AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲ್ಲಿಗೆ ಸುವಾಸನೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು! ಇದೇ ಕಾರಣಕ್ಕೆ ಫಸ್ಟ್ ನೈಟ್ ನಲ್ಲಿ ಇಡುವುದು

ಮಲ್ಲಿಗೆ ಹೂವನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡುತ್ತಾರೆ. ಈ ಹೂವು ನೋಡುವುದಕ್ಕೆ ಚಿಕ್ಕದಾಗಿದ್ದರೂ ಕೂಡ ಇದರಲ್ಲಿರುವ ಆರೋಗ್ಯ ಪ್ರಯೋಜನ ಸಾಕಷ್ಟು. ಹಾಗಾಗಿಯೇ ಮದುವೆ ಮೊದಲ ರಾತ್ರಿಯಲ್ಲಿ ಹೆಣ್ಣು- ಗಂಡಿನ ಕೋಣೆಯಲ್ಲಿ ಭರಪೂರ ಮಲ್ಲಿಗೆ ಹೂವುಗಳಿಂದ ಅಲಂಕಾರ ಮಾಡುತ್ತಾರೆ. ಹಾಗಾದರೆ ಈ ರೀತಿ ಮಾಡುವುದರ ಹಿಂದಿರುವ ಕಾರಣವೇನು? ಇದರಿಂದ ಯಾವ ರೀತಿಯ ಪ್ರಯೋಜನ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಮಲ್ಲಿಗೆ ಸುವಾಸನೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು! ಇದೇ ಕಾರಣಕ್ಕೆ ಫಸ್ಟ್ ನೈಟ್ ನಲ್ಲಿ ಇಡುವುದು
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
|

Updated on: May 10, 2025 | 6:30 PM

Share

ಮಲ್ಲಿಗೆ (Jasmine) ಸಾಮಾನ್ಯವಾಗಿ ಎಲ್ಲಾ ಹೆಣ್ಣುಮಕ್ಕಳಿಗೂ ತುಂಬಾ ಇಷ್ಟವಾಗುತ್ತದೆ. ಗುಲಾಬಿ (Rose) ಬಿಟ್ಟರೆ ಮಲ್ಲಿಗೆಯನ್ನೇ ಎಲ್ಲರೂ ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ ಮಲ್ಲಿಗೆ ಹೂ ಹೆಣ್ಣು ಮಕ್ಕಳ ಶೃಂಗಾರಕ್ಕೆ ಮಾತ್ರವಲ್ಲ ನಮ್ಮ ಆರೋಗ್ಯ (Health) ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಇದರ ಪರಿಮಳವನ್ನು ಆಸ್ವಾದಿಸುವುದರಿಂದ ದೇಹ ಮತ್ತು ಮನಸ್ಸು ನಿರಾಳವಾಗುತ್ತದೆ. ಅದಕ್ಕಾಗಿಯೇ ಇವುಗಳನ್ನು ಎಲ್ಲಾ ಶುಭ ಕಾರ್ಯಕ್ರಮಗಳಲ್ಲಿ ಬಳಕೆ ಮಾಡಲಾಗುತ್ತದೆ. ನೋಡುವುದಕ್ಕೆ ಚಿಕ್ಕ ಹೂವಾಗಿದ್ದರೂ ಕೂಡ ಇದರಿಂದ ಸಿಗುವ ಪ್ರಯೋಜನ ಮಾತ್ರ ನಮ್ಮ ಊಹೆಗೂ ನಿಲುಕದಷ್ಟು ಇರುತ್ತದೆ. ಇನ್ನು ಮದುವೆ ಮೊದಲ ರಾತ್ರಿ (First Night) ಯಲ್ಲಿಯೂ ಹೆಣ್ಣು- ಗಂಡಿನ ಕೋಣೆಯಲ್ಲಿ ಭರಪೂರವಾಗಿ ಮಲ್ಲಿಗೆ ಹೂವುಗಳಿಂದ ಅಲಂಕಾರ ಮಾಡಿ ಸುತ್ತಲೂ ಮಲ್ಲಿಗೆ ಹೂವುಗಳನ್ನು ಇಟ್ಟಿರುತ್ತಾರೆ. ಈ ರೀತಿ ಮಾಡುವುದರ ಹಿಂದಿರುವ ಕಾರಣವೇನು? ಇದರಿಂದ ಯಾವ ರೀತಿಯ ಪ್ರಯೋಜನ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಮೊದಲ ರಾತ್ರಿಯಲ್ಲಿ ಮಲ್ಲಿಗೆ ಇಡಲು ಕಾರಣವೇನು?

ಈ ಮಲ್ಲಿಗೆ ಹೂವು ಗಂಡ ಹೆಂಡತಿಯ ನಡುವಿನ ಭಾಂದವ್ಯವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಮಲ್ಲಿಗೆಯ ಪರಿಮಳ ನಮ್ಮ ಮನಸ್ಸನ್ನು ಶಾಂತವಾಗಿರಿಸಲು ಸಹಾಯ ಮಾಡುತ್ತದೆ. ಮಲ್ಲಿಗೆಯನ್ನು ಮಲಗುವ ಕೋಣೆಯಲ್ಲಿ ಇಡುವುದರಿಂದ ಅದರ ಸುವಾಸನೆ ಸುತ್ತಲೂ ಹರಡಿ ಆಯಾಸವಾದ ದೇಹವನ್ನು ಉಲ್ಲಾಸಗೊಳ್ಳುವಂತೆ ಮಾಡುತ್ತದೆ. ಸಾಮಾನ್ಯವಾಗಿ ಮೊದಲ ರಾತ್ರಿ ಎಂದರೆ ಒತ್ತಡ, ಭಯ, ಆತಂಕ ಮತ್ತು ಸಂಕೋಚ ಇರುವುದು ಸಾಮಾನ್ಯ. ಆದರೆ ಮಲ್ಲಿಗೆ ಪರಿಮಳ ಇವುಗಳನ್ನು ದೂರ ಮಾಡಲು ಅನುಕೂಲ ಮಾಡಿಕೊಡುತ್ತದೆ. ಇನ್ನು ಹಾಸಿಗೆಯ ಮೇಲೆ ಮಲ್ಲಿಗೆ ಹಾಕುವುದು ಕೂಡ ಅನೇಕ ರೀತಿಯ ಲಾಭಗಳನ್ನು ನೀಡುತ್ತದೆ. ಈ ಪರಿಮಳವನ್ನು ಪದೇ ಪದೇ ತೆಗೆದುಕೊಳ್ಳುವುದರಿಂದ ಸಂತೋಷದ ಭಾವನೆ ಹೆಚ್ಚಾಗುತ್ತದೆ. ಇದು ಗಂಡ- ಹೆಂಡತಿ ಇಬ್ಬರಿಗೂ ಪ್ರಯೋಜನಕಾರಿ.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಕಂಡುಬರುವ ಮಲಬದ್ಧತೆಗೆ ಇಲ್ಲಿದೆ ಪರಿಹಾರ

ಇದನ್ನೂ ಓದಿ
Image
ಪ್ರತಿದಿನ ನೀವು ಮಾಡುವ ಈ ತಪ್ಪುಗಳೇ ರಾತ್ರಿ ನಿದ್ರೆಯನ್ನು ಹಾಳುಮಾಡುತ್ತೆ
Image
ಮಹಿಳೆಯರೇ ಈ ರೀತಿ ಲಕ್ಷಣ ಕಂಡು ಬಂದಾಗ ನಿರ್ಲಕ್ಷಿಸಬೇಡಿ
Image
ಗರ್ಭಾವಸ್ಥೆಯಲ್ಲಿ ಮಲಬದ್ಧತೆ ಕಂಡು ಬಂದರೆ ನಿರ್ಲಕ್ಷ್ಯ ಮಾಡಬೇಡಿ
Image
ಕಣ್ಣುಗಳಲ್ಲಿ ಕಂಡುಬರುವ ತುರಿಕೆ ಈ ರೋಗದ ಮುನ್ಸೂಚನೆ

ಮಲ್ಲಿಗೆ ಮುಡಿಯುವುದು ಆರೋಗ್ಯಕ್ಕೆ ಒಳ್ಳೆಯದು!

ಪ್ರತಿನಿತ್ಯವೂ ಮಲ್ಲಿಗೆ ಹೂವನ್ನು ಮುಡಿಯುವುದರಿಂದ ದೇಹ ತಂಪಾಗಿರುತ್ತದೆ. ಈ ಹೂವುಗಳು ನೆತ್ತಿಯ ಶಾಖವನ್ನು ಹೀರಿಕೊಳ್ಳುತ್ತದೆ. ಹಾಗಾಗಿ ಬೇಸಿಗೆಯ ಸಮಯದಲ್ಲಿ ಮಲ್ಲಿಗೆಯನ್ನು ಹೆಚ್ಚಾಗಿ ಮುಡಿಯಬೇಕು ಎಂದು ಹಿಂದಿನವರು ಹೇಳುತ್ತಾರೆ. ಅದಲ್ಲದೆ ಕೆಲವು ಭಾಗದಲ್ಲಿ ಬಾಣಂತಿಯರಿಗೂ ಮಲ್ಲಿಗೆ ಮುಡಿಯಲು ಕೊಡುತ್ತಾರೆ ಇದು ಎದೆ ಹಾಲಿನ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗಾಗಿ ಮಗುವಿಗೆ ಅಗತ್ಯವಿರುವಷ್ಟು ಹಾಲು ಉತ್ಪತ್ತಿಯಾಗುವುದಿಲ್ಲ ಎನ್ನುವವರು ಮಲ್ಲಿಗೆ ಹೂವುಗಳನ್ನು ಮುಡಿಯಬೇಕು ಅಥವಾ ಆ ಹೂವುಗಳ ಪರಿಮಳವನ್ನು ಹತ್ತಿರದಿಂದ ತೆಗೆದುಕೊಳ್ಳಬೇಕು. ಇದರಿಂದ ಬಾಣಂತಿಯರಲ್ಲಿ ಎದೆ ಹಾಲು ಹೆಚ್ಚಾಗುತ್ತದೆ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ