AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ಣುಗಳಲ್ಲಿ ಕಂಡುಬರುವ ತುರಿಕೆ ಈ ರೋಗದ ಆರಂಭಿಕ ಹಂತವಾಗಿರಬಹುದು!

ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಇದು ಕೇವಲ ಅಲರ್ಜಿಗಳಿಂದ ಮಾತ್ರ ಉಂಟಾಗುತ್ತಿಲ್ಲ ಬದಲಾಗಿ ಅನೇಕ ರೀತಿಯ ಅನಾರೋಗ್ಯಕರ ಅಭ್ಯಾಸಗಳು ಈ ರೀತಿಯ ಸಮಸ್ಯೆಗಳಿಗೆ ಕಾರಣವಾಗಿರಬಹುದು. ಅಲ್ಲದೆ ಇವು ಕೆಲವು ರೋಗದ ಆರಂಭಿಕ ಹಂತವಾಗಿರಬಹುದು. ಹಾಗಾದರೆ ಕಣ್ಣುಗಳಲ್ಲಿ ತುರಿಕೆ ಕಂಡು ಬರುವುದಕ್ಕೆ ಕಾರಣವೇನು? ಅವುಗಳನ್ನು ತಡೆಗಟ್ಟಲು ಇಲ್ಲಿವೆ ಕೆಲವು ಸಲಹೆಗಳು.

ಕಣ್ಣುಗಳಲ್ಲಿ ಕಂಡುಬರುವ ತುರಿಕೆ ಈ ರೋಗದ ಆರಂಭಿಕ ಹಂತವಾಗಿರಬಹುದು!
ಸಾಂದರ್ಭಿಕ ಚಿತ್ರImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: May 08, 2025 | 5:01 PM

Share

ಇತ್ತೀಚಿನ ದಿನಗಳಲ್ಲಿ ಕಣ್ಣುಗಳಲ್ಲಿ ತುರಿಕೆ (Itchy Eyes) ಕಂಡು ಬರುವುದು ಹೆಚ್ಚಾಗುತ್ತಿದ್ದು, ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಬೇಸಿಗೆ (Summer), ಚಳಿಗಾಲದಲ್ಲಿ ಕಂಡು ಬರುವ ಶುಷ್ಕ ಗಾಳಿ, ಅಥವಾ ದೈನಂದಿನ ಜೀವನಶೈಲಿಯಲ್ಲಿ (Lifestyle) ನಮ್ಮ ಅಭ್ಯಾಸಗಳು ಕಣ್ಣುಗಳ ಅಸ್ವಸ್ಥತೆಗೆ ಕಾರಣವಾಗಿರಬಹುದು. ಆದರೆ ಇದು ಕೇವಲ ಅಲರ್ಜಿಗಳಿಂದ ಮಾತ್ರ ಉಂಟಾಗುತ್ತಿಲ್ಲ ಬದಲಾಗಿ ಅನೇಕ ರೀತಿಯ ಆರೋಗ್ಯ (Health) ಸಮಸ್ಯೆಗಳು ಬರುವ ಮುನ್ಸೂಚನೆಯೂ ಆಗಿರಬಹುದು. ಇದು ಯಾವುದರಿಂದ ಉಂಟಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುವುದು ನಮ್ಮ ಕಣ್ಣುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗಾದರೆ ಕಣ್ಣುಗಳಲ್ಲಿ ತುರಿಕೆ ಕಂಡು ಬರುವುದಕ್ಕೆ ಕಾರಣವೇನು? ಅವುಗಳನ್ನು ತಡೆಗಟ್ಟಲು ಇಲ್ಲಿವೆ ಕೆಲವು ಸಲಹೆಗಳು.

ಅಲರ್ಜಿ:

ಧೂಳು ಅಥವಾ ಇನ್ನಿತರ ಅಲರ್ಜಿಕಾರಕಗಳು ಕಣ್ಣಿನ ತುರಿಕೆ, ಕೆಂಪಾಗುವಿಕೆ ಮತ್ತು ನೀರು ತುಂಬುವಿಕೆಗೆ ಕಾರಣವಾಗಬಹುದು.

ಒಣಗಿದ ಕಣ್ಣು:

ಕಣ್ಣುಗಳಲ್ಲಿ ಅಗತ್ಯವಿರುವಷ್ಟು ನೀರು ಉತ್ಪತ್ತಿಯಾಗದಿದ್ದಾಗ ಅಥವಾ ಕಣ್ಣೀರು ಬೇಗನೆ ಆವಿಯಾದಾಗ, ಕಣ್ಣುಗಳು ಒಣಗುತ್ತವೆ ಮತ್ತು ತುರಿಕೆಗೆ ಕಾರಣವಾಗುತ್ತದೆ. ಜೊತೆಗೆ ಪರದೆಗಳ ಮುಂದೆ ಹೆಚ್ಚು ಸಮಯ ಕಳೆಯುವುದು, ಹವಾನಿಯಂತ್ರಣ ಅಥವಾ ಕಡಿಮೆ ಆರ್ದ್ರತೆಯ ವಾತಾವರಣದಲ್ಲಿ ಹೆಚ್ಚು ಸಮಯ ಕಳೆಯುವುದು ಕೂಡ ಇದಕ್ಕೆ ಕಾರಣವಾಗಿರಬಹುದು.

ಇದನ್ನೂ ಓದಿ
Image
ಮಾಂಸಾಹಾರ ಸೇವನೆ ಮಾಡಲು ಸಾಧ್ಯವಾಗದಿದ್ದರೆ ಈ ಹಣ್ಣನ್ನು ತಿನ್ನಿ
Image
ಒಂದು ಗ್ಲಾಸ್​​​ ಬಿಸಿ ನೀರು ನಿಮ್ಮ ಜೀವನವನ್ನೇ ಬದಲಾವಣೆ ಮಾಡುತ್ತೆ
Image
ಬೆಳಿಗ್ಗೆ ಅಥವಾ ರಾತ್ರಿ ಯಾವ ಸಮಯದಲ್ಲಿ ಸ್ನಾನ ಮಾಡುವುದು ಉತ್ತಮ
Image
ಯಾವುದೇ ರೀತಿಯ ಕ್ಯಾನ್ಸರ್‌ ಬರಬಾರದು ಎಂದರೆ ಈ ಹಣ್ಣನ್ನು ತಿಂದು ನೋಡಿ

ಕಣ್ಣಿನ ಸೋಂಕು:

ಕಂಜಂಕ್ಟಿವಿಟಿಸ್ (ಗುಲಾಬಿ ಕಣ್ಣು) ನಂತಹ ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕುಗಳು ಕಣ್ಣುಗಳಲ್ಲಿ ತುರಿಕೆ, ಕೆಂಪಾಗುವಿಕೆ ಕಾರಣವಾಗಬಹುದು.

ಕಾಂಟ್ಯಾಕ್ಟ್ ಲೆನ್ಸ್:

ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು ಮತ್ತು ಅವುಗಳನ್ನು ದೀರ್ಘಕಾಲದ ವರೆಗೆ ಬಳಕೆ ಮಾಡುವುದರಿಂದ ಕಣ್ಣುಗಳಲ್ಲಿ ತುರಿಕೆ ಅಥವಾ ಅಸ್ವಸ್ಥತೆಗೆ ಕಾರಣವಾಗಬಹುದು.

ಪರಿಸರ ಅಂಶ:

ಮಾಲಿನ್ಯ, ಹೊಗೆ ಅಥವಾ ರಾಸಾಯನಿಕ ಅಂಶಗಳು ಕಣ್ಣುಗಳನ್ನು ಕಿರಿಕಿರಿಗೊಳಿಸಬಹುದು. ಬೇಸಿಗೆಯಲ್ಲಿ ಸೂರ್ಯ ಶಾಖ ಅಥವಾ ಚಳಿಗಾಲದ ತಂಪು ಗಾಳಿ ಕಣ್ಣಿನ ಕಿರಿಕಿರಿ, ತುರಿಕೆಗೆ ಕಾರಣವಾಗಬಹುದು.

ಔಷಧಿಗಳ ಅಡ್ಡಪರಿಣಾಮ:

ಕೆಲವು ಔಷಧಿಗಳು ಕಣ್ಣುಗಳನ್ನು ಒಣಗಿಸಬಹುದು ಮತ್ತು ತುರಿಕೆಗೆ ಕಾರಣವಾಗಬಹುದು.

ಇದನ್ನೂ ಓದಿ: ಮಾಂಸಾಹಾರ ಸೇವನೆ ಮಾಡುವ ಬದಲು ಈ ಒಂದು ಹಣ್ಣನ್ನು ತಿನ್ನಿ

ಇತರ ವೈದ್ಯಕೀಯ ಪರಿಸ್ಥಿತಿಗಳು:

ಬ್ಲೆಫಾರಿಟಿಸ್ (ಕಣ್ಣುರೆಪ್ಪೆಗಳ ಊತ), ಎಸ್ಜಿಮಾ, ಅಥವಾ ಥೈರಾಯ್ಡ್ ಸಂಬಂಧಿತ ಸಮಸ್ಯೆಗಳು ಸಹ ಕಣ್ಣುಗಳಲ್ಲಿ ತುರಿಕೆಗೆ ಕಾರಣವಾಗಬಹುದು. ಮಧುಮೇಹ ಅಥವಾ ಆಟೋಇಮ್ಯೂನ್ ಕಾಯಿಲೆಗಳು ಸಹ ಕೆಲವು ಸಂದರ್ಭಗಳಲ್ಲಿ ಕಣ್ಣುಗಳ ಮೇಲೆ ಪರಿಣಾಮ ಬೀರಬಹುದು. ಕೆಲವೊಮ್ಮೆ ಬಿಸಿಯಾದ ವಸ್ತುಗಳನ್ನು ಸೇವಿಸಿದಾಗಲೂ ಕೂಡ, ಕಣ್ಣುಗಳಲ್ಲಿ ತುರಿಕೆ ಮತ್ತು ಕೆಂಪು ಕಣ್ಣುಗಳಂತಹ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಸಂದರ್ಭದಲ್ಲಿ, ನೀವು ಸಾಕಷ್ಟು ನೀರು ಕುಡಿಯವುದು ಒಳ್ಳೆಯದು ಅದಲ್ಲದೆ ಚಹಾ ಮತ್ತು ಕಾಫಿಯಂತಹ ಪಾನೀಯಗಳ ಸೇವನೆ ಮಾಡುವುದನ್ನು ತಪ್ಪಿಸಬೇಕು. ಅದರ ಜೊತೆಗೆ ಈ ರೀತಿಯ ಸಮಸ್ಯೆ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಬಹಳ ಅವಶ್ಯಕ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ