೇ ಪ್ರಬುದ್ಧತೆಯಿಂದ ವರ್ತಿಸುತ್ತಾಳೆ. ಇದೇ ಕಾರಣಕ್ಕೆ ಈ ಕೆಲವೊಂದು ನಿರ್ಧಾರ ತೆಗೆದುಕೊಳ್ಳುವ ಮೊದಲು, ಈ ಕೆಲಸಗಳನ್ನು ಮಾಡುವ ಮೊದಲು ತಪ್ಪದೆ  ಹೆಂಡತಿಯ ಮಾತನ್ನು ಹಾಗೂ ಆಕೆಯ ನಿರ್ಧಾರ ಏನೆಂಬುದನ್ನು ಕೇಳಬೇಕಂತೆ. ಅದು ಏನು ಎಂಬುದನ್ನು ನೋಡೋಣ ಬನ್ನಿ.

ಈ ಕೆಲಸಗಳನ್ನು ಮಾಡುವ ಮೊದಲು ನಿಮ್ಮ ಹೆಂಡತಿಯ ಮಾತನ್ನು ಕೇಳಲೇಬೇಕಂತೆ:

ನೀವು ಯಾರಿಗಾದರೂ ಸಾಲ ನೀಡುತ್ತೀರಾ ಎಂದಾದರೆ:

ಯಾರಾದರೂ ನಿಮ್ಮ ಬಳಿ ಸಾಲವನ್ನು ಕೇಳಿದರೆ ಅಥವಾ ಯಾರಿಗಾದರೂ ದೊಡ್ಡ ಮೊತ್ತದ ಸಾಲವನ್ನು ಕೊಡಬೇಕು ಎಂದಾದರೆ ಈ ಬಗ್ಗೆ ಮೊದಲು ನೀವು ನಿಮ್ಮ ಹೆಂಡತಿಯ ಬಳಿ ಚರ್ಚಿಸಿ. ಸರಿ ತಪ್ಪುಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಹೆಂಡತಿ ಈ ವಿಷಯದಲ್ಲಿ ನಿಮಗೆ ಸರಿಯಾದ ಸಲಹೆಯನ್ನೇ ನೀಡುತ್ತಾಳೆ. ಮತ್ತು ಆಕೆಯ ಅನುಮತಿಯಿದ್ದರೆ ಮಾತ್ರ ಇತರರಿಗೆ ಸಾಲವನ್ನು ಕೊಡಿ.

ಹೂಡಿಕೆಯ ವಿಷಯವನ್ನು ಹಂಚಿಕೊಳ್ಳಿ:

ಗಂಡನಾದವನು ಎಲ್ಲಾದರೂ ಹೂಡಿಕೆ ಮಾಡಲು ಬಯಸಿದರೆ ಅಥವಾ ಆಸ್ತಿ ಜಾಗ ಖರೀದಿಸಲು ಬಯಸಿದರೆ ಖಂಡಿತವಾಗಿ ಈ ಬಗ್ಗೆ ಹೆಂಡತಿಗೆ ತಿಳಿಸಲೇಬೇಕು. ಮತ್ತು ಇಲ್ಲಿ ಹೂಡಿಕೆ ಮಾಡುವುದು ಸರಿಯೇ, ನಾನು ಹೂಡಿಕೆ ಮಾಡಬಹುದೇ ಎಂದು ಹೆಂಡತಿಯ ಬಳಿ ಅಭಿಪ್ರಾಯಗಳನ್ನು ಕೇಳಿ. ಇಂತಹ ಸಣ್ಣಪುಟ್ಟ ವಿಷಯಗಳು ನಿಮ್ಮ ದಾಂಪತ್ಯ ಜೀವನವನ್ನು ಕೂಡಾ ಚೆನ್ನಾಗಿಡಲು ಸಹಕಾರಿಯಾಗಿದೆ.

ಇದನ್ನೂ ಓದಿ
Image
ಫಸ್ಟ್ ನೈಟ್ ನಲ್ಲಿ ಮಲ್ಲಿಗೆ ಇಡುವುದು ಇದೆ ಕಾರಣಕ್ಕೆ!
Image
ಮನೆಯನ್ನೇ ಉದ್ಯಾನವನವನ್ನಾಗಿ ಪರಿವರ್ತಿಸಿದ ಬೆಂಗಳೂರಿನ ದಂಪತಿ
Image
ತಾಯಂದಿರ ದಿನವನ್ನು ಏಕೆ ಆಚರಿಸಲಾಗುತ್ತದೆ?
Image
ಸ್ಲಿಮ್ ಆ್ಯಂಡ್ ಫಿಟ್ ಆಗಿರಲು ಜಪಾನಿಯರ ಈ ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸಿ

ಎಲ್ಲಾದರೂ ಪ್ರಯಾಣಿಸುತ್ತಿದ್ದರೆ ಹೆಂಡತಿಗೆ ಹೇಳಿ:

ಕೆಲ ಗಂಡಸರು ಎಲ್ಲಾದ್ರೂ ಹೋದ್ರೆ ಅಥವಾ ಯಾವುದೇ ವಿಷಯಗಳನ್ನು ಮಾಡುವಾಗ ಕೂಡಾ ಈ ಬಗ್ಗೆ ಹೆಂಡತಿಗೆ ಹೇಳುವುದಿಲ್ಲ. ಯಾವತ್ತೂ ಹೀಗೆ ಮಾಡಲು ಹೋಗಬೇಡಿ. ನೀವು ಎಲ್ಲಾದ್ರೂ ಫ್ರೆಂಡ್ಸ್‌ ಜೊತೆ ಅಥವಾ ಕೊಲಿಗ್ಸ್‌ ಜೊತೆ ಪ್ರವಾಸ ಹೋಗ್ತಿರಿ ಎಂದಾದ್ರೆ ನಿಮ್ಮ ಹೆಂಡತಿಯ ಬಳಿ ನಾನು ಪ್ರವಾಸ ಹೋಗಬಹುದೇ ಎಂದು ಆಕೆಯ ಅನುಮತಿ ಕೇಳಿ. ಆಕೆಯ ಅಭಿಪ್ರಾಯಗಳಿಗೂ ಕೂಡಾ ಆದ್ಯತೆ ನೀಡಿ.

ಇದನ್ನೂ ಓದಿ: ಇಂತಹ ಸೊಸೆಯಿದ್ದರೆ ಮನೆಯ ನೆಮ್ಮದಿಯೇ ಹಾಳದಂತೆ

ಮನೆಗೆ ವಸ್ತಗಳನ್ನು ಖರೀದಿಸುವಾಗ:

ನೀವು ಮನೆಗೆ ಏನಾದ್ರೂ ವಸ್ತುಗಳನ್ನು ಖರೀದಿ ಮಾಡುತ್ತೀರಿ ಎಂದಾದರೆ ಮೊದಲು ನಿಮ್ಮ ಹೆಂಡತಿಯ ಅಭಿಪ್ರಾಯವನ್ನು ಕೇಳಿ. ಆಕೆಗೆ ಯಾವ ವಸ್ತು ಸೂಕ್ತ, ಎಂತಹ ವಸ್ತುಗಳನ್ನು ಮನೆಗೆ ಖರೀದಿಸಬೇಕು, ಎಷ್ಟು ಬಜೆಟ್‌ ಒಳಗೆ ಖರೀದಿಸಬೇಕು ಇವೆಲ್ಲವೂ ಗೊತ್ತಿರುತ್ತದೆ. ಹಾಗಿರುವಾಗ ಮನೆಗೆ ವಸ್ತುಗಳನ್ನು ಖರೀದಿಸುವ ಮುನ್ನ ನಿಮ್ಮ ಹೆಂಡತಿಯ ಅಭಿಪ್ರಾಯವನ್ನು ಕೇಳಿ.

ಮಕ್ಕಳ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ:

ಮಕ್ಕಳ ಜವಾಬ್ದಾರಿ ಗಂಡ ಮತ್ತು ಹೆಂಡತಿ ಇಬ್ಬರದ್ದೂ ಆಗಿರುತ್ತದೆ. ಹೀರುವಾಗ ಮಕ್ಕಳ ಭವಿಷ್ಯಕ್ಕಾಗಿ ಗಂಡ ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳಬೇಕಾದರೆ, ಅವನು ಹೆಂಡತಿಯ ಅಭಿಪ್ರಾಯವನ್ನು ಕೇಳಬೇಕು ಮತ್ತು ಅನುಮತಿಯನ್ನು ಪಡೆಯಬೇಕು. ಹೆಂಡತಿಯಾದವಳಿಗೆ ಸರಿ ತಪ್ಪುಗಳ ಬಗ್ಗೆ ಚೆನ್ನಾಗಿ ಅರಿವಿರುವ ಕಾರಣ ಈ ವಿಚಾರದಲ್ಲಿ ಆಕೆ ಸೂಕ್ತವಾದ ಸಲಹೆಗಳನ್ನೇ ನೀಡುತ್ತಾಳೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ